Megha Shetty: ನಟಿ ಮೇಘಾ ಶೆಟ್ಟಿ ಹೊಸ ರೀಲ್ಸ್, ಹಿಂದಿ ಹಾಡಿಗೆ ಮಸ್ತ್​ ಡ್ಯಾನ್ಸ್​

ಮೇಘಾ ಶೆಟ್ಟಿ ಹೊಸ ರೀತಿಯ ರೀಲ್ಸ್ ಸಖತ್ ವೈರಲ್

ಮೇಘಾ ಶೆಟ್ಟಿ ಹೊಸ ರೀತಿಯ ರೀಲ್ಸ್ ಸಖತ್ ವೈರಲ್

ಮೇಘಾ ಶೆಟ್ಟಿ ಈ ಹೊಸ ರೀಲ್ಸ್ ನೋಡಿರೋ ಫ್ಯಾನ್ಸ್, ಮೇಘಾ ಶೆಟ್ಟಿ ನಗುವನ್ನು ಮನದುಂಬಿ ಹೊಗಳಿದ್ದಾರೆ. ಮೇಘಾ ಶೆಟ್ಟಿ ಹೊಸ ರೀತಿಯ ಈ ರೀಲ್ಸ್ ಅಲ್ಲಿ ನಿಜಕ್ಕೂ ತುಂಬಾ ಚೆನ್ನಾಗಿಯೇ ಕಾಣಿಸುತ್ತಿದ್ದಾರೆ.

  • News18 Kannada
  • 3-MIN READ
  • Last Updated :
  • Bangalore [Bangalore], India
  • Share this:

ಜೊತೆ ಜೊತೆಯಲಿ ಸೀರಿಯಲ್ ಮೂಲಕ ನಟಿ (Megha Shetty Reels Viral) ಮೇಘಾ ಶೆಟ್ಟಿ ಜನರ ಮನದಲ್ಲಿ ವಿಶೇಷ ಜಾಗ ಮಾಡಿಕೊಂಡಿದ್ದಾರೆ. ಅನು ಸಿರಿಮನೆ ಅನ್ನೋ ಪಾತ್ರ ಈ ನಟಿಯ ಚಿತ್ರ ಜೀವನಕ್ಕೆ ಹೊಸ (Actress Megha Shetty) ಹಾದಿಯನ್ನೂ ಮಾಡಿತ್ತು. ಸೀರಿಯಲ್‌ನಲ್ಲಿ ನಟಿಸೋದರ ಜೊತೆಗೆ ಸಿನಿಮಾದ ಅವಕಾಶ ಪಡೆದ ನಟಿ ಅಂತಲೂ ಹೇಳಬಹುದೇನೋ. ಸೀರಿಯಲ್‌ನಿಂದ ಖ್ಯಾತಿ (Megha Latest Reels) ಪಡೆದು, ದೊಡ್ಡ ಪರೆದೆಗೆ ಬರೋ ನಟ-ನಟಿಯರು ವಾಪಸ್ ಸೀರಿಯಲ್ ಮಾಡಿರೋದು ಕಡಿಮೇನೆ. ಆದರೆ ಅನು ಸಿರಿಮನೆ ಖ್ಯಾತಿಯ ನಟಿ (Actress Megha Shetty) ಮೇಘಾ ಶೆಟ್ಟಿ, ಸಿನಿಮಾದಲ್ಲೂ ಆ್ಯಕ್ಟೀವ್ ಆಗಿದ್ದಾರೆ. ಸೀರಿಯಲ್‌ನಲ್ಲೂ ಮೇಘಾ ಶೆಟ್ಟಿ ಮುಂದುವರೆದಿದ್ದಾರೆ. ಈ ಮಧ್ಯೆ ಆಗಾಗ ರೀಲ್ಸ್ ಮತ್ತು ಫೋಟೋ ಶೂಟ್ ಅಂತಲೂ ವೈರಲ್ ಆಗುತ್ತಿರುತ್ತಾರೆ.


ಅನು ಸಿರಿಮನೆಯ ಹೊಸ ರೂಪ-ಸೂಪರ್ ಹೊಸ ರೀಲ್ಸ್


ಅನು ಸಿರಿಮನೆ ಪಾತ್ರ ಖ್ಯಾತಿಯ ನಟಿ ಮೇಘಾ ಶೆಟ್ಟಿ ರೀಲ್ಸ್ ಮಾಡೋದ್ರಲ್ಲೂ ಜಾಣೆ ನೋಡಿ. ಆಗಾಗ ಹೊಸ ರೀತಿಯ ರೀಲ್ಸ್ ಮಾಡಿ ಖುಷಿ ಪಡ್ತಾರೆ. ಹೊಸ ರೀತಿಯ ಫೋಟೋ ಶೂಟ್ ಮೂಲಕವೂ ಗಮನ ಸೆಳೆಯೋದು ಇದೆ.


Kannada Actress Megha Shetty New Release got Viral
ಅನು ಸಿರಿಮನೆ ರೀಲ್ಸ್ ಕಂಡು ಫ್ಯಾನ್ಸ್ ಫುಲ್ ಬೋಲ್ಡ್!


ಮೇಘಾ ಶೆಟ್ಟಿ ಇನ್‌ಸ್ಟಾಗ್ರಾಮ್ ಪೇಜ್‌ಗೆ ನೀವು ಹೋದ್ರೆ ಸಾಕು, ಅಲ್ಲಿ ಮೇಘಾ ಶೆಟ್ಟಿ ಹೊಸ ರೀತಿಯ ಫೋಟೋ ಶೂಟ್‌ನ ಅದ್ಭುತ ರೂಪವೇ ಕಣ್ಣಿಗೆ ಹಬ್ಬದಂತೆ ಕಾಣಿಸುತ್ತದೆ. ಮೇಘಾ ಶೆಟ್ಟಿ ಈ ಮೊದಲೇ ಹೇಳಿದಂತೆ ರೀಲ್ಸ್ಗಳನ್ನೂ ಮಾಡ್ತಾರೆ. ಆ ವಿಡಿಯೋಗಳೂ ಇಲ್ಲಿ ಸಿಗುತ್ತವೆ.




ಮೇಘಾ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಆ್ಯಕ್ಟೀವ್


ಮೇಘಾ ಶೆಟ್ಟಿ ಹೊಸ ರೀತಿ ಫೋಟೋ ಶೂಟ್‌ ಜೊತೆಗೆ ಸ್ನೇಹಿತೆ ಜೊತೆಗೆ ರೀಲ್ಸ್ ಮಾಡೋದು ಇದೆ. ಇದರ ಹೊರತಾಗಿ ಇತ್ತೀಚೆಗೆ ಸೀರೆ, ಆಭರಣ ಹೀಗೆ ವಿವಿಧ ಬ್ಯಾಂಡ್‌ಗಳಿಗೂ ಕೆಲಸ ಮಾಡ್ತಿದ್ದಾರೆ. ಆ ಫೋಟೋಗಳೂ ಸೋಷಿಯಲ್ ಮೀಡಿಯಾದಲ್ಲಿ ರಾರಾಜಿಸುತ್ತಿಲೇ ಇರುತ್ತವೆ.


ಆದರೆ, ಮೇಘಾ ಶೆಟ್ಟಿ ಇದೀಗ ಬಾಲಿವುಡ್‌ನ ಪದ್ಮಾವತ್ ಸಿನಿಮಾದ ನೈನೋವಾಲೇ ನೇ (Nainowale Ne) ಹಾಡಿಗೆ ರೀಲ್ಸ್ ಮಾಡಿದ್ದಾರೆ. ಆದರೆ ಇಲ್ಲಿ ಇನ್ನೂ ಒಂದು ವಿಶೇಷ ಇದೆ. ನೈನೋವಾಲೇನೆ ಹಾಡಿನ ಹೊಸ ವರ್ಷನ್ ಕೂಡ ಬಂದಿದೆ.


ಬಾಲಿವುಡ್ ನೈನೋವಾಲೇ ನೇ ಹಾಡಿ ಮೇಘಾ ಸಖತ್ ರೀಲ್ಸ್


ಅದೇ ಹೊಸ ಗೀತೆಗೇನೆ ಮೇಘಾ ಶೆಟ್ಟಿ ಇಲ್ಲಿ ರೀಲ್ಸ್ ಮಾಡಿದ್ದಾರೆ. ಹಾಡಿಗೂ ಮೇಘಾ ಶೆಟ್ಟಿ ಲುಕ್ಸ್‌ಗೂ ಸಖತ್ ಸಿಂಕ್ ಆಗಿದೆ. ಮೇಘಾ ಶೆಟ್ಟಿ ಕನ್ನಡಿ ಮುಂದೆ ನಿಂತು ಈ ಹಾಡಿಗೆ ರೀಲ್ಸ್ ಮಾಡಿದ್ದಾರೆ. ಇದು ಸೂಪರ್ ಆಗಿಯೇ ಬಂದಿದೆ.




ನೀತಿ ಮೋಹನ್ ಹಾಡಿರೋ ಈ ಹೊಸ ಹಾಡಿಗೆ ಮೇಘಾ ಶೆಟ್ಟಿ ಲಿಪ್ ಸಿಂಕ್ ಮಸ್ತ್ ಆಗಿಯೇ ಬಂದಿದೆ. ಅಷ್ಟೇ ಅದ್ಭುತವಾಗಿಯೇ ಮೇಘಾ ಶೆಟ್ಟಿ ಇಲ್ಲಿ ಆಗೊಮ್ಮೆ ಈಗೊಮ್ಮೆ ಸ್ಮೈಲ್ ಕೂಡ ಮಾಡುತ್ತಾರೆ. ಅದು ಇಡೀ ರೀಲ್ಸ್‌ಗೆ ಹೊಸ ರೀತಿಯ ಫೀಲ್ ಕೊಡುತ್ತದೆ.


ಅನು ಸಿರಿಮನೆ ರೀಲ್ಸ್ ಕಂಡು ಫ್ಯಾನ್ಸ್ ಫುಲ್ ಬೋಲ್ಡ್!


ಮೇಘಾ ಶೆಟ್ಟಿ ಈ ಹೊಸ ರೀಲ್ಸ್ ನೋಡಿರೋ ಫ್ಯಾನ್ಸ್, ಮೇಘಾ ಶೆಟ್ಟಿ ನಗುವನ್ನು ಮನದುಂಬಿ ಹೊಗಳಿದ್ದಾರೆ. ಮೇಘಾ ಶೆಟ್ಟಿ ಹೊಸ ರೀತಿಯ ಈ ರೀಲ್ಸ್ ಅಲ್ಲಿ ನಿಜಕ್ಕೂ ತುಂಬಾ ಚೆನ್ನಾಗಿಯೇ ಕಾಣಿಸುತ್ತಿದ್ದಾರೆ.


Kannada Actress Megha Shetty New Release got Viral
ಬಾಲಿವುಡ್ ನೈನೋವಾಲೇ ನೇ ಹಾಡಿ ಮೇಘಾ ಸಖತ್ ರೀಲ್ಸ್


ನೋಡುಗರ ದಿಲ್ ಕದ್ದಿರೊ ರೀತಿಯ ರೂಪರಾಶಿಯಲ್ಲಿಯೇ ಮೇಘಾ ಶೆಟ್ಟಿ ಹೊಳೆಯುತ್ತಿದ್ದಾರೆ. ಅನು ಸಿರಿಮನೆ ಇವರೇನಾ ಅನ್ನೋ ಮಟ್ಟಿಗೆ ಮೇಘಾ ಶೆಟ್ಟಿ ಇಲ್ಲಿ ರೂಪಾಂತರಗೊಂಡಿದ್ದಾರೆ. ಮೇಘಾ ಶೆಟ್ಟಿ ಅಭಿನಯದ ಸಿನಿಮಾಗಳಲ್ಲಿ ಈ ಗ್ಲಾಮರ್ ಕಂಡಿಲ್ಲ ಅಂತಲೇ ಹೇಳಬಹುದೇನೋ ಅನ್ನೋಮಟ್ಟಿಗೆ ಇಲ್ಲಿ ಮೇಘಾ ಚಾರ್ಮಿಂಗ್ ಆಗಿ ಕಾಣಿಸುತ್ತಿದ್ದಾರೆ.


ಮೇಘಾ ಶೆಟ್ಟಿ ಹೊಸ ರೀತಿಯ ರೀಲ್ಸ್ ಸಖತ್ ವೈರಲ್


ಮೇಘಾ ಶೆಟ್ಟಿ ಸಿನಿಮಾ ಜರ್ನಿಯಲ್ಲಿ ಹೆಚ್ಚು ಸಿನಿಮಾಗಳೇನೂ ಇಲ್ಲ. ಆದರೆ ಥ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ಹೊಳೆಯೋ ಪ್ರಯತ್ನ ಮಾಡಿದರು. ದಿಲ್‌ಪಸಂದ್ ಚಿತ್ರದಲ್ಲಿ ಮೇಘಾ ಶೆಟ್ಟಿ ವಿಭಿನ್ನವಾಗಿಯೇ ಕಾಣಿಸಿಕೊಂಡರು.


ಇದನ್ನೂ ಓದಿ: Meghana Raj Movie: ಮೇಘನಾ ರಾಜ್ ಅಭಿನಯದ ತತ್ಸಮ ತದ್ಭವ ಶೂಟಿಂಗ್ ಕಂಪ್ಲೀಟ್, ಸಿನಿಮಾ ರಿಲೀಸ್ ಯಾವಾಗ?

top videos


    ಇದರ ಹೊರತಾಗಿ ಅನು ಸಿರಿಮನೆಯಾಗಿ ಮೇಘಾ ಶೆಟ್ಟಿ ಇನ್ನೂ ಓಡುತ್ತಿದ್ದಾರೆ. ಸೀರಿಯಲ್ ಪ್ರಿಯರ ಹೃದಯದಲ್ಲಿ ಅನು ಸಿರಿಮನೆಯಾಗಿಯೇ ಕಂಗೊಳಿಸುತ್ತಿದ್ದಾರೆ. ಇದರ ಮಧ್ಯೆ ಬೇರೆ ಬೇರೆ ಬ್ರ್ಯಾಂಡಿಂಗ್ ಮತ್ತು ರೀಲ್ಸ್ ಅಂತಲೂ ಆ್ಯಕ್ಟೀವ್ ಆಗಿಯೇ ಇದ್ದಾರೆ ಅಂತಲೇ ಹೇಳಬಹುದು.

    First published: