Karunya Raam: ಜಗತ್ತಿನ 8 ಅದ್ಭುತ ಕಾಣೋ ಆಸೆ-ಈಗ ಮೂರೇ ಮೂರು ಕಂಪ್ಲೀಟ್ ಆಗಿದೆ-ಕಾರುಣ್ಯ

ಕಂಡ ಕನಸು ನನಸು ಮಾಡಲು ಹೊರಟ ಕನ್ನಡದ ಕಾರುಣ್ಯ ರಾಮ್!

ಕಂಡ ಕನಸು ನನಸು ಮಾಡಲು ಹೊರಟ ಕನ್ನಡದ ಕಾರುಣ್ಯ ರಾಮ್!

ಜಗತ್ತಿನ 8 ಅದ್ಭುತಗಳನ್ನ ನೋಡುವ ಆಸೆ ಇದೆ. ಈಗಾಗಲೇ ತಾಜ್‌ ಮಹಲ್, ಮತ್ತು ಈಜಿಪ್ತ್ ಪಿರಾಮಿಡ್‌ಗಳನ್ನ ವೀಕ್ಷಿಸಿದ್ದೇನೆ. ಈಗ ಪೆಟ್ರಾವನ್ನೂ ನೋಡಿ ಖುಷಿ ಆಗಿದೆ. ಇನ್ನು ಐದು ಅದ್ಭುತಗಳನ್ನ ನೋಡುವ ಆಸೆ ಇದೆ ಎಂದು ಕಾರುಣ್ಯ ರಾಮ್, ನ್ಯೂಸ್-18 ಕನ್ನಡ ಡಿಜಿಟಲ್‌ಗೆ ತಿಳಿಸಿದ್ದಾರೆ.

  • News18 Kannada
  • 4-MIN READ
  • Last Updated :
  • Bangalore [Bangalore], India
  • Share this:

ಕನ್ನಡದ ಯುವ ನಟಿ ಕಾರುಣ್ಯ ರಾಮ್ (Kannada Actress Karunya Ram) ಒಂದು ಕನಸು ಕಂಡಿದ್ದಾರೆ. ಆ ಕನಸು ನನಸು ಮಾಡಿಕೊಳ್ಳಲು ಈಗ ಹೊರಟು ಬಿಟ್ಟಿದ್ದಾರೆ.  ದೂರದ ದೇಶಗಳಲ್ಲಿರೋ ಆ ಅದ್ಭುತಗಳನ್ನ ನೋಡೊದೇ ಈ ಬೆಡಗಿಯ ಮನದಾಸೆ. ಅದನ್ನ ಈಡೇರಿಸಿಕೊಳ್ಳಲು ಬೇಕಾಗುವ ಎಲ್ಲ (Karunya Ram Jordan Tour) ಶ್ರಮಗಳನ್ನ ಪಟ್ಟು, ಈಗ ಒಂದೊಂದಾಗಿಯೇ ಆ ಕನಸನನ್ನ ಈಡೇರಿಸಿಕೊಳ್ಳುತ್ತಿದ್ದಾರೆ. ಕಾರುಣ್ಯ ರಾಮ್ ಹೊಸ ರೀತಿಯ ಫೋಟೋ ಶೂಟ್‌ಗಳ ಮೂಲಕ ಆಗಾಗ ಗಮನ (Sandalwood Actess Karunya Ram) ಸೆಳೆಯುತ್ತಾರೆ.ಆದರೆ ಇದೀಗ ಕಾರುಣ್ಯ ತಮ್ಮ ಪಯಣದ ಕಥೆ ಮೂಲಕ ಎಲ್ಲರ ಮನದಲ್ಲೂ ಹೊಸ ಉತ್ಸಾಹ ಮೂಡಿಸುತ್ತಿದ್ದಾರೆ. ಆ ವಿಷಯದ ಬಗ್ಗೆ ನ್ಯೂಸ್‌-18 ಕನ್ನಡ ಡಿಜಿಟಲ್‌  ಜೊತೆಗೂ ಹಂಚಿಕೊಂಡಿದ್ದಾರೆ. ಅದೇನೂ ಅನ್ನೋದನ್ನ ಹೇಳ್ತಾ ಹೋಗಿದ್ದೇವೆ ಓದಿ.


ಕಂಡ ಕನಸು ನನಸು ಮಾಡಲು ಹೊರಟ ಕನ್ನಡದ ಕಾರುಣ್ಯ ರಾಮ್!


ಹ್ಯಾಟ್ರಿಕ್ ಹೀರೋ ಶಿವರಾಜ್‌ ಕುಮಾರ್ ಅಭಿನಯದ ವಜ್ರಕಾಯ ಚಿತ್ರದಲ್ಲಿ ಕಾರುಣ್ಯ ರಾಮ್ ಅದ್ಭುತವಾಗಿಯೇ ಅಭಿನಯಿಸಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ನಭಾ ನಟೇಶ್ ಅಭಿನಯಿಸಿದ್ದರೂ ಕೂಡ ನಂದಿನಿ ಪಾತ್ರದಲ್ಲಿ ಕಾರುಣ್ಯ ರಾಮ್ ಸ್ಪೆಷಲ್ ಆಗಿಯೇ ಕಾಣಿಸಿಕೊಂಡರು. ಜನರನ್ನ ತಮ್ಮದೇ ರೀತಿಯಲ್ಲಿ ಸೆಳೆದು ಬಿಟ್ಟರು.


Kannada Actress Karunya Ram Travel to Jordan to Fulfill her Dream
ಕಾರುಣ್ಯ ಸಿನಿ ಜರ್ನಿಯಲ್ಲಿ ವಜ್ರಕಾಯ ತುಂಬಾ ಸ್ಪೆಷಲ್


ಕಾರುಣ್ಯ ರಾಮ್ ಚಿತ್ರ ಜೀವನದಲ್ಲಿ ಹಲವು ಸಿನಿಮಾಗಳಿವೆ. ಅವುಗಳಲ್ಲಿ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರವೂ ಇದೆ. ಪೂರ್ಣಚಂದ್ರ ತೇಜಸ್ವಿ ಕಥೆ ಆಧರಿಸಿದ ಕಿರುಗೂರಿನ ಗಯ್ಯಾಳಿಗಳು ಚಿತ್ರದಲ್ಲಿ ಭಾಗ್ಯ ಹೆಸರಿನ ಪಾತ್ರದ ಮೂಲಕ ಕೂಡ ಗಮನ ಸೆಳೆದರು. ಮನೆ ಮಾರಾಟಕ್ಕಿದೆ ಚಿತ್ರದಲ್ಲಿ ಕಾಮಿನಿ ಹೆಸರಿನ ಪಾತ್ರದಲ್ಲಿ ಅಭಿನಯಿಸಿದ್ದರು.




ಕಾರುಣ್ಯ ಸಿನಿ ಜರ್ನಿಯಲ್ಲಿ ವಜ್ರಕಾಯ ತುಂಬಾ ಸ್ಪೆಷಲ್


ನೀನಾಸಂ ಸತೀಶ್ ಅಭಿನಯದ ಪೆಟ್ರೋಮ್ಯಾಕ್ಸ್ ಚಿತ್ರದಲ್ಲಿ ಕಾರುಣ್ಯ ರಾಮ್, ಕವಿತಾ ಅನ್ನುವ ರೋಲ್ ಅಭಿನಯಿಸಿದ್ದಾರೆ. ರೆಮೋ ಚಿತ್ರದಲ್ಲಿ ಪ್ರಿಯಾ ಅನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.


ಹಾಗೆ ಸಿನಿಮಾ ಮಾಡ್ತಾ ಮಾಡ್ತಾನೇ ಹೊಸ ರೀತಿಯ ಫೋಟೋ ಶೂಟ್ ಮಾಡಿಸೋ ನಟಿ ಕಾರುಣ್ಯ ರಾಮ್ ಈಗ ಒಂದು ಕನಸು ಕಂಡಿದ್ದಾರೆ. ಆ ಕಸನು ದೊಡ್ಡ ಕನಸೇ ಆಗಿದೆ. ಅದನ್ನ ಈಡೇರಿಸೋಕೆ ಕಾರುಣ್ಯ ರಾಮ್ ಈಗ ಪ್ರಯಾಣ ಆರಂಭಿಸಿದ್ದಾರೆ.


Kannada Actress Karunya Ram Travel to Jordan to Fulfill her Dream
ಜೋರ್ಡಾನ್‌ನ ಅದ್ಭುತ ಪೆಟ್ರಾ ವೀಕ್ಷಿಸಿದ ನಟಿ ಕಾರುಣ್ಯ ರಾಮ್


ಹೌದು, ಕನ್ನಡದ ನಟಿ ಕಾರುಣ್ಯ ರಾಮ್ ಜಗತ್ತಿನ 8 ಅದ್ಭುತಗಳನ್ನ ನೋಡಲೇಬೇಕು ಅನ್ನುವ ಕನಸು ಕಂಡಿದ್ದಾರೆ. ಆ ಕನಸಿಗೆ ಸಹೋದರಿ ಜೊತೆಗೂಡಿ ಜಗತ್ತಿನ ಅದ್ಭುತಗಳನ್ನ ನೋಡೋಕೆ ಆರಂಭಿಸಿದ್ದಾರೆ. ಆ ಲೆಕ್ಕದಲ್ಲಿ ಈಗಾಗಲೇ ಆಗ್ರಾದ ತಾಜ್ ಮಹಲ್ ವೀಕ್ಷಿಸಿ ಖುಷಿಪಟ್ಟಿದ್ದಾರೆ.


ಜೋರ್ಡಾನ್‌ನ ಅದ್ಭುತ ಪೆಟ್ರಾ ವೀಕ್ಷಿಸಿದ ನಟಿ ಕಾರುಣ್ಯ ರಾಮ್


ಇದಾದ್ಮೇಲೆ ಈಜಿಪ್ತ್‌ನ ಪಿರಾಮಿಡ್‌ಗಳನ್ನ ಕೂಡ ವೀಕ್ಷಿಸಿ ಬಂದಿದ್ದಾರೆ. ಇದರ ಬೆನ್ನಲ್ಲಿಯೇ ಜೋರ್ಡಾನ್ ದೇಶದಲ್ಲಿರೊ ಪೆಟ್ರಾ ಅವನ್ನ ಕೂಡ ವೀಕ್ಷಿಸಿದ್ದಾರೆ. ಈ ಹಿಂದೆ ಇದೇ ಜಾಗದಲ್ಲಿಯೇ ರಾಕಿಂಗ್ ಸ್ಟಾರ್ ಯಶ್ ಮತ್ತು ಅಮೂಲ್ಯ ಅಭಿನಯದ ಗಜಕೇಸರಿ ಚಿತ್ರದ ಒಂದು ಹಾಡನ್ನ ಚಿತ್ರೀಕರಿಸಿಕೊಂಡಿದ್ದರು. ಆ ಗೀತೆ ಈಗಲೂ ಎಲ್ಲರಿಗೂ ಇಷ್ಟ ಆಗುತ್ತದೆ.


ತುಂಬಾ ವಿಶೇಷವಾದ ಈ ಪೆಟ್ರಾ ಕಣ್ಣಿಗೆ ಒಂದು ರೀತಿಯ ವಿಶೇಷವಾದ ಹಬ್ಬವೇ ಆಗಿದೆ. ಇದನ್ನ ನೋಡಿದಾಗ ಎಂತವರಿಗು ಆಶ್ಚರ್ಯ ಆಗುತ್ತದೆ. ಅಂತಹ ಈ ವಿಶೇಷ ಅದ್ಭುತವನ್ನ ವೀಕ್ಷಿಸಿದ ನಟಿ ಕಾರುಣ್ಯ ರಾಮ್, ಪೆಟ್ರಾ ನೋಡಿ ಖುಷಿ ಆಗಿದೆ ಅಂತಲೇ ಹೇಳಿಕೊಂಡಿದ್ದಾರೆ.


ಜಗತ್ತಿನ 8 ಅದ್ಭುತಗಳನ್ನ ನೋಡುವ ಆಸೆ !


ಜಗತ್ತಿನ 8 ಅದ್ಭುತಗಳನ್ನ ನೋಡುವ ಆಸೆ ಇದೆ. ಈಗಾಗಲೇ ತಾಜ್‌ ಮಹಲ್ ಮತ್ತು ಈಜಿಪ್ತ್ ಪಿರಾಮಿಡ್‌ಗಳನ್ನ ವೀಕ್ಷಿಸಿದ್ದೇನೆ. ಈಗ ಪೆಟ್ರಾವನ್ನೂ ನೋಡಿ ಖುಷಿ ಆಗಿದೆ. ಇನ್ನು ಐದು ಅದ್ಭುತಗಳನ್ನ ನೋಡುವ ಆಸೆ ಇದೆ ಎಂದು ಕಾರುಣ್ಯ ರಾಮ್, ನ್ಯೂಸ್-18 ಕನ್ನಡ ಡಿಜಿಟಲ್‌ಗೆ ತಿಳಿಸಿದ್ದಾರೆ.


ಇದನ್ನೂ ಓದಿ:Sampathige Savaal: ಸಂಪತ್ತಿಗೆ ಸವಾಲ್ ಚಿತ್ರಕ್ಕೆ ನಟಿ ಜಯಂತಿ ಬದಲು ಮಂಜುಳಾ ಆಯ್ಕೆ ಮಾಡಿದ್ಯಾಕೆ ರಾಜ್?


ಕಾರುಣ್ಯ ರಾಮ್ ರೀತಿ ಎಲ್ಲರೂ ಜಗತ್ತಿನ 8 ಅದ್ಭುತಗಳನ್ನ ನೋಡೋಕೆ ಇಷ್ಟಪಡ್ತಾರೆ. ಆದರೆ ಅದು ಹಲವು ಕಾರಣಗಳಿಂದ ಸಾಧ್ಯವಾಗೋದಿಲ್ಲ. ಯುವ ನಟಿ ಕಾರುಣ್ಯ ರಾಮ್ ತಮ್ಮ ಆ ಒಂದು ಕನಸನ್ನ ಸಾಕಾರಗೊಳಿಸೋ ನಿಟ್ಟಿನಲ್ಲಿ ಜಗತ್ತಿನ ಮೂರು ಅದ್ಭುತಗಳನ್ನ ಈಗ ವೀಕ್ಷಿಸಿದ್ದಾರೆ. ಮುಂದಿನ ಪ್ಲಾನ್ ಯಾವಾಗ ಅನ್ನೋದನ್ನ ಈಗಲೇ ಇನ್ನೂ ರಿವೀಲ್ ಮಾಡಿಲ್ಲ ಅಷ್ಟೆ.

First published: