ಚಿತ್ರೀಕರಣಕ್ಕೆ ತೆರೆ ಎಳೆದ 'ಝಾನ್ಸಿ': ಲಕ್ಷ್ಮೀ ರೈ ಅಭಿನಯದ ಚಿತ್ರದ ಡಬ್ಬಿಂಗ್​ ಹಕ್ಕಿಗೆ ಹೆಚ್ಚಿದ ಬೇಡಿಕೆ..!

ಕನ್ನಡದ ಹುಡುಗಿ ಲಕ್ಷ್ಮಿ ರೈ ಸ್ಯಾಂಡಲ್​ವುಡ್​ನಲ್ಲಿ ಯಶಸ್ಸು ಸಿಗಲಿಲ್ಲವೆಂದು ಬೇರೆ ಭಾಷೆಗಳ ಸಿನಿಮಾಗತ್ತ ಮುಖ ಮಾಡಿದ್ದರು. ಅದರಲ್ಲೂ ಹೆಚ್ಚಾಗಿ ಬೋಲ್ಡ್​ ಹಾಗೂ ಹಾಟ್​ ದೃಶ್ಯಗಳಲ್ಲಿ ಅಭಿನಯಿಸುವ ಮೂಲಕವೇ ಮನೆ ಮಾತಾಗಿದ್ದ ಲಕ್ಷ್ಮೀ ಈಗ ಖಡಕ್​ ಪೊಲೀಸ್​ ಅಧಿಕಾರಿ 'ಝಾನ್ಸಿ'ಯಾಗಿ ಮತ್ತೆ ಕಾಣಿಸಿಕೊಳ್ಳಲಿದ್ದಾರೆ.

Anitha E | news18
Updated:April 17, 2019, 7:02 PM IST
ಚಿತ್ರೀಕರಣಕ್ಕೆ ತೆರೆ ಎಳೆದ 'ಝಾನ್ಸಿ': ಲಕ್ಷ್ಮೀ ರೈ ಅಭಿನಯದ ಚಿತ್ರದ ಡಬ್ಬಿಂಗ್​ ಹಕ್ಕಿಗೆ ಹೆಚ್ಚಿದ ಬೇಡಿಕೆ..!
'ಝಾನ್ಸಿ'ಯಲ್ಲಿ ಪೊಲೀಸ್​ ಅಧಿಕಾರಿಯಾಗಿ ಲಕ್ಷ್ಮಿ ರೈ
Anitha E | news18
Updated: April 17, 2019, 7:02 PM IST
ಕನ್ನಡ ನಾಡಿನ ಪ್ರತಿಭೆ ಲಕ್ಷ್ಮಿ ರೈ ಸದ್ಯ ಅಕ್ಕಪಕ್ಕದ ರಾಜ್ಯಗಳಲ್ಲಿ ಜನಪ್ರಿಯತೆ ಪಡೆದುಕೊಂಡಿರುವ ನಟಿ. ಬಹುಭಾಷಾ ನಟಿ ಲಕ್ಷ್ಮಿ ರೈ ಸಾಕಷ್ಟು ಬೋಲ್ಡ್​ ಆಗಿ ಸಿನಿಮಾಗಳಲ್ಲಿ ಕಾಣಿಸಿಕೊಂಡು ಮನೆ ಮಾತಾಗಿರುವ ನಟಿ. ಸದ್ಯ ಸಾಹಸ ಪ್ರಧಾನ ಚಿತ್ರದ ಮೂಲಕಕನ್ನಡಕ್ಕೆ ಹಿಂತಿರುಗಿದ್ದಾರೆ.

ಇದನ್ನೂ ಓದಿ: ಸಮಂತಾ ಅಕ್ಕಿನೇನಿ ನಟನೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಕನ್ನಡತಿ ಶ್ರದ್ಧಾ ಶ್ರೀನಾಥ್​

ವ `ಝಾನ್ಸಿ' ಚಿತ್ರೀಕರಣ ಪೂರ್ಣಗೊಳಿಸಿ ಈಗ ಮಾತಿನ ಮನೆಗೆ ತೆರಲಿದೆ ಎಂದು ನಿರ್ದೇಶಕ ಪಿ. ವಿ. ಎಸ್. ಗುರುಪ್ರಸಾದ್ ಅವರ 'ಝಾನ್ಸಿ' ಚಿತ್ರದಲ್ಲಿ ಪೊಲೀಸ್​ ಅಧಿಕಾರಿಯಾಗಿ ಲಕ್ಷ್ಮಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಈ ಚಿತ್ರದ ಚಿತ್ರೀಕರಣ ಮುಗಿದಿದ್ದು, ಟಾಕಿ ಪೋರ್ಶನ್​ ಕೆಲಸ ಆರಂಭವಾಗಿದೆ.

`ಝಾನ್ಸಿ' ಚಿತ್ರತಂಡ ಪೋಸ್ಟ್​ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿದ್ದು, ಸದ್ಯದಲ್ಲೇ 'ಝಾನ್ಸಿ' ಚಿತ್ರ ಮಂದಿರಗಳಿಗೆ ಲಗ್ಗೆ ಇಡಲಿದ್ದಾಳೆ.   ಈ ಚಿತ್ರಕ್ಕಾಗಿ ಲಕ್ಷ್ಮಿ ಮಾರ್ಷಿಯಲ್ ಆರ್ಟ್ ಸಹ ಕಲಿತಿದ್ದಾರೆ. ಜೊತೆಗೆ ಒಂದು ಹಾಡಿನಲ್ಲಿ ನೃತ್ಯ ನಿರ್ದೇಶಕ ಧನ್​ಕುಮಾರ್ ರೈ ಅವರ ಕೈಯಲ್ಲಿ ಸ್ಟೆಪ್ಸ್ ಸಹ ಹಾಕಿಸಿದ್ದಾರೆ.

ಈ ಚಿತ್ರ ಕನ್ನಡದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದ್ದು, ಇದರ ಹಿಂದಿ ಡಬ್ಬಿಂಗ್​ ಹಕ್ಕು ಒಳ್ಳೆಯ ಮೊತ್ತಕ್ಕೆ ಮಾರಾಟವಾಗಿದೆಯಂತೆ. ಅಷ್ಟೇ ಅಲ್ಲ ತೆಲುಗು ಹಾಗೂ ತಮಿಳಿನ ಡಬ್ಬಿಂಗ್​ ರೈಟ್ಸ್​ಗೂ ಬೇಡಿಕೆ ಹೆಚ್ಚಿದ್ದು, ದೊಡ್ಡ ಮೊತ್ತಕ್ಕೆ ಮಾರಾಟವಾಗುವ ಸಾಧ್ಯತೆ ಇದೆ ಎನ್ನುವ ಮಾತುಗಳು ಗಾಂಧಿನಗರದ ಗಲ್ಲಿಗಳಲ್ಲಿ ಹರಿದಾಡುತ್ತಿವೆ.

ನಿರ್ದೇಶಕ ಗುರುಪ್ರಸಾದ್ ಈ ಹಿಂದೆ `ಮರ್ಯಾದ ರಾಮಣ್ಣ' ಚಿತ್ರವನ್ನು ನಿರ್ದೇಶನ ಮಾದ್ದು, ಈಗ `ಝಾನ್ಸಿ' ಚಿತ್ರಕ್ಕೆ ಕಥೆ, ಚಿತ್ರಕಥೆ ಸಂಭಾಷಣೆ ಬರೆಯುವುದರೊಂದಿಗೆ ನಿರ್ದೇಶನವನ್ನೂ ಮಾಡಿದ್ದಾರೆ. 'ಡ್ರಗ್ಸ್, ಲ್ಯಾಂಡ್ ಮಾಫಿಯಾ ಹಾಗೂ ಇನ್ನಿತರ ವಿಚಾರಗಳನ್ನು ಒಳಗೊಂಡ `ಝಾನ್ಸಿ' ಮಾಸ್ ಹಾಗೂ ಕುಟುಂಬ ಸಮೇತ ನೋಡುವಂತಹ ಚಿತ್ರವಾಗಿದೆ' ಎನ್ನುತ್ತಾರೆ ನಿರ್ದೇಶಕರು.
Loading...

ಇದನ್ನೂ ಓದಿ: 34ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಐಂದ್ರಿತಾ ರೇ: ಎಷ್ಟು ವಿಭಿನ್ನವಾಗಿತ್ತು ಗೊತ್ತಾ ಮನಸಾರೆ ಹುಡುಗಿಯ ಬರ್ತ್​ಡೇ..!

ಮುಂಬೈ ಮೂಲದ ರಾಜೇಶ್ ಕುಮಾರ್ ಈ ಚಿತ್ರದ ನಿರ್ಮಾಪಕರಾಗಿದ್ದು, ನಾಲ್ಕು ಹಾಡುಗಳಿಗೆ ಎಂ ಎನ್ ಕೃಪಾಕರ್​ ಅವರ ಸಂಗೀತ, ವೀರೇಶ್ ಅವರ ಛಾಯಾಗ್ರಹಣ ಹಾಗೂ ಬಸವರಾಜ್  ಅವರ ಸಂಕಲನವಿದೆ.

PHOTOS: ನಟ ನಾನಿಯ ಮುದ್ದು ಗೊಂಬೆ ಶ್ರದ್ಧಾ ಶ್ರೀನಾಥ್​ರ ಲೆಟೆಸ್ಟ್​ ಫೋಟೋಶೂಟ್​
First published:April 17, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626