• Home
  • »
  • News
  • »
  • entertainment
  • »
  • Ashika Ranganath: ಸೆಟ್​ನಲ್ಲಿ ಕುಡಿದು ಮಧ್ಯದ ಬೆರಳು ತೋರಿಸಿ ಕಿರಿಕ್​ ಮಾಡಿದ ಆಶಿಕಾ! ವಿಡಿಯೋ ವೈರಲ್​

Ashika Ranganath: ಸೆಟ್​ನಲ್ಲಿ ಕುಡಿದು ಮಧ್ಯದ ಬೆರಳು ತೋರಿಸಿ ಕಿರಿಕ್​ ಮಾಡಿದ ಆಶಿಕಾ! ವಿಡಿಯೋ ವೈರಲ್​

ಈ ಬಗ್ಗೆ ಏನ್ ಹೇಳ್ತಾರೆ ಆಶಿಕಾ ರಂಗನಾಥ್?

ಈ ಬಗ್ಗೆ ಏನ್ ಹೇಳ್ತಾರೆ ಆಶಿಕಾ ರಂಗನಾಥ್?

ಆಶಿಕಾ ರಂಗನಾಥ್ ವೈರಲ್ ವೀಡಿಯೋ ಬಗ್ಗೆ ನ್ಯೂಸ್-18 ಕನ್ನಡ ಡಿಜಿಟಲ್​ಗೆ ರಿಯಾಕ್ಟ್ ಮಾಡಿದ್ದಾರೆ. ಈ ವೀಡಿಯೋ ರೆಮೋ ಸಿನಿಮಾದ ವೀಡಿಯೋನೆ ಆಗಿದೆ. ಇದು ರಿಯಲ್ ಅಲ್ಲ. ರೀಲ್ ವೀಡಿಯೋ. ಅದು ಹೇಗೆ ಹೊರಗಡೆ ಬಂತೋ ಗೊತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ.

  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡದ ಪಟಾಕಿ ಪೋರಿ ಆಶಿಕಾ (Ashika Ranganath) ರಂಗನಾಥ್ ಒಂದು ವೀಡಿಯೋ ಭಾರೀ ಸೌಂಡ್ ಮಾಡುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಎಲ್ಲೆ ನೋಡಿದ್ರೂ ಅಷ್ಟೇನೆ. ಆಶಿಕಾ (Ashika Bold Video) ಬೋಲ್ಡ್ ವೀಡಿಯೋ ಕಾಣಿಸುತ್ತದೆ. ಈ ವೀಡಿಯೋದ ತೀವ್ರತೆ ಎಷ್ಟು ಇದೆ ಅಂದ್ರೆ, ಇದು ರೀಲಾ ? ರಿಯಲ್ಲಾ (Reel or Real) ಅನ್ನೋ ಮಟ್ಟಿಗೆ ಇದು ವೈರಲ್ ಆಗಿದೆ. ಆಶಿಕಾ ರಂಗನಾಥ್ ಈ ಒಂದು ವೀಡಿಯೋದಲ್ಲಿ ಕುಡಿದ ಅಮಲಿನಲ್ಲಿ ತೂರಾಡೋ ದೃಶ್ಯವೇ ಇದೆ. ಕೊನೆಗೆ ಮಧ್ಯೆದ ಬೆರಳನ್ನ ತೋರಿಸಿ ಹೊರಟು ಹೋಗುವ ದೃಶ್ಯವೂ ಇದೇ ವೀಡಿಯೋದಲ್ಲಿಯೇ ಇದೆ. ಸಿನಿಮಾ (Cinema Shooting) ಶೂಟಿಂಗ್ ಬಗ್ಗೆ ಗೊತ್ತಿಲ್ಲದೇ ಇರೋರು ಇದು ರಿಯಲ್ ವೀಡಿಯೋ ಅಂತಲೇ ಒಂದ್ ಅರೆಕ್ಷಣ ಅಂದುಕೊಂಡು ಬಿಡುತ್ತಾರೆ. ಆದರೆ ಅಸಲಿ ಸತ್ಯ ಬೇರೆನೇ ಇದೆ. ಅದು ಇಲ್ಲಿದೆ ಓದಿ.


ಪಟಾಕಿ ಪೋರಿಯ ಬೋಲ್ಡ್ ವೀಡಿಯೋ ವೈರಲ್!
ಕನ್ನಡದ ನಟಿ ಆಶಿಕಾ ರಂಗನಾಥ್ ಸಿನಿಮಾ ಮಾಡಿಕೊಂಡು ಹಾಯಾಗಿಯೇ ಇದ್ದವರು. ರೀಲ್ಸ್ ನಲ್ಲಿ ಕುಣಿದು ಕುಪ್ಪಳಿಸಿ ಖುಷಿ ಪಟ್ಟರು. ಇಲ್ಲಿವರೆಗೂ ಆಶಿಕಾ ರಂಗನಾಥ್ ರೀಲ್ಸ್ ಗಳು ಸಿನಿಮಾ ಹಾಡುಗಳು ಮಾತ್ರ ವೈರಲ್ ಆಗುತ್ತಿದ್ದವು.


Kannada Actress Ashika Ranganath Film Video was now got viral
ಪಟಾಕಿ ಪೋರಿಯ ಬೋಲ್ಡ್ ವೀಡಿಯೋ ವೈರಲ್!


ಆದರೆ ಈಗ ಒಂದು ವೀಡಿಯೋ ವೈರಲ್ ಆಗಿ ಬಿಟ್ಟಿದೆ. ಇದು ಕುಡಿದ ಅಮಲಿನಲ್ಲಿ ಆಶಿಕಾ ತೂರಾಡೋ ವೀಡಿಯೋನೇ ಆಗಿದೆ. ಇದನ್ನ ನೋಡಿ ಎಂತವರಿಗೂ ಏನಪ್ಪ ಇದು ಕನ್ನಡದ ಹುಡುಗಿ ಹೀಗೆ ಮಾಡಿದ್ದಾಳೆ ಅಂತ ಅನಿಸಬಿಡುತ್ತದೆ.


ಆಶಿಕಾ ರಂಗನಾಥ್ ಮಧ್ಯೆದ ಬೆರಳು ತೋರಿಸಿ ಹೊರಟೇ ಬಿಟ್ಟರು!
ಆಶಿಕಾ ರಂಗನಾಥ್ ಮದ್ಯದ ಅಮಲಿನಲ್ಲಿ ತೂರಾಡಿದ್ದಾರೆ. ಕುಡಿತದ ನಶೆ ಇನ್ನಿಲ್ಲದಂತೆ ಮೈ-ಮನ ಆವರಿಸಿಕೊಂಡಿದೆ. ಒಂಚೂರು ಯಾವುದರ ಪರಿವೇ ಇಲ್ಲ. ಕುಡಿದು ರೋಡ್​ ನಲ್ಲಿ ತೂರಾಡ್ತಿದ್ದಾರೆ.




ಅದ್ಯಾರೋ ಈ ಬೆಡಗಿಯ ಈ ದೃಶ್ಯ ಸೆರೆ ಹಿಡಿಯುತ್ತಿದ್ದಾರೆ. ಅದಕ್ಕೆ ಫುಲ್ ಗರಂ ಆಗಿರೋ ಆಶಿಕಾ ರಂಗನಾಥ್ ರೊಚ್ಚಿಗೆದಿದ್ದಾರೆ. ಅದೇ ಸಿಟ್ಟಿನಲ್ಲಿಯೇ ಕ್ಯಾಮೆರಾ ಆಫ್​ ಮಾಡಿ ಎಂದು ಹೇಳಿ, ಮಧ್ಯೆದ ಬೆರಳು ತೋರಿಸಿ ಹೊರಟೇ ಹೋಗಿದ್ದಾರೆ.


ಆಶಿಕಾ ರಂಗನಾಥ್ ಎಣ್ಣೆ ಏಟಿನ ಈ ವರ್ತನೆ ರೀಲಾ-ರಿಯಲ್ಲಾ?
ಆಶಿಕಾ ರಂಗನಾಥ್ ವೈರಲ್ ವೀಡಿಯೋ ಬಗ್ಗೆ ನ್ಯೂಸ್-18 ಕನ್ನಡ ಡಿಜಿಟಲ್​ಗೆ ರಿಯಾಕ್ಟ್ ಮಾಡಿದ್ದಾರೆ. ಈ ವೀಡಿಯೋ ರೆಮೋ ಸಿನಿಮಾದ ವೀಡಿಯೋನೆ ಆಗಿದೆ. ಇದು ರಿಯಲ್ ಅಲ್ಲ. ರೀಲ್ ವೀಡಿಯೋ. ಅದು ಹೇಗೆ ಹೊರಗಡೆ ಬಂತೋ ಗೊತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ.


ವೈರಲ್ ವೀಡಿಯೋವನ್ನ ತುಂಬಾ ಒಂಚೂರು ಗಮನಿಸಿದ್ರೆ, ನಿಮಗೆ ಗೊತ್ತಾಗಿಯೇ ಬಿಡುತ್ತದೆ. ಯಾಕೆಂದ್ರೆ, ಸಿನಿಮಾ ಸೆಟ್​ನಲ್ಲಿರೋ ಲೈಟ್​ಗಳು ಎಲ್ಲವೂ ಇಲ್ಲಿ ಕಾಣಿಸುತ್ತವೆ. ಸಿನಿಮಾ ಟೀಮ್​​ನ ಇತರ ಸದಸ್ಯರು ಇಲ್ಲಿ ಅಕ್ಕ-ಪಕ್ಕದಲ್ಲಿಯೇ ನಿಂತಿದ್ದಾರೆ.


Kannada Actress Ashika Ranganath Film Video was now got viral
ಆಶಿಕಾ ರಂಗನಾಥ್ ಎಣ್ಣೆ ಏಟಿನ ಈ ವರ್ತನೆ ರೀಲಾ-ರಿಯಲ್ಲಾ?


ರೇಮೊ ಸಿನಿಮಾದ ಪ್ರಮೋಷನ್​ ಗಾಗಿಯೇ ಹೀಗೆ ಮಾಡಿದ್ರೇ?
ಈ ಒಂದು ಪ್ರಶ್ನೆಗೆ ಡೈರೆಕ್ಟರ್ ಪವನ್ ಒಡೆಯರ್ ಅವರಿಂದಲೂ ಯಾವುದೇ ಉತ್ತರ ಬರೋದಿಲ್ಲ. ಆಶಿಕಾ ಕೂಡ ಈ ಬಗ್ಗೆ ಏನೂ ಹೇಳೋದಿಲ್ಲ. ಅದು ಅವರಿಗೆ ಗೊತ್ತಿದಿಯೋ ಇಲ್ವೋ ಅನ್ನೋದೇ ಡೌಟು. ಇರಲಿ ಬಿಡಿ, ಸಿನಿಮಾ ರಿಲೀಸ್ ಟೈಮ್​ ನಲ್ಲಿ ಇಂತಹ ವೈರಲ್ ಎಡವಟ್ಟುಗಳು ಆಗ್ತಾನೇ ಇರುತ್ತವೆ.


ರೇಮೊ ಸಿನಿಮಾದ ಪ್ರಚಾರ ಆಗ್ತಾನೇ ಇದೆ. ಸ್ವತಃ ಡೈರೆಕ್ಟರ್ ಸಿನಿಮಾದ ಕಂಟೆಂಟ್ ಅನ್ನ ವ್ಯವಸ್ಥಿತ ದಾರಿಯಲ್ಲಿಯೇ ಬಿಟ್ಟುಕೊಡುತ್ತಿದ್ದಾರೆ. ಆದರೂ ಆಶಿಕಾ ರಂಗನಾಥ್ ವೀಡಿಯೋ ಲೀಕ್ ಆಗಿ ಬಿಟ್ಟಿದೆ. ಶೂಟಿಂಗ್ ಟೈಮ್​​ ನಲ್ಲಿಯ ಈ ವೀಡಿಯೋ ಲೀಕ್ ಆಗಿ ಬಿಟ್ಟಿದೆ.


ಇದನ್ನೂ ಓದಿ: Nayanthara: ಪ್ರಭುದೇವ ಜೊತೆ ಲಿವ್​ ಇನ್​ ಸಂಬಂಧದಲ್ಲಿದ್ದ ನಟಿ! ನಯನತಾರಾ ಪ್ರೀತಿ ಗಾಢವಾಗಿತ್ತು


ಇದನ್ನ ಯಾರು ಲೀಕ್ ಮಾಡಿದ್ರೋ ಏನೋ. ಸಿನಿಮಾ ರಿಲೀಸ್ ಆಗೋ ಮುಂಚೇನೆ ಹೀಗೆ ಆಗಿದೆ ಅಂತಲೂ ನಟಿ ಆಶಿಕಾ ರಂಗನಾಥ್ ಹೇಳಿಕೊಂಡಿದ್ದಾರೆ.
ರೇಮೊ ಸಿನಿಮಾ ಇದೇ ತಿಂಗಳ 25 ರಂದು ರಾಜ್ಯಾದ್ಯಂತ ಎಲ್ಲೆಡೆ ರಿಲೀಸ್ ಆಗುತ್ತಿದೆ. ಅದಕ್ಕೂ ಮೊದಲೇ ಆಶಿಕಾ ರಂಗನಾಥ್ ಅಭಿನಯಿಸಿದ ಎಣ್ಣೆ ಏಟಿನ ವೀಡಿಯೋ ವೈರಲ್ ಆಗಿ ಬಿಟ್ಟಿದೆ.

First published: