ಕನ್ನಡದ ನಟಿ ಚೈತ್ರಾ ಆಚಾರ್ ಸ್ಪೆಷಲ್ (Actress Chaithra Achar) ಆಗಿದ್ದಾರೆ. ತಮ್ಮ ಚಿತ್ರಗಳಲ್ಲೂ ವಿಶೇಷವಾಗಿ ಕಾಣಿಸುತ್ತಾರೆ. ಹಾಡುಗಾರಿಕೆನೂ ಸಿದ್ದಿಸಿದೆ. ಹಾಗಾಗಿ ಅಲ್ಲೂ ಚೈತ್ರಾ ತಮ್ಮ ವಿಶೇಷ ಛಾಪು (New Photo Shoot) ಮೂಡಿಸಿದ್ದಾರೆ. ಆದರೆ ಇದೆಲ್ಲದಕ್ಕಿಂತಲೂ ಇನ್ನೂ ವಿಶೇಷ ಅನಿಸೋದು ಅವರ ಇತ್ತೀಚಿನ ಬೋಲ್ಡ್ ಫೋಟೋ ಶೂಟ್ ಅಂತ ಹೇಳಬಹುದು. ಇದರ ಜೊತೆಗೆ ಸಾಂಪ್ರದಾಯಿಕ ಶೈಲಿಯ (Kannada Actress Chaithra Achar) ಸೀರೆಗೆ ಹೊಸ ಟಚ್ ಕೊಟ್ಟ ಫೋಟೋ ಶೂಟ್ ಕೂಡ ಇದೀಗ ಅತಿ ಹೆಚ್ಚು ಆಕರ್ಷಕವಾಗಿಯೇ ಇವೆ. ನಿಮ್ಗೆ ಗೊತ್ತಿರಲಿ, ಈಗೀನ ಒಂದಷ್ಟು ಫೋಟೋಗಳು ರವಿ ವರ್ಮ ಚಿತ್ರಗಳನ್ನ ನೋಡಿದ ಅನುಭವ ಕೊಡ್ತಾ ಇವೆ. ಅದರಲ್ಲೂ ಆ ದಿನಗಳಲ್ಲಿ ಹೆಣ್ಣುಮಕ್ಕಳು (Photo Shoot got Viral) ಹೇಗೆ ಇರ್ತಾ ಇದ್ದರು.
ಹೇಗೆಲ್ಲ ಸೀರೆಯನ್ನ ಉಟ್ಟುಕೊಳ್ಳುತ್ತಿದ್ದರು. ಹೀಗೆ ಸ್ತ್ರೀ ದಿನಚರಿಯ ಅಸಲಿ ಸತ್ಯಗಳನ್ನ ಈ ಫೋಟೋ ಬಿಚ್ಚಿಡುತ್ತಿವೆ.
ಇದು ಸ್ನೇಹಾನಾ...ಪ್ರೀತಿನಾ..? ಅಸಲಿಗೆ ಏನ್ ಇದು?
ಚೈತ್ರಾ ಆಚಾರ್ ಹೊಸ ರೀತಿಯ ಫೋಟೋ ಶೂಟ್‌ನಲ್ಲಿ ಅತಿ ಹೆಚ್ಚು ಇನ್ವಾಲ್ವ್ ಆಗುತ್ತಿದ್ದಾರೆ. ಭಾರತೀಯ ಹೆಣ್ಣು-ಮಕ್ಕಳ ಆಭರಣ ಮತ್ತು ಆ ದಿನಗಳ ಸೀರಿಯನ್ನ ಉಟ್ಟುಕೊಂಡು ವಿಶೇಷವಾಗಿಯೇ ಹೊಳೆಯುತ್ತಿದ್ದಾರೆ. ಈ ಮೂಲಕ ನಮ್ಮ ಹೆಣ್ಣುಮಕ್ಕಳ ಹಳೆ ಫ್ಯಾಷನ್‌ಗೆ ಹೊಸ ಟಚ್ ಕೊಡುತ್ತಲೇ ಇದ್ದಾರೆ.
ಚೈತ್ರಾ ಆಚಾರ್ ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋದಂತಿದೆ. ಈ ಒಂದು ಹೆಜ್ಜೆ ಸ್ಪೆಷಲ್ ಆಗಿಯೇ ಇದೆ. ಕಾಟನ್ ಸಾರಿ ಉಡುತ್ತಿದ್ದ ಅಂದಿನ ಮಹಿಳೆಯರ ವಿಶೇಷ ದಿನಚರಿಯ ಚಿತ್ರಣಕ್ಕೆ ಈಗ ಸಾಕ್ಷಿ ಆಗಿದ್ದಾರೆ. ಹಾಗೆ ಕ್ಯಾಮರಾದಲ್ಲಿ ಕ್ಯಾಪ್ಚರ್ ಆಗಿರೋ ಚೈತ್ರಾ ಆಚಾರ್ ಮತ್ತು ದೀಕ್ಷಾ ಕೃಷ್ಣ ತುಂಬಾ ಅದ್ಭುತವಾಗಿಯೇ ಕಾಣಿಸುತ್ತಾರೆ.
ಸ್ತ್ರೀ ಎಂಬ ಅದ್ಭುತ ಜೀವದ ಒಳ ಬದುಕಿನ ಚಿತ್ರಣ
ಚೈತ್ರಾ ಆಚಾರ್ ಮತ್ತು ದೀಕ್ಷಾ ಕೃಷ್ಣ ವಿಶೇಷವಾದ ಪರಿಕಲ್ಪನೆಯ ಫೋಟೋ ಶೂಟ್‌ಗೆ ಇನ್ವಾಲ್ವ್ ಆಗಿದ್ದಾರೆ. ಮನೆಯಲ್ಲಿರೋ ಸ್ತ್ರೀಯರ ಬದುಕಿನ ಚಿತ್ರಣದಂತೇನೂ ಈ ಫೋಟೋ ಶೂಟ್ ಅಲ್ಲಿ ಕಾಣಿಸುತ್ತಿದ್ದಾರೆ.
ಚೈತ್ರಾ ಆಚಾರ್ ಹಾಗೂ ದೀಕ್ಷಾ ಕೃಷ್ಣ ಅವರ ಈ ಒಂದು ಫೋಟೋ ಶೂಟ್ ಅನ್ನ ಅಂಜನ್ ಕುಮಾರಂ ಅವರು ಮಾಡಿದ್ದಾರೆ. ಪರಿಕಲ್ಪನೆ ಕೂಡ ಇವರದ್ದೇ ಆಗಿದೆ. ಫೋಟೋ ಕ್ಲಿಕ್ಕಿಸೋ ಕೆಲಸವನ್ನೂ ಇದೇ ಅಂಜನ್ ಕುಮಾರಂ ಮಾಡಿದ್ದಾರೆ.
ಚೈತ್ರಾ ಆಚಾರ್-ದೀಕ್ಷಾ ಕೃಷ್ಣ ಸ್ಪೆಷಲ್ ಫೋಟೋ ಶೂಟ್
ವಿಶೇಷವಾಗಿ ಒಂದು ಪೋಟೋ ಶೂಟ್ ಅಲ್ಲಿ ದೀಕ್ಷಾ ಕೃಷ್ಣ ಮತ್ತು ಚೈತ್ರಾ ಆಚಾರ್ ಸರಳ ಮತ್ತು ಸುಂದರ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಚೈತ್ರಾ ಆಚಾರ್ ಕೆಲವೊಂದು ಫೋಟೋದಲ್ಲಿ ಸಿಗರೇಟ್ ಕೂಡ ಸೇದಿದ್ದಾರೆ ನೋಡಿ.
ಆದರೆ ಈ ಬಗ್ಗೆ ಕೂಡ ಚೈತ್ರಾ ಆಚಾರ್ ಒಂದು ಸ್ಪಷ್ಟನೆ ಕೊಟ್ಟಿದ್ದಾರೆ. ನಾನು ಫೋಟೋ ಶೂಟ್‌ಗಾಗಿ ಮಾತ್ರ ಸಿಗರೇಟ್ ಸೇದಿದ್ದೇನೆ ಹೊರತು, ಧೂಮಪಾನವನ್ನ ಪ್ರಮೋಟ್ ಮಾಡುತ್ತಿಲ್ಲ ಅಂತಲೂ ಬರೆದುಕೊಂಡಿದ್ದಾರೆ.
ಸ್ತ್ರೀ ರೂಪದ ವಿಶೇಷ ಪರಿಕಲ್ಪನೆಯ ಫೋಟೋ ಶೂಟ್
ಚೈತ್ರಾ ಆಚಾರ್ ಅವರ ಈ ಒಂದು ಸ್ತ್ರಿ ಅನ್ನುವ ವಿಶೇಷ ಪರಿಕಲ್ಪನೆಯ ಫೋಟೋ ಶೂಟ್ ಅಲ್ಲಿ ಸಾಕಷ್ಟು ಭಾವಗಳೂ ವ್ಯಕ್ತವಾಗಿವೆ. ಆದರೆ ಸಿಗರೇಟ್ ಸೇದೋ ಫೋಟೋಗಳಿಗೆ ಕೆಟ್ಟ ಕಮೆಂಟ್ಸ್ ಬಂದಿವೆ. ಈ ಒಂದು ಫೋಟೋದಿಂದ ಏನು ಹೇಳೋಕೆ ಹೊರಟ್ಟಿದ್ದೀರಿ? ಅಭ್ಯಾಸ ಅಂತಲೂ ಬೇರೆ ಬರೆದುಕೊಂಡಿದ್ದೀರಿ? ಏನ್ ಸಂದೇಶ ಕೊಡ್ತಾಯಿದ್ದಿರೀ ಅಂತಲೂ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: Kannada Movie: ಹೆಸರು ಬದಲಿಸಿದ್ದೇಕೆ ಓಂ ಪ್ರಕಾಶ್ ಮಗಳು?
ಇನ್ನೂ ಕೆಲವರು ಈ ಫೋಟೋ ಶೂಟ್‌ಗೆ ಇನ್ನೂ ಕೆಟ್ಟದಾಗಿಯೇ ಕಮೆಂಟ್ ಮಾಡಿದ್ದಾರೆ. ಹಳೆ ಕಾಲದ ದಂಧೆ ಮಾಡೋ ಮನೆ ರೀತಿನೇ ಇದೆ ಅಂತಲೂ ಅಭಿಪ್ರಾಯ ಹೊರ ಹಾಕಿದ್ದಾರೆ. ಒಟ್ಟಾರೆ, ಚೈತ್ರಾ ಆಚಾರ್ ಮತ್ತು ದೀಕ್ಷಾ ಕೃಷ್ಣ ಅವರ ಈ ಒಂದು ಫೋಟೋ ಶೂಟ್ ಏನೇನೋ ಹೇಳ್ತಾ ಇದೆ ನೋಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ