• Home
  • »
  • News
  • »
  • entertainment
  • »
  • Bhavana Ramanna: ಭಾಗೀರಥಿ ಭಾವನಾ, ಈಗ ಮಿನುಗುತಾರೆ ಕಲ್ಪನಾ! ರಂಗಭೂಮಿಗೆ ಕಾಲಿಟ್ಟ ಪ್ರಾಣಸಖಿ!

Bhavana Ramanna: ಭಾಗೀರಥಿ ಭಾವನಾ, ಈಗ ಮಿನುಗುತಾರೆ ಕಲ್ಪನಾ! ರಂಗಭೂಮಿಗೆ ಕಾಲಿಟ್ಟ ಪ್ರಾಣಸಖಿ!

ರಂಗ ಭೂಮಿಗೆ ಕಾಲಿಟ್ಟ ಚಿತ್ರ ನಟಿ ಭಾವನಾ ರಾಮಣ್ಣ !

ರಂಗ ಭೂಮಿಗೆ ಕಾಲಿಟ್ಟ ಚಿತ್ರ ನಟಿ ಭಾವನಾ ರಾಮಣ್ಣ !

ಕನ್ನಡದ ನಟಿ ಭಾವನಾ ರಾಮಣ್ಣ ರಂಗಭೂಮಿಗೆ ಕಾಲಿಟ್ಟಿದ್ದಾರೆ. ರಂಗಭೂಮಿ ಮತ್ತು ಚಿತ್ರರಂಗ ಎರಡರಲ್ಲೂ ಮಿನುಗಿ ಹೋದ ಮಿನುಗು ತಾರೆ ಕಲ್ಪನಾ ಅವರ ಜೀವನವನ್ನೇ ಭಾವನಾ ಈಗ ರಂಗದ ಮೇಲೆ ಜೀವಿಸಿ ತೋರುತ್ತಿದ್ದಾರೆ!

  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡ ಚಿತ್ರರಂಗದಲ್ಲಿ (Kannada Film Industry) ಅನೇಕ ತಾರೆಯರಿದ್ದಾರೆ. ಅವರು ತಮ್ಮದೇ ರೀತಿಯಲ್ಲಿಯೇ ಬೆಳ್ಳಿ (Silver Screen) ಪರದೆ ಮೇಲೆ ಮಿಂಚುತ್ತಿದ್ದಾರೆ. ಇನ್ನು ಕೆಲವರು ಧ್ರುವ ತಾರೆಯಾಗಿ ಹೊಳೆಯುತ್ತಲೇ ಇದ್ದಾರೆ. ಈ ತಾರೆಯರ ಮಧ್ಯೆ ಮಿನುಗುತಾರೆ ಕಲ್ಪನಾ (Kalpana) ಸದಾ ಮಿನುಗುತ್ತಲೇ ಇದ್ದಾರೆ. ಇವರ ಬಣ್ಣದ ಆರಂಭದ ಬದುಕು ಸುಂದರವಾಗಿಯೇ ಇತ್ತು. ಸ್ಟಾರ್ ಆದಾಗಲೂ ಇದ್ದ ವರ್ಚಸ್ಸು ವಿಭಿನ್ನವಾಗಿಯೇ ಇತ್ತು. ಆದರೆ ಕಲ್ಪನಾ ಕೊನೆದಿನಗಳು ಮಾತ್ರ ದುರಂತಮಯವಾಗಿಯೇ ಇದ್ದವು. ಈ ಕೊನೆ ದಿನಗಳ ಅಸಲಿ ಸತ್ಯವನ್ನ ಹೇಳಲಿಕ್ಕೆ ಈಗೊಂದು ನಾಟಕ ರಚನೆ ಆಗಿದೆ. ಮಿನುಗುತಾರೆ ಕಲ್ಪನಾ ಪಾತ್ರದಲ್ಲಿ ನಟಿ ಭಾವನಾ (Bhavana Ramanna)ರಾಮಣ್ಣ ಅಭಿನಯಿಸುತ್ತಿದ್ದಾರೆ. ಇದೇ ತಿಂಗಳ 8 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಈ ನಾಟಕ ಪ್ರದರ್ಶನ ಇದೆ. ಇದರ ಇನ್ನಷ್ಟು ಅಧಿಕೃತ ಮಾಹಿತಿ ಇಲ್ಲಿದೆ.


ಕನ್ನಡದ ನಟಿ ಭಾಗೀರಥಿ ಭಾವನಾ ರಂಗಭೂಮಿ ಪ್ರವೇಶ
ಕನ್ನಡದ ನಟಿ ಭಾವನಾ ರಾಮಣ್ಣ ರಂಗ ಪ್ರವೇಶ ಮಾಡುತ್ತಿದ್ದಾರೆ. ಕಾಲೇಜು ದಿನಗಳು ಅನಿಸುತ್ತದೆ, ಆಗಲೇ ಒಮ್ಮೆ ನಾಟಕಕ್ಕಾಗಿ ಭಾವನಾ ಬಣ್ಣ ಹಚ್ಚಿದ್ದರು. ನಟಿ ಆದ್ಮೇಲೆ ಭಾವನಾ ಬಣ್ಣ ಹಚ್ಚಿದ್ದೇ ಇಲ್ಲ. ಆದರೆ ಈಗ ಒಂದ್ ಒಳ್ಳೆ ಅವಕಾಶ ಸಿಕ್ಕಿದೆ. ಅದನ್ನ ಭಾವನಾ ಅದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ.


ಭಾವನಾ ಅಭಿನಯದ ಮೊದಲ ನಾಟಕದ ಹೆಸರು ಮಿನುಗುತಾರೆ ಕಲ್ಪನಾ ಅಂತಲೇ ಇದೆ. ಈ ಮೂಲಕ ಮಿನುಗು ತಾರೆ ಕಲ್ಪನಾ ಅವರ ಜೀವನದ ಕೊನೆ ದಿನಗಳನ್ನ ರಂಗದ ಮೇಲೆ ಭಾವನಾ ರಾಮಣ್ಣ ಅಭಿನಯಿಸಿ ತೋರಲಿದ್ದು, ಇದಕ್ಕಾಗಿ ಭಾವನಾ ರಾಮಣ್ಣ ರಿಹರ್ಸಲ್ ಕೂಡ ಮಾಡುತ್ತಿದ್ದಾರೆ.


Kannada Actress Kalpana Film Life Based a New Drama is going play by Actress Bhavana Ramanna
ನಾಟಕದಲ್ಲಿ ಕಲ್ಪನಾ ಕೊನೆ ದಿನದ ಅಸಲಿ ಕಥೆ


ಕಲ್ಪನಾ ಅವರ ಜೀವನಾಧಾರಿತ ಈ ನಾಟಕದ ರಿಹರ್ಸಲ್ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಸಂಸಾ ರಂಗ ಮಂದಿರದಲ್ಲಿಯೇ ನಡೆಯುತ್ತಿದೆ.
ವಿಶೇಷವೆಂದ್ರೆ ಈ ನಾಟಕದಲ್ಲಿ ಕಲ್ಪನಾ ಅವರ ಜೊತೆಗೆ ಗುಡಿಗೇರಿ ಬಸವರಾಜ್ ಕಂಪನಿಯಲ್ಲಿದ್ದ ನಟಿ ಹೆಲನ್ ಇಲ್ಲಿ ಕಲ್ಪನಾ ಆತ್ಮದ ಪಾತ್ರವನ್ನ ಮಾಡುತ್ತಿದ್ದಾರೆ.


ನಾಟಕದಲ್ಲಿ ಕಲ್ಪನಾ ಕೊನೆ ದಿನದ ಅಸಲಿ ಕಥೆ
ಹೌದು, ರಂಗದ ಮೇಲೆ ಬರ್ತಿರೋ ಕಲ್ಪನಾ ಅವರ ನಾಟಕದಲ್ಲಿ ಅಸಲಿಗೆ ಅಂದು ನಡೆದದ್ದು ಏನೂ ಅನ್ನೋ ಚಿತ್ರಣವೂ ಇರುತ್ತದೆ. ಕಲ್ಪನಾ ಅವರ ಚಾಲಕನಾಗಿದ್ದ ಬಾಬು ಅವರು ಹೇಳಿರೋ ನಿಜವಾದ ಕಥೆ ಮತ್ತು ನಟಿ ಹೆಲನ್ ಹೇಳಿರೋ ಅಸಲಿ ವಿಷಯಗಳು ಇಲ್ಲಿ ನಾಟಕ ರೂಪದಲ್ಲಿಯೇ ಬರುತ್ತಿವೆ.


ಇದನ್ನೂ ಓದಿ: Ravichandran Post Viral: ರವಿಚಂದ್ರನ್-ಹಂಸಲೇಖಾ ಮತ್ತೆ ಸಿನಿಮಾ ಮಾಡ್ತಾರಾ? ವಿ.ರವಿಚಂದ್ರನ್ ಆ ಹಳೆ ಆರ್ಟಿಕಲ್ ಶೇರ್ ಮಾಡಿದ್ಯಾಕೆ?


ನಾಟಕದಲ್ಲಿ ಕಲ್ಪನಾ ವಿಲಾಸ ಪುಸ್ತಕದ ವಿಷಯ ಬಳಕೆ
ಪತ್ರಕರ್ತ ರವಿ ಬೆಳಗೆರೆ ಕಲ್ಪನಾ ಜೀವನದ ಮೇಲೆ ಪುಸ್ತಕ ಬರೆದಿದ್ದರು. ಕಲ್ಪನಾ ವಿಲಾಸ ಅನ್ನೋ ಈ ಪುಸ್ತಕವನ್ನ ಈ ನಾಟಕ ಆಧರಿಸಿದೆ. ಹಾಗೇನೆ ಬಾಬು ಹಾಗೂ ಹೆಲನ್ ಹೇಳಿರೋ ವಿಷಯವನ್ನ ಇಟ್ಟುಕೊಂಡೇ ಮನ್ವ ರುಷಿ ಈ ನಾಟಕವನ್ನ ರಚಿಸಿದ್ದಾರೆ.


ಜಿತೇಶ್ ಅಗಳಿ ಈ ನಾಟಕವನ್ನ ನಿರ್ದೇಶನ ಮಾಡಿದ್ದಾರೆ. ಕಳೆದ ಕೆಲವು ದಿನಗಳಿಂದಲೂ ಈ ನಾಟಕದ ತಾಲೀಮು ನಡೆಯುತ್ತಿದೆ. ಇನ್ನೇನು ಇದೇ ತಿಂಗಳ 8 ರಂದು ನಾಟಕ ಪ್ರದರ್ಶನ ಕೂಡ ಅನೌನ್ಸ್ ಆಗಿದೆ.


Kannada Actress Kalpana Film Life Based a New Drama is going play by Actress Bhavana Ramanna
ನವೆಂಬರ್-8 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ಪ್ರದರ್ಶನ


ನವೆಂಬರ್-8 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ಪ್ರದರ್ಶನ
ಮಿನುಗು ತಾರೆ ಕಲ್ಪನಾ ಜೀವನದ ಕೊನೆ ದಿನಗಳ ಅಸಲಿ ಚಿತ್ರಣವನ್ನ ರಂಗದ ಮೇಲೆ ನೋಡಬಹುದು. ನಾಟಕ ರೂಪದಲ್ಲಿ ಬರ್ತಿರೋ ತಾರೆಯ ಈ ನಾಟಕ ಇದೇ ತಿಂಗಳ 8 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ 5 ಗಂಟೆಗೆ ಪ್ರದರ್ಶನ ಮಾಡಲಾಗುತ್ತಿದೆ.
ಕನ್ನಡದ ಮಟ್ಟಿಗೆ ಇಲ್ಲಿವರೆಗೂ ಭಾವನಾ ಯಾವುದೇ ನಾಟಕದಲ್ಲಿ ಅಭಿನಯ ಮಾಡಲಿರಲಿಲ್ಲ. ಆದರೆ ಮೊಟ್ಟ ಮೊದಲ ಬಾರಿಗೆ ಚಿತ್ರ ನಟಿ ಭಾವನಾ ರಾಮಣ್ಣ ಮಿನುಗುತಾರೆ ಕಡೆಯ ದಿನಗಳು ಅನ್ನೋ ನಾಟಕದ ಮೂಲಕ ರಂಗ ಭೂಮಿಗೆ ಕಾಲಿಡುತ್ತಿದ್ದಾರೆ.


ಇದನ್ನೂಓದಿ: Devi Sri Prasad: ರಾಮ-ಕೃಷ್ಣರ ನಾಮ, ಚಿಂದಿ ಬಟ್ಟೆಯಲ್ಲಿ ಡ್ಯಾನ್ಸರ್ಸ್ ಹಂಗಾಮ! ದೇವಿ ಶ್ರೀ ಪ್ರಸಾದ್ ವಿರುದ್ಧ ಕೇಸ್


ಮಹಾನ್ ನಟಿ ಕಲ್ಪನಾ ಅವರ ಜೀವನವನ್ನ ಜೀವಿಸ ಅಭಿನಿಸುತ್ತಿದ್ದಾರೆ.
ಇವರ ಈ ಒಂದು ಮೊದಲ ಪ್ರಯತ್ನಕ್ಕೆ ಗುಡ್​ ಲಕ್ ಹೇಳೋಣ. ಇದನ್ನ ಹೆಚ್ಚು ಹೆಚ್ಚು ಜನ ನೋಡಿದ್ರೆ, ಕಲ್ಪನಾ ಜೀವನ ಆಧರಿಸಿದ ನಾಟಕದ ಪ್ರದರ್ಶನ ಇನ್ನೂ ಹೆಚ್ಚು ಹೆಚ್ಚು ಆಗುತ್ತವೆ.

First published: