ತೆರೆಮೇಲೆ ಮತ್ತೆ ರಂಜಿಸಲಿದೆ 'ಚುಟುಚುಟು' ಜೋಡಿ; 'ಅವತಾರ ಪುರುಷನಿ'ಗೆ ಕೊನೆಗೂ ಸಿಕ್ಕಳು ಬೆಡಗಿ

‘‘ರ್‍ಯಾಂಬೋ 2’ ಚಿತ್ರದ ‘ಚುಟು ಚುಟು’ ಹಾಡು ಸಖತ್​ ಹಿಟ್​ ಆಗಿತ್ತು. ಸಂಪೂರ್ಣವಾಗಿ ಉತ್ತರ ಕರ್ನಾಟಕದ ಶೈಲಿಯಲ್ಲೇ ಹಾಡು ಮೂಡಿ ಬಂದಿದ್ದು ವಿಶೇಷವಾಗಿತ್ತು. ಹಾಡಿನಲ್ಲಿ ಕಾಣಿಸಿಕೊಂಡಿದ್ದ ಇಬ್ಬರೂ ಈಗ ಮತ್ತೆ ಒಂದಾಗುತ್ತಿರುವುದು ಸಹಜವಾಗಿಯೇ ಸಿನಿಮಾ ಮೇಲಿನ ನಿರೀಕ್ಷೆಗೆ ಮೈಲೇಜ್​ ಸಿಕ್ಕಿದೆ.

Rajesh Duggumane | news18
Updated:February 9, 2019, 4:43 PM IST
ತೆರೆಮೇಲೆ ಮತ್ತೆ ರಂಜಿಸಲಿದೆ 'ಚುಟುಚುಟು' ಜೋಡಿ; 'ಅವತಾರ ಪುರುಷನಿ'ಗೆ ಕೊನೆಗೂ ಸಿಕ್ಕಳು ಬೆಡಗಿ
ಶರಣ್​-ಆಶಿಕಾ
Rajesh Duggumane | news18
Updated: February 9, 2019, 4:43 PM IST
ಕಳೆದ ವರ್ಷ ತೆರೆಕಂಡ ಕನ್ನಡ ಸಿನಿಮಾಗಳ ಪೈಕಿ ಹಿಟ್​ ಆಗಿದ್ದು, ಬೆರಳೆಣಿಕೆ ಚಿತ್ರಗಳು ಮಾತ್ರ. ಅದರಲ್ಲಿ ಶರಣ್​ ಹಾಗೂ ಆಶಿಕಾ ರಂಗನಾಥ್​ ಕಾಂಬಿನೇಷನ್​ನಲ್ಲಿ ಮೂಡಿ ಬಂದ ‘ರ್‍ಯಾಂಬೋ 2’ ಚಿತ್ರ ಕೂಡ ಒಂದು. ಅಷ್ಟಕ್ಕೂ, ಈಗ ಈ ಸಿನಿಮಾ ಬಗ್ಗೆ ಮಾತನಾಡುತ್ತಿರುವುದೇಕೆ? ಅದಕ್ಕೂ ಕಾರಣವಿದೆ. ಶರಣ್​-ಆಶಿಕಾ ಜೋಡಿ ಈಗ ಮತ್ತೊಂದು ಚಿತ್ರಕ್ಕೆ ಒಂದಾಗಿದೆ! ಅದು ಸಿಂಪಲ್​ ಸುನಿ ನಿರ್ದೇಶನದ ‘ಅವತಾರ ಪುರುಷ’ ಚಿತ್ರಕ್ಕಾಗಿ.

ಶರಣ್​ ಜನ್ಮದಿನ ಹಿನ್ನೆಲೆಯಲ್ಲಿ ಚಿತ್ರತಂಡವು ಸಿನಿಮಾದ ಪೋಸ್ಟರ್​ ರಿಲೀಸ್​ ಮಾಡಿತ್ತು . ಆದರೆ, ನಾಯಕಿ ವಿಚಾರದಲ್ಲಿ ನಿರ್ದೇಶಕರು ರಹಸ್ಯ ಕಾಯ್ದುಕೊಂಡಿದ್ದರು. ಆದರೆ, ಈಗ ಈ ವಿಚಾರವನ್ನು ಚಿತ್ರತಂಡ ಅಧಿಕೃತ ಮಾಡಿದೆ. ಶರಣ್​-ಆಶಿಕಾ ಕಾಂಬಿನೇಷನ್​ ಅನ್ನು ಮತ್ತೆ ತೆರೆಮೇಲೆ ತರಲು ನಿರ್ದೇಶಕರು ಸಿದ್ಧರಾಗಿದ್ದಾರೆ.

‘ರ್‍ಯಾಂಬೋ 2’ ಚಿತ್ರದ ‘ಚುಟು ಚುಟು’ ಹಾಡು ಸಖತ್​ ಹಿಟ್​ ಆಗಿತ್ತು. ಸಂಪೂರ್ಣವಾಗಿ ಉತ್ತರ ಕರ್ನಾಟಕ ಶೈಲಿಯಲ್ಲೇ ಹಾಡು ಮೂಡಿ ಬಂದಿದ್ದು ವಿಶೇಷ. ಸಖತ್​ ಫೇಮಸ್​ ಆಗಿದ್ದ ಈ ಹಾಡಿಗೆ ಹೆಜ್ಜೆ ಹಾಕಿದ ಇಬ್ಬರೂ ಈಗ ಮತ್ತೆ ಒಂದಾಗುತ್ತಿರುವುದು ಸಹಜವಾಗಿಯೇ ಸಿನಿಮಾ ಮೇಲಿನ ನಿರೀಕ್ಷೆಗೆ ಮೈಲೇಜ್​ ನೀಡಿದೆ.

ಇದನ್ನೂ ಓದಿ: ‘ಬೆಲ್ ಬಾಟಂ’ ಚಿತ್ರದ ಆಡಿಯೋ ಟ್ರೈಲರ್ ರಿಲೀಸ್; ಹೊಸ ಪ್ರಯತ್ನಕ್ಕೆ ನಾಂದಿ ಹಾಡಿದ ರಿಷಬ್!

ಈ ಬಗ್ಗೆ ಸಂತಸ ಹಂಚಿಕೊಂಡಿರುವ ಆಶಿಕಾ, “ಎಲ್ಲೇ ಹೋದರೂ ನನ್ನನ್ನು ಚುಟು ಚುಟು ನಾಯಕಿ ಎಂದೇ ಗುರುತಿಸುತ್ತಾರೆ. ನಮ್ಮಿಬ್ಬರ ಜೋಡಿಯನ್ನು ಜನರು ಅಷ್ಟು ಮೆಚ್ಚಿಕೊಂಡಿದ್ದಾರೆ. ಸಿನಿಮಾದಲ್ಲಿ ನನಗೆ ಬೋಲ್ಡ್​ ಪಾತ್ರವಿದೆ,” ಎನ್ನುತ್ತಾರೆ.

ಚಿತ್ರಕ್ಕೆ ಪುಷ್ಕರ್​ ಮಲ್ಲಿಕಾರ್ಜುನಯ್ಯ ಬಂಡವಾಳ ಹೂಡಿದ್ದಾರೆ. ಫೆ.18ರಿಂದ ಚಿತ್ರದ ಶೂಟಿಂಗ್​ ಆರಂಭಗೊಳ್ಳಲಿದೆ. ಸಿನಿಮಾದಲ್ಲಿ ನಟಿಸುವ ಜೂನಿಯರ್​ ಕಲಾವಿದನಾಗಿ ಶರಣ್​ ಕಾಣಿಸಿಕೊಂಡಿದ್ದಾರೆ. ಶರಣ್​ ಸಿನಿಮಾಗಳು ಎಂದರೆ ನಕ್ಕು ನಕ್ಕು ಹೊಟ್ಟೆ ಹುಣ್ಣಾಗುತ್ತದೆ. ಈಗ ಅವರ ಚಿತ್ರಕ್ಕೆ ಸುನಿ ನಿರ್ದೇಶನ ಮಾಡುತ್ತಿರುವುದು ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ದೀಪಿಕಾ ರಿಜೆಕ್ಟ್​ ಮಾಡಿದ್ದ ಆ ಹೀರೋ ಈಗ ಬಾಲಿವುಡ್​ನಲ್ಲಿ ಹಾಟ್​ ಫೇವರಿಟ್​!
Loading...

First published:February 9, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...