Harshika Poonacha: ಪ್ರಣಯದೂರಿನಲ್ಲಿ ಕನ್ನಡದ ಚಿಟ್ಟೆ! ಹರ್ಷಿಕಾ ಪೂಣಚ್ಚ 5ನೇ ಬಾರಿ ಪ್ಯಾರಿಸ್ ಪ್ರವಾಸ!

ಹರ್ಷಿಕಾ ಪೂಣಚ್ಚಗೆ ಪ್ಯಾರಿಸ್ ಹೊಸ ದೇಶವೇನೂ ಅಲ್ಲ. ತುಂಬಾ ಇಷ್ಟ ಆಗೋದ್ರಿಂದಲೇ ಇಲ್ಲಿಗೆ ಹರ್ಷಿಕಾ ಹೋಗ್ತಾನೆ ಇರ್ತಾರೆ. ಅದರಂತೆ ಐದನೇ ಬಾರಿಗೆ ಹರ್ಷಿಕಾ ಅಲ್ಲಿಗೆ ಹೋಗಿ ಬಂದಿದ್ದಾರೆ.

ಪ್ಯಾರಿಸ್​ನಲ್ಲಿ ಕೊಡಗಿನ ಕುವರಿ ಹರ್ಷಿಕಾ ಪೂಣಚ್ಚ

ಪ್ಯಾರಿಸ್​ನಲ್ಲಿ ಕೊಡಗಿನ ಕುವರಿ ಹರ್ಷಿಕಾ ಪೂಣಚ್ಚ

  • Share this:
ಕನ್ನಡದ ಚಿಟ್ಟೆ ಚಿತ್ರ ಖ್ಯಾತಿಯ ನಟಿ ಹರ್ಷಿಕಾ (Harshika Poonacha ) ಫುಲ್ ಖುಷಿ ಮೂಡ್​ ನಲ್ಲಿಯೇ ಇದ್ದಾರೆ. ದೂರದ ಪ್ಯಾರಿಸ್ (Paris)ದೇಶದಲ್ಲಿ ಸುತ್ತಾಡಿಕೊಂಡು ಬಂದು ರಿಲ್ಯಾಕ್ಸ್ ಆಗಿದ್ದಾರೆ. ಸದಾ ಪ್ರವಾಸವನ್ನ (Travell) ಇಷ್ಟಪಡೋ ಹರ್ಷಿಕಾ ಪೂಣಚ್ಚ ಅವರಿಗೆ ಪ್ಯಾರಿಸ್ ದೇಶ ಅಂದ್ರೆ ತುಂಬಾ ಇಷ್ಟ. ಹಾಗಾಗಿಯೇ ಈ ದೇಶಕ್ಕೆ ಪೂಣಚ್ಚ ಆಗಾಗ ಹೋಗ್ತಾನೇ ಇರ್ತಾರೆ. ಆದರೆ ಈ ಸಲ ಇಲ್ಲಿಗೆ ಬಂದಿರೋದಕ್ಕೆ ವಿಶೇಷ ಕಾರಣವೂ ಇದೆ. ಅದನ್ನ ಹಂಚಿಕೊಂಡ ಕೊಡಗಿನ ಕುವರಿ ಹರ್ಷಿಕಾ ಪ್ರಣಯದೂರು ಪ್ಯಾರಿಸ್ ನಲ್ಲಿ ಏನೆಲ್ಲ ಮಾಡಿದ್ದಾರೆ ಗೊತ್ತೆ ? ಮುಂದೆ ಇದೆ ಓದಿ.

ಹರ್ಷಿಕಾ ಪೂಣಚ್ಚ ಸದಾ ಆಕ್ಟೀವ್ ಆಗಿರೋ ಕನ್ನಡದ ನಾಯಕ ನಟಿ. ಬೇರೆ ಭಾಷೆಯಲ್ಲೂ ಈಗ ಸಿನಿಮಾ ಮಾಡ್ತಿದ್ದಾರೆ. ಆದರೆ, ಟೈಮ್ ಸಿಗ್ತು ಅಂದ್ರೆ ಚಂದದ
ದೇಶಕ್ಕೂ ಪ್ರಯಾಣ ಬೆಳೆಸುತ್ತಾರೆ. ಅಲ್ಲಿಯ ಸುಂದರ ತಾಣಗಳನ್ನ ಕಂಡು ಬಹಳ ಸಂತೋಷಪಡ್ತಾರೆ. ಅದರಿಂದ ಹರ್ಷಿಕಾ ಅವರಿಗೆ ಒಂದು ತಾಜಾ ಅನುಭವ ಆಗುತ್ತದೆ. ಹೊಸ ಎನರ್ಜಿ ಕೂಡ ಕ್ರಿಯೇಟ್ ಆಗುತ್ತದೆ. ಅದಕ್ಕೇನೆ ದೂರ ದೂರದ ದೇಶಗಳಿಗೆ ಪ್ರವಾಸ ಮಾಡೋ ಹರ್ಷಿಕಾ ಪೂಣಚ್ಚ ಈ ಸಲ ಪ್ಯಾರಿಸ್ ನಲ್ಲಿ ಸಖತ್ ಮಜಾ ಮಾಡಿದ್ದಾರೆ.



Kannada Actress Harshika Poonacha travels Paris see photos
ಪ್ಯಾರಿಸ್​ನಲ್ಲಿ ಕೊಡಗಿನ ಕುವರಿ ಹರ್ಷಿಕಾ ಪೂಣಚ್ಚ


ಪ್ರಣಯದೂರು ಪ್ಯಾರಿಸ್​ನಲ್ಲಿ ಹರ್ಷಿಕಾ ಏನ್ ಮಾಡಿದ್ರು?
ಹರ್ಷಿಕಾ ಪೂಣಚ್ಚ ಪ್ಯಾರಿಸ್ ನಲ್ಲಿರೋ ಪ್ರವಾಸಿ ತಾಣಗಳನ್ನೇ ಕಂಡು ಬಂದಿದ್ದಾರೆ. ಆದರೆ ಈ ಸಲ ಹರ್ಷಿಕಾ ಪೂಣಚ್ಚ ಇಲ್ಲಿ ಒಳ್ಳೆಯ ರೆಸ್ಟೋರೆಂಟ್​ ಗಳಿಗೆ ವಿಸಿಟ್ ಕೊಟ್ಟಿದ್ದಾರೆ. ಒಂದಲ್ಲ ಎರಡಲ್ಲ ಹಲವು ರೆಸ್ಟೋರೆಂಟ್​ಗಳಲ್ಲಿ ಊಟ-ತಿಂಡಿ ಮಾಡಿ ಸಂತೋಷ ಪಟ್ಟಿದ್ದಾರೆ. ಇಲ್ಲಿಯ ಡಿಸ್ನಿ ಲ್ಯಾಂಡ್​ಗೂ ಹೋಗಿ ಬಂದಿದ್ದಾರೆ.

ಐದನೇ ಬಾರಿ ಪ್ಯಾರಿಸ್ ಗೆ ಹೋಗಿ ಬಂದ ಕೊಡಗಿನ ಕುವರಿ
ಹರ್ಷಿಕಾ ಪೂಣಚ್ಚಗೆ ಪ್ಯಾರಿಸ್ ಹೊಸ ದೇಶವೇನೂ ಅಲ್ಲ. ತುಂಬಾ ಇಷ್ಟ ಆಗೋದ್ರಿಂದಲೇ ಇಲ್ಲಿಗೆ ಹರ್ಷಿಕಾ ಹೋಗ್ತಾನೆ ಇರ್ತಾರೆ. ಅದರಂತೆ ಐದನೇ ಬಾರಿಗೆ ಹರ್ಷಿಕಾ ಅಲ್ಲಿಗೆ ಹೋಗಿ ಬಂದಿದ್ದಾರೆ. ಅಲ್ಲಿಯ ಐಫೆಲ್ ಟವರ್ ಮುಂದೆ ಭಿನ್ನ-ವಿಭಿನ್ನವಾಗಿಯೇ ಪೋಸ್ ಕೊಟ್ಟು ಫೋಟೋ ತೆಗೆಸಿಕೊಂಡಿದ್ದಾರೆ. ಅದನ್ನ ಅಷ್ಟೇ ಖುಷಿಯಿಂದಲೇ ಹೇಳಿಕೊಳ್ತಾರೆ.

ಇದನ್ನೂ ಓದಿ: Pushpa 2 ಚಿತ್ರದಲ್ಲಿ ಶೈನ್ ಆಗಲಿದ್ದಾರೆ ಸಾಯಿ ಪಲ್ಲವಿ! ಆ ಇಂಟ್ರಸ್ಟಿಂಗ್ ಪಾತ್ರದಲ್ಲಿ ನ್ಯಾಚುರಲ್ ಬ್ಯೂಟಿ!

ಕಾವೇರಿ ಕನ್ನಡ ಕೂಟದ ಕಾರ್ಯಕ್ರಮದಲ್ಲಿ ಹರ್ಷಿಕಾ ಗೆಸ್ಟ್
ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿರೋ ಕಾವೇರಿ ಕನ್ನಡ ಕೂಟಕ್ಕೆ ಈಗ ಐವತ್ತು ವರ್ಷ ಪೂರೈಸಿದ ಸಂಭ್ರಮ. ಈ ಸಡಗರದ ಕಾರ್ಯಕ್ರಮಕ್ಕೆ ಗೆಸ್ಟ್ ಆಗಿಯೇ ಹೋಗಿದ್ದರು ಹರ್ಷಿಕಾ ಪೂಣಚ್ಚ. ಇಲ್ಲಿ ಕಾರ್ಯಕ್ರಮಕ್ಕೆ ಹೋಗಲೆಂದೇ ಬೆಂಗಳೂರಿನಿಂದ ಪ್ಯಾರಿಸ್ ಗೆ ಹೋಗಿದ್ದ ಹರ್ಷಿಕಾ ಅಲ್ಲಿಂದ ವಾಷಿಂಗ್ಟನ್ ಡಿಸಿಗೆ ಬಂದಿಳಿದರು. ಅಲ್ಲಿಯ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಅಲ್ಲಿ ರೋಹಿಣಿ ಹಾಗೂ ಯಮುನಾ ಅವರ ಫ್ಯಾಷನ್ ಶೋದಲ್ಲಿ ಶೋ ಟಾಪರ್ ಆಗಿಯೇ ವಾಕ್ ಕೂಡ ಮಾಡಿದರು.

ಇದನ್ನೂ ಓದಿ: Kantara Trailer: ರಿಷಬ್ ಶೆಟ್ಟಿ​ ಅಭಿನಯದ ಕಾಂತಾರ ಟ್ರೈಲರ್ ರಿಲೀಸ್​; ಇದು ಕೇವಲ ಸಿನಿಮಾ ಅಲ್ಲ ಒಂದು ದಂತಕಥೆ!

ಹರ್ಷಿಕಾ ಈಗ ಯಾವ್ ಸಿನಿಮಾ ಮಾಡ್ತಿದ್ದಾರೆ ಗೊತ್ತೇ?
ಚಿಟ್ಟೆ ಹರ್ಷಿಕಾ ಪೂಣಚ್ಚ ಈಗೊಂದು ಡಿ ಗ್ಲಾಮರ್ ರೋಲ್ ಮಾಡಿದ್ದಾರೆ. ನಿರ್ದೇಶಕ ನಂಜುಂಡೇ ಗೌಡರ ಕಾಸಿನಸರ ಚಿತ್ರಕ್ಕಾಗಿಯೇ ಅದ್ಭುತ ರೋಲ್ ಒಂದನ್ನ ನಿರ್ವಹಿಸಿದ್ದಾರೆ. ನಾಯಕ ನಟ ವಿಜಯ್ ರಾಘವೇಂದ್ರ, ಹಿರಿಯ ನಟಿ ಉಮಾಶ್ರೀ ಅವರ ಜೊತೆಗೆ ನಟಿಸಿದ ಖುಷಿಯಲ್ಲಿಯೇ ಇದ್ದು, ಪ್ಯಾರಿಸ್ ನಲ್ಲಿ ಕಳೆದ ಆ ದಿನಗಳನ್ನ ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಿದ್ದು  ಮತ್ತೆ ಮತ್ತೆ ಪ್ರವಾಸ ಮಾಡಿದ್ರೇನೆ ಡಬಲ್ ಟ್ರಿಪಲ್ ಎನರ್ಜಿ ಕೊಡುತ್ತದೆ ಅಂತಲೂ ಹರ್ಷಿಕಾ ಹೇಳಿಕೊಳ್ತಾರೆ.
First published: