• Home
 • »
 • News
 • »
 • entertainment
 • »
 • Actress Amulya: ಸೀಮಂತದ ‘ಅಮೂಲ್ಯ’ ವಿಡಿಯೋ ವೈರಲ್: ‘ಬೇಬಿ’ ನಿರೀಕ್ಷೆಯಲ್ಲಿ ‘ಐಶು’

Actress Amulya: ಸೀಮಂತದ ‘ಅಮೂಲ್ಯ’ ವಿಡಿಯೋ ವೈರಲ್: ‘ಬೇಬಿ’ ನಿರೀಕ್ಷೆಯಲ್ಲಿ ‘ಐಶು’

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Amulya Baby Shower: ಮತ್ತೊಂದೆಡೆ ಅಮೂಲ್ಯ ಮಾವ ರಾಮಚಂದ್ರ ಅವರ ರಾಜಕೀಯ ಸ್ನೇಹಿತರು ಸಮಾರಂಭಕ್ಕೆ ಆಗಮಿಸಿ, ಅಮೂಲ್ಯ, ಜಗದೀಶ್ ದಂಪತಿಗೆ ಶುಭಕೋರಿದರು. ಕುಟುಂಬದ ಹಿರಿಯ ಸದಸ್ಯರು, ಮುತ್ತೈದೆಯರು ಅಮೂಲ್ಯ ಸೀಮಂತ ಶಾಸ್ತ್ರ ನೆರವೇರಿಸಿದರು

 • Share this:

  ಬಾಲನಟಿಯಾಗಿ ಕರುನಾಡಿನ ಸಿನಿ ಪ್ರಿಯರ ಮನಗೆದ್ದಿದ್ದ ನಟಿ ಅಮೂಲ್ಯ (Amulya) ಬಳಿಕ ಚೆಲುವಿನ ಚಿತ್ತಾರದ (Cheluvina Chittara) ಮೂಲಕ ನಾಯಕಿಯಾಗಿ ಬಡ್ತಿ ಪಡೆದಿದ್ದರು. ಅಲ್ಲಿ ಐಶ್ವರ್ಯಾ ಆಗಿ ಕನ್ನಡ ಸಿನಿ ರಸಿರಕ ಎದೆಗೆ ಕಿಚ್ಚು ಹಚ್ಚಿದ್ದು ಹಳೇ ವಿಚಾರ. ಬಾಲನಟಿಯಾಗಿದ್ದಾಗಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ (Darshan Thoogudeepa), ಕಿಚ್ಚ ಸುದೀಪ (Kichha Sudeepa) ಜೊತೆ ನಟಿಸಿ ಸೈ ಎಸಿನಿಕೊಂಡಿದ್ದ ಐಶು ಬೇಬಿ, ನಂತರ ಚೆಲುವಿನ ಚಿತ್ತಾರದ ಮೂಲಕ ನಾಯಕಿಯಾಗಿ ಪ್ರಮೋಟ್ ಆದ್ರು. ಬಳಿಕ ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಜೊತೆ ನಟಿಸಿ ‘ಶ್ರಾವಣಿ ಸುಬ್ರಹ್ಮಣ್ಯ’ದಂತಹ ಹಿಟ್ ಫಿಲ್ಮ್ ಕೊಟ್ಟರು. ನಂತರ ಯಶ್ (Yash), ದುನಿಯಾ ವಿಜಯ್ (Duniya Vijay) ಸೇರಿದಂತೆ ಘಟಾನುಘಟಿ ನಾಯಕರ ಎದುರು ನಾಯಕಿಯಾಗಿ ಬಣ್ಣ ಹಚ್ಚಿದ್ದರು. ಹೀಗೆ ಜನಪ್ರಿಯತೆಯ ಉತ್ತುಂಗದಲ್ಲಿ ಇರುವಾಗಲೇ ಸಿನಿರಂಗಕ್ಕೆ ಗುಡ್ ಬೈ ಎಂದಿದ್ದರು. ‘ಐಶೂ ಎಲ್ಲಿಹೋದಳು?’ ಅಂತ ಅಭಿಮಾನಿಗಳು ಹುಡುಕುತ್ತಿರುವಾಗಲೇ ‘ಮದುವೆಯ ಮಮತೆಯ ಕರೆಯೋಲೆ’ (Maduveya Mamateya Kareyole) ಕಳಿಸಿದ್ದರು.


  ‘ಅಮ್ಮ’ ಆಗ್ತಿದ್ದಾರೆ ‘ಅಮ್ಮು’!
  2017ರಲ್ಲಿ ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಪುತ್ರ ಜಗದೀಶ್ ಅವರ ಜೊತೆ ಅಮೂಲ್ಯ ಹಸೆಮಣೆ ಏರಿದ್ದರು. ಸಂಸಾರದಲ್ಲಿ ಬ್ಯುಸಿಯಾದ ಐಶೂ ಬೇಬಿ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡಿದ್ದರು. ಇತ್ತೀಚಿಗಷ್ಟೇ ‘ಅಮ್ಮು’ ತಾವು ‘ಅಮ್ಮ’ ಆಗ್ತಿರೋ ಸುದ್ದಿಕೊಟ್ಟಿದ್ದರು. ಇತ್ತೀಚಿಗಷ್ಟೇ ಅಮೂಲ್ಯ ಸೀಮಂತವನ್ನೂ ಕುಟುಂಬಸ್ಥರು ನೆರವೇರಿಸಿದ್ದರು.  ವೈರಲ್ ಆಯ್ತು ಸೀಮಂತದ ವಿಡಿಯೋ
  ನಿನ್ನೆಯಷ್ಟೇ ನಟಿ ಅಮೂಲ್ಯ ಸೀಮಂತ ನೆರವೇರಿದೆ. ಅದ್ಧೂರಿ ವೇದಿಕೆಯಲ್ಲಿ ಅಮೂಲ್ಯ ಮಡಿಲು ತುಂಬಿ, ಕುಟುಂಬಸ್ಥರು ಹಾರೈಸಿದ್ದಾರೆ. ಐಶು ಬೇಬಿಯ ಇಷ್ಟದ ಸಿಹಿ ತಿಂಡಿಗಳು, ತರಹೇವಾರಿ ಖಾದ್ಯಗಳನ್ನು ಬಡಿಸಿ ಕುಟುಂಸ್ಥರು ಸಂತಸ ಪಟ್ಟಿದ್ದಾರೆ.


  ಅದ್ಧೂರಿ ವೇದಿಕೆಯಲ್ಲಿ ಐಶು ಸೀಮಂತ
  ನಿನ್ನೆ ಅಮೂಲ್ಯ ಸೀಮಂತ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿದೆ. ಸಮಾರಂಭದ ಇಡೀ ವೇದಿಕೆ ಗ್ರೀನ್ ಥೀಮ್’ನಲ್ಲಿ ನಿರ್ಮಾಣಗೊಂಡಿದ್ದು ವಿಶೇಷ. ಮಲ್ಲಿಗೆ, ಗುಲಾಬಿ, ಸೇವಂತಿ ಸೇರಿದಂತೆ ವಿವಿಧ ಬಗೆಯ ಹೂಗಳಿಂದ ಮಂಟಪವನ್ನು ಅಲಂಕರಿಸಲಾಗಿತ್ತು.
  ಪಿಸ್ತಾ ಗ್ರೀನ್ ಕಲರ್’ನ ಅದ್ಧೂರಿ ಡಿಸೈನ್ ಇರುವ ಸ್ಯಾರಿ, ಅದಕ್ಕೊಪ್ಪುವ ಅದ್ಧೂರಿ ವಿನ್ಯಾಸದ ಆಭರಣದಿಂದ ಅಮೂಲ್ಯ ಮಿರಮಿರ ಮಿಂಚುತ್ತಾ ಇದ್ದರು. ತಂದೆಯಾಗೋ ಖುಷಿಯಲ್ಲಿದ್ದ ಜಗದೀಶ್, ಕೆಂಪು ರೇಷ್ಮೆ ಜಾಕೆಟ್’ನಲ್ಲಿ ಕಂಗೊಳಿಸುತ್ತಾ ಇದ್ದರು. ಜಗದೀಶ್ ಕಣ್ಣಲ್ಲಿ ನೂರಾರು ಕನಸಿದ್ದರೆ, ಅಮೂಲ್ಯ ಕಣ್ಣಲ್ಲಿ ಚೆಲುವಿನ ಚಿತ್ತಾರವೇ ಕಾಣಿಸುತ್ತಿತ್ತು.


  ಶುಭಕೋರಿದ ಗೋಲ್ಡನ್ ಸ್ಟಾರ್
  ಅಮೂಲ್ಯ ಸೀಮಂತ ಸಂಭ್ರಮದಲ್ಲಿ ಕುಟುಂಸ್ಥರೆಲ್ಲ ಭಾಗಿಯಾದ್ರು. ಜೊತೆಗೆ ಅಮ್ಮು ಸ್ನೇಹಿತ, ಸ್ನೇಹಿತೆಯರು, ಜಗದೀಶ್ ಆತ್ಮೀಯರು ಬಂದು ಸಂಭ್ರಮವನ್ನು ಕಣ್ಣು ತುಂಬಿಕೊಂಡರು. ಇನ್ನು ನಟ, ಗೋಲ್ಡನ್ ಸ್ಟಾರ್ ಗಣೇಶ್ ಬಂದಿದ್ದು ವಿಶೇಷವಾಗಿತ್ತು. ಪತ್ನಿ ಶಿಲ್ಪಾ ಜೊತೆ ಆಗಮಿಸಿದ ಗಣೇಶ್, ಅಮೂಲ್ಯಗೆ ಹರಸಿ, ಹಾರೈಸಿದರು.


  ಇದನ್ನೂ ಓದಿ: ನಟಿ ಅಮೂಲ್ಯ ಸೀಮಂತ ಶಾಸ್ತ್ರದ ಸಂಭ್ರಮ: ಅದ್ಧೂರಿ ಕಾರ್ಯಕ್ರಮದ Photos ಇಲ್ಲಿವೆ


  ಮತ್ತೊಂದೆಡೆ ಅಮೂಲ್ಯ ಮಾವ ರಾಮಚಂದ್ರ ಅವರ ರಾಜಕೀಯ ಸ್ನೇಹಿತರು ಸಮಾರಂಭಕ್ಕೆ ಆಗಮಿಸಿ, ಅಮೂಲ್ಯ, ಜಗದೀಶ್ ದಂಪತಿಗೆ ಶುಭಕೋರಿದರು.
  ಕುಟುಂಬದ ಹಿರಿಯ ಸದಸ್ಯರು, ಮುತ್ತೈದೆಯರು ಅಮೂಲ್ಯ ಸೀಮಂತ ಶಾಸ್ತ್ರ ನೆರವೇರಿಸಿದರು. ನೂರು ಕಾಲ ಸುಖವಾಗಿರು ಮಗಳೇ ಅಂತ ಅಜ್ಜಿಯರು ಹಾರೈಸಿದರು.
  ಸೀಮಂತದ ಫೋಟೋಗಳೆಲ್ಲವೂ ನಿನ್ನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಇದೀಗ ಅಮೂಲ್ಯ ಕ್ಷಣಗಳ ವಿಡಿಯೋಗಳನ್ನು ಅಭಿಮಾನಿಗಳು ಶೇರ್ ಮಾಡುತ್ತಿದ್ದಾರೆ.
  ಸದ್ಯ ಸೀಮಂತ ಶಾಸ್ತ್ರ ಮುಗಿಸಿರೋ ಅಮೂಲ್ಯ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ನಮ್ ಕಡೆಯಿಂದಲೂ ಐಶು ಬೇಬಿಗೆ ಹಾರೈಸೋಣ...

  Published by:Sandhya M
  First published: