ಬಿಗ್ ಬಾಸ್ ಸೀಸನ್-09 (Kannada Bigg Boss House) ಮುಗಿತಾ ಬಂತು. ಈ ಮಧ್ಯೆ ಸ್ಪರ್ಧಿ ದಿವ್ಯಾ ಉರುಡುಗ ಅವರಿಗೆ ಸಖತ್ ಸರ್ಪ್ರೈಸ್ ಕೂಡ ಸಿಕ್ಕಿದೆ. ಇದರ ಜೊತೆಗೆ ಇನ್ನೂ ಒಂದು ಘಟನೆ ಕೂಡ ಇಲ್ಲಿ ನಡೆದಿದೆ. ಅರವಿಂದ್ (Aravind KP) ಕೆ.ಪಿ ಹಾಗೂ ದಿವ್ಯ (Divya Uruduga) ಉರುಡುಗ ಅವರ ಅರ್ಧಂಬರ್ಧ ಪ್ರೇಮ ಕಥೆಯ ಸಾಕ್ಷಿನೂ ಇಲ್ಲಿ ಸಿಕ್ಕಿದೆ. ನಿಜ, ದಿವ್ಯ ಉರುಡುಗ ಮತ್ತು ಅರವಿಂದ್ ಕೆ.ಪಿ. ಅಭಿನಯದ ಚಿತ್ರದ ಒಂದು ವಿಶೇಷ ಹಾಡಿನ ಬಿಟ್ ಅನ್ನ ಇದೇ ಮನೆಯಲ್ಲಿಯೇ ರಿಲೀಸ್ ಮಾಡಲಾಗಿದೆ. ಇದು ಅಷ್ಟೇ ಮಜವಾಗಿಯೇ ಇದೆ. ಅದರ ಬಗ್ಗೆ ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗೆ ಚಿತ್ರದ ಡೈರೆಕ್ಟರ್ ಅರವಿಂದ್ (Director Aravind Kaushik) ಕೌಶಿಕ್ ಒಂದಷ್ಟು ವಿಷಯ ಹಂಚಿಕೊಂಡಿದ್ದಾರೆ.
ಅರವಿಂದ್-ದಿವ್ಯ ಅರ್ಧಂಬರ್ಧ ಪ್ರೇಮ ಕಥೆ
ಕನ್ನಡದ ನಟಿ ದಿವ್ಯ ಉರುಡುಗ ಮತ್ತು ಅರವಿಂದ್ ಕೆ.ಪಿ. ಅಭಿನಯದ ಸಿನಿಮಾ ಎಲ್ಲಿಗೆ ಬಂತು? ಈ ಒಂದು ಪ್ರಶ್ನೆ ಇದ್ದೇ ಇದೆ. ಬಿಗ್ ಬಾಸ್ ಈ ಹಿಂದಿನ ಸೀಸನ್ನಲ್ಲಿಯೇ ದಿವ್ಯ ಮತ್ತು ಅರವಿಂದ್ ಜೋಡಿಯಾಗಿಯೇ ಕಾಣಿಸಿಕೊಂಡ್ರು. ಬಿಗ್ ಮನೆಯಲ್ಲಿಯೇ ಮೋಡಿ ಕೂಡ ಮಾಡಿದ್ದರು.
ಇದಾದ ಬಳಿಕ ಈ ಜೋಡಿ ಇನ್ನೇನು ಮದುವೆ ಕೂಡ ಆಗ್ತಾರೆ ಅಂತಲೂ ಸುದ್ದಿ ಇತ್ತು. ಆದರೆ ಅದಕ್ಕೆ ಇನ್ನೂ ಕಾಲ ಕೂಡ ಬಂದಂತಿಲ್ಲ. ಇಬ್ಬರು ತಮ್ಮದೇ ಹಾದಿಯಲ್ಲಿಯೇ ಸಾಗುತ್ತಿದ್ದಾರೆ. ಅರವಿಂದ್ ಕೆ.ಪಿ.ತಮ್ಮದೇ ಮತ್ತೊಂದು ಸಾಧನೆಯತ್ತ ಸಾಗುತ್ತಿದ್ದಾರೆ. ದಿವ್ಯಾ ಉರುಡುಗ ಮತ್ತೊಮ್ಮೆ ಬಿಗ್ ಬಾಸ್ ಮನೆಗೆ ಹೋಗಿದ್ದಾರೆ.
ಅರ್ಧಂಬರ್ಧ ಪ್ರೇಮ ಕಥೆ ಚಿತ್ರ ಎಲ್ಲಿಗೆ ಬಂತು?
ಅರ್ಧಂಬರ್ಧ ಪ್ರೇಮ ಕಥೆ ಸಿನಿಮಾದ ಕೆಲಸ ಪೋಸ್ಟ್ ಪ್ರೋಡಕ್ಷನ್ ಹಂತದಲ್ಲಿಯೇ ಇದೆ. ಡೈರೆಕ್ಟರ್ ಅರವಿಂದ್ ಕೌಶಿಕ್ ಈ ಕೆಲಸದಲ್ಲಿಯೇ ಬ್ಯುಸಿ ಆಗಿದ್ದಾರೆ. ಅದರ ಮಧ್ಯೆ ಹೀಗೊಂದು ಈ ಸಿನಿಮಾದ ವಿಶೇಷ ವಿಚಾರವೂ ಹೊರಗೆ ಬಿದ್ದಿದೆ.
ಅರ್ಧಂಬರ್ಧ ಪ್ರೇಮ ಕಥೆ ಸಿನಿಮಾ ಒಂದು ಹಾಡಿನ ಬಿಟ್ ರಿವೀಲ್ ಆಗಿದೆ. ಈ ಹಾಡಿಗೆ ಸ್ವತಃ ಅರವಿಂದ್ ಕೆ.ಪಿ. ಮತ್ತು ದಿವ್ಯ ಉರುಡುಗ ಡ್ಯಾನ್ಸ್ ಕೂಡ ಮಾಡಿದ್ದಾರೆ. ಅದ್ಭುತ ಅನಿಸೋ ಈ ಗೀತೆ ಎಲ್ಲಿ ರಿಲೀಸ್ ಆಗಿದೆ. ಅದರ ವಿವರ ಇಲ್ಲಿದೆ ಓದಿ.
ಬಿಗ್ ಮನೆಯಲ್ಲಿ ಅರ್ಧಂಬರ್ಧ ಪ್ರೇಮ ಕಥೆ ಹಾಡು ರಿಲೀಸ್
ಅರ್ಧಂಬರ್ಧ ಪ್ರೇಮ ಕಥೆ ಸಿನಿಮಾದ Jingalaka ಹಾಡು ಬಿಗ್ ಬಾಸ್ ಮನೆಯಲ್ಲಿಯೇ ರಿಲೀಸ್ ಆಗಿದೆ. ಈ ಒಂದು ಗೀತೆಗೆ ಮನೆಯಲ್ಲಿದ್ದ ದಿವ್ಯ ಉರುಡುಗ ಮತ್ತು ಸರ್ಪ್ರೈಸ್ ಆಗಿಯೇ ಮನೆಯೊಳಗೆ ಹೋದ ಅರವಿಂದ್ ಕೆ.ಪಿ. ಮತ್ತು ರೂಪೇಶ್ ಶೆಟ್ಟಿ ಸೇರಿದಂತೆ ಇತರರು ಡ್ಯಾನ್ಸ್ ಮಾಡಿದ್ದಾರೆ.
ಅರ್ಧಂಬರ್ಧ ಪ್ರೇಮ ಕಥೆಗೆ ಅರ್ಜುನ್ ಜನ್ಯ ಸಂಗೀತ ಕೊಟ್ಟಿದ್ದಾರೆ. ಈ ವಿಶೇಷ ಹಾಡನ್ನ ಸ್ವತಃ ಅರ್ಜುನ್ ಜನ್ಯ ಅವರೆ ಹಾಡಿದ್ದಾರೆ. ಚಿತ್ರದ ನಿರ್ದೇಶಕ ಅರವಿಂದ್ ಕೌಶಿಕ್ ಸಾಹಿತ್ಯ ಬರೆದಿದ್ದಾರೆ. ಹಾಗೇನೆ ಈ ಗೀತೆ ಕೂಡ ಹಿಟ್ ಆಗುವ ಎಲ್ಲ ಲಕ್ಷಣಗಳೂ ಇವೆ.
ಅರ್ಧಂಬರ್ಧ ಪ್ರೇಮ ಕಥೆ ಸಿನಿಮಾ ರಿಲೀಸ್ ಯಾವಾಗ?
ಡೈರೆಕ್ಟರ್ ಅರವಿಂದ್ ಕೌಶಿಕ್ ತಮ್ಮ ಚಿತ್ರವನ್ನ ರಿಲೀಸ್ ಮಾಡೋಕೆ ಪ್ಲಾನ್ ಮಾಡುತ್ತಿದ್ದಾರೆ. ಶೀಘ್ರದಲ್ಲಿಯೇ ಸಿನಿಮಾ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗುತ್ತದೆ. ಸದ್ಯಕ್ಕೆ ಪೋಸ್ಟ್ ಪ್ರೋಡಕ್ಷನ್ ಕೆಲಸ ಕೂಡ ನಡೀತಾ ಇದೆ ಎಂದು ನ್ಯೂಸ್-18 ಕನ್ನಡ ಡಿಜಿಟಲ್ಗೆ ತಿಳಿಸಿದ್ದಾರೆ.
ಇದನ್ನೂ ಓದಿ:Manikanth Kadri: ಮಣಿಕಾಂತ್ ಕದ್ರಿ ಸಂಗೀತ ಸವಾರಿಗೆ 20 ವರ್ಷ ಪೂರ್ಣ
ಒಟ್ಟಾರೆ, ಅರ್ಧಂಬರ್ಧ ಪ್ರೇಮ ಕಥೆ ಸಿನಿಮಾದ Jingalaka ಹಾಡು ರಿಲೀಸ್ ಆಗಿದೆ. ಸಿನಿಮಾ ಬಗ್ಗೆ ಕುತೂಹಲ ಕೂಡ ಮೂಡಿಸುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ