ಸ್ಯಾಂಡಲ್‌ವುಡ್‌ನಲ್ಲಿ ನಟಿ ಚೈತ್ರಾ ಆಚಾರ್ (Chaitra Achar New Movie) ವಿಶೇಷವಾಗಿ ಗಮನ ಸೆಳೆಯುತ್ತಿದ್ದಾರೆ. ಈ ಹಿಂದೆ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡ ಚೈತ್ರಾ ಆಚಾರ್, ಸಪ್ತಸಾಗರದಾಚೆ ಎಲ್ಲೋ ಸಿನಿಮಾ (Chaitra Achar Reels Viral) ರಿಲೀಸ್ ಮುಂಚೇನೆ ಎಲ್ಲರಿಗೂ ಪರಿಚಯ ಆಗುತ್ತಿದ್ದಾರೆ. ಚೈತ್ರಾ ಆಚಾರ್ ಕೊಂಚ ಜಾಸ್ತಿನೆ ಬೋಲ್ಡ್ ಅನ್ನೋ ಅಭಿಪ್ರಾಯವೂ ಬರ್ತಿದೆ. ಹಾಗಂತ ಸಿನಿಮಾದಲ್ಲಿ ಆ ಬೋಲ್ಡ್‌ನೆಸ್ ಇನ್ನೂ ಕಂಡು ಬಂದಿಲ್ಲ. ಅಥವಾ ಅಂತಹ ಸ್ಕ್ರಿಪ್ಟ್ ಬಂದಿಲ್ವೋ ಏನೋ. ಆದರೆ ಚೈತ್ರಾ ಆಚಾರ್ (Chaitra Photo Shoot) ಕೊಂಚ ಡಿಫರಂಟ್ ಆಗಿಯೇ ಇದ್ದಾರೆ ಅನಿಸುತ್ತದೆ. ಇನ್ನೂ ಒಂಚೂರು ಬೇರೆ ರೀತಿನೂ ಹೊಳೆಯುತ್ತಾರೆ. ಹಾಗೆ ಈ ಎಲ್ಲ ಭಾವನೆ ಮೂಡಲು ಅವರ ಫೋಟೋ ಶೂಟ್ ಮತ್ತು ಅವರ ಕಾಸ್ಟೂಮ್‌ಗಳು ಕಾರಣ ಅಂತಲೂ ಹೇಳಬಹುದು.
ಆದರೂ ಈ ನಡುವೆ ಚೈತ್ರಾ ಆಚಾರ್ ಒಂದು ರೀಲ್ಸ್ ಮಾಡಿದ್ದಾರೆ. ಇದು ತುಂಬಾನೇ ಇಂಟ್ರಸ್ಟಿಂಗ್ ಆಗಿದೆ.
ಚೈತ್ರಾ ಆಚಾರ್ ಎಂಬ ಚೆಲುವೆ-ಬೋಲ್ಡ್ ರೂಪದಲ್ಲೂ ಬ್ಯೂಟಿಫುಲ್
ಚೈತ್ರಾ ಆಚಾರ್ ಸ್ಪೆಷಲ್ ಆಗಿಯೇ ಕಾಣಿಸುತ್ತಾರೆ. ಈಗಷ್ಟೇ ಕರೀಯರ್ ಶುರು ಆಗಿದೆ. ಅಭಿನಯಸಿರೋ ಬೆರಳೆಣಿಕೆಯಷ್ಟು ಚಿತ್ರಗಳಲ್ಲಿ ಚೈತ್ರಾ ಸ್ಪೆಷಲ್ ಆಗಿಯೇ ಫೀಲ್ ಆಗುತ್ತಾರೆ. ರಾಜ್. ಬಿ. ಶೆಟ್ಟಿ ಅಭಿನಯದ ಮಹಿರ ಚಿತ್ರದ ಮೂಲಕ ಚೈತ್ರಾ ಆಚಾರ್ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ.
ಈ ಸಿನಿಮಾ ಆದ್ಮೇಲೆ ತಲೆದಂಡ, ಗಿಲ್ಕಿ, ಸ್ಟ್ರಾಬರಿ ಹಾಗೂ ಬ್ಲಿಂಕ್ ಚಿತ್ರದಲ್ಲಿ ಚೈತ್ರಾ ಆಚಾರ್ ಅಭಿನಯಿಸಿದ್ದಾರೆ. ಹ್ಯಾಪಿ ಬರ್ತ್ ಡೇ ಟು ಮಿ ಅನ್ನೋ ಇನ್ನೂ ಒಂದು ಚಿತ್ರದಲ್ಲೂ ಚೈತ್ರಾ ಆಚಾರ್ ನಟಿಸಿದ್ದಾರೆ.
ಸಪ್ತಸಾಗರದ ಬೆಡಗಿಯ ಸೂಪರ್ ಡೂಪರ್ ರೀಲ್ಸ್
ಆದರೆ ಈ ಚಿತ್ರಗಳಿಗಿಂತಲೂ ಇನ್ನಷ್ಟೇ ರಿಲೀಸ್ ಆಗಬೇಕಿರೋ ಸಪ್ತಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ಚೈತ್ರಾ ಹೆಚ್ಚಿಗೆ ಸ್ಕೋರ್ ಮಾಡುವಂತೆ ಕಾಣುತ್ತಿದೆ. ಚಿತ್ರದ ಚೈತ್ರಾ ಪೋಸ್ಟರ್ ಮತ್ತು ಪುಟ್ಟ ಟೀಸರ್ ಹೆಚ್ಚು ಗಮನ ಸೆಳೆಯುತ್ತಿದೆ.
ರಕ್ಷಿತ್ ಶೆಟ್ಟಿ ಅಭಿನಯದ ಹಾಗೂ ಹೇಮಂತ್ ರಾವ್ ನಿರ್ದೇಶನದ ಈ ಚಿತ್ರ ಒಂದು ದೊಡ್ಡ ಭರವಸೆಯನ್ನ ಈಗಲೇ ಮೂಡಿಸಿದೆ. ಇದರ ಮಧ್ಯೆ ಚೈತ್ರಾ ಆಚಾರ್ ಹೊಸ ರೀತಿಯ ಫೋಟೋಗಳನ್ನ ತೆಗೆಸಿಕೊಳ್ಳುವ ಮೂಲಕ ಗಮನ ಸೆಳೆಯುತ್ತಲೇ ಇರುತ್ತಾರೆ.
ಬಾಲಿವುಡ್ ಮೋಹ ಮೋಹ ಕೆ ಹಾಡಿಗೆ ಚೈತ್ರಾ ರೀಲ್ಸ್
ಆಗಾಗ ರೀಲ್ಸ್‌ಗಳಲ್ಲೂ ಚೈತ್ರಾ ಕಾಣಿಸಿಕೊಳ್ಳತ್ತಾರೆ. ಹಾಗೆ ಇದೀಗ ಒಂದು ರೀಲ್ಸ್ ಅಲ್ಲಿ ಚೈತ್ರಾ ಆಚಾರ್ ಗಮನ ಸೆಳೆದಿದ್ದಾರೆ. ಬಾಲಿವುಡ್‌ನ ದಬ್ ಲಗಾ ಕೆ ಹೈಶಾ ಸಿನಿಮಾದಲ್ಲಿ ಒಂದು ಹಾಡಿದೆ. ಅನು ಮಲ್ಲಿಕ್ ಸಂಗೀತದ ಈ ಗೀತೆಯನ್ನ ಮೋನಾಲಿ ಠಾಕೂರ್ ಹಾಡಿದ್ದಾರೆ. ವರುಣ್ ಗ್ರೋವರ್ ಈ ಗೀತೆಯನ್ನ ಬರೆದಿದ್ದಾರೆ.
View this post on Instagram
ಬಾಲಿವುಡ್ ಹಿಟ್ ಹಾಡಿಗೆ ಚೈತ್ರಾ ಆಚಾರ್ ಸ್ಪೆಷಲ್ ರೀಲ್ಸ್
ಇದೇ ಗೀತೆಗೆ ಬೆಂಗಳೂರು ಹುಡುಗಿ ಚೈತ್ರಾ ಆಚಾರ್ ರೀಲ್ಸ್ ಮಾಡಿದ್ದಾರೆ. ಈ ರೀಲ್ಸ್ ಅಲ್ಲಿ ಫೋಟೋಗಳೇ ಹೆಚ್ಚು ಬಳಕೆ ಆಗಿವೆ. ಚೈತ್ರಾ ಆಚಾರ್ ಸುಂದರವಾಗಿ ಸೀರೆಯನ್ನ ಉಟ್ಟು ಕಾಣಿಸಿಕೊಂಡಿದ್ದಾರೆ. ವಿವಿಧ ಹಾವ-ಭಾವಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಇದು ವಿಶೇಷವಾಗಿ ಕಪ್ಪು-ಬಿಳುಪು ಬಣ್ಣದಲ್ಲಿಯೇ ಇದೆ. ಅಷ್ಟೂ ಫೋಟೋಗಳನ್ನ ಬ್ಲಾಕ್ ಆ್ಯಂಡ್ ವೈಟ್ ಟಿಂಟ್ ಅಲ್ಲಿಯೇ ತೆಗೆಯಲಾಗಿದೆ. ಇದರಲ್ಲಿ ಇನ್ನೂ ವಿಶೇಷ ಅಂದ್ರೆ, ಬಾಲಿವುಡ್‌ನ ಮೋಹ ಮೋಹ ಕೇ ಹಾಡಿಗೆ ಚೈತ್ರಾ ಆಚಾರ್ ಹಾವ-ಭಾವ ತುಂಬಾನೇ ಸೂಕ್ತ ಅನಿಸುತ್ತಿವೆ.
ಚೈತ್ರಾ ಆಚಾರ್ ಬೋಲ್ಡ್ ರೂಪಕ್ಕೆ ಪಡ್ಡೆಗಳು ಫಿದಾ
ಇನ್ನುಳಿದಂತೆ ಚೈತ್ರಾ ಆಚಾರ್ ಬೋಲ್ಡ್ ಅನಿಸೋ ಪೋಟೋ ಶೂಟ್‌ಗಳಲ್ಲೂ ಕಾಣಿಸಿಕೊಂಡಿದ್ದಾರೆ. ಬಿಕಿನಿ ಧರಿಸಿಕೊಂಡು ಈಜುಕೊಳ ಮತ್ತು ಸಮುದ್ರ ತೀರದಲ್ಲೂ ಕಾಣಿಸಿಕೊಂಡದ್ದು ಇದೆ. ಹೀಗೆ ವಿಭಿನ್ನವಾಗಿಯೇ ಕಾಣಿಸಿಕೊಳ್ಳುವ ಚೈತ್ರಾ ಆಚಾರ್, ಸೀರೆಯಲ್ಲಿ ತುಂಬಾನೆ ಚೆನ್ನಾಗಿ ಸಿಂಪಲ್ ಹುಡುಗಿ ರೀತಿನೇ ಕಾಣಿಸುತ್ತಾರೆ.
ಇದನ್ನೂ ಓದಿ: Ram Charan-Upasana: ವಿದೇಶದಲ್ಲೂ ರಾಮ್ ಚರಣ್, ಉಪಾಸನಾ ಹವಾ; ದಾಖಲೆ ಬರೆದ ಜೋಡಿ!
ಚೈತ್ರಾ ಆಚಾರ್ ಕೇವಲ ಒಬ್ಬ ನಟಿ ಅಲ್ವೇ ಅಲ್ಲ. ಗಾಯಕಿ ಕೂಡ ಹೌದು. ಗರುಡ ಗಮನ ಸಿನಿಮಾದ ಸೋಜಿಗದ ಸೂಜಿಮಲ್ಲಿಗೆ ಹಾಡನ್ನ ಇದೆ ಚೈತ್ರಾ ಹಾಡಿದ್ದಾರೆ. ಹಾಡು ಮತ್ತು ಅಭಿನಯ ಎರಡಲ್ಲೂ ತಮ್ಮದೇ ವಿಶೇಷ ಪ್ರತಿಭೆಯನ್ನ ಚೈತ್ರಾ ಆಚಾರ್ ಪ್ರದರ್ಶಿಸಿದ್ದಾರೆ. ಈ ಮೂಲಕ ಕನ್ನಡದ ಭರವಸೆ ನಟಿ ಆಗಿಯೂ ಕಾಣಿಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ