ಕೊರೊನಾ ಕಾರಣ ಬೆಂಗಳೂರು ಬಿಟ್ಟು (Hubballi) ಹುಬ್ಬಳ್ಳಿಗೆ ಬಂದಿದ್ದೇನೆ. ಇಲ್ಲಿಂದಲೇ ಸಿನಿಮಾ ಸುದ್ದಿ ಬರೆಯೋ ಅವಕಾಶ ಬೇರೆ ಸಿಕ್ಕಿದೆ. ನಾನು ಲಕ್ಕಿ ಅನ್ನೋಮಟ್ಟಿಗೆ ಈ ಕೆಲಸ ಖುಷಿ ಕೊಟ್ಟಿದೆ. ಇಲ್ಲಿಂದಲೇ ಸಿನಿಮಾ (Cinema News) ಸುದ್ದಿ ಬರೆಯೋ ಹೊತ್ತಿಗೆ ನಮ್ಮೂರಿನ ಒಂದಷ್ಟು ವಿಶೇಷ ವಿಚಾರಗಳು ಸಿಗ್ತಾ ಇವೆ. ನಟಿ ಕಲ್ಪನಾ ನಮ್ಮೂರಲ್ಲಿಯೇ (Drama) ನಾಟಕ ಮಾಡಿ ಹೋಗಿದ್ರು ಅನ್ನೋದು ಅತೀವ ಖುಷಿ ತಂದಿದೆ. ಚಿಕ್ಕಂದಿನಲ್ಲಿ ನಾಟಕ ನೋಡಲು ಹೋಗ್ತಿದ್ದ ನೆನಪು (Memories) ಈಗಲೂ ಹಸಿರಾಗಿಯೇ ಇದೆ. ಆದರೆ ಅಂದು ನಾನು ಯಾರನ್ನೆಲ್ಲ ನೋಡಿದೆ ಅನ್ನೋದು ಗೊತ್ತಿಲ್ಲ. ಅಷ್ಟೆ. ಆದರೆ ಕಲ್ಪನಾ ಅವರನ್ನ ಹತ್ತಿರದಿಂದಲೇ ನೋಡಿದ ಹೆಲನ್ ನಮ್ಮೂರು ಹುಬ್ಬಳ್ಳಿಯಲ್ಲಿಯೇ ಇದ್ದಾರೆ. ಅವರು ಹಂಚಿಕೊಂಡ ಅನುಭದ ಸಾರ ಇಲ್ಲಿದೆ ಓದಿ.
ನಮ್ಮೂರಲ್ಲಿಯೇ ಸಿಕ್ಕರು ಮಿನುಗುತಾರೆಯನ್ನ ಕಂಡ ಹೆಲನ್!
ಆದರೆ ನಮ್ಮೂರಿನಲ್ಲಿಯೇ ಇರೋ ರಂಗಭೂಮಿಯ ಕಲಾವಿದೆ ಹೆಲನ್ ಅವರ ಪರಿಚಯ ಇತ್ತೀಚಿಗೆ ಆಯಿತು. ಅದು ನಟಿ ಭಾವನಾ ರಾಮಣ್ಣ ಅವರಿಂದ ಅನ್ನೋದೇ ವಿಶೇಷ. ಭಾವನಾ ರಾಮಣ್ಣ ಇತ್ತೀಚಿಗೆ ಒಂದು ನಾಟಕ ಮಾಡಿದರು. ಅದರ ಹೆಸರು ಕಲ್ಪನಾ ಅವರ ಕಡೆಯ ದಿನಗಳು ಅನ್ನೋದೇ ಆಗಿತ್ತು.
ಈ ನಾಟಕದಲ್ಲಿ ಕಲ್ಪನಾ ಅವರ ಕಡೆದಿನಗಳನ್ನೆ ಆಡಲಾಗಿತ್ತು. ಬೆಂಗಳೂರಿನಲ್ಲಿ ಈ ನಾಟಕ ಇದ್ದ ಕಾರಣ ಅದನ್ನ ನೋಡಲು ಆಗಲಿಲ್ಲ ಬಿಡಿ. ಆದರೆ ಕಲಾವಿದೆ ಹೆಲನ್ ಅವರ ಪರಿಚಯ ಹೆಚ್ಚೇ ಆಗಿದೆ. ಕಲ್ಪನಾ ಅವರ ಬಗ್ಗೆ ಏನಾದ್ರೂ ಬೇಕು ಅಂದ್ರೆ ಸಾಕು. ಇವರಿಗೆ ಕಾಲ್ ಮಾಡಿದ್ರೆ, ಅಷ್ಟೇ ಗೌರವದಿಂದಲೇ ಫೋನ್ ನಲ್ಲಿಯೇ ಹೆಲನ್ ಮಾಹಿತಿ ಕೊಡ್ತಾರೆ.
ಒಂದು ಸಂಜೆ ಹೆಲನ್ ಅವರಿಗೆ ಕಾಲ್ ಮಾಡಿದಾಗ
ಹಾಗೆ ಒಂದು ಶನಿವಾರದ ಸಂಜೆ ಹೆಲನ್ ಅವರಿಗೆ ಪೋನ್ ಮಾಡಿದ್ದೆ. ಆಗ ಕೂಡಲೇ ಪೋನ ರಿಸೀವ್ ಮಾಡಿದ ಹೆಲನ್, ಹೆಲೋ ಅಂದ್ರು, ನನ್ನ ಪರಿಚಯವನ್ನ ಮತ್ತೊಮ್ಮೆ ಮಾಡಿದೆ. ತಟ್ಟಂತ ನೆನಪಿಸಿಕೊಂಡು, ಹೇಳಿ ಅಂದ್ರು, ಕಲ್ಪನಾ ನಿಮಗೆ ಸೀರೆ ಕೊಟ್ಟಿದ್ದರು ಅಲ್ವೇ? ಅದನ್ನ ನೆನಪಿಸಿಕೊಳ್ಳಬಹುದು.? ಅಂತಲೇ ಕೇಳಿದೆ.
ಹೆಲನ್ ಮಾತು ಆಡ್ತಾ ಹೋದ್ರು; ಕಲ್ಪನಾ ಅವರಿಗೆ ಯಾವುದೇ ತೊಂದರೆ ಇರಲಿಲ್ಲ. ಅವರು ಚೆನ್ನಾಗಿದ್ದರು. ಕಲ್ಪನಾ ಎಲ್ಲರಿಗೂ ಒಂದೊಂದು ರೀತಿ ಕಂಡ್ರು ಅನಿಸುತ್ತದೆ. ಆದರೆ ನನಗೆ ಅವರು "ಕಲ್ಪನಾಜೀ" ಅವರಿಗೆ ಡ್ರೈ ಸ್ಕಿನ್ ಇತ್ತು. ಅಷ್ಟೇ ಅದು ಬಿಟ್ಟರೇ, ಬೇರೆ ತೊಂದರೆ ಏನೂ ಇರಲಿಲ್ಲ. ಆದರೆ ಅವರ ಬಗ್ಗೆ ಏನೇನೋ ಕಥೆಗಳಿವೆ. ಅವೆಲ್ಲ ಸುಳ್ಳು. ಹಿಂಗೆ ಮಾತು ಶೃತಿ ಹಿಡಿತು.
ಕಲ್ಪನಾ ನಾಟಕವಾಡಿದಾಗ ಆದ ಒಂದು ಸಣ್ಣ ವಿವಾದ
ಕಲ್ಪನಾ ಅವರ ನಾಟಕವಾಡಿದಾಗ ಒಂದು ಸಣ್ಣ ವಿವಾದವೂ ಕ್ರಿಯೇಟ್ ಆಗಿತ್ತು. ಗುಡಿಗೇರಿ ಬಸವರಾಜ್ ಅವರ ಪುತ್ರ ನಾಗರಾಜ್ ನನಗೆ ಕಾಲ್ ಮಾಡಿದ್ದರು. ನಮ್ಮ ತಂದೆ ಬಗ್ಗೆ ನೀವು ನಾಟಕ ಮಾಡಿದ್ದೀರಿ? ಅಂತಲೇ ಕೇಳಿದ್ರು. ಹಾಗಲ್ಲಪ್ಪ ನಾವು ಕಲ್ಪನಾ ಅವರ ಬಗ್ಗೆ ಮಾಡಿದ್ದೇವೆ. ನಿಮ್ಮ ತಂದೆ ಅವರ ಬಗ್ಗೆ ಅಲ್ವೇ ಅಲ್ಲ ಅಂತ ಹೇಳಿದೆ. ಅಷ್ಟೇ ನೋಡಿ, ಅದಾದ್ಮೇಲೆ ಬೇರೆ ಏನೂ ಸಮಸ್ಯೆ ಆಗಲೇ ಇಲ್ಲ.
ಕಲ್ಪನಾ ಅವರಿಗೆ ಅಹಂ ಇರಲಿಲ್ಲ-ಸಿಟ್ಟೂ ಇರಲಿಲ್ಲ!
ಕಲ್ಪನಾಜೀ ನಿಜಕ್ಕೂ ಒಳ್ಳೆ ಹೆಣ್ಣುಮಗಳು. ಕಲ್ಪನಾಜೀ ಎಂದು ಅಹಂನಿಂದ ನಡೆದುಕೊಂಡವರೇ ಅಲ್ಲ. ಮಿನುಗುತಾರೆಯಾಗಿ ಮಿಂಚಿದವರು ಹುಬ್ಬಳ್ಳಿಗೆ ಬಂದಾಗ ನಮ್ಮನೆಗೆ ಬರುತ್ತಿದ್ದರು. ನಾಟಕ ಕಂಪನಿಯ ಜನ ಊಟ ಮುಗಿಸಿ ಹೋಗುವ ಎಲೆಗಳನ್ನೆಲ್ಲ ಎತ್ತಿದ್ದಾರೆ. ಅಂತಹ ಕಲ್ಪನಾ ಅವರಿಗೆ ಅಹಂ ಇರಲು ಹೇಗೆ ಸಾಧ್ಯ ಹೇಳಿ.
ಕಲ್ಪನಾ ಮೂರು ಚಿತ್ರಕ್ಕೆ 3 ಸಾವಿರ ರೂಪಾಯಿ ಸಂಭಾವನೆ ಪಡೆದಿದ್ದರು!
ಒಂದು ಇನ್ಸಿಡೆಂಟ್ ಹೇಳ್ತಿನಿ ಕೇಳಿ. ಕಲ್ಪನಾ ಅವರು ಎಂದೂ ನಿರ್ಮಾಪಕರ ಬಳಿ ದುಡ್ಡು ಬೇಕು ಅಂತ ಪೀಡಿಸಿದವ್ರಲ್ಲ. ಎಲ್ಲರಿಗೂ ಕೊಟ್ಟ ಮೇಲೆ ನನಗೂ ಏನಾದ್ರೂ ಉಳಿದಿದಿಯೇ ಅಂತ ಕೇಳುತ್ತಿದ್ದರು. ಹಾಗೇ ಕಲ್ಪನಾ ಇದ್ದವರು.
ನಮ್ಮ ಮೂರು ಸಿನಿಮಾಗಳಿಗೆ ಕಲ್ಪನಾ ಕೆಲಸ ಮಾಡಿದ್ದರು. ಮೂರು ಸಿನಿಮಾ ಸೇರಿ ಆಗ ಮೂರು ಸಾವಿರ ರೂಪಾಯಿ ಕೊಟ್ಟಿದ್ದೇ ಅಂತಲೇ ಗಜ್ಜೆ ಪೂಜೆ, ಬೆಳ್ಳಿ ಮೋಡದ ನಿರ್ಮಾಪಕರಾದ 90 ವರ್ಷದ ಮುದ್ದು ಕೃಷ್ಣ ಈಗ ಹೇಳಿದ್ದರು.
ಹುಬ್ಬಳ್ಳಿಗೆ ಕಲ್ಪನಾ ಬಂದ್ರೆ ಹೆಲನ್ ಮನೆಯಲ್ಲಿಯೇ ಇರೋರು
ಕಲ್ಪನಾ ಹಾಗೇ ಇದ್ದೋರು. ಕಲ್ಪನಾ ಬಗ್ಗೆ ಹೇಳ್ತಾ ಹೋದ್ರೆ ಸಾಕಷ್ಟು ಇದೆ. ಕಲ್ಪನಾ ನಮ್ಮ ಮನೆಗೆ ಬಂದಾಗ ನನ್ನ ಬಗ್ಗೆ ವಿಶೇಷ ಕಾಳಜಿ ತೋರುತ್ತಿದ್ದರು. ನಾನು ತುಂಬಾ ಕುಳ್ಳಿ. ಆದರೆ ಕಲ್ಪನಾಜೀ ನನಗೆ ಎತ್ತರ ಕಡಿಮೆ ಇರೋರು ಸ್ಟೇಜ್ ಮೇಲೆ ಹೇಗೆ ಕಾಣಬೇಕು ಅನ್ನೋದನ್ನ ಹೇಳಿಕೊಟ್ಟಿದ್ದರು.
ಇದನ್ನೂ ಓದಿ: Kantara 2: ಅಣ್ಣಪ್ಪ ಪಂಜುರ್ಲಿ ಕೋಲದಲ್ಲಿ ಕಾಂತಾರಾ 2 ಸಿನಿಮಾಗೆ ದೈವದ ಅನುಮತಿ ಕೇಳಿದ ಚಿತ್ರತಂಡ
ಕಲ್ಪನಾಜೀ ನನಗೆ ಎಲ್ಲವನ್ನೂ ಹೇಳಿಕೊಟ್ಟ ಗುರು!
ಹೈ ಹಿಲ್ಡ್ ಚಪ್ಪಲಿ ಧರಿಸುಕೊಂಡ್ರೆ ಒಳ್ಳೆಯದು ಅಂತಲೇ ಹೇಳೋರು. ಸ್ಟೇಜ್ ಮೇಲೆ ಕೈಗಳನ್ನ ಅಗಲಿಸಿ ನಟಿಸೋದ್ರಿಂದ ಎಲ್ಲರಿಗೂ ನೀನು ಕಾಣಿಸುತ್ತೀಯಾ ಅಂತಲೇ ಹೇಳೋರು. ಹಿಂಗೆ ಕಲ್ಪನಾ ನನ್ನ ಜೀವನದಲ್ಲಿ ಬಹಳಷ್ಟು ಸ್ಪೂರ್ತಿ ತುಂಬಿದ್ದಾರೆ.
ಇವರ ಬಗ್ಗೆ ಒಂದು ನಾಟಕ ಮಾಡಬೇಕು ಅನ್ನೋ ಹಂಬಲ ಇತ್ತು. ಅದು ಬಹು ದಿನಗಳ ಬಳಿಕ ಆಗಿದೆ. ಅದು ನಿಜಕ್ಕೂ ಖುಷಿಯ ವಿಷಯವೇ ಆಗಿದೆ. ಕಲ್ಪನಾ ಬಗ್ಗೆ ಹೇಳೋಕೆ ಬಹಳ ಇದೆ. ಆದರೆ ಅವರ ಬಗ್ಗೆ ಯಾರ್ಯಾರೋ ಏನೋ ಹೇಳ್ತಾರೆ ಅನ್ನೋದೇ ಬೇಸರ ಅಂತಲೇ ಹೆಲನ್ ಮಾತು ಮುಗಿಸಿದ್ರು.
ಇದು ರಂಗಭೂಮಿ ಕಲಾವಿದೆ ಹೆಲನ್ ನ್ಯೂಸ್-18 ಕನ್ನಡ ಡಿಜಿಟಲ್ಗೆ ಹಂಚಿಕೊಂಡ ಅನುಭವದ ಸಾರವೇ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ