ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ (Meghana Gaonkar New Movie) ಲೀಗಲ್ ಥ್ರಿಲ್ಲರ್ ಸಿನಿಮಾ ಮೊನ್ನೆ ಸೆಟ್ಟೇರಿದೆ. ಏಪ್ರಿಲ್-೨೪ ರಂದು ರಾಜ್ ಕುಮಾರ್ ಜನ್ಮ ದಿನದಂದು ಚಿತ್ರಕ್ಕೆ ಮುಹೂರ್ತ ಕೂಡ ನೆರವೇರಿದೆ. ಈ (Meghana Gaonkar Latest Updates) ಚಿತ್ರದಲ್ಲಿ ರಾಜ್ ಮೊಮ್ಮಗಳು ಧನ್ಯಾ ರಾಮ್‌ಕುಮಾರ್ ಅಭಿನಯಿಸುತ್ತಿದ್ದಾರೆ. ಧನ್ಯಾ ಜೋಡಿಯಾಗಿ ನಟ ದಿಗಂತ್ ಅಭಿನಯಿಸುತ್ತಿದ್ದಾರೆ. ಆದರೆ ಕ್ರೇಜಿ ಸ್ಟಾರ್ ರವಿಚಂದ್ರನ್ (Meghana Gaonkar New Film) ಅವರಿಗೆ ಜೋಡಿ ಯಾರು? ಲಕ್ಷ್ಮೀ ಗೋಪಾಲ್ ಸ್ವಾಮಿನಾ? ಅಥವಾ ಬೇರೆ ಯಾರಾದರೂ ಬರ್ತಾರಾ? ಈ ಒಂದು ಪ್ರಶ್ನೆ ಅಂದಿನಿಂದಲೂ ಇತ್ತು. ಆದರೆ (Meghana Latest Updates) ಅದಕ್ಕೆ ಈಗ ಉತ್ತರ ಸಿಕ್ಕಿದೆ. ಆ ನಟಿ ಯಾರು ಅನ್ನೋದು ಇದೀಗ ತಿಳಿದಿದೆ.
ಕ್ರೇಜಿ ಸ್ಟಾರ್‌ಗೆ ಪೇರ್ ಆದ ಮೇಘನಾ ಗಾಂವ್ಕರ್!
ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ ದಿ ಜಡ್ಜಮೆಂಟ್ ಚಿತ್ರದ ಶೂಟಿಂಗ್ ಶುರು ಆಗಿದೆ. ಮೊನ್ನೆ ರಾಜ್‌ಕುಮಾರ್ ಜನ್ಮ ದಿನದಂದು ಈ ಚಿತ್ರದ ಚಿತ್ರೀಕರಣ ಶುರು ಆಗಿದೆ. ಇದರ ಬೆನ್ನಲ್ಲಿಯೇ ಒಂದು ಕುತೂಹಲ ಕೂಡ ಇತ್ತು. ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಜೊತೆಗೆ ಯಾರು ಪೇರ್ ಆಗುತ್ತಾರೆ ಅನ್ನೋ ಕುತೂಹಲ ಕೂಡ ಇತ್ತು.
ತಮಿಳು ನಟಿ ಖುಷ್ಬು ಈ ಚಿತ್ರಕ್ಕೆ ರವಿಚಂದ್ರನ್ ಜೋಡಿಯಾಗಿ ಬರ್ತಾರೆ ಅನ್ನುವ ಸುದ್ದಿ ಕೂಡ ಇತ್ತು. ಚಿತ್ರದ ಮುಹೂರ್ತದ ದಿನ ಲಕ್ಷ್ಮಿ ಗೋಪಾಲ್ ಸ್ವಾಮಿ ಅವರೂ ಇಲ್ಲಿ ಕಂಡು ಬಂದರು. ಮೋಸ್ಟ್ಲಿ ಇವರೇ ರವಿಚಂದ್ರನ್ ಅವರಿಗೆ ಜೋಡಿ ಅನ್ನುವ ಕುತೂಹಲ ಕೂಡ ಮೂಡಿತ್ತು.
ದಿ ಜಡ್ಜಮೆಂಟ್ ಸಿನಿಮಾದಲ್ಲಿ ಮೇಘನಾ ಗಾಂವ್ಕರ್
ಆದರೆ ಇದೀಗ ಆ ಜಾಗಕ್ಕೆ ಬೇರೆ ಹೆಸರು ಬಂದಿದೆ. ಹೌದು, ಮೇಘನಾ ಗಾಂವ್ಕರ್ ಈ ಚಿತ್ರದಲ್ಲಿ ರವಿಚಂದ್ರನ್ ಅವರಿಗೆ ಜೋಡಿ ಆಗಿದ್ದಾರೆ ಅನ್ನೋದೇ ಈ ಸುದ್ದಿಯ ಒಟ್ಟು ತಿರುಳಾಗಿದೆ. ಈ ಸುದ್ದಿಗೆ ಸಂಬಂಧಿಸಿದಂತೆ ಮೇಘನಾ ಗಾಂವ್ಕರ್ ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗೂ ಮಾತನಾಡಿದ್ದಾರೆ.
ಈಗಾಗಲೇ ಸಿನಿಮಾ ಶೂಟಿಂಗ್ ಶುರು ಆಗಿದೆ. ಈ ಕೆಲಸದಲ್ಲಿ ಬ್ಯುಸಿ ಇರೋ ಮೇಘನಾ ಗಾಂವ್ಕರ್ ಚಿಕ್ಕದಾಗಿಯೂ ನಮ್ಮ ಪ್ರಶ್ನೆಗೆ ಉತ್ತರಿಸಿದ್ದಾರೆ.
ಹೌದು, ಸಿನಿಮಾದ ಶೂಟಿಂಗ್ ಶುರು ಆಗಿದೆ. ಈ ಬಗ್ಗೆ ನಾನು ಪ್ರತಿಕ್ರಿಯೆ ಕೊಡುತ್ತೇನೆ ಎಂದು ಹೇಳಿದ್ದಾರೆ.
ಕ್ರೇಜಿ ಸ್ಟಾರ್ ಸಿನಿಮಾದಲ್ಲಿ ಮೇಘನಾ ಗಾಂವ್ಕರ್
ಅಲ್ಲಿಗೆ ಮೇಘನಾ ಗಾಂವ್ಕರ್ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ ಅನ್ನೋದು ಈಗ ಕ್ಲಿಯರ್ ಆಗಿದೆ. ಆದರೆ ಯಾವ ರೀತಿಯ ರೋಲ್ ಮಾಡುತ್ತಿದ್ದಾರೆ. ರವಿಚಂದ್ರನ್ ಅವರ ಜೊತೆಗೆ ಕೆಲಸ ಮಾಡ್ತಿರೋ ಆ ಖುಷಿ ಏನು? ಇನ್ನಷ್ಟೆ ಹಂಚಿಕೊಳ್ಳಲಿದ್ದಾರೆ.
ಇನ್ನುಳಿದಂತೆ ಮೇಘನಾ ಗಾಂವ್ಕರ್ ತಮ್ಮ ಪೊಲೀಸ್ ಪಾತ್ರದ ಮೂಲಕವೇ ಇದೀಗ ಹೆಸರಾಗಿದ್ದಾರೆ. ಶಿವಾಜಿ ಸುರತ್ಕಲ್-೨ ಸಿನಿಮಾದಲ್ಲಿ ದೀಪಾ ಕಾಮತ್ ರೋಲ್ ಮಾಡಿರೋ ಮೇಘನಾ ಗಾಂವ್ಕರ್, ಇತ್ತೀಚಿಗೆ ತಮ್ಮ ಈ ಪಾತ್ರದ ತಯಾರಿ ಕುರಿತ ವಿಡಿಯೋವನ್ನ ಕೂಡ ಹಂಚಿಕೊಂಡಿದ್ದರು.
ಮೇಘನಾ ಗಾಂವ್ಕರ್ ಯುಟ್ಯೂಬ್ ಚಾನೆಲ್‌ನಲ್ಲಿ ಏನಿರುತ್ತೇ?
ತಮ್ಮದೇ ಒಂದು ಯುಟ್ಯೂಬ್ ಚಾನೆಲ್ ಅನ್ನೂ ಮಾಡಿರೋ ಮೇಘನಾ ಗಾಂವ್ಕರ್, ತಮ್ಮ ಸಿನಿಮಾಗಳ ಬಗ್ಗೆ ತಮ್ಮ ಇತರ ಟೂರ್‌ಗಳ ಬಗ್ಗೆನೂ ಈ ಒಂದು ಯುಟ್ಯೂಬ್ ಚಾನೆಲ್‌ನಲ್ಲಿ ವಿಡಿಯೋಗಳನ್ನ ಅಪ್‌ಲೋಡ್ ಮಾಡ್ತಾನೇ ಇರ್ತಾರೆ.
ಅದೇ ರೀತಿ ಇತ್ತೀಚಿಗೆ ಶಿವಾಜಿ ಸುರತ್ಕಲ್-2 ಸಿನಿಮಾ ಪೊಲೀಸ್ ಪಾತ್ರದ ತಯಾರಿ ಕುರಿತು ವಿಡಿಯೋವನ್ನ ಇದೇ ಯುಟ್ಯೂಬ್ ಚಾನಲ್‌ನಲ್ಲಿ ಹಂಚಿಕೊಂಡಿದ್ದರು.
ಇದನ್ನೂ ಓದಿ: Chaithra Achar: ಒಂದೂರಲ್ಲಿ ಒಬ್ಬ ರಾಜಕುಮಾರಿ! ಮೋಡಿ ಮಾಡುತ್ತೆ ಚೈತ್ರಾ ಆಚಾರ್ ಲುಕ್
ಇದೀಗ ರವಿಚಂದ್ರನ್ ಅವರ ಜೊತೆಗೆ ಸಿನಿಮಾ ಮಾಡುತ್ತಿದ್ದಾರೆ. ಈ ಪಾತ್ರದ ಕುರಿತು ಮೇಘನಾ ವಿಶೇಷ ವಿಷಯಗಳನ್ನ ಹಂಚಿಕೊಳ್ಳಬಹುದು ಅನ್ನೋ ನಿರೀಕ್ಷೆ ಕೂಡ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ