Ashika Ranganath: ಮದಗಜನ ಪಲ್ಲವಿಗೆ ಪ್ರಶಸ್ತಿಯ ಗರಿ, ಕನ್ನಡದ ಮಲ್ಲಿಗೆ ಜೊತೆ ವಿಶೇಷ ಸಂದರ್ಶನ

ಪ್ರಶಸ್ತಿ ಕೈಯಲ್ಲಿ ಹಿಡಿದಾಗ ಇವರಿಗೆ ಆದ ಖುಷಿಗೆ ಪಾರವೇ ಇಲ್ಲ. ಆ ಕ್ಷಣ ಇವರಿಗೆ ಅದ್ಭುತವೇ ಸರಿ. ಇದನ್ನೆಲ್ಲ ಹೇಳ್ತಾ ಹೇಳ್ತಾ ಆಶಿಕಾ ಇತರ ವಿಷಯಗಳನ್ನ ನಮ್ಮ ಜೊತೆಗೆ ಹಂಚಿಕೊಂಡಿದ್ದಾರೆ.

ಆಶಿಕಾ ರಂಗನಾಥ್ ಮೊದಲ ಸೈಮಾ ಪ್ರಶಸ್ತಿ

ಆಶಿಕಾ ರಂಗನಾಥ್ ಮೊದಲ ಸೈಮಾ ಪ್ರಶಸ್ತಿ

  • Share this:
ಮದಗಜ ಚಿತ್ರದ ನಾಯಕಿ ನಟಿ ಆಶಿಕಾ ರಂಗನಾಥ್ (Ashika Ranganath) ತುಂಬಾ ಖುಷಿಯಲ್ಲಿದ್ದಾರೆ. ಇವರ ಈ ಖುಷಿಗೆ ಸೈಮಾ ಅವಾರ್ಡ್ (SIIMA) ಬಂದಿರೋದೇ ಕಾರಣ. ತುಂಬಾ ಹಿಂದೇನೆ ಪ್ರಶಸ್ತಿ ಬರುತ್ತದೆ ಅಂತಲೂ ನಿರೀಕ್ಷೆ ಮಾಡಿದ್ದರು. ಆದರೆ ಸ್ಪರ್ಧೆಯ ಮಧ್ಯೆ ಆಶಿಕಾ ರಂಗನಾಥ್ ಅಭಿನಯಿಸಿದ ಪಾತ್ರಗಳಿಗೆ ಪ್ರಶಸ್ತಿ ಏನೂ ಸಿಕ್ಕಿರಲಿಲ್ಲ. ಈಗ ಪ್ರಶಸ್ತಿ (Award) ಬಂದಿರೋದು ತುಂಬಾ ಸಂತೋಷ ತಂದಿದೆ. ಪ್ರಶಸ್ತಿ ಕೈಯಲ್ಲಿ ಹಿಡಿದಾಗ ಇವರಿಗೆ ಆದ ಖುಷಿಗೆ ಪಾರವೇ ಇಲ್ಲ. ಆ ಕ್ಷಣ ಇವರಿಗೆ ಅದ್ಭುತವೇ ಸರಿ. ಇದನ್ನೆಲ್ಲ ಹೇಳ್ತಾ ಹೇಳ್ತಾ ಆಶಿಕಾ ಇತರ ವಿಷಯಗಳನ್ನ ನಮ್ಮ ಜೊತೆಗೆ ಹಂಚಿಕೊಂಡಿದ್ದಾರೆ. ಇವರ ಮಾತಿನ ಆ ಸಂಪೂರ್ಣ ಸಂದರ್ಶನ ಇಲ್ಲಿದೆ.

ಮೊನ್ನೆ ಬೆಂಗಳೂರಲ್ಲಿ ಸೈಮಾ ಅವಾರ್ಡ್ ಫಂಕ್ಷನ್ ಇತ್ತು. ಅಲ್ಲಿಯೇ ಎಲ್ಲ ಚಿತ್ರರಂಗದ ದಿಗ್ಗಜರ ಮುಂದೆ ಕನ್ನಡದ ಹುಡುಗಿ ಆಶಿಕಾ ರಂಗನಾಥ್ ಪ್ರಶಸ್ತಿ ಪಡೆದರು. ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ಖುಷಿಯಲ್ಲಿದ್ದಾರೆ. ಇದೇ ಸಂತೋಷದಲ್ಲಿರೋ ಆಶಿಕಾ ನಮ್ಮ ಪ್ರಶ್ನೆಗಳಿಗೂ ಉತ್ತರ ಕೊಟ್ಟಿದ್ದಾರೆ.

ಸೈಮಾ ಅವಾರ್ಡ್ ನಿಮಗೆ ಬಂದಿದೆ. ಈ ಬಗ್ಗೆ ಏನ್ ಹೇಳಲಿಕ್ಕೆ ಇಷ್ಟ ಪಡ್ತೀರಾ ?

ಪ್ರಶಸ್ತಿ ಬಂದಿರೋದು ಖುಷಿ ತಂದಿದೆ. ಚಿತ್ರರಂಗದ ದಿಗ್ಗಜರ ಮುಂದೆ ಪ್ರಶಸ್ತಿ ಪಡೆದಿರೋದು ಡಬಲ್ ಖುಷಿ. ಪಾಪ್ಯೂಲರ್ ಕ್ಯಾಟಗರಿಯಲ್ಲಿ ಅತ್ತ್ಯುತ್ತಮ ನಟಿ ಪ್ರಶಸ್ತಿ ಬಂದಿರೋದು ಖುಷಿ ತಂದಿದೆ.

ಪ್ರಶಸ್ತಿ ಆಶಿಕಾ ಅವರಿಗೆ ತಡವಾಗಿಯೇ ಬಂತು ಅಂತ ಅನಿಸೋದಿಲ್ವೇ ?

ಹೌದು, ನನ್ನ ಇತರ ಚಿತ್ರಗಳ ಪಾತ್ರಗಳಿಗೆ ಪ್ರಶಸ್ತಿ ಬರಬಹುದು ಅಂತ ನಿರೀಕ್ಷೆ ಮಾಡಿದ್ದೇ, ಆದರೆ ಅದು ಈಗ ಬಂದಿದೆ. ಇರಲಿ, ಮದಗಜ ಚಿತ್ರದ ಪಲ್ಲವಿ ಪಾತ್ರಕ್ಕೆ ಎಫರ್ಟ್ ಹಾಕಿದ್ದೇ, ಅದಕ್ಕೆ ಪ್ರಶಸ್ತಿ ರೂಪದಲ್ಲಿ ಪ್ರತಿ ಫಲ ಸಿಕ್ಕಿದೆ.

ಪ್ರಶಸ್ತಿ ಕೈಯಲ್ಲಿ ಹಿಡಿದಾಗ ನಿಮಗೆ ಆದ ಆ ಖುಷಿ ಏನು ?

ನನಗೆ ಪ್ರಶಸ್ತಿ ಬಂದಿರೋದು ಒಂದು ಖುಷಿ, ಮೊಟ್ಟ ಮೊದಲ ಬಾರಿಗೆ ಅದನ್ನ ಕೈಯಲ್ಲಿ ಹಿಡಿದಾಗ ಆದ ಸಂತೋಷಕ್ಕೆ ಪಾರವೇ ಇಲ್ಲ. ಅದು ನಿಜಕ್ಕೂ ಎಂದೂ ಮರೆಯಲಾಗದ ಅನುಭವ.

Ashika Ranganath talk about her first SIIMA Award
ಆಶಿಕಾ ರಂಗನಾಥ್ ಪ್ರಶಸ್ತಿಯ ಖುಷಿ


ಮದಗಜ ಚಿತ್ರದ ಪಾತ್ರಕ್ಕೆ ಪ್ರಶಸ್ತಿ ಸಿಕ್ಕ ಮೇಲೆ ನಿಮಗೆ ಬಂದ ರೆಸ್ಪಾನ್ಸ್

ಚಿತ್ರಕ್ಕೆ ಪ್ರಶಸ್ತಿ ಬಂದ್ಮೇಲೆ ಎಲ್ಲರಿಂದಲೂ ಶುಭ ಹಾರೈಕೆ ಬಂದವು. ಅದನ್ನ ಸ್ವೀಕರಿಸಿದಾಗ ನನಗಾದ ಅನುಭವ ಅನನ್ಯ. ಅದರಿಂದ ನನಗೆ ಇನ್ನಷ್ಟು ಮತ್ತಷ್ಟು ಖುಷಿ ಆಯಿತು.

ಮಲ್ಲಿಗೆ ಹೂವಾ ಆಲ್ಬಂ ಸಾಂಗ್ ಬಗ್ಗೆ ಏನು ಹೇಳೋಕೆ ಇಷ್ಟ ಪಡ್ತೀರಾ

ಮಲ್ಲಿಗೆ ಹೂವಾ ನಾನು ಮಾಡಿರೋ ಮೊದಲ ಆಲ್ಬಂ ಸಾಂಗ್. ಸಿನಿಮಾ ಹಾಡುಗಳಲ್ಲಿ ಸುದೀಪ್ ಅವರ ಪಟಾಕಿ ಪೋರಿಯಲ್ಲಿ ಕಾಣಿಸಿಕೊಂಡಿದ್ದೇನೆ. ಆದರೆ ಮಲ್ಲಿಗೆ ಹೂವಾ ಹಾಡಿನ ಟ್ಯೂನ್ ಚೆನ್ನಾಗಿತ್ತು.

ಇದನ್ನೂ ಓದಿ: Gichi GiliGili: ಗಿಚ್ಚಿ ಗಿಲಿಗಿಲಿ ಗ್ರಾಂಡ್ ಫಿನಾಲೆಗೆ ಬರ್ತಿದ್ದಾರೆ ಕನಸಿನ ರಾಣಿ! ಯಾರು ಗೆಲ್ತಾರೆ ನಗುವಿನ ಟ್ರೋಫಿ?

ಈ ಕಾರಣಕ್ಕೇನೆ ಒಪ್ಪಿಕೊಂಡು ಸಿಂಗಪೂರ್​ಗೂ ಹೋಗಿ ಚಿತ್ರೀಕರಿಸಿದೆವು. ಕಡಿಮೆ ಜನ, ಕಡಿಮೆ ಸಮಯದಲ್ಲಿಯೇ ಚಿತ್ರೀಕರಿಸಿಕೊಂಡು ಬಂದೆವು. ಇದೂ ಖುಷಿ ಕೊಡ್ತು.

Ashika Ranganath talk about her first SIIMA Award
ಆಶಿಕಾ ರಂಗನಾಥ್ ಮಸ್ತ್ ಪೋಸ್


ನಿಮ್ಮ ಮುಂದಿನ ಸಿನಿಮಾ ಪ್ರಾಜೆಕ್ಟ್ಸ್ ಯಾವವು?

ಇಷಾನ್ ಜೊತೆಗಿನ ರೆಮೋ ಕಂಪ್ಲೀಟ್ ಆಗಿದೆ. ರಿಲೀಸ್ ಗೆ ರೆಡಿ ಇದೆ. ಪುನಿತ್ ಪಿಆರ್​ಕೆ ಸಂಸ್ಥೆಯ ವೋಟ್ ಚಿತ್ರವೂ ರಿಲೀಸ್​ಗೆ ರೆಡಿ ಇದೆ. ಅಥರ್ವ ಜೊತೆಗಿನ ತಮಿಳು ಸಿನಿಮಾ ರಿಲೀಸ್ ಗೆ ಬಂದಿದೆ.

Harnaaz Kaur Sandhu: ಧೂಳೆಬ್ಬಿಸ್ತಿದೆ ಹರ್ನಾಜ್‌ ಕೌರ್‌ ಸಂಧು ಫೋಟೋಸ್; ನೆಟ್ಟಿಗರಂತೂ ಫುಲ್‌ ಫಿದಾ

ತಮಿಳಿನಲ್ಲೂ ಇನ್ನೂ ಒಂದು ಸಿನಿಮಾ ಚಿತ್ರೀಕರಣ ನಡೀತಾ ಇದೆ. ತೆಲುಗು ಒಂದು ಮಾಡಿದ್ದೇನೆ. ಅಧಿಕೃತವಾಗಿಯೇ ಅದರ ರಿಲೀಸ್ ಡೇಟ್ ಅನೌನ್ಸ್ ಆಗಬೇಕಿದೆ. ಕನ್ನಡದಲ್ಲಿ ಗತವೈಭವ ಶೂಟಿಂಗ್ ನಡೀತಾ ಇದೆ.

ಕನ್ನಡದ ಹುಡುಗಿ ಆಶಿಕಾ ರಂಗನಾಥ್ ಪ್ರಶಸ್ತಿ ಪಡೆದ ಖುಷಿಯಲ್ಲಿದ್ದಾರೆ. ತಮ್ಮ ಶ್ರಮಕ್ಕೆ ಒಳ್ಳೆ ಪ್ರತಿಫಲವೇ ಸಿಕ್ಕಿದೆ ಅಂತಲೂ ಹೆಮ್ಮೆಪಡುತ್ತಿದ್ದಾರೆ.
First published: