ಕನ್ನಡದ ಚೆಲುವಾಂತ ಚೆಲುವೆಯರಲ್ಲಿ ಅಪ್ಪಟ ಸಹಜ ಸುಂದರಿ ಯಾರು? ಸದ್ಯಕ್ಕೆ ಕೇಳಿ ಬರ್ತಿರೋ ಹೆಸರು ಆಶಿಕಾ ರಂಗನಾಥ್ (Ashika Ranganath) ಅಂದ್ರೆ ತಪ್ಪಿಲ್ಲ ಬಿಡಿ. ಕನ್ನಡದ ಈ ಹುಡ್ಗಿಯ ಮುಗುಳು ನಗೆಗೆ ಕಳೆದು ಹೋಗದವರೇ ಇಲ್ಲ. ಚುಟು ಚುಟು (Chutu Chutu) ಅಂತಲೇ ತಮ್ಮ ಚೆಲುವನ್ನ ಎಲ್ಲೆಡೆ ಇನ್ನಷ್ಟು ಮತ್ತಷ್ಟು ಅನ್ನೋ ಹಾಗೆ ಪಸರಿಸಿದ ಆಶಿಕಾ,ಈಗ ಮಲ್ಲಿಗೆಯ ಪರಿಮಳ ಸೂಸುತ್ತಿದ್ದಾರೆ. ಆದರೆ ಇದು ಸಿನಿಮಾ (Cinema) ಪರಿಮಳ ಅಲ್ಲವೇ ಅಲ್ಲ. ಇದು ಕನ್ನಡ (Kannada) ಮತ್ತು ಹಿಂದಿಯಲ್ಲಿ (Hindi Song) ಬರ್ತಿರೋ ಕನ್ನಡದ ಮಲ್ಲಿಗೆ ಹೂವಾ ಆಲ್ಬಂ ಕಥೆ. ಇದರಲ್ಲಿ ನಟಿ ಆಶಿಕಾ ರಂಗನಾಥ್ ಪ್ರಮುಖ ಆಕರ್ಷಣೆ ಅಂದ್ರೆ ಯಾರೂ ಬೇಸರ ಮಾಡಿಕೊಳ್ಳೋದೇ ಇಲ್ಲ.
ಕನ್ನಡದ ಮಲ್ಲಿಗೆಗೆ ಕನ್ನಡದ ಚುಟು ಚುಟು ಚೆಲುವೆಯ ರಂಗು
ಆಶಿಕಾ ರಂಗನಾಥ್ ಮೊಟ್ಟ ಮೊದಲ ಸಲ ಕನ್ನಡದ ಆಲ್ಬಂವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾವೊಂದರ ಹಾಡಿಗೆ ಇರೋ ಎಲ್ಲ ಕ್ವಾಲಿಟಿಗಳೂ ಈ ಒಂದು ಆಲ್ಬಂಗೆ ಇದೆ. ಕಾರಣ, ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿಯೇ ದೂರದ ಸಿಂಗಪೂರ್ ಮತ್ತು ಮಲೆಷಿಯಾದ ಸಮುದ್ರದ ಮೇಲೆ ಟ್ರಾವಲ್ ಮಾಡಿರೋ ಬೃಹತ್ ಕ್ರೂಸ್ ನಲ್ಲಿಯೇ ಇಡೀ ಹಾಡನ್ನ ಚಿತ್ರೀಕರಿಸಲಾಗಿದೆ.
ಆಶಿಕಾ ರಂಗನಾಥ್ ಹಿಂದೆ ಬಿದ್ದ ಕನ್ನಡದ ಆಲ್ ಓಕೆ ಅಲೋಕ್
ಆಶಿಕಾ ರಂಗನಾಥ್ ಮತ್ತು ರಾಪರ್ ಆಲ್ ಓಕೆ ಅಲೋಕ್ ಅಭಿನಯಿಸಿರೋ ಈ ಗೀತೆ ಕಲರ್ ಫುಲ್ ಆಗಿಯೇ ಇದೆ. ಗಾಯನ ಮತ್ತು ಸಂಗೀತ ಹೀಗೆ ಎರಡನ್ನೂ ನಿಭಾಯಿಸಿರೋ ಆಲ್ ಓಕೆ ಅಲೋಕ್ ಇಲ್ಲಿ ಕನ್ನಡದ ಯುವ ಮನಸುಗಳಿಗೆ ಒಂದ್ ಒಳ್ಳೆ ಹಾಡನ್ನೇ ಕೊಟ್ಟಿದ್ದಾರೆ. ಇಂತಹ ಈ ಹಾಡಲ್ಲಿ ಪ್ರಮುಖ ಸೆಳೆತ ಮತ್ತು ವಿಶೇಷ ಅಂದ್ರೆ ಅದು ಆಶಿಕಾ ರಂಗನಾಥ್ ಇದ್ದಾರೆ.
ಮಲ್ಲಿಗೆ ಹೂವಾ ಹಾಡಿನಲ್ಲಿ ಆಶಿಕಾ ರಂಗನಾಥ್ ಗ್ಲಾಮರಸ್ ಕಿಕ್
ಹೌದು. ಆಶಿಕಾ ರಂಗನಾಥ್ ಇಲ್ಲಿ ಗ್ಲಾಮರಸ್ ಕಿಕ್ ಅನ್ನೆ ಕೊಡ್ತಿದ್ದಾರೆ. ತಮ್ಮ ಸಹಜ ಸೌಂದರ್ಯದಿಂದಲೇ ಇಲ್ಲಿ ಗಮನ ಸೆಳೆಯೋ ಕೆಲಸವನ್ನೂ ಮಾಡಿದ್ದಾರೆ. ಆದರೆ ಸಾಮಾನ್ಯವಾಗಿ ಹೀರೋಯಿನ್ಗಳು ಸಿಂಗಲ್ ಆಲ್ಬಂ ಹಾಡಿನಲ್ಲಿ ಕಾಣಿಸಿಕೊಳ್ಳೋದು ಕಡಿಮೆ. ಆದರೂ ಆಶಿಕಾ ರಂಗನಾಥ್ ಇಲ್ಲಿ ಕಾಣಿಸಿಕೊಂಡು ಸಿನಿ ಪ್ರಿಯರಿಗೆ ಹಾಗೂ ಸಂಗೀತ ಪ್ರೇಮಿಗಳಿಗೆ ಒಂದು ರೀತಿ ಹೊಸ ಕಿಕ್ ಅನ್ನೇ ಕೊಡ್ತಾಯಿದ್ದು ತಮ್ಮ ವಿಶಿಷ್ಟ ನಗು ಹಾಗೂ ಚೆಲುವಿನಿಂದ ಆಶಿಕಾ ಇಲ್ಲೂ ಯುವ ಮನಸುಗಳಲ್ಲಿ ಗ್ಲಾಮರಸ್ ನಶೆ ಏರಿಸಲಿದ್ದಾರೆ.
ಕನ್ನಡದ ಆಶಿಕಾ ರಂಗನಾಥ್ ಸೌಂದರ್ಯವನ್ನ ಸೆರೆ ಹಿಡಿದ ಅರ್ಜುನ್ ಶೆಟ್ಟಿ
ಬೃಹತ್ ಕ್ರೂಸ್ ಮೇಲೆ ಚಿತ್ರಿಸಿದ ಹಾಡಲ್ಲಿ ಕ್ಯಾಮೆರಾಮೆನ್ ಅರ್ಜುನ್ ಶೆಟ್ಟಿ, ನಾಯಕಿ ಆಶಿಕಾ ರಂಗನಾಥ್ ಅವರನ್ನ ಚೆಲುವನ್ನೆಲ್ಲ ಅದ್ಭುತವಾಗಿಯೇ ಸೆರೆ ಹಿಡಿದಿದ್ದಾರೆ. ಅದು ಒಂದು ರೀತಿ ಕನ್ನಡದ ಹಾಡಿನ ಮೆರಗನ್ನೂ ಹೆಚ್ಚಿಸಿದೆ. ಜೊತೆಗೆ ಪ್ರೇಕ್ಷಕರ ದಿಲ್ ಅಲ್ಲಿ ಹಲ್ ಚಲ್ ಅನ್ನೂ ಎಬ್ಬಿಸಿದೆ. ಇಂತಹ ಈ ಒಂದು ಗೀತೆಯಲ್ಲಿ ಆಶಿಕಾ ರಂಗನಾಥ್ ಕಾಣಿಸಿಕೊಂಡಿದ್ದಾರೆ.
ಸೆಪ್ಟೆಂಬರ್-8 ರಂದು ಮಲ್ಲಿಗೆ ಹೂವಾ ಇಡೀ ಹಾಡು ರಿಲೀಸ್
ಮಲ್ಲಿಗೆ ಹೂವಾ ಹಾಡಿನ ಟೀಸರ್ ಈಗಾಗಲೇ ಸಂಗೀತ ಪ್ರೇಮಿಗಳಲ್ಲಿ ಸೆಳೆತ ಉಂಟು ಮಾಡಿದೆ. ಇಡೀ ಹಾಡನ್ನ ನೋಡಲೇಬೇಕು ಅನ್ನೋ ಕುತೂಹಲ ಕೂಡ ಹುಟ್ಟಿಸಿದೆ. ಅದರಂತೆ ಇದೇ ಸೆಪ್ಟೆಂಬರ್-8 ರಂದು ಮಲ್ಲಿಗೆ ಹೂವಾ ಹಾಡು ರಿಲೀಸ್ ಆಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ