Meghana Gaonkar: ಪೊಲೀಸ್ ಡ್ರೆಸ್‌ನಲ್ಲಿ ರೀಲ್ಸ್ ಮಾಡಿದ ನಟಿ ಮೇಘನಾ! ವೈರಲ್ ಆಯ್ತು ವಿಡಿಯೋ

ಪೊಲೀಸ್ ಸಿನಿಮಾ ಒಪ್ಪಿದ ಮಲ್ಟಿಪ್ಲೆಕ್ಸ್ ಪ್ರೇಕ್ಷಕರು!

ಪೊಲೀಸ್ ಸಿನಿಮಾ ಒಪ್ಪಿದ ಮಲ್ಟಿಪ್ಲೆಕ್ಸ್ ಪ್ರೇಕ್ಷಕರು!

ಮೇಘನಾ ಗಾಂವ್ಕರ್ ಪೊಲೀಸ್ ರೋಲ್ ಮಾಡಿದ್ದಾರೆ. ಈ ಮೂಲಕ ಅಪ್ಪನ ಆಸೆ ಕೂಡ ಈಡೇರಿಸಿದ್ದಾರೆ. ಆದರೆ ಇದೇ ಪೊಲೀಸ್ ಡ್ರೆಸ್‌ನಲ್ಲಿ ಒಂದು ರೀಲ್ಸ್ ಕೂಡ ಮಾಡಿದ್ದಾರೆ. ಅದು ಇದೀಗ ವೈರಲ್ ಆಗುತ್ತಿದೆ.

  • News18 Kannada
  • 2-MIN READ
  • Last Updated :
  • Bangalore [Bangalore], India
  • Share this:

ಸ್ಯಾಂಡಲ್‌ವುಡ್ ನಾಯಕಿ ಮೇಘನಾ ಗಾಂವ್ಕರ್ (Meghana Gaonkar Reels Viral) ಅಪ್ಪನ ಆಸೆ ಈಡೇರಸಿದ್ದಾರೆ. ರಿಯಲ್ ಆಗಿ ಮೇಘನಾ ಗಾಂವ್ಕರ್ ತಂದೆ ಪೊಲೀಸ್ ಆಫೀಸರ್ ಆಗಿದ್ದವರು. ಆದರೆ ಮೇಘನಾ ಗಾಂವ್ಕರ್ ಸಿನಿಮಾ ಫೀಲ್ಡ್‌ಗೆ ಬಂದ್ರು. ಹಾಗಾಗಿಯೇ ಅಪ್ಪನ ಆಸೆಯೊಂದನ್ನ ಈಡೇರಿಸಲು ಆಗಿರಲ್ಲಿಲ್ಲ. ಆದರೂ (Police Getup Reels) ಇದೀಗ ಮೇಘನಾ ತಂದೆಯ ಆ ಒಂದು ಕನಸನ್ನ ಪೂರ್ಣಗೊಳಿಸಿದ್ದಾರೆ. ಅಪ್ಪನ ಆಸೆಯಂತೆ ಪೊಲೀಸ್ ಆಫೀಸರ್ ಆಗಿದ್ದಾರೆ. ಅದು ಯಾವ ಸಿನಿಮಾ ಅನ್ನೋದು ಹೇಳೋದೇ ಬೇಡ. ಏಪ್ರಿಲ್-14 ರಂದು ರಿಲೀಸ್ ಆದ (Kannada Movie ) ಶಿವಾಜಿ ಸುರತ್ಕಲ್-2 ಚಿತ್ರದಲ್ಲಿ ಮೇಘನಾ ಗಾಂವ್ಕರ್ ಪೊಲೀಸ್ ಆಫೀಸರ್ ಪಾತ್ರವನ್ನ ನಿರ್ವಹಿಸಿದ್ದಾರೆ. ಅದೇ ಗೆಟಪ್‌ನಲ್ಲಿಯೇ ಮೇಘನಾ ಗಾಂವ್ಕರ್ (Actress Meghana) ಈಗೊಂದು ರೀಲ್ಸ್ ಮಾಡಿದ್ದಾರೆ. ಅದು ಈಗ ವೈರಲ್ ಆಗುತ್ತಿದೆ.


ಅಪ್ಪನ ಆಸೆ ಈಡೇರಿಸಿದ ನಟಿ ಮೇಘನಾ ಗಾಂವ್ಕರ್


ಮೇಘನಾ ಗಾಂವ್ಕರ್ ಫಸ್ಟ್ ಟೈಮ್ ಪೊಲೀಸ್ ಆಫೀಸರ್ ಪಾತ್ರ ಮಾಡಿದ್ದಾರೆ. ಶಿವಾಜಿ ಸುರತ್ಕಲ್-2 ಚಿತ್ರದಲ್ಲಿ ಶಿವಾಜಿಯ ಹೈಯರ್ ಆಫೀಸರ್ ಆಗಿ ಮೇಘನಾ ಗಾಂವ್ಕರ್ ಅಭಿನಯಿಸಿದ್ದಾರೆ. ಪೊಲೀಸ್ ಗತ್ತು ಹೇಗಿರುತ್ತದೆಯೋ ಅದನ್ನ ತುಂಬಾ ಚೆನ್ನಾಗಿಯೇ ಮೆಂಟೇನ್ ಮಾಡಿದ್ದಾರೆ.


Kannada Actress Meghana Gaonkar Police Getup Reels getting Viral
ಮೇಘನಾ ಗಾಂವ್ಕರ್ ಪೊಲೀಸ್ ಗೆಟಪ್ ರೀಲ್ಸ್ ವೈರಲ್!


ಡಿಸಿಪಿ ದೀಪಾ ಕಾಮತ್ ಪಾತ್ರದಲ್ಲಿ ಮೇಘನಾ ಗಾಂವ್ಕರ್


ಇಡೀ ಸಿನಿಮಾದಲ್ಲಿ ಮೇಘನಾ ಪೊಲೀಸ್ ಸಮವಸ್ತ್ರದಲ್ಲಿ ತುಂಬಾ ಚೆನ್ನಾಗಿಯೂ ಕಾಣಿಸುತ್ತಾರೆ. ಖಡಕ್ ಪೊಲೀಸ್ ಅನ್ನೋದನ್ನೂ ಆಗಾಗ ತೋರಿಸುತ್ತಲೂ ಇರುತ್ತಾರೆ. ನಾಯಕ ನಟ ಶಿವಾಜಿ ಸುರತ್ಕಲ್ ಪಾತ್ರದ ಜೊತೆಗೆ ಒಬ್ಬ ಪೊಲೀಸ್ ಆಫೀಸರ್ ಆಗಿ ಸಾಕಷ್ಟು ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ.




ಮೇಘನಾ ಗಾಂವ್ಕರ್ ಈ ಚಿತ್ರದಲ್ಲಿ ಡಿಸಿಪಿ ದೀಪಾ ಕಾಮತ್ ಪಾತ್ರವನ್ನ ನಿರ್ವಹಿಸಿದ್ದಾರೆ. ಈ ಪಾತ್ರದ ಮೂಲಕ ತಮ್ಮ ಪೊಲೀಸ್ ಖದರ್ ತೋರಿದ್ದಾರೆ. ಹಾಗೇನೆ ಈ ಪಾತ್ರವನ್ನ ತುಂಬಾನೇ ಇಷ್ಟಪಟ್ಟಿರೋ ನಟಿ ಮೇಘನಾ ಗಾಂವ್ಕರ್ ಈಗೊಂದು ರೀಲ್ಸ್ ಮಾಡಿದ್ದಾರೆ. ಇದು ವೈರಲ್ ಆಗುತ್ತಿದೆ ನೋಡಿ.



ಮೇಘನಾ ಗಾಂವ್ಕರ್ ಪೊಲೀಸ್ ಗೆಟಪ್ ರೀಲ್ಸ್ ವೈರಲ್


ಹೌದು, ಮೇಘನಾ ಗಾಂವ್ಕರ್ ಚಿತ್ರೀಕರಣದ ಸಮಯದಲ್ಲಿ ಒಂದು ರೀಲ್ಸ್ ಮಾಡಿದಂತೆ ಇದೆ. ಡಿಸಿಪಿ ದೀಪಾ ಕಾಮತ್ ಪಾತ್ರದ ಪೊಲೀಸ್ ಸಮವಸ್ತ್ರದಲ್ಲಿ ಮೇಘನಾ ಗಾಂವ್ಕರ್ ರೀಲ್ಸ್ ಮಾಡಿದ್ದಾರೆ. ಇದು ತುಂಬಾನೇ ಸ್ಪೆಷಲ್ ಇದೆ ಅನಿಸುತ್ತದೆ.


ಪೊಲೀಸ್ ಸಮವಸ್ತ್ರ ಧರಿಸಿರೋ ಮೇಘನಾ ರೀಲ್ಸ್ ವೈರಲ್ ಆಗುತ್ತಿದೆ. ವಿಶೇಷವಾಗಿ ಈ ಪೊಲೀಸ್ ಗೆಟಪ್‌ನಲ್ಲಿರೋ ರೀಲ್ಸ್ ಮತ್ತು ಪೋಟೋಗಳನ್ನ ಮೇಘನಾ ಸೋಷಿಯಲ್ ಮೀಡಿಯಾದಲ್ಲೂ ಹಂಚಿಕೊಂಡಿದ್ದಾರೆ.


ಪೊಲೀಸ್ ಸಿನಿಮಾ ಒಪ್ಪಿದ ಮಲ್ಟಿಪ್ಲೆಕ್ಸ್ ಪ್ರೇಕ್ಷಕರು!


ಮೇಘನಾ ಗಾಂವ್ಕರ್ ಅಭಿನಯದ ಶಿವಾಜಿ ಸುರತ್ಕಲ್ ಸಿನಿಮಾ ಏಪ್ರಿಲ್-14 ರಂದು ರಾಜ್ಯಾದ್ಯಂತ ರಿಲೀಸ್ ಆಗಿದೆ. ಮಲ್ಟಿಪ್ಲೆಕ್ಸ್ ಥಿಯೇಟರ್‌ನಲ್ಲಿ ಈ ಚಿತ್ರವನ್ನ ಜನ ನೋಡುತ್ತಿದ್ದಾರೆ. ಮೊದಲ ದಿನವೇ ಚಿತ್ರದ ಬಗ್ಗೆ ಒಳ್ಳೆ ರೆಸ್ಪಾನ್ಸ್ ಕೂಡ ಬಂದಿದೆ.


ಶಿವಾಜಿ ಸುರತ್ಕಲ್-2 ಸಿನಿಮಾ ಇಂಟ್ರಸ್ಟಿಂಗ್ ಆಗಿಯೇ ಇದೆ. ಪಾರ್ಟ್-1 ನೋಡಿದ ಜನರ ಇದನ್ನ ನೋಡಿದ್ರೆ ಬೇಸರ ಏನೂ ಆಗೋದಿಲ್ಲ. ನೇರವಾಗಿ ಪಾರ್ಟ-2 ಸಿನಿಮಾ ನೋಡಿದ್ರೂ ಕೂಡ ಇದೊಂದು ಹೊಸ ಸಿನಿಮಾ ರೀತಿಯಲ್ಲಿಯೇ ಕಾಣಿಸುತ್ತದೆ. ಪಾರ್ಟ್-1 ನೋಡಬೇಕು ಅಂತ ಏನೂ ಅನಿಸೋದಿಲ್ಲ ನೋಡಿ.


Kannada Actress Meghana Gaonkar Police Getup Reels getting Viral
ಡಿಸಿಪಿ ದೀಪಾ ಕಾಮತ್ ಪಾತ್ರದಲ್ಲಿ ಮೇಘನಾ ಗಾಂವ್ಕರ್


ಶಿವಾಜಿ ಸುರತ್ಕಲ್ ಒಂದು ಸೂಪರ್ ಕಾಪ್ ಸಿನಿಮಾ


ಇನ್ನು ಶಿವಾಜಿ ಸುರತ್ಕಲ್-2 ಚಿತ್ರ ಒಂದು ರೀತಿ ಪೊಲೀಸ್ ಚಿತ್ರ ಅಂದ್ರು ತಿಪ್ಪಿಲ್ಲ. ಮೇಘನಾ ಗಾಂವ್ಕರ್‌ ಇಲ್ಲಿ ಡಿಸಿಪಿ ಆಗಿದ್ದಾರೆ. ಈ ಚಿತ್ರದಲ್ಲಿ ಶಿವಾಜಿ ಸುರತ್ಕಲ್ ಎಸಿಪಿ ರೋಲ್ ಮಾಡಿದ್ದಾರೆ. ಬಹು ಭಾಷಾ ನಟ ನಾಜರ್ ಕೂಡ ಇಲ್ಲಿ ಪೊಲೀಸ್ ಆಫೀಸರ್ ಪಾತ್ರವನ್ನ ಮಾಡಿದ್ದಾರೆ.


ಇದನ್ನೂ ಓದಿ: Malaika Arora: 12 ವರ್ಷ ಚಿಕ್ಕವನ ಮೇಲೆ ಲವ್! ಏಜ್​ಗ್ಯಾಪ್ ಬಗ್ಗೆ ಕೊನೆಗೂ ಮಾತಾಡಿದ್ರು ಮಲೈಕಾ


ಶೋಭರಾಜ್ ಕೂಡ ಈ ಚಿತ್ರದಲ್ಲಿ ಒಬ್ಬ ಪೊಲೀಸ್ ಅಧಿಕಾರಿಯಾಗಿದ್ದಾರೆ. ರಮೇಶ್ ಭಟ್ ಹೆಸರಾಂತ ಲಾಯರ್ ಅನ್ನೋದು ಕೂಡ ವಿಶೇಷ ಅಂತ ಹೇಳಬಹುದು.

First published: