ಕನ್ನಡದ ನಟಿ ಭಾವನಾ (Bhavana Ramanna) ರಾಮಣ್ಣ ಕನ್ನಡ ಕಂಡ ವಿಶೇಷ ಕಲಾವಿದೆ. ಸಿನಿಮಾರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಸಿನಿಮಾಗಳ ಆಯ್ಕೆಯಲ್ಲೂ (Bhavana Ramanna) ವಿಶೇಷವಾಗಿಯೇ ಯೋಚನೆ ಮಾಡ್ತಾರೆ. ಸಿನಿಮಾ ನಿರ್ಮಾಣದಲ್ಲೂ ಅಷ್ಟೆ. ಒಳ್ಳೆ ಕಥೆಗಳಿಗೆ ಹೆಚ್ಚಿನ ಮಹತ್ವ ಕೊಡ್ತಾರೆ. ಭಾವನಾ (bhavana ramanna serial) ರಾಮಣ್ಣ ಇಲ್ಲಿವರೆಗೂ ಸಾಕಷ್ಟು ಸಿನಿಮಾ ಮಾಡಿದ್ದಾರೆ. ಒಳ್ಳೆ ಒಳ್ಳೆಯ ಪಾತ್ರಗಳಿಗೆ ಜೀವ ತುಂಬಿದ್ದಾರೆ. ದುನಿಯಾ ಸೂರಿ ನಿರ್ದೇಶನದ ಇಂತಿ ನಿನ್ನ ಪ್ರೀತಿ ಪರಿಮಳಾ ಪಾತ್ರ ಈಗಲೂ (Bhavana Ramanna New Movies) ಕಾಡುತ್ತದೆ. ಭಾಗೀರಥಿ ಚಿತ್ರದ ಭಾಗೀರಥಿ ಪಾತ್ರವೇನು ಕಡಿಮೇನೆ. ಇದು ಕೂಡ ಸಾಕಷ್ಟು ಮನಸ್ಸಿಗೆ ತಟ್ಟಿತ್ತು. ಅದೇ ರೀತಿ ಜಮಾಲಿಗುಡ್ಡ ಚಿತ್ರದ ಪಾಯಲ್ ಪಾತ್ರ ಕೂಡ ಕಾಡುವಂತೇನೆ ಇದೆ.
ಆದರೆ ಇದೇ ಚಿತ್ರದಲ್ಲಿ ಆ ನಟನ ಜೊತೆಗೆ ಸ್ಕ್ರೀನ್ ಶೇರ್ ಮಾಡಲೇ ಇಲ್ಲ ಅನ್ನೊ ಬೇಸರ ಭಾವನಾ ಅವರಿಗೆ ಇದೆ. ನ್ಯೂಸ್-18 ಕನ್ನಡ ಡಿಜಿಟಲ್ ವಿಶೇಷ ಸಂದರ್ಶನದಲ್ಲಿ ಭಾವನಾ ತಮ್ಮ ಈ ಜಮಾಲಿಗುಡ್ಡ ಸಿನಿಮಾದ ವಿಶೇಷತೆಗಳ ಬಗ್ಗೆ ಮಾತನಾಡಿದ್ದಾರೆ. ತಮ್ಮ ಪಾತ್ರದ ಸುತ್ತ ಮಾತನಾಡುತ್ತಲೇ ಭಾವನಾ ಆ ಒಂದು ವಿಷಯವನ್ನೂ ಹೇಳಿಕೊಂಡಿದ್ದಾರೆ.
ಕನ್ನಡದ ನಾಯಕಿ ನಟಿ ಭಾವನಾ ರಾಮಣ್ಣ ಹೊಸ ಕನಸು
ನಿಜ, ಭಾವನಾ ಅನೇಕ ಚಿತ್ರಗಳನ್ನ ಮಾಡಿದ್ದಾರೆ. ಒಳ್ಳೇ ಪಾತ್ರಗಳು ಸಿಕ್ಕರೇ ಬಿಡೋದೇ ಇಲ್ಲ. ಅವುಗಳನ್ನ ತಮ್ಮೊಳಗೆ ತೆಗೆದುಕೊಂಡು ಅದ್ಭುತವಾಗಿಯೇ ಅಭಿನಯಿಸುತ್ತಲೇ ಬಂದಿದ್ದಾರೆ.
ಜಮಾಲಿಗುಡ್ಡ ಸಿನಿಮಾದಲ್ಲೂ ಭಾವನಾ ರಾಮಣ್ಣ ಒಳ್ಳೆ ಪಾತ್ರವನ್ನೆ ನಿರ್ವಹಿಸಿದ್ದಾರೆ. ಕಮರ್ಷಿಯಲ್ ಮತ್ತು ಕಲಾತ್ಮಕ ಟಚ್ ಇರೋ ಈ ಚಿತ್ರದಲ್ಲಿ ಪಾಯಲ್ ಹೆಸರಿನ ರೋಲ್ ಅನ್ನೇ ಭಾವನಾ ನಿಭಾಯಿಸಿದ್ದಾರೆ.
ಭಾವನಾ ರಾಮಣ್ಣ ಅವರ ಪಾತ್ರಗಳ ಆಯ್ಕೆ ತುಂಬಾ ವಿಶೇಷ
ಈ ಪಾತ್ರ ಒಂದು ವಿಶೇಷ ಪಾತ್ರವೇ ಆಗಿದೆ ಅಂತಲೂ ಭಾವನಾ ಹೇಳಿಕೊಂಡಿದ್ದಾರೆ. ಇಡೀ ಚಿತ್ರದಲ್ಲಿ ಹತ್ತು ಹಲವು ಪಾತ್ರಗಳೂ ಇವೆ. ಆ ಪಾತ್ರಗಳಲ್ಲಿಯೇ ಭಾವನಾ ನಿರ್ವಹಿಸಿರೋ ಪಾಯಲ್ ಪಾತ್ರ ವಿಶಿಷ್ಠವಾಗಿಯೇ ನಿಲ್ಲುತ್ತದೆ.
ಆದರೆ ಭಾವನಾ ರಾಮಣ್ಣ ಅವರಿಗೆ ಒಂದು ಬೇಸರ ಕೂಡ ಇದೆ. ತಾವು ಈ ಚಿತ್ರದಲ್ಲಿದ್ದರೂ ಕೂಡ ತಮ್ಮ ನೆಚ್ಚಿನ ನಟನ ಜೊತೆಗೆ ಸ್ಕ್ರೀನ್ ಶೇರ್ ಮಾಡಿಕೊಳ್ಳಲಿಲ್ಲ ಅನ್ನೋದೇ ಆ ಬೇಸರ ಆಗಿದೆ.
ನಾನು ಕನ್ನಡದ ಈ ಕಲಾವಿದರ ಜೊತೆಗೆ ಸ್ಕ್ರೀನ್ ಶೇರ್ ಮಾಡ್ಬೇಕು!
ಜಮಾಲಿಗುಡ್ಡ ಚಿತ್ರದಲ್ಲಿ ಪ್ರಕಾಶ್ ಬೆಳವಾಡಿ ಅವರ ಪಾತ್ರವೂ ಇದೆ. ಪ್ರಕಾಶ್ ಬೆಳವಾಡಿ ಅವರ ಪಾತ್ರ ಪೋಷಣೆ ಸದಾ ವಿಶೇಷವಾಗಿಯೇ ಇರುತ್ತದೆ. ಅದನ್ನ ತೆರೆ ಮೇಲೆ ನೋಡೋದೇ ಒಂದು ವಿಶೇಷ ಅನುಭವ ಅಂತಲೇ ಹೇಳಬಹುದು.
ಇವರ ಜೊತೆಗೆ ಭಾವನಾ ಅವರ ಪಾತ್ರದ ಒಂದೇ ಒಂದು ಸೀನ್ ಕೂಡ ಇಲ್ಲ. ಆದರೂ ಒಂದೇ ಚಿತ್ರದಲ್ಲಿ ಅನೇಕರು ಇದ್ದಾರೆ ಅನ್ನೋದೇ ವಿಶೇಷ. ಹಾಗಿದ್ದಾಗ, ಭಾವನಾ ಅವರು ಪ್ರಕಾಶ್ ಬೆಳವಾಡಿ ಜೊತೆಗೆ ಸ್ಕ್ರೀನ್ ಶೇರ್ ಮಾಡಬೇಕು ಅಂದ್ರೆ ಒಂದು ಪ್ರಕಾಶ್ ಬೆಳವಾಡಿ ಅವರು ಸಿನಿಮಾ ಪ್ರೋಡ್ಯೂಸ್ ಮಾಡ್ಬೇಕು, ಇಲ್ಲ ಭಾವನಾ ಅವರೇ ಚಿತ್ರ ಪ್ರೋಡ್ಯೂಸ್ ಮಾಡ್ಬೇಕು ಅಂತಲೇ ಸ್ವತಃ ಭಾವನಾ ಹೇಳಿಕೊಂಡಿದ್ದಾರೆ.
ಡಿಸೆಂಬರ್-30ಕ್ಕೆ ಜಮಾಲಿಗುಡ್ಡ ಸಿನಿಮಾ ರಿಲೀಸ್
ಕಲಾವಿದರಿಗೆ ಒಂದು ಹಸಿವು ಇದ್ರೇನೆ ಒಳ್ಳೆಯದು. ಅದು ಯಾವಾಗ ಕಡಿಮೆ ಆಗುತ್ತದೆಯೋ ಆಗ, ಅವರಲ್ಲಿರೋ ಕಲಾವಿದ ಇಲ್ಲವೇ ಕಲಾವಿದೆಯ ಪಯಣ ಅಂತ್ಯಗೊಳ್ಳುತ್ತದೆ.
ಆದರೆ ಭಾವನಾ ರಾಮಣ್ಣ ಅವರ ವಿಷಯದಲ್ಲಿ ಅದು ಆಗಿಲ್ಲ. ಅವರ ಕಲಾರಾಧನೆ ಮತ್ತು ಕಲಾಸಕ್ತಿ ಚಾಲ್ತಿಯಲ್ಲಿದೆ. ಅದನ್ನ ನಿರ್ಮಾಪಕಿ ಆಗಿಯೂ ನಟಿಯಾಗಿಯೂ ಭಾವನಾ ರಾಮಣ್ಣ ಮುಂದುವರೆಸಿಕೊಂಡು ಹೋಗ್ತಾಯಿದ್ದಾರೆ.
ಇದನ್ನೂ ಓದಿ: Shiva Rajkumar: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇಷ್ಟಪಡುವ ಕನ್ನಡದ ಆ ನಾಯಕ ನಟ ಯಾರು?
ಭಾವನಾ ರಾಮಣ್ಣ ಅಭಿನಯದ ಜಮಾಲಿಗುಡ್ಡ ಸಿನಿಮಾ ಇದೇ ತಿಂಗಳು 30 ರಂದು ರಿಲೀಸ್ ಆಗುತ್ತಿದೆ. ರಾಜ್ಯದೆಲ್ಲೆಡೆ ಈ ಚಿತ್ರ ರಿಲೀಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಈಗಲೇ ಚಿತ್ರದ ಪ್ರಚಾರ ಕೂಡ ಜೋರಾಗಿಯೇ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ