ಡಾಕ್ಟರ್ ರಾಜ್‌ಕುಮಾರ್ ಅವರು (Dhanya Ramkumar New Movie) ಕೋರ್ಟ್ ರೂಮ್ ಡ್ರಾಮ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಧ್ರುವ ತಾರೆ ಸಿನಿಮಾದಲ್ಲಿ ರಾಜ್ ವಕೀಲರಾಗಿ ಅಭಿನಯಿಸಿದ್ದರು. ಅದೇ ರೀತಿ ಇದೀಗ ರಾಜ್ ಮೊಮ್ಮಗಳು ಧನ್ಯಾ ರಾಮ್‌ಕುಮಾರ್ ಕೂಡ ಕೋರ್ಟ್ ರೂಮ್ ಡ್ರಾಮಾ ಇರೋ ಸಿನಿಮಾದಲ್ಲಿ (Judgment New Movie Updates) ಅಭಿನಯಿಸುತ್ತಿದ್ದಾರೆ. ವಿಶೇಷವಾಗಿ ಈ ಚಿತ್ರ ರಾಜ್ ಜನ್ಮ ದಿನ ಏಪ್ರಿಲ್-24 ರಂದು ಚಿತ್ರೀಕರಣ ಆರಂಭಿಸುತ್ತಿದೆ. ಈ ಮೂಲಕ ಧನ್ಯಾ ರಾಮ್‌ಕುಮಾರ್ ತಮ್ಮ ಬಹು (Dhanya Judgment New Movie) ದಿನಗಳ ಕನಸನ್ನು ನನಸು ಮಾಡಿಕೊಳ್ಳುತ್ತಿದ್ದಾರೆ. ತಾತನ ರೀತಿ ಲಾಯರ್ ಪಾತ್ರ ಮಾಡಬೇಕು ಅಂತ ಅಂದುಕೊಂಡಿದ್ರು ಅನಿಸುತ್ತದೆ. ಅದು ಈಗ ಸಾಕಾರಗೊಂಡಿದೆ ಅಂತಲೂ ನಾವು ಭಾವಿಸಬಹುದು.
ಹಾಗಂತ ಧನ್ಯಾ ರಾಮ್‌ಕುಮಾರ್ ಈ (Judgment Latest Updates) ಚಿತ್ರದ ತಮ್ಮ ಪಾತ್ರದ ಸೀಕ್ರೆಟ್ ಏನೂ ಬಿಟ್ಟುಕೊಟ್ಟಿಲ್ಲ. ಆದರೆ ಇತರ ವಿಚಾರಗಳನ್ನ ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗೆ ಹಂಚಿಕೊಂಡಿದ್ದಾರೆ.
ಜಡ್ಜಮೆಂಟ್ ಸಿನಿಮಾದಲ್ಲಿ ಧನ್ಯಾ-ಕ್ರೇಜಿ ಸ್ಟಾರ್ ರವಿಚಂದ್ರನ್!
ಧನ್ಯಾ ರಾಮ್‌ಕುಮಾರ್ ಅಭಿನಯದ ಈ ಚಿತ್ರದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಇದ್ದಾರೆ. ಇವರ ಜೊತೆಗೆ ಅಭಿನಯಿಸೋ ಖುಷಿಯಲ್ಲೂ ಧನ್ಯಾ ರಾಮಕುಮಾರ್ ಇದ್ದಾರೆ. ಕ್ರೇಜಿ ಸ್ಟಾರ್ ರವಿಚಂದ್ರನ್ ಜೊತೆಗೆ ಅಭಿನಯಿಸೋದೇ ಒಂದು ಖುಷಿ ಇದೆ. ಇವರಿಂದ ತುಂಬಾನೇ ಕಲಿಯೋಕೆ ಇದೆ. ಸಿನಿಮಾದಲ್ಲಿ ದೊಡ್ಡ ತಾರೆಯರಿದ್ದಾರೆ. ಅವರಿಂದ ಕಲೆಯೋದು ಸಾಕಷ್ಟು ವಿಷಯ ಇದೆ.
ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಜೊತೆಗೆ ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತೇನೆ. ಡೈರೆಕ್ಟರ್ ಗುರುರಾಜ್ ಕುಲಕರ್ಣಿ ಈ ಬಗ್ಗೆ ನನಗೆ ಈಗಾಲೇ ಹೇಳಿದ್ದಾರೆ. ಗುರುರಾಜ್ ಹೇಳಿರೋ ಕಥೆ ನನಗೆ ಇಷ್ಟ ಆಗಿದೆ. ಅವರು ಹೇಳಿದಂತೆ ಚಿತ್ರ ತೆಗೆಯುತ್ತಾರೆ ಅನ್ನೋ ನಂಬಿಕೆ ನನಗಿದೆ.
ನಮ್ಮ ಸಿನಿಮಾದಲ್ಲಿ ದಿಗಂತ್ ಅಭಿನಯ-ಧನ್ಯಾ ರಾಮಕುಮಾರ್
ಸಿನಿಮಾದಲ್ಲಿ ದೂದ ಪೇಡ ದಿಗಂತ್ ಇದ್ದಾರೆ. ಲಕ್ಷ್ಮಿಗೋಪಾಲ್ ಸ್ವಾಮಿ ಅವರೂ ಅಭಿನಯಿಸುತ್ತಿದ್ದಾರೆ. ರಂಘಾಯಣ ರಘು ಅವರೂ ನಟಿಸ್ತಿದ್ದಾರೆ ಅನ್ನೋ ಸುದ್ದಿ ಕೇಳಿದ್ದೇನೆ. ಪ್ರಕಾಶ್ ಬೆಳವಾಡಿ ಅವರೂ ಅಭಿನಯಿಸುತ್ತಿದ್ದಾರೆ.
ಹೀಗೆ ಧನ್ಯಾ ರಾಮ್‌ಕುಮಾರ್ ಹೇಳ್ತಾ ಹೋದ್ರು, ಸಿನಿಮಾದ ನನ್ನ ಪಾತ್ರದ ಬಗ್ಗೆ ಈಗಲೇ ಏನೂ ಹೇಳೋಕೆ ಆಗೋದಿಲ್ಲ. ಆದರೆ ಚಿತ್ರಕ್ಕೆ ಶಿವು ಕ್ಯಾಮೆರಾವರ್ಕ್ ಮಾಡುತ್ತಿದ್ದಾರೆ. ಅನೂಪ್ ಸೀಳಿನ್ ಸಂಗೀತ ಕೊಡ್ತಿದ್ದಾರೆ.
ತಾತನ ಜನ್ಮ ದಿನದಂದು ಜಡ್ಜಮೆಂಟ್ ಶೂಟಿಂಗ್-ಧನ್ಯಾ ರಾಮ್‌ಕುಮಾರ್
ನನ್ನ ಚಿತ್ರ ಜೀವನದಲ್ಲಿ ನಿನ್ನ ಸನಿಹಕೆ ಚಿತ್ರ ಆದ್ಮೇಲೆ ಇದು ನನ್ನ ನಾಲ್ಕನೆ ಸಿನಿಮಾ ಆಗಿದೆ. ಕಾಲಾಪತ್ಥರ್ ಮತ್ತು ಹೈಡ್ ಆ್ಯಂಡ್ ಸೀಕ್ ಚಿತ್ರಗಳು ರಿಲೀಸ್ ಆಗಬೇಕಿದೆ. ಇದೀಗ ಜಡ್ಜಮೆಂಟ್ ಸಿನಿಮಾ ಶುರು ಆಗುತ್ತಿದೆ. ತಾತನ ಜನ್ಮ ದಿನ ಏಪ್ರಿಲ್-24 ರಂದೇ ಈ ಚಿತ್ರದ ಚಿತ್ರೀಕರಣ ಶುರು ಆಗುತ್ತದೆ ಅಂತ ಧನ್ಯಾ ರಾಮ್‌ಕುಮಾರ್ ಹೇಳಿದರು.
ಇನ್ನು ಚಿತ್ರದ ನಿರ್ದೇಶಕ ಗುರುರಾಜ್ ಕುಲಕರ್ಣಿ ಅಪ್ಪಟ ರಾಜ್‌ಕುಮಾರ್ ಅವರ ಅಭಿಮಾನಿಯಾಗಿದ್ದಾರೆ. ತಮ್ಮ ಚಿತ್ರದಲ್ಲಿ ರಾಜ್ ಮೊಮ್ಮಗಳು ಅಭಿನಯಿಸ್ತಿರೋದು ಖುಷಿ ತಂದಿದೆ. ರಾಜ್ ಜನ್ಮ ದಿನದಂದು ಚಿತ್ರೀಕರಣ ಆರಂಭಿಸುತ್ತಿರೋದಕ್ಕೂ ಡಬಲ್ ಖುಷಿಕೊಟ್ಟಿದೆ ಅಂತಲೇ ಹೇಳಬಹುದು.
ಇದನ್ನೂ ಓದಿ: Matte Maduve Teaser: ಪವಿತ್ರಾ ಲೋಕೇಶ್-ನರೇಶ್ ಮದುವೆ ರೀಲಾ? ರಿಯಲ್ಲಾ? ಮತ್ತೆ ಅನುಮಾನ ಮೂಡಿಸಿದೆ ಸಿನಿಮಾ ಟೀಸರ್
ಕ್ರೇಜಿ ಸ್ಟಾರ್ ರವಿಚಂದ್ರನ್ ಮತ್ತು ಧನ್ಯಾ ರಾಮ್‌ಕುಮಾರ್ ಅಭಿನಯದ ಈ ಚಿತ್ರದಲ್ಲಿ ನಟಿ ಖುಷ್ಬು ರವಿಚಂದ್ರನ್ ಅವರಿಗೆ ಜೋಡಿ ಆಗುತ್ತಾರೆ ಅನ್ನೋ ಸುದ್ದಿ ಇತ್ತು. ಆದರೆ ಈ ಬಗ್ಗೆ ಎಲ್ಲೂ ಅಧಿಕೃತ ಮಾಹಿತಿ ಹೊರ ಬಿದ್ದಿರಲಿಲ್ಲ. ಹೀಗಿರೋವಾಗ್ಲೇ, ಲಕ್ಷ್ಮಿ ಗೋಪಾಲಸ್ವಾಮಿ ಅವರೇ ಆ ಜಾಗ ತುಂಬುತ್ತಿದ್ದಾರಾ ಅನ್ನೋ ಕುತೂಹಲ ಕೂಡ ಈಗಲೇ ಮೂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ