Sandalwood: ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ ನಟಿ! ನಿರ್ಮಾಪಕನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡ್ತಿದ್ದಾರೆ ಕಾವ್ಯ

ಚಿತ್ರರಂಗದಲ್ಲಿಯೂ ಕೂಡ ಗುರುತಿಸಿಕೊಂಡಿರುವ ನಟಿ ಕಾವ್ಯ ಅವರು ಯಶ್ ಅಭಿನಯದ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ, ಮುಗಿಲ್ ಪೇಟೆ ಹಾಗೂ ಇನ್ನು ಅನೇಕ ಸಿನಿಮಾಗಳಲ್ಲಿ ಅಭಿನಯಿಸಿದ್ದರು

ನಟಿ ಕಾವ್ಯ ಶಾ

ನಟಿ ಕಾವ್ಯ ಶಾ

  • Share this:
ಕಳೆದ ಎರಡು ವರ್ಷಗಳಿಂದ ಕಿರುತೆರೆ(Small Screen)ಯ ಹಾಗೂ ಬೆಳ್ಳಿತೆರೆಯ ಸಾಕಷ್ಟು ಸೆಲೆಬ್ರಿಟಿ(Celebrity)ಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೀಗೆ ಸಾಲು ಸಾಲಾಗಿ ಸಾಕಷ್ಟು ಸೆಲೆಬ್ರಿಟಿಗಳು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು ಸಾಮಾಜಿಕ ಜಾಲತಾಣ(Social Media)ದಲ್ಲಿ ಸಂತೋಷದ ಸುದ್ದಿಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಕಳೆದ ವರ್ಷ ಅಶ್ವಿನಿ ನಕ್ಷತ್ರದ ಖ್ಯಾತ ನಟಿ ಮಯೂರಿ(Mayuri), ಚಂದನ್ ಶೆಟ್ಟಿ(Chandan Shetty) ನಿವೇದಿತಾ ಗೌಡ, ಅಜಯ್), ಚಂದನ್ ಕವಿತ ಗೌಡ ಸೇರಿದಂತೆ ಸಾಕಷ್ಟು ಜನರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನು ಇತ್ತೀಚಿಗಷ್ಟೇ ನಟಿ ಶುಭಾ ಪೂಂಜಾ(Shuba Poonja) ಅವರು ಕೂಡ ತಮ್ಮ ಬಹುಕಾಲದ ಗೆಳೆಯನೊಂದಿಗೆ ಸಪ್ತಪದಿ ತುಳಿದಿದ್ದಾರೆ. ಇದೀಗ ಇವರ ಸಾಲಿಗೆ ಮತ್ತೋರ್ವ ಕನ್ನಡ ಕಿರುತೆರೆಯ ಖ್ಯಾತ ನಟಿ ಕೂಡ ಸೇರಿಕೊಂಡಿದ್ದಾರೆ. ಕನ್ನಡ ಕಿರುತೆರೆಯ ಮತ್ತೊಬ್ಬ ಖ್ಯಾತ ನಟಿ ಹಾಗೂ ನಿರೂಪಕಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ ಕಾವ್ಯಗೌಡ!

ಸಾಕಷ್ಟು ಜನ ಧಾರಾವಾಹಿಗಳಲ್ಲಿ ತಮ್ಮ ಜೊತೆ ಅಭಿನಯಿಸುವ ಸಹ ಕಲಾವಿದರುಗಳನ್ನು ಪ್ರೀತಿಸಿ ಮದುವೆಯಾದ ಉದಾಹರಣೆಗಳನ್ನು ನಾವು ನೋಡಬಹುದು. ಆದರೆ ಇವರು ಮಾತ್ರ ದಶಕಗಳಿಂದ ಕಿರುತೆರೆ ಹಾಗೂ ಸಿನಿಮಾ ನಿರ್ಮಾಪಕರನ್ನು ಪ್ರೀತಿಸುತ್ತಿದ್ದು ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇನ್ನು ಆ ನಟಿ ಮತ್ತ್ಯಾರು ಅಲ್ಲ ಕಾವ್ಯ ಶಾ. ಹೌದು, ಇವರು ನಟಿಯಾಗಿ ಹಾಗೂ ನಿರೂಪಕಿಯಾಗಿ ಗುರುತಿಸಿಕೊಂಡಿದ್ದಾರೆ. ಇವರು ಚಿ.ಸೌ. ಸಾವಿತ್ರಿ ಹಾಗೂ ಬಂಗಾರ ಸೇರಿದಂತೆ ಸಾಕಷ್ಟು ಧಾರವಾಹಿಗಳಲ್ಲಿ ಅಭಿನಯಿಸಿದ್ದಾರೆ. ಅಷ್ಟೇ ಅಲ್ಲದೆ ಕಸ್ತೂರಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ನಿರೂಪಕಿಯಾಗಿ ಕೂಡ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಕೆಜಿಎಫ್​ ಗತ್ತು ಇಡೀ ವಿಶ್ವಕ್ಕೇ ಗೊತ್ತು! ಗೂಗಲ್ ಮ್ಯಾಪ್​ನಲ್ಲೂ ರಾಕಿ ಭಾಯ್​ ಸಿನಿಮಾದೇ ಹವಾ..

ನಿಮಾರ್ಪಕರ ಜೊತೆ ಹಸೆಮಣೆ ಏರಲಿದ್ದಾರೆ ನಟಿ!

ಚಿತ್ರರಂಗದಲ್ಲಿಯೂ ಕೂಡ ಗುರುತಿಸಿಕೊಂಡಿರುವ ನಟಿ ಕಾವ್ಯ ಅವರು ಯಶ್ ಅಭಿನಯದ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ, ಮುಗಿಲ್ ಪೇಟೆ ಹಾಗೂ ಇನ್ನು ಅನೇಕ ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಹತ್ತು ವರ್ಷಗಳಿಂದ ಪ್ರೀತಿಸುತ್ತಿದ್ದ ಗೆಳೆಯನನ್ನೇ ಅವರು ಬಾಳ ಸಂಗಾತಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಏಪ್ರಿಲ್ ಎರಡನೇ ವಾರದಲ್ಲಿ ಬೆಂಗಳೂರಿನಲ್ಲಿ ವಿವಾಹ ಮಹೋತ್ಸವ ನಡೆಯಲಿದೆ.

ಇದನ್ನೂ ಓದಿ: ಸಿನಿಮಾ ಚೆನ್ನಾಗಿದ್ರೂ ಸಿಕ್ತಿಲ್ಲ ಥಿಯೇಟರ್​​.. `ಓಲ್ಡ್ ಮಾಂಕ್‘ಗೆ ಪರಭಾಷೆ ಚಿತ್ರಗಳಿಂದ ಸಮಸ್ಯೆ!

ವರನ್ಯಾರು ಗೊತ್ತಾ?

ಕಾವ್ಯ ಶಾ ಮದುವೆ ಆಗುತ್ತಿರುವ ಹುಡುಗ ವರುಣ್. ಮಾಧ್ಯಮ ಕ್ಷೇತ್ರದಲ್ಲೇ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಜತೆಗೆ ಕನ್ನಡದ ಬಹುತೇಕ ಸ್ಟಾರ್ ನಟರ ಜತೆ ಇವರಿಗೆ ಒಡನಾಟವಿದೆ. ಜೀ ಕನ್ನಡ ವಾಹಿನಿ ಸೇರಿದಂತೆ ಕನ್ನಡದ ನಾನಾ ವಾಹಿನಿಗಳ ರಿಯಾಲಿಟಿ ಶೋಗಳಲ್ಲಿ ಕೆಲಸ ಮಾಡಿದ್ದಾರೆ ವರುಣ್. ಕಾವ್ಯ ಶಾ ಮತ್ತು ವರುಣ್ ಭೇಟಿಯಾಗಿದ್ದು ಹತ್ತು ವರ್ಷಗಳ ಹಿಂದೆ ನಡೆದ ಫ್ಯಾಶನ್ ಶೋನಲ್ಲಿ. ಆಗ ಕಾವ್ಯ ಆ ಶೋ ಸ್ಪರ್ಧಿ. ಅಲ್ಲಿಂದ ಶುರುವಾದ ಇಬ್ಬರ ಸ್ನೇಹ, ಆನಂತರ ಪ್ರೇಮಕ್ಕೆ ತಿರುಗಿದೆ.

‘ಹಲವು ವರ್ಷಗಳಿಂದ ನಾವಿಬ್ಬರೂ ಗೆಳೆಯರು. ಒಬ್ಬರಿಗೊಬ್ಬರನ್ನು ಅರ್ಥ ಮಾಡಿಕೊಂಡಿದ್ದೇವೆ. ಕುಟುಂಬದ ಒಪ್ಪಿಗೆ ಪಡೆದುಕೊಂಡು ಮದುವೆ ಆಗುತ್ತಿದ್ದೇವೆ. ಇದೊಂದು ರೀತಿಯಲ್ಲಿ ಲವ್ ಕಂ ಅರೇಂಜ್ಡ್ ಮದುವೆ’ ಎಂದು ನಟಿ ಕಮ್​ ಆ್ಯಂಕರ್​​ ಕಾವ್ಯ ಶಾ ಹೇಳಿದ್ದಾರೆ
Published by:Vasudeva M
First published: