• Home
  • »
  • News
  • »
  • entertainment
  • »
  • Bigg Boss Kannada 9 Task: ಬಿಗ್ ಬಾಸ್ ಮನೆಯಲ್ಲಿ ಪಿರಮಿಡ್ ಗೇಮ್! ಯಾರು ಸ್ಟ್ರಾಂಗ್ ಗುರು ?

Bigg Boss Kannada 9 Task: ಬಿಗ್ ಬಾಸ್ ಮನೆಯಲ್ಲಿ ಪಿರಮಿಡ್ ಗೇಮ್! ಯಾರು ಸ್ಟ್ರಾಂಗ್ ಗುರು ?

ಬಿಗ್ ಬಾಸ್ ನಲ್ಲಿ ಹೆಣ್ಣುಮಕ್ಕಳೇ ಸ್ಟ್ರಾಂಗ್ ಗುರು

ಬಿಗ್ ಬಾಸ್ ನಲ್ಲಿ ಹೆಣ್ಣುಮಕ್ಕಳೇ ಸ್ಟ್ರಾಂಗ್ ಗುರು

ಕಲಾ ನಿರ್ದೇಶಕ ಅರುಣ್ ಸಾಗರ್ ಅನುಭವ ಕೂಡ ಈ ಗೇಮ್​ನಲ್ಲಿ ಕೆಲಸಕ್ಕೆ ಬರಲಿಲ್ಲ. ಹಿಂಗಾಗಿಯೇ ಅರುಣ್ ಸಾಗರ್ ಈ ಆಟವನ್ನ ಅಷ್ಟೇನೂ ಸೀರಿಯಸ್ ಆಗಿಯೇ ಆಡಲಿಲ್ಲ.

  • Share this:

ಕನ್ನಡದ ಬಿಗ್ ಬಾಸ್ (Big Boss House) ಮನೆಯಲ್ಲಿ ಈಗ ಆಟ ಶುರು ಆಗಿವೆ. ಸ್ಪರ್ಧಿಗಳ ಮನದಲ್ಲಿ ಈಗ ಕಾಂಪಿಟೇಷನ್ ಆರಂಭಗೊಂಡಿದೆ. ಪ್ರತಿ ಆಟದಲ್ಲೂ ಒಂದೊಂದು ಟ್ರಿಕ್ ಇದ್ದೇ ಇರುತ್ತದೆ. ಬಿಗ್ ಬಾಸ್ ಮನೆಯ ಪಿರಾಮಿಡ್ ಆಟದಲ್ಲಿ ಸೂಪರ್ ಆಗಿಯೇ ಇತ್ತು. ನೋಡಲು ತೀರಾ ಸರಳ ಅನಿಸಿದ್ದ ಈ ಆಟದಲ್ಲಿ ಎರಡು (Two Team ) ಜೋಡಿಗಳು ಭಾಗಿ ಆಗಿದ್ದವು. ಒಂದು ಪಿಂಕ್ ಚೆಂಡುಗಳ ಪಿರಾಮಿಡ್, ನೀಲಿ ಬಣ್ಣದ ಪಿರಾಮಿಡ್ ಹೀಗೆ ಎರಡು ರೀತಿಯ ಚೆಂಡುಗಳು ಇಲ್ಲಿದ್ದವು. ಆದರೆ ಈ ಆಟದಲ್ಲಿ ಯಾರು ಗೆದ್ದರು ಅನ್ನೋದೇ ವಿಶೇಷ. ಇಲ್ಲಿ ಲೇಡೀಸ್ (Strong Ladies) ಸ್ಟ್ರಾಂಗ್ ಗುರು ಅನ್ನೋದನ್ನ ಹೇಳಲೇಬೇಕು. ಆ ರೀತಿನೇ ಈ ಒಂದು ಆಟ ಇಲ್ಲಿ ಟರ್ನ್ ತೆಗೆದುಕೊಂಡಿರೋದೇ ಇಲ್ಲಿ ಮಜಾ ರೀ.


ಬಿಗ್ ಬಾಸ್ ಮನೆಯಲ್ಲಿ ಪಿರಾಮಿಡ್ ಆಟ ಮಜವಾಗಿಯೇ ನಡೆಯಿತು. ಅರುಣ್ ಸಾಗರ್ ಹಾಗೂ ಸೈಕ್ ನವಾಜ್ ಪಿಂಕ್ ಬಣ್ಣದ ಚೆಂಡುಗಳನ್ನ ಪಿರಾಮಿಡ್ ರೂಪದಲ್ಲಿಯೇ ಜೋಡಿಸಿ ಇಡಬೇಕಿತ್ತು.


ಇವರ ಎದುರಾಳಿ ಸ್ಪರ್ಧಿಯಾಗಿ ದರ್ಶ್ ಚಂದ್ರಪ್ಪ ಮತ್ತು ಆರ್ಯವರ್ಧನ್ ನೀಲಿ ಬಣ್ಣದ ಚೆಂಡುಗಳನ್ನ ಪಿರಾಮಿಡ್ ರೂಪದಲ್ಲಿ ಜೋಡಿಸಿಡಲೇಬೇಕಿತ್ತು. ಆದರೆ ಈ ಆಟ ನೋಡಿದಷ್ಟು ಸುಲಭವೇನೂ ಇರಲಿಲ್ಲ. ಇದಕ್ಕೆ ಫಿಜಿಕಲ್ ಎಫರ್ಟ್ಸ್ ಕೂಡ ಬೇಕಿರಲಿಲ್ಲ.


ಅರುಣ್ ಸಾಗರ್-ಆರ್ಯವರ್ಧನ್ ಟೀಮ್ ಆಟ ಹೇಗಿತ್ತು?
ಈ ಪಿರಾಮಿಡ್ ಆಟವನ್ನ ಹೆಚ್ಚು ಕಡಿಮೆ ಟೀಮ್​ಗಳು ಎರಡು ಗಂಟೆ ವರೆಗೂ ಆಡಿದರು. ಆದರೆ ಅದ್ಯಾವ ಆ್ಯಂಗಲ್​ನಲ್ಲೂ ಇವರುಗಳ ಪಿರಾಮಿಡ್ ಇಲ್ಲಿ ಪಿರಾಮಿಡ್ ರೀತಿ ಕಾಣಲೇ ಇಲ್ಲ. ಗುಡ್ಡಕ್ಕೆ ಕಲ್ಲು ಹೊತ್ತ ರೀತಿನೇ ಇವರ ಐಡಿಯಾಗಳು ಇಲ್ಲಿದ್ದವು.


ಇದನ್ನೂ ಓದಿ:  Mahesh Babu: ಹಿರಿಯ ಪುತ್ರನ ಸಾವಿನ ದುಃಖದಲ್ಲಿಯೇ ಕೊನೆಯುಸಿರೆಳೆದ ಮಹೇಶ್ ಬಾಬು ತಾಯಿ; ಮದರ್ಸ್​ ಡೇಗೆ ಸರ್ಪ್ರೈಸ್ ನೀಡಿದ್ದ ಮಗ


ಈ ನಡುವೇನೆ ಕಲಾ ನಿರ್ದೇಶಕ ಕೂಡ ಆಗಿರೋ ಅರುಣ್ ಸಾಗರ್ ಅನುಭವ ಕೂಡ ಇಲ್ಲಿ ಕೆಲಸಕ್ಕೆ ಬರಲಿಲ್ಲ. ಹಿಂಗಾಗಿಯೇ ಅರುಣ್ ಸಾಗರ್ ಈ ಆಟವನ್ನ ಅಷ್ಟೇನೂ ಸೀರಿಯಸ್ ಆಗಿಯೇ ಆಡಲ್ಲಿಲ್ಲ.


Kannada Actress Divya Uruduga and Aishwarya won big Boss pyramid Game
ಪಿರಾಮಿಡ್ ಗೆಮ್ ನಲ್ಲಿ ಗೆದ್ದವರು ಯಾರು ?


ಇವರ ಆಟವನ್ನ ಗೆಸ್ ಮಾಡಲು ಕುಳಿತಿದ್ದ ಸಾನ್ಯಾ ಅಯ್ಯರ್, ನಟಿ ಮಯೂರಿ, ಅರುಣ್ ಸಾಗರ್ ಆಟವನ್ನ ಕಾಮೆಂಟ್ ಮಾಡಿದರು. ಆರ್ಯವರ್ಧನ್ ಹಾಗೂ ದರ್ಶ್ ಅವರ ಕಥೆನೂ ಇದಕ್ಕೆ ಹೊರತಾಗಿ ಇಲೇ ಇಲ್ಲ.


ಪಿರಾಮಿಡ್ ಆಟವಾಡಲು ಸೆಕೆಂಡ್ ಚಾನ್ಸ್ ಕೊಟ್ಟ ಬಿಗ್ ಬಾಸ್
ಹಂಗೋ ಹಿಂಗೋ ಹೆಂಗೆಂಗೋ 2 ಗಂಟೆಗೂ ಹೆಚ್ಚು ಸಮಯ ಪಿರಾಮಿಡ್ ರೂಪಿಸಲು ಗುದ್ದಾಡಿದ ಈ ಆಟಗಾರರಲ್ಲಿ ಯಾವ ತಂಡವೂ ಗೆದ್ದಿರಲಿಲ್ಲ. ಬಿಗ್ ಬಾಸ್ ಕಡೆಗೆ ಹೇಳಿಯೇ ಬಿಟ್ಟರು.ಈ ಆಟದಲ್ಲಿ ಯಾರೂ ವಿನ್ ಆಗಿಲ್ಲ. ಮತ್ತೊಂದು ಚಾನ್ಸ್ ಬೇಕೆ ಅಂತಲೇ ಕೇಳಿದರು.


Kannada Actress Divya Uruduga and Aishwarya won big Boss pyramid Game
ಆರ್ಯವರ್ಧನ್ ಪಿರಾಮಿಡ್ ಆಟ ಹೇಗಿತ್ತು?


ಆಗಲೇ ಎರಡು ತಂಡ ರೆಡಿ ಆದವು. ಅದು ಲೇಡೀಸ್ ಟೀಮ್ ಅನ್ನೋದೇ ವಿಶೇಷ. ನೀಲಿ ಚೆಂಡುಗಳ ಪಿರಾಮಿಡ್ ರೂಪದಲ್ಲಿ ಇಡಲು, ಬೈಕರ್ ಐಶ್ವರ್ಯ ಹಾಗೂ ದಿವ್ಯಾ ಉರುಡುಗ ಜೋಡಿ ಆದರು. ಪಿಂಕ್ ಬಣ್ಣದ ಚೆಂಡುಗಳನ್ನ ಪಿರಾಮಿಡ್ ರೂಪದಲ್ಲಿಡಲು ದೀಪಿಕಾ ದಾಸ್ ಹಾಗೂ ಅಮೂಲ್ಯ ಗೌಡ ಇಲ್ಲಿದ್ದರು.


ರೂಪೇಶ್ ರಾಜಣ್ಣ-ರಾಕೇಶ್ ಅಡಿಗ ಗೆಸ್ಸಿಂಗ್ ಉಲ್ಟಾ ಹೊಡೀತು
ರಾಕೇಶ್ ಅಡಿಗ ಮತ್ತು ರೂಪೇಶ್ ರಾಜಣ್ಣ ಇವರ ಆಟವನ್ನ ಗೆಸ್ ಮಾಡಲು ಕುಳಿತರು. ದೀಪಿಕಾ ದಾಸ್-ಅಮೂಲ್ಯ ಈ ಆಟವನ್ನ ಗೆಲ್ತಾರೆ ಅಂತಲೇ ಗೆಸ್ ಮಾಡಿದರು.


ಆದರೆ ಇವರ ಗೆಸ್ ಉಲ್ಟಾ ಹೊಡೆಯಿತು. ಇಲ್ಲಿ ಕೆಲವೇ ಕ್ಷಣದಲ್ಲಿಯೇ ಗೆದ್ದು ಬೀಗಿದವರು ಬೇರೆನೆ ಅವರೇ ದಿವ್ಯಾ ಉರುಡುಗ ಮತ್ತು ಐಶ್ವರ್ಯ ಟೀಮ್. ಹೌದು, ಪಕ್ಕಾ ಪ್ಲಾನ್ ಮಾಡಿಕೊಂಡೇ ದಿವ್ಯಾ ಉರುಡುಗ ಆಟಕ್ಕೆ ಇಳಿದಿದ್ದರು. ಇದು ತೆಲೆ ಓಡಿಸಿಯೇ ಆಡಬೇಕು ಅನ್ನೋದು ತಿಳಿದ್ದರು. ಆ ಕಾರಣಕ್ಕೇ ದಿವ್ಯಾ ಉರುಡುಗ ವಿನ್ ಆದರು.


ಇದನ್ನೂ ಓದಿ: Dia Deekshith Shetty: ದಿಯಾ ದೀಕ್ಷಿತ್ ಎಲ್ಲಿ ಹೋದ್ರು ಅಂತ ಕೇಳ್ಬೇಡಿ; ಶೆಟ್ರ ಹುಡ್ಗ ಪಕ್ಕದ ಟಾಲಿವುಡ್​ನಲ್ಲಿ ಫುಲ್ ಬ್ಯುಸಿ!


ಈ ಮೂಲಕ ನಾವೇ ಸ್ಟ್ರಾಂಗ್ ಗುರು ಅನ್ನೋ ಹಾಗೇನೆ ತಲೆ ಓಡಿಸಿ ಪಿರಾಮಿಡ್ ಆಟವನ್ನ ದಿವ್ಯಾ ಉರುಡುಗ ಹಾಗೂ ಐಶ್ವರ್ಯ ಪೂರ್ಣಗೊಳಿಸಿ ಪಾಯಿಂಟ್ಸ್ ತಮ್ಮದಾಗಿಸಿಕೊಂಡು ಬೀಗಿದರು.

First published: