• Home
  • »
  • News
  • »
  • entertainment
  • »
  • Bhavana Rao: ಗಾಳಿಪಟದ ಭಾವನಾ ರಾವ್ ಎಲ್ಲಿದ್ದಾರೆ? ಏನ್ ಮಾಡ್ತಿದ್ದಾರೆ ಕನ್ನಡದ ಈ ಪಾವನಿ?

Bhavana Rao: ಗಾಳಿಪಟದ ಭಾವನಾ ರಾವ್ ಎಲ್ಲಿದ್ದಾರೆ? ಏನ್ ಮಾಡ್ತಿದ್ದಾರೆ ಕನ್ನಡದ ಈ ಪಾವನಿ?

ಹೊಂದಿಸಿ ಬರೆಯಿರಿ ಸಿನಿಮಾದಲ್ಲಿ ಭಾವನಾ ರಾವ್

ಹೊಂದಿಸಿ ಬರೆಯಿರಿ ಸಿನಿಮಾದಲ್ಲಿ ಭಾವನಾ ರಾವ್

ಭಾವನಾ ರಾವ್ ಅಭಿನಯದ ಪಯಣ ಈಗ ಹಿಂದಿ ವೆಬ್ ಸಿರೀಸ್ ಹಂತಕ್ಕೂ ಬಂದು ತಲುಪಿದೆ. ಆದರೆ ಈ ಬಗ್ಗೆ ಹೆಚ್ಚಿಗೆ ಈಗಲೇ ಹೇಳೋಕೆ ಆಗೋದಿಲ್ಲ. ಕೊಂಚ ವೇಟ್ ಮಾಡಿ ಅಂತಲೇ ಭಾವನಾ ಹೇಳ್ತಾರೆ.

  • Share this:

ಸ್ಯಾಂಡಲ್​ವುಡ್​ ನ (Sandalwood) ಭಟ್ಟರ ಗಾಳಿಪಟ (Galipata Cinema) ಸಿನಿಮಾ ಅನೇಕರಿಗ ಲೈಫ್ ಕೊಟ್ಟಿದೆ. ಎಲ್ಲರ ಪಾತ್ರಗಳಲ್ಲೂ ಒಂದು ಜೀವಂತಿಕೆ ಇತ್ತು. ಅದಕ್ಕೇನೆ ಗಾಳಿಪಟ ಚಿತ್ರದ ಪಾತ್ರಗಳೆಲ್ಲ ಈಗಲೂ ಫೇಮಸ್ ಆಗಿವೆ. ಯಾರೂ ಈ ಚಿತ್ರದ ಪಾತ್ರಗಳನ್ನ ಮರೆತೇ ಇಲ್ಲ. ಮುಗ್ದ-ಮುಗ್ದ, ತುಂಟ- ತುಂಟ ಪಾವನಿ ಪಾತ್ರ ಈಗಲೂ ಮಾತುಕತೆಯಲ್ಲಿ ಬಂದು ಹೋಗುತ್ತದೆ. ಅದೇ ಪಾತ್ರವನ್ನ ನಿರ್ವಹಿಸಿದ ಕನ್ನಡದ ಆ ಯುವ ನಟಿ ಭಾವನಾ ರಾವ್ ಈಗ ಎಲ್ಲಿದ್ದಾರೆ. ಏನೆಲ್ಲ ಮಾಡ್ತಿದ್ದಾರೆ ? ಇದನ್ನ ಹುಡುಕುತ್ತ ಹೋದ್ರೆ, ಸ್ವತಃ ಭಾವನಾ ರಾವ್ (Bhavana Rao) ಒಂದಷ್ಟು ವಿಶೇಷ ವಿಷಯಗಳನ್ನ ಈಗ ನಮ್ಮ ಜೊತೆಗೆ ಹಂಚಿಕೊಂಡಿದ್ದಾರೆ. ಅವರ ಸಿನಿಮಾ ಜರ್ನಿಯ ಮಾತು ಈಗ ಹೊಂದಿಸಿ ಬರೆಯಿರಿ ಚಿತ್ರಕ್ಕೇನೆ ಬಂದು ನಿಲ್ಲುತ್ತದೆ.


ಕನ್ನಡದ ನಟಿ ಭಾವನಾ ರಾವ್ ಸಿನಿಮಾ ಪ್ರೀತಿ ಏನೂ ಕಡಿಮೆ ಆಗಿಲ್ಲ. ಅದು ಇನ್ನೂ ಮುಂದುವರೆದಿದೆ. ಅಭಿನಯಿಸಿರೋ ಸಿನಿಮಾಗಳು ಮಾತ್ರ ಇನ್ನೂ ರಿಲೀಸ್ ಆಗಬೇಕಿದೆ. ಆದರೆ, ಆರಂಭದಲ್ಲಿ ಬಂದ ಸಿನಿಮಾಗಳ ಜನರ ಗಮನ ಸೆಳೆದಿರೋದು ಅಷ್ಟೆ ಸತ್ಯ.


Kannada Actress Bhavana Rao Now talk about her new films
ಹೊಂದಿಸಿ ಬರೆಯಿರಿ ಸಿನಿಮಾದ ಭೂಮಿಕಾ ಪಾತ್ರಧಾರಿ ಭಾವನಾ ರಾವ್


ಆದರೂ ಭಾವನಾ ರಾವ್ ಮೇನ್ ಸ್ಟ್ರೀಮ್ ನಟಿ ಆಗಲೇ ಇಲ್ಲವೇ ಅನ್ನೋ ಪ್ರಶ್ನೆಗಳೂ ಇವೆ. ಅದರ ಹೊರತಾಗಿ ಕನ್ನಡದ ಈ ನಟಿ ಸಿನಿಮಾ ಪಯಣ ಸಾಗುತ್ತಲೇ ಇದೆ. ಈಗಾಗಲೇ ಬಹು ತಾರೆಯರ ಹೊಂದಿಸಿ ಬರೆಯಿರಿ ಸಿನಿಮಾದಲ್ಲಿ ಭಾವನಾ ರಾವ್ ವಿಶೇಷ ಪಾತ್ರವನ್ನೇ ನಿರ್ವಹಿಸಿದ್ದಾರೆ.


ಇದನ್ನೂ ಓದಿ: Bigg Boss Season 9: ಹೆಣ್ಮಕ್ಕಳ ಬಗ್ಗೆ ಕೆಟ್ಟ ಮಾತು! ಸಂಬರ್ಗಿ ವಿರುದ್ಧ ಸಿಡಿದೆದ್ದ ದರ್ಶ್


ಈ ಚಿತ್ರದಲ್ಲಿ ಸಂಯುಕ್ತಾ ಹೊರಡನಾಡು, ಐಶಾನಿ ಶೆಟ್ಟಿ, ಅರ್ಚನಾ ಜೋಯಿಸ್, ಪ್ರವೀಣ್ ತೇಜ್ ಹೀಗೆ ಇವರೂ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿಯೇ ಅಭಿನಯಿಸಿದ್ದಾರೆ. ಈ ಚಿತ್ರದ ಮೂಲಕ ಇವರೆಲ್ಲ ಒಂದಾಗಿ ನಾವೆಲ್ಲ ಹೊಂದಿಸಿ ಬರೆಯುತ್ತಿದ್ದೇವೆ ಅನ್ನೋ ಅರ್ಥದಲ್ಲಿಯೇ  ವಿಭಿನ್ನವಾಗಿಯೇ ಪ್ರಚಾರ ಕೂಡ ಮಾಡುತ್ತಿದ್ದಾರೆ.


ಹೊಂದಿಸಿ ಬರೆಯಿರಿ ಚಿತ್ರದಲ್ಲಿ ಭೂಮಿಕಾ ಆದ ಭಾವನಾ ರಾವ್
ಹೌದು, ಹೊಂದಿಸಿ ಬರೆಯಿರಿ ಸಿನಿಮಾದಲ್ಲಿ ಭಾವನಾ ರಾವ್ ಪಾತ್ರ ವಿಭಿನ್ನವಾಗಿಯೇ ಇದೆ. ಇದರ ಹೆಸರು ಭೂಮಿಕಾ ಅಂತಲೇ ಇದೆ. ಈ ಪಾತ್ರಕ್ಕೆ ಹಲವು ಶೇಡ್ಸ್ ಇವೆ. ವಿಶೇಷವಾಗಿ ಈ ಪಾತ್ರಕ್ಕೆ ಮಿಕ್ಸ್ಡ್ ಎಮೋಷನ್ಸ್ ಇವೆ. ಈ ಪಾತ್ರದ ಬಗ್ಗೆ ಒಂದು ನಿರೀಕ್ಷೆ ಕೂಡ ಭಾವನಾ ಅವ್ರಿಗೆ ಇರೋದು ಅಷ್ಟೇ ಸ್ಪೆಷಲ್ ಆಗಿದೆ.


Kannada Actress Bhavana Rao Now talk about her new films
ಭಾವನಾ ರಾವ್ ಸಖತ್ ಪೋಸ್


ಭಾವನಾ ನಟನೆ ಚಿತ್ರಕ್ಕೆ ಮೋಹಕ್ ತಾರೆ ಸಪೋರ್ಟ್
ಹೊಂದಿಸಿ ಬರೆಯಿರಿ ಇನ್ನೇನು ಇದೇ ನವೆಂಬರ್-18ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ. ಅದಕ್ಕೂ ಮೊದಲೇ ಚಿತ್ರದ ಒಂದು ವಿಶೇಷ ಹಾಡು ಕೂಡ ಬಿಡುಗಡೆ ಆಗುತ್ತಿದೆ. ಮೋಹಕ ತಾರೆ ರಮ್ಯ ಈ ಹಾಡನ್ನ ರಿಲೀಸ್ ಮಾಡುತ್ತಿದ್ದಾರೆ. ಈ ಮೂಲಕ ಕನ್ನಡದ ಸಿನಿಮಾಗಳಿಗೂ ತಮ್ಮದೇ ರೀತಿಯಲ್ಲಿ ಸಪೋರ್ಟ್ ಮಾಡುತ್ತಿದ್ದಾರೆ.


ಹಿಂದಿ ವೆಬ್ ಸಿರೀಸ್ ನಲ್ಲಿ ಭಾವನಾ ರಾವ್ ಅಭಿನಯ
ಭಾವನಾ ರಾವ್ ಅಭಿನಯದ ಪಯಣ ಈಗ ಹಿಂದಿ ವೆಬ್ ಸಿರೀಸ್ ಹಂತಕ್ಕೂ ಬಂದು ತಲುಪಿದೆ. ಆದರೆ ಈ ಬಗ್ಗೆ ಹೆಚ್ಚಿಗೆ ಈಗಲೇ ಹೇಳೋಕೆ ಆಗೋದಿಲ್ಲ. ಕೊಂಚ ವೇಟ್ ಮಾಡಿ ಅಂತಲೇ ಭಾವನಾ ಹೇಳ್ತಾರೆ.


ಇದನ್ನೂ ಓದಿ: Big Cinema Big Friday: ಕನ್ನಡದ ಕಾಂತಾರ, ತೋತಾಪುರಿಗೆ ಬೀಳುತ್ತಾ ಪೊನ್ನಿಯಿನ್ ಸೆಲ್ವನ್ ಏಟು?


ಅಂದ್ಹಾಗೆ ಭಾವನಾ ಇನ್ನೂ ಒಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಆ ಚಿತ್ರದ ಬಗ್ಗೆನೂ ಈಗಲೇ ಏನೂ ಹೇಳೋಕೆ ಆಗೋದಿಲ್ಲ ಅಂತಲೇ ಭಾವನಾ ಹೇಳುತ್ತಿದ್ದು, ತಮ್ಮ ಚಿತ್ರ ಪಯಣದಲ್ಲಿ ಹೊಸ ಹೊಸ ಚಿತ್ರಗಳನ್ನ ಒಪ್ಪಿಕೊಳ್ಳುತ್ತಲೇ ಈಗ ವೆಬ್ ಸಿರೀಸ್ ಮೂಲಕ ಹಿಂದಿ ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ.

First published: