Ashika Tamil Film: ನನ್ನ ನೆಚ್ಚಿನ ಹೀರೋ ಸಿನಿಮಾಗೆ ನಾನೇ ಹೀರೋಯಿನ್; ಸಿದ್ಧಾರ್ಥ್-ಆಶಿಕಾ ಹೊಸ ಲವ್ ಸ್ಟೋರಿ

ತಮಿಳಿನ ಇನ್ನೂ ಹೆಸರಿಡದ ಚಿತ್ರಕ್ಕೆ ಸೈನ್ ಮಾಡಿರೋ ಆಶಿಕಾ ರಂಗನಾಥ್ ತುಂಬಾ ಖುಷಿಯಲ್ಲಿದ್ದಾರೆ. ತಮ್ಮ ನೆಚ್ಚಿನ ನಾಯಕ ನಟ ಸಿದ್ಧಾರ್ಥ್ ಜೊತೆಗೆ ಸಿನಿಮಾ ಮಾಡ್ತಿರೋ ಇವರ ಸಂತೋಷಕ್ಕೆ ಪಾರವೇ ಇಲ್ಲ.

ಆಶಿಕಾ ರಂಗನಾಥ್-ಸಿದ್ಧಾರ್ಥ ಮೊದಲ ತಮಿಳು ಸಿನಿಮಾ

ಆಶಿಕಾ ರಂಗನಾಥ್-ಸಿದ್ಧಾರ್ಥ ಮೊದಲ ತಮಿಳು ಸಿನಿಮಾ

  • Share this:
ಚಂದನವನದ ಚೆಲುವೆ ನಾಯಕಿ ನಟಿ ಆಶಿಕಾ ರಂಗನಾಥ್ (Ashika Ranganath) ಚುಟು ಚುಟು ಅಂತಲೇ ಇನ್ನೂ ಕಿಕ್ ಕೊಡ್ತಾ ಇದ್ದಾರೆ. ಆದರೆ ಅದರ ಮಧ್ಯದಲ್ಲಿ ಮಲ್ಲಿಗೆ ಹೂವಾ ಮೂಡಿಸಿ ಬೇರೆ ಫೀಲ್ ಅನ್ನೆ ಕೊಟ್ಟಿದ್ದಾರೆ. ಹೌದು, ಆಶಿಕಾ ರಂಗನಾಥ್ ಬೇರೆ ಬೇರೆ ಪ್ರೋಜೆಕ್ಟ್​ಗಳನ್ನ ಮಾಡುತ್ತಲೇ ಇದ್ದಾರೆ. ಈಗ ಫಸ್ಟ್ ಟೈಮ್ ತಮ್ಮ ಫೇವರಿಟ್ ನಾಯಕ ನಟನ ಜೊತೆಗೆ ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತಿದ್ದಾರೆ. ತಮಿಳಿನ (Tamil Movie) ಇನ್ನೂ ಹೆಸರಿಡದ ಚಿತ್ರಕ್ಕೆ ಸೈನ್ ಮಾಡಿರೋ ಆಶಿಕಾ ರಂಗನಾಥ್ ತುಂಬಾ ಖುಷಿಯಲ್ಲಿದ್ದಾರೆ. ತಮ್ಮ ನೆಚ್ಚಿನ ನಾಯಕ ನಟ ಸಿದ್ಧಾರ್ಥ್ (Siddharth) ಜೊತೆಗೆ ಸಿನಿಮಾ ಮಾಡ್ತಿರೋ ಇವರ ಸಂತೋಷಕ್ಕೆ ಪಾರವೇ ಇಲ್ಲ. ಅಷ್ಟು ಹ್ಯಾಪಿ ಆಗಿರೋ ಆಶಿಕಾ ರಂಗನಾಥ್ ತಮ್ಮ ಈ ಹೊಸ ಪ್ರೋಜೆಕ್ಟ್ ಕುರಿತು ನಮ್ಮ ಜೊತೆಗೆ ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.

ಆಶಿಕಾ ರಂಗನಾಥ್ ಕನ್ನಡದಲ್ಲಿ ಒಂದು ಬೇರೆ ಸ್ಥಾನವನ್ನ ಕ್ರಿಯೇಟ್ ಮಾಡಿಕೊಂಡವರು. ತಮ್ಮದೇ ಶೈಲಿಯಲ್ಲಿಯೇ ಸಾಗುತ್ತಿರೋ ಆಶಿಕಾ ರಂಗನಾಥ್, ಸೋಷಿಯಲ್ ಮೀಡಿಯಾದಲ್ಲೂ ಆಕ್ಟೀವ್ ಆಗಿರುತ್ತಾರೆ. ವಿಶೇಷ ಅನಿಸೋ ಡ್ಯಾನ್ಸ್, ತುಂಬಾ ಇಂಟ್ರಸ್ಟಿಂಗ್ ಅನಿಸೋ ರೀಲ್ಸ್ ಅನ್ನೂ ಮಾಡ್ತಾನೇ ಇರುತ್ತಾರೆ.

ಚುಟು ಚುಟು ಬೆಡಗಿ, ಮಲ್ಲಿಗೆ ಹುಡುಗಿ ಆಶಿಕಾ ಫುಲ್ ಖುಷ್
ಸಿನಿಮಾ, ರೀಲ್ಸ್ ಹಾಗೂ ಡ್ಯಾನ್ಸ್ ಎಲ್ಲವೂ ಇಷ್ಟಪಡೋ ಆಶಿಕಾ, ಮಲ್ಲಿಗೆ ಹೂವಾ ಹಾಡಿನ ಮೂಲಕ ಹೊಸ ಕಿಚ್ಚು ಹಚ್ಚಿದ್ದಾರೆ. ತಮ್ಮ ಮೊದಲ ಈ ಕನ್ನಡ ಆಲ್ಬಂನಿಂದಲೂ ಚುಟು ಚುಟು ಖ್ಯಾತಿಯಿಂದ ಈಗ ಮಲ್ಲಿಗೆ ಹುಡುಗಿ ಆಗಿದ್ದಾರೆ. ಮದಗಜ ಚಿತ್ರದ ಅಭಿನಯಕ್ಕೆ ಸೈಮಾ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದು ಫುಲ್ ಖುಷಿ ಮೂಡ್ ನಲ್ಲಿಯೇ ಇದ್ದಾರೆ.

Actress Ashika Ranganath New Movie with Actor Siddarth
ಆಶಿಕಾ ತಮಿಳು ಸಿನಿಮಾದ ಟೀಮ್


ತುಂಬಾ ಸಂತೋಷದಲ್ಲಿಯೇ ಇರೋ ಆಶಿಕಾ ರಂಗನಾಥ್ ಕನ್ನಡ ಸೇರಿದಂತೆ ತೆಲುಗು ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. ತಮ್ಮ ಚಿತ್ರ ಬದಕಿನಲ್ಲಿ ಬೇರೆ ಬೇರೆ ಪಾತ್ರಗಳಲ್ಲಿ ಕಾಣಿಸಿಕೋ ಇಷ್ಟ ಪಡೋ ಆಶಿಕಾ ರಂಗನಾಥ್ ಸದ್ಯ ತಮ್ಮ ನೆಚ್ಚಿನ ನಾಯಕ ನಟ ಸಿದ್ಧಾರ್ಥ್ ಜೊತೆಗೆ ನಟಿಸ್ತಿರೋ ಖುಷಿಯಲ್ಲಿ ತೇಲುತ್ತಿದ್ದಾರೆ.

ಇದನ್ನೂ ಓದಿ: Yash - Radhika Pandit: ಸೈಮಾದಲ್ಲಿ ಮಿಂಚಿದ ಸ್ಯಾಂಡಲ್​ವುಡ್ ಸ್ಟಾರ್ ಜೋಡಿ! ಹೀಗಿತ್ತು ಯಶ್-ರಾಧಿಕಾ ಮೋಡಿ

ಸಿದ್ಧಾರ್ಥ್ ಜೊತೆಗೆ ಆಶಿಕಾ  ಮೊದಲ ತಮಿಳು ಸಿನಿಮಾ
ಬೊಮ್ಮರಿಲ್ಲು, ನಿವಸ್ತಾನಂಟೆ ನಾ ವದ್ದಾನಾ ಸಿನಿಮಾ ಅಂದ್ರೆ ಆಶಿಕಾಗೆ ತುಂಬಾ ಇಷ್ಟ. ಸಿದ್ಧಾರ್ಥ್ ಅಭಿನಯದ ಈ ಸಿನಿಮಾಗಳನ್ನ ಅದೆಷ್ಟು ಬಾರಿ ನೋಡಿದ್ದೇನೋ ಲೆಕ್ಕವೇ ಇಲ್ಲ ಅಂತಲೂ ಹೇಳಿಕೊಂಡಿದ್ದಾರೆ. ಸಿದ್ಧಾರ್ಥ್ ಸಿನಿಮಾಗಳನ್ನ ನೋಡ್ತಾ, ಇಷ್ಟಪಡ್ತಾ ಇದ್ದ ಆಶಿಕಾ ಈಗ ಅದೇ ಹೀರೋನ ನಾಯಕಿಯಾಗಿ ಖುಷಿ ಪಡ್ತಿದ್ದಾರೆ.

Actress Ashika Ranganath New Movie with Actor Siddarth
ಆಶಿಕಾ-ಸಿದ್ಧಾರ್ಥ್ ಚಿತ್ರದ ಮುಹೂರ್ತದ ಸಮಯ


ಸಿದ್ಧಾರ್ಥ್ ಮತ್ತು ಆಶಿಕಾ ಅಭಿನಯದ ಈ ಚಿತ್ರಕ್ಕೆ ಇನ್ನೂ ಶೀರ್ಷಿಕೆ ಇಟ್ಟಿಲ್ಲ. ಈಗಷ್ಟೇ ಚೆನ್ನೈಯಲ್ಲಿ ಈ ಚಿತ್ರಕ್ಕೆ ಮುಹೂರ್ತ ಮುಗಿದಿದೆ. ಸಿನಿಮಾ ತಂಡಗಳ ಹೆಸರು ಕೂಡ ಅನೌನ್ಸ್ ಆಗಿದೆ. ಸರಳವಾಗಿ ಸಿನಿಮಾ ಮುಹೂರ್ತ ಕೂಡ ಈಗ ಆಗಿದೆ.

ಸಿದ್ಧಾರ್ಥ್-ಆಶಿಕಾ ಲವ್ ಸ್ಟೋರಿ ಸಿನಿಮಾದ ಡೈರೆಕ್ಟರ್ ಯಾರು
ಪ್ರೇಮ ಕಥೆಯನ್ನೆ ಆಧರಿಸಿರೋ ಈ ಸಿನಿಮಾವನ್ನ ಎನ್.ರಾಜಶೇಖರ್ ನಿರ್ದೇಶನ ಮಾಡುತ್ತಿದ್ದಾರೆ. ಗಿಬ್ರಾನ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಆಶೋಕ್ ಆರ್. ಕಥೆ ಬರೆದಿದ್ದಾರೆ.

ಇದನ್ನೂ ಓದಿ: Director Nagashekar: ಸಂಜು ವೆಡ್ಸ್ ಗೀತಾ ಕಥೆ ಹೇಳಿದ ನಾಗಶೇಖರ್ ಈಗ ಏನ್ ಮಾಡ್ತಿದ್ದಾರೆ?

ಈಗಾಗಲೇ ಚಿತ್ರದ ಚಿತ್ರೀಕರಣ ಶುರು ಆಗಿದೆ. ಆಶಿಕಾ ಖುಷಿ ಡಬಲ್ ಆಗಿದೆ. ತಮ್ಮ ನೆಚ್ಚಿನ ನಾಯಕ ಸಿದ್ಧಾರ್ಥ್ ಜೊತೆಗೆ ಮುಹೂರ್ತದ ಟೈಮ್​ನಲ್ಲಿ ಒಂದಷ್ಟು ಕ್ಯಾಮೆರಾಗೆ ಪೋಜ್ ಕೂಡ ಕೊಟ್ಟಿದ್ದಾರೆ.
First published: