Aishani Shetty: ಮುಗ್ದ ಹುಡುಗಿ ಭಾರೀ ಬೆಡಗಿ - ಈಗ ದೊಡ್ಡ ಚಿತ್ರದ ಡೈರೆಕ್ಟರ್ ಐಶಾನಿ ಶೆಟ್ಟಿ

ಐಶಾನಿ ಶೆಟ್ಟಿ ಸಾಫ್ಟ್ ಪಾತ್ರಗಳನ್ನೆ ಮಾಡಿರೋದು ಹೆಚ್ಚು. ಮುಗ್ದವಾಗಿಯೆ ಮಾತುಗಳನ್ನೂ ಆಡೋ ಐಶಾನಿ ಶೆಟ್ಟಿ, ಬೋಲ್ಡ್ ಕ್ಯಾರೆಕ್ಟರ್ ಮಾಡಿರೋದು ಕಡಿಮೇನೆ. ಆದರೆ ಧರಣಿ ಮಂಡಲ ಮಧ್ಯದೊಳಗೆ ಸಿನಿಮಾದಲ್ಲಿ ಐಶಾನಿ ಲುಕ್ ಬೋಲ್ಡ್ ಆಗಿಯೇ ಇದೆ.

ಕನ್ನಡದ ನಟಿ ಐಶಾನಿ ಶೆಟ್ಟಿ ಹೊಸ ಸಿನಿಮಾ ಸ್ಟಿಲ್ಸ್

ಕನ್ನಡದ ನಟಿ ಐಶಾನಿ ಶೆಟ್ಟಿ ಹೊಸ ಸಿನಿಮಾ ಸ್ಟಿಲ್ಸ್

  • Share this:
ಸ್ಯಾಂಡಲ್​ವುಡ್​ ನ ಸುಂದರಿ ಐಶಾನಿ ಶೆಟ್ಟಿ (Aishani Shetty) ಈಗ ಮತ್ತೆ ಡೈರೆಕ್ಷನ್​ಗೆ ಇಳಿದಿದ್ದಾರೆ. ಕಥೆ ಬರೆಯೋದು, ಸಿನಿಮಾ ಡೈರೆಕ್ಷನ್ (Cinema Direction) ಮಾಡೋದು ಇವರೆಡೂ ಈ ನಟಿಗೆ ತುಂಬಾ ಇಷ್ಟ. ಸೆಟ್​ನಲ್ಲಿ ಟೈಮ್​ ಸಿಕ್ಕರೇ, ಹಾಡುಗಳನ್ನ ಗುನುಗೋದು ಇದೆ. ಇಂತಹ ಈ ನಟಿ ಮುಂಬರೋಒಂದು ಚಿತ್ರದಲ್ಲಿ ಭಾರೀ ಬೋಲ್ಡ್ ಕ್ಯಾರೆಕ್ಟರ್​ (Bold Character) ಅನ್ನ ನಿಭಾಯಿಸಿದ್ದಾರೆ. ಎಲ್ಲರೂ ನನ್ನ ಈ ಮೂಲಕ ಬೇರೆ ರೀತಿಯಲ್ಲಿಯೇ ನೋಡ್ತಾರೆ ಅನ್ನೋ ಗ್ಯಾರಂಟಿ ಕೂಡ ಐಶಾನಿಗೆ ಈಗಲೇ ಬಂದಿದೆ. ಸದ್ಯಕ್ಕೆ ಸಿನಿಮಾ ಜರ್ನಿಯಲ್ಲಿ ಈಗ ತಮ್ಮದೇ ಬ್ಯಾನರ್​ನಲ್ಲಿ ಒಂದು ದೊಡ್ಡ ಸಿನಿಮಾ ಮಾಡೋಕೂ ಮುಂದಾಗಿದ್ದಾರೆ.

ಕನ್ನಡದ ನಟಿ ಐಶಾನಿ ಶೆಟ್ಟಿ ಒಂದು ರೀತಿ ಮಲ್ಟಿ ಟ್ಯಾಲೆಂಟೆಡ್ ನಾಯಕಿ ನಟಿ ಅಂದ್ರೆ ಯಾರೂ ತಪ್ಪು ತಿಳಿದುಕೊಳ್ಳೋದಿಲ್ಲ. ಹೌದು ಇದು ನಿಜ ಅಂತಲೇ ಇಂಡಸ್ಟ್ರೀಯ ಜನ ಕೂಡ ಒಪ್ಪಿಕೊಳ್ಳುತ್ತಾರೆ. ಇದಕ್ಕೆ ಬಲವಾದ ಕಾರಣವೂ ಇದೆ. ಐಶಾನಿ ಶೆಟ್ಟಿ ನಟಿಯಷ್ಟೇ ಅಲ್ಲ, ನಿರ್ದೇಶಕಿ ಕೂಡ ಹೌದು. ಕಾಜಿ ಹೆಸರಿನ ಪುಟ್ಟ ಸಿನಿಮಾವನ್ನ ನಿರ್ದೇಶನ ಮಾಡಿ ಐಶಾನಿ ಭೇಷ್ ಎನಿಸಿಕೊಂಡಿದ್ದಾರೆ. ತುಂಬಾ ಚಂದದ ಕಥೆ ಇದಾಗಿತ್ತು. ಮಹಿಳೆಯೊಬ್ಬಳ ಕೈ ಬಳೆಯ ಕಥೆ ಇದಾಗಿತ್ತು. ಬಳೆಗೆ ತುಳು ಭಾಷೆಯಲ್ಲಿ ಕಾಜಿ ಅಂತಲೇ ಕರೆಯುತ್ತಾರೆ.

ಪುಟ್ಟ ಕಾಜಿ ಸಿನಿಮಾ ಬಳಿಕ ದೊಡ್ಡ ಸಿನಿಮಾದತ್ತ ಹೆಜ್ಜೆ ಇಟ್ಟ ಐಶಾನಿ ಶೆಟ್ಟಿ

ಹೀಗೆ ಬಳೆಯ ಕಥೆ ಹೇಳಿದ್ದ ಐಶಾನಿ ಶೆಟ್ಟಿ ಈಗ ದೊಡ್ಡ ಸಿನಿಮಾ ಮಾಡುತ್ತಿದ್ದಾರೆ. ತಮ್ಮ ಈ ದೊಡ್ಡ ಸಿನಿಮಾಕೆ ತಾವೇ ನಾಯಕಿ ಆಗುತ್ತಿದ್ದಾರೆ. ಈ ಚಿತ್ರದ ಸ್ಕ್ರಿಪ್ಟಿಂಗ್ ಕೆಲಸ ಈಗ ನಡೀತಾ ಇದೆ. ಇದೆ ವರ್ಷದ ಕೊನೆ ಇಲ್ಲವೇ ಮುಂದಿನ ವರ್ಷದ ಆರಂಭದಲ್ಲಿ ಶೂಟಿಂಗ್ ಹೋಗೋಕೆ ಪ್ಲಾನ್ ಮಾಡಿಕೊಂಡಿದ್ದಾರೆ.

ಐಶಾನಿ ಶೆಟ್ಟಿಯ ಬೋಲ್ಡ್ ಲುಕ್​ ನಲ್ಲಿ ಹೊಸ ಕಿಕ್
ಐಶಾನಿ ಶೆಟ್ಟಿ ಸಾಫ್ಟ್ ಪಾತ್ರಗಳನ್ನೆ ಮಾಡಿರೋದು ಹೆಚ್ಚು. ಮುಗ್ದವಾಗಿಯೆ ಮಾತುಗಳನ್ನೂ ಆಡೋ ಐಶಾನಿ ಶೆಟ್ಟಿ, ಬೋಲ್ಡ್ ಕ್ಯಾರೆಕ್ಟರ್ ಮಾಡಿರೋದು ಕಡಿಮೇನೆ. ಆದರೆ ಧರಣಿ ಮಂಡಲ ಮಧ್ಯದೊಳಗೆ ಸಿನಿಮಾದಲ್ಲಿ ಐಶಾನಿ ಲುಕ್ ಬೋಲ್ಡ್ ಆಗಿಯೇ ಇದೆ. ಅದೆಷ್ಟು ಬೋಲ್ಡ್ ಅಂದ್ರೆ, ಇದು ಐಶಾನಿ ಶೆಟ್ಟಿನಾ ಅನ್ನೋ ಹಂತಕ್ಕೇನೆ ನಟಿ ಐಶಾನಿ ರೂಪ ಇಲ್ಲಿ ಬದಲಾಗಿದೆ. ಶ್ರೇಯಾ ಅನ್ನೋ ಪಾತ್ರದ ಮೂಲಕ ಇಲ್ಲಿ ಐಶಾನಿ ಬೇರಿ ಕಾಣಿಸುತ್ತಿದ್ದಾರೆ.

Kannada Actress Aishani Shetty New Look
ಐಶಾನಿ ಶೆಟ್ಟಿ ಹೊಸ ರೂಪದ ಹೊಸ ಪೋಸ್


ಹೊಂದಿಸಿ ಬರೆಯಿರಿ ಅಂತವ್ರೇ ಶೆಟ್ಟರ ಹುಡುಗಿ ಐಶಾನಿ
ಐಶಾನಿ ಶೆಟ್ಟಿ ಒಪ್ಪಿಕೊಂಡ ಇನ್ನೂ ಒಂದು ಸಿನಿಮಾ ಇದೆ. ಅದುವೇ ಈ ಹೊಂದಿಸಿ ಬರೆಯಿರಿ ಚಿತ್ರ. ಈ ಚಿತ್ರದಲ್ಲಿ ಸನಿಹ ಪೊನ್ನಪ್ಪ ಅನ್ನೋ ಹೆಸರಿನ ಪಾತ್ರವನ್ನೆ ಐಶಾನಿ ನಿಭಾಯಿಸುತ್ತಿದ್ದಾರೆ. ಈ ಚಿತ್ರದ ಕೆಲಸ ಬಹುತೇಕ ಪೂರ್ಣಗೊಂಡಿದೆ. ಚಿತ್ರ ತಂಡ ಈಗ ಸಿನಿಮಾ ಪ್ರಚಾರದಲ್ಲೂ ತೊಡಗಿಕೊಂಡಿದೆ.

ಹೊಂದಿಸಿ ಬರೆಯಿರಿ ಚಿತ್ರದ ಟೈಮ್​ನಲ್ಲಿಯೇ ಫೋಟೋ ಶೂಟ್
ಐಶಾನಿ ಶೆಟ್ಟಿಯ ಹೊಸ ಫೋಟೋ ಶೂಟ್​ನ ಫೋಟೋಗಳು ಈಗ ಹೆಚ್ಚು ಗಮನ ಸೆಳೆಯುತ್ತಿವೆ. ಸೋಷಿಯಲ್ ಮೀಡಿಯಾದಲ್ಲೂ ಈ ಫೋಟೋಗಳು ಶೇರ್ ಆಗಿವೆ. ಆದರೆ ಇದು ಫೋಟೋ ಶೂಟ್ ಮಾಡಿಸಿರೋದು ಅಲ್ಲವೇ ಅಲ್ಲ. ಚಿತ್ರದ ಪ್ರಚಾರಕ್ಕೆಂದು ಕಾರ್ಯಕ್ರಮಕ್ಕೆ ಹೋಗಿದ್ದರು. ಆಗಲೆ ಈ ಫೋಟೋಗಳನ್ನ ತೆಗೆಯಲಾಗಿದೆ ಅಂತಲೇ ಐಶಾನಿ ಶೆಟ್ಟಿ ಹೇಳಿಕೊಂಡಿದ್ದಾರೆ. ಅದು ಬಿಟ್ಟರೆ ಇನ್ನೂ ಹೆಸರಿಡದ ತಮ್ಮ ಹೊಸ ಬ್ಯಾನರ್​ಗಾಗಿಯೇ​ ತಮ್ಮ ಚಿತ್ರದ ಸ್ಕ್ರಿಪ್ಟಿಂಗ್ ಕೆಲಸದಲ್ಲಿಯೇ ಬ್ಯುಸಿಯಾಗಿದ್ದಾರೆ.
First published: