• Home
  • »
  • News
  • »
  • entertainment
  • »
  • Bhavana In Bollywood: ಬಾಲಿವುಡ್​ನಲ್ಲಿ ಗಾಳಿಪಟದ ಭಾವನಾ ರಾವ್!

Bhavana In Bollywood: ಬಾಲಿವುಡ್​ನಲ್ಲಿ ಗಾಳಿಪಟದ ಭಾವನಾ ರಾವ್!

ಡಾನ್ ಸುನಿಲ್ ಶೆಟ್ಟಿ ಮಗಳು ಭಾವನಾ ರಾವ್

ಡಾನ್ ಸುನಿಲ್ ಶೆಟ್ಟಿ ಮಗಳು ಭಾವನಾ ರಾವ್

ಧಾರಾವಿ ಬ್ಯಾಂಕ್​ ನಲ್ಲಿ ನಾನು ಲಾಯರ್ ಪಾತ್ರ ಮಾಡುತ್ತಿದ್ದೇನೆ. ಸುನಿಲ್ ಶೆಟ್ಟಿ ಮಗಳ ರೋಲ್​ ಅನ್ನೆ ನಿಭಾಯಿಸಿದ್ದೇನೆ. ಸದ್ಯಕ್ಕೆ ಇಷ್ಟೇ ಹೇಳೋಕೆ ಸಾಧ್ಯ ಎಂದು ಭಾವನಾ ರಾವ್ ಹೇಳುತ್ತಾರೆ.

  • News18 Kannada
  • Last Updated :
  • Bangalore [Bangalore], India
  • Share this:

ಬಾಲಿವುಡ್​ ನಲ್ಲಿ ಈಗೊಂದು (Bollwyood) ಸಿನಿಮಾ ರೆಡಿ ಆಗಿದೆ. ಇದು ತುಂಬಾ ವಿಶೇಷವಾಗಿಯೇ ಇದೆ. ಇದಕ್ಕೆ ಮುಂಬೈನ (Mumbai) ಪ್ರಮುಖ ಸ್ಥಳ ಧಾರಾವಿಯ ಹೆಸರನ್ನೆ ಇಡಲಾಗಿದೆ. ಇದರ ಕಥೆ ಕೂಡ ಸ್ಪೆಷಲ್ ಆಗಿದೆ. ಇಲ್ಲಿವರೆಗೂ ಈ ಕಥೆಯನ್ನ ಯಾರು ಟಚ್ ಮಾಡಿಲ್ಲ ಅನಿಸುತ್ತದೆ. ಅಂತಹ ಈ ಕಥೆ ಧಾರಾವಿಯ (Dharavi Crime) ಕ್ರೈಮ್ ಚರಿತ್ರೆಯನ್ನೆ ಹಂತ ಹಂತವಾಗಿಯೇ ಬಿಚ್ಚಿಡುತ್ತದೆ. ವಿವೇಕ್ (Vivek Anand Oberoi) ಓಬೆರಾಯ್ ಹಾಗೂ ಸುನಿಲ್ ಶೆಟ್ಟಿ ಇಲ್ಲಿ ಪ್ರಮುಖ ಪಾತ್ರವನ್ನ ನಿರ್ವಹಿಸಿದ್ದಾರೆ. ಇವರ ಮಧ್ಯೆ ಇನ್ನೂ ಒಂದು ವಿಶೇಷ ಪಾತ್ರವೇ ಇದೆ. ಆ ಪಾತ್ರವನ್ನ ಕನ್ನಡದ ನಟಿ ಹಾಗೂ ಗಾಳಿಪಟ ಚಿತ್ರ ಖ್ಯಾತಿಯ ನಟಿ ಭಾವನಾ ರಾವ್ ನಿರ್ವಹಿಸಿದ್ದಾರೆ. ಇದರ ಬಗ್ಗೆ ಸ್ವತಃ ಭಾವನಾ ನ್ಯೂಸ್​-18 ಕನ್ನಡ ಡಿಜಿಟಲ್​ಗೆ ಒಂದಷ್ಟು ಅಧಿಕೃತ ಮಾಹಿತಿ ಕೊಟ್ಟಿದ್ದಾರೆ.


ಧಾರಾವಿ ಬ್ಯಾಂಕ್ ಎಂಬ ಮುಂಬೈ ಕ್ರೈಮ್ ಲೋಕ


ಬಾಲಿವುಡ್​ ನಲ್ಲೂ ಕಂಟೆಂಟ್ ಬೇಸ್ ಚಿತ್ರ ರೆಡಿ ಆಗುತ್ತಿವೆ. ಆದರೆ ಅವೆಲ್ಲ ಓಟಿಟಿಗೆ ಅನ್ನೋದು ಕೂಡ ಅಷ್ಟೇ ಸತ್ಯ. MX ಪ್ಲೇಯರ್​ಗಾಗಿಯೇ ಈ ಚಿತ್ರ ರೆಡಿ ಆಗಿದೆ. ಇದರ ಟ್ರೈಲರ್ ಭರ್ಜರಿಯಾಗಿಯೇ ಇದೆ.


ಧಾರಾವಿ ಒಂದು ಸ್ಲಮ್ ಏರಿಯಾ ಆಗಿದೆ. ಮುಂಬೈನ ಅಷ್ಟೂ ಕ್ರೈಮ್ ಮತ್ತು ಅಷ್ಟೂ ಅಸಲಿ ಸತ್ಯಗಳು ಇಲ್ಲಿಯೇ ನಡೆಯುತ್ತವೆ ಅನ್ನೋದನ್ನೆ ಟ್ರೈಲರ್ ಬಿಂಬಿಸುತ್ತದೆ. ಈ ಒಂದು ಜಗತ್ತಿಗೆ ಒಬ್ಬ ಯಜಮಾನ ಕೂಡ ಇದ್ದಾನೆ. ಆ ಪಾತ್ರವನ್ನ ಇಲ್ಲಿ ಸುನಿಲ್ ಶೆಟ್ಟಿ ನಿರ್ವಹಿಸಿದ್ದಾರೆ.


ಸುನಿಲ್ ಶೆಟ್ಟಿ-ವಿವೇಕ್ ಓಬೆರಾಯ್ ಮುಖಾ-ಮುಖಿ


ಧಾರಾವಿ ಬ್ಯಾಂಕ್​ ನಲ್ಲಿ ಎರಡು ಪ್ರಮುಖ ಪಾತ್ರಗಳಿವೆ. ಅವುಗಳ ಸುತ್ತವೆ ಇತರ ಪಾತ್ರಗಳು ಇಲ್ಲಿ ಪ್ಲೇ ಆಗುತ್ತವೆ. ಅದರಂತೆ ಸುನಿಲ್ ಶೆಟ್ಟಿ ಇಲ್ಲಿಯ ಡಾನ್ ಅಂದ್ರೆ ತಪ್ಪಿಲ್ಲ. ಇಡೀ ಧಾರಾವಿಗೆ ತಲೈವಾ ಆಗಿದ್ದಾರೆ.


Kannada Actress Bhavana Rao Acted in Bollywood web Series
ಧಾರಾವಿ ಬ್ಯಾಂಕ್ ಎಂಬ ಮುಂಬೈ ಕ್ರೈಮ್ ಲೋಕ


ಈ ತಲೈವಾ ಇಲ್ಲಿ ತನ್ನ ಕ್ರೈಮ್ ಅಧಿಪತ್ಯವನ್ನ ಕಟ್ಟಿಕೊಂಡಿದ್ದಾರೆ. ಅದನ್ನ ಮಟ್ಟ ಹಾಕೋಕೇನೆ ಪೊಲೀಸ್ ಆಫೀಸರ್​​ ಆಗಿಯೇ ನಟ ವಿವೇಕ್ ಓಬೆರಾಯ್ ಇಲ್ಲಿ ಅಭಿನಯಿಸಿದ್ದಾರೆ. ಇವರ ಜುಗಲ್ ಬಂದಿ ಇಲ್ಲಿ ರೋಚಕವಾಗಿಯೇ ಇದೆ.


ಇದನ್ನೂ ಓದಿ: Shiva Rajkumar: ಮತ್ತೆ ಮಚ್ಚು ಹಿಡಿದ ಶಿವಣ್ಣ! ಇದ್ಯಾವ ಸಿನಿಮಾ ಗೊತ್ತೇ?


ಡಾನ್ ಸುನಿಲ್ ಶೆಟ್ಟಿ ಮಗಳು ಭಾವನಾ ರಾವ್


ಧಾರಾವಿ ಬ್ಯಾಂಕ್​ ನಲ್ಲಿ ಹತ್ತು ಹಲವು ಕಲಾವಿದರಿದ್ದಾರೆ. ಹೊಸ ಮುಖಗಳೇ ಇಲ್ಲಿ ಅತಿ ಹೆಚ್ಚು ಇರೋದು. ಇವರ ಮಧ್ಯೆ ಕನ್ನಡದ ಹುಡುಗಿ ಗಾಳಿಪಟದ ಬೆಡಗಿ ಭಾವನಾ ರಾವ್ ಕೂಡ ಇದ್ದಾರೆ. ಚಿತ್ರದಲ್ಲಿ ಸುನಿಲ್ ಶೆಟ್ಟಿ ಮಗಳ ರೋಲ್​ ಅನ್ನ ಭಾವನಾ ರಾವ್ ಇಲ್ಲಿ ನಿರ್ವಹಿಸಿದ್ದಾರೆ.


ಭಾವನಾ ರಾವ್ ಇಲ್ಲಿ ಲಾಯರ್ ಪಾತ್ರಧಾರಿ
ಧಾರಾವಿ ಬ್ಯಾಂಕ್​ ನಲ್ಲಿ ನಾನು ಲಾಯರ್ ಪಾತ್ರ ಮಾಡುತ್ತಿದ್ದೇನೆ. ಸುನಿಲ್ ಶೆಟ್ಟಿ ಮಗಳ ರೋಲ್​ ಅನ್ನೆ ನಿಭಾಯಿಸಿದ್ದೇನೆ. ಸದ್ಯಕ್ಕೆ ಇಷ್ಟೇ ಹೇಳೋಕೆ ಸಾಧ್ಯ ಎಂದು ಭಾವನಾ ರಾವ್ ಹೇಳುತ್ತಾರೆ.
ಧಾರಾವಿ ಬ್ಯಾಂಕ್ ಸಿನಿಮಾ ಅಲ್ಲ ವೆಬ್ ಸರಣಿ
ಧಾರಾವಿ ಬ್ಯಾಂಕ್ ಸಿನಿಮಾ ಅಲ್ಲ. ಇದು ವೆಬ್ ಸಿರೀಸ್ ಆಗಿದೆ. ಇದನ್ನ ಸಮಿತ್ ಕಕ್ಕಡ್ ನಿರ್ದೇಶನದ ಮಾಡಿದ್ದಾರೆ. ಒಟ್ಟು 10 ಸಂಚಿಕೆಯಲ್ಲಿ ಇಡೀ ಧಾರಾವಿ ಬ್ಯಾಂಕ್ ಕಥೆ ಅನಾವರಣಗೊಳ್ಳಲಿದೆ.


ಇದನ್ನೂ ಓದಿ: Kantara-Yash: ಕಾಂತಾರ ನನ್ನ ಸಿನಿಮಾ ಎಂದ ಯಶ್! ನಟ ಹೇಳಿದ್ದಿಷ್ಟು


ಇದೇ 19 ರಂದು ಧಾರಾವಿ ಬ್ಯಾಂಕ್ ರಿಲೀಸ್
ಧಾರಾವಿ ಬ್ಯಾಂಕ್ ವೆಬ್ ಸರಣಿ ಇದೇ ತಿಂಗಳು 19 ರಂದು ರಿಲೀಸ್ ಆಗುತ್ತದೆ. ಹಿಂದಿ, ತೆಲುಗು, ತಮಿಳು ಹೀಗೆ ಮೂರು ಭಾಷೆಯಲ್ಲಿ ಧಾರಾವಿ ಬ್ಯಾಂಕ್ ರೆಡಿ ಆಗಿದೆ. ಈಗಾಗಲೇ ಆ ಬಗ್ಗೆ ಟ್ರೈಲರ್ ನಲ್ಲಿಯೇ ಹೇಳಲಾಗಿದೆ.

First published: