ಕನ್ನಡ ನಾಡಿನ ರಾಕಿಂಗ್ (Rocking Star Yash) ಸ್ಟಾರ್ ಯಶ್ ದೂರ ದೃಷ್ಟಿ ಅದ್ಭುತವಾಗಿದೆ. ಅದಕ್ಕೇನೆ ಯಶ್ ದೊಡ್ಡ ಕನಸುಗಳನ್ನೆ ಕಾಣ್ತಿದ್ದಾರೆ. ಅದೇ ಒಂದು ಯೋಚನೆಯಿಂದಲೇ ವೇದ ಚಿತ್ರ ಖ್ಯಾತಿಯ ನವ ಯುವ ನಟಿ ಅದಿತಿ ಸಾಗರ್ಗೆ ರಾಕಿಂಗ್ ಸ್ಟಾರ್ ಯಶ್ (Kgf King Yash) ಒಂದು ಸಲಹೆ ಕೊಟ್ಟಿದ್ದರು. ಅದನ್ನ ಸಾಕಾರಗೊಳಿಸೋಕೆ ಸ್ಪೂರ್ತಿಯನ್ನ ಕೂಡ ತುಂಬಿದ್ದರು. ಇದಕ್ಕೆ ಆ ಟೈಮ್ನಲ್ಲಿ ಅದಿತಿ (Aditi Sagar) ಸಾಗರ್ಗೆ ಡೈರೆಕ್ಟರ್ ಪ್ರಶಾಂತ್ ನೀಲ್ ಕೂಡ ಹೀಗೆ ಮಾಡು ಹಾಗೆ ಮಾಡು ಅಂತಲೂ ಹೇಳಿದ್ದರು. ಅದರಿಂದಲೇ ಅದಿತಿ ಸಾಗರ್ ಸಕ್ಸಸ್ ಕೂಡ ಕಂಡಿದ್ದಾರೆ. ಆ ಒಂದು ಸಕ್ಸಸ್ ಫುಲ್ (Aditi Sagar Success Story) ಸ್ಟೋರಿಯನ್ನ ಅದಿತಿ ಸಾಗರ್ ಈಗಲೂ ನೆನಪಿಸಿಕೊಳ್ಳುತ್ತಾರೆ.
ಅದಿತಿಗೆ ಸಾಗರ್ಗೆ ಯಶ್ ಕೊಟ್ಟ ಆ ಸಲಹೆ ಏನು?
ರಾಕಿಂಗ್ ಸ್ಟಾರ್ ಯಶ್ ಯೋಚನೆ ವಿಭಿನ್ನವಾಗಿಯೇ ಇರುತ್ತವೆ. ಅದನ್ನ ಕಾರ್ಯರೂಪಕ್ಕೆ ತರೋದು ಕೂಡ ಗೊತ್ತಿದೆ. ಅದನ್ನ ಸಕ್ಸಸ್ ಫುಲ್ ಮಾಡೋದು ಕೂಡ ತಿಳಿದಿದೆ. ಅದಕ್ಕೆ ಸುಮಾರು ಉದಾಹರಣೆಗಳಿವೆ. ಅದೇ ರೀತಿ ಈಗ ಯಶ್ ಮುಂದಿನ ಗುರಿ ವಿಶ್ವ ಸಿನಿಮಾನೇ ಆಗಿದೆ.
ಇದನ್ನ ಓದಿದಾಗ ಅತಿಶಯೋಕ್ತಿ ಅನಿಸಬಹುದು. ಆದರೆ ಇದುವೇ ಸತ್ಯವಾದ ವಿಚಾರವೇ ಆಗಿದೆ. ರಾಕಿಂಗ್ ಸ್ಟಾರ್ ಯಶ್ ಈ ಹಿಂದೆ ತಮ್ಮ ಚಿತ್ರ ಹೀಗೆ ಪ್ರಚಾರ ಆಗಬೇಕು ಅನ್ನೋ ಒಂದು ಕಲ್ಪನೆಯನ್ನೂ ಹೊಂದಿದ್ದರು. ಅದನ್ನ ಕಾರ್ಯರೂಪಕ್ಕೂ ತಂದಿದ್ದರು.
ಕೆಜಿಎಫ್-2 Monster ಹಾಡಿನ ಹಿಂದಿದೆ ಸೂಪರ್ ಕಥೆ
ರಾಕಿಂಗ್ ಸ್ಟಾರ್ ಯಶ್ Monster ಸಾಂಗ್ ಹಿಂದೆ ಒಂದು ಕಥೆ ಇದೆ. ಈ ಕಥೆಯ ಕಥಾನಾಯಕಿ ಬೇರೆ ಯಾರೋ ಅಲ್ಲ. ನಟ-ಕಲಾ ನಿರ್ದೇಶಕ ಅರುಣ್ ಸಾಗರ್ ಪುತ್ರಿ ಅದಿತಿನೇ ಆಗಿದ್ದಾರೆ. ಅದಿತಿ ಸಾಗರ್ ಈ ಒಂದು ಹಾಡನ್ನ ಹಾಡಿದ್ದರು. ತಾವೇ ಅದಕ್ಕೆ ಬಹು ಭಾಷೆಯಲ್ಲಿ ಲಿರಿಕ್ಸ್ ಕೂಡ ಬರೆದಿದ್ದರು.
ರಾಕಿಂಗ್ ಸ್ಟಾರ್ ಯಶ್ ಈ ಒಂದು ಹಾಡನ್ನ ಬರೆಯೋಕೆ ಅದಿತಿಗೆ ಅವಕಾಶ ಮಾಡಿಕೊಟ್ಟಿದ್ದರು. ಯಶ್ ಹೇಳಿದ್ದಕ್ಕೇನೆ ಅದಿತಿ ಈ ಒಂದು ಹಾಡನ್ನ ಬರೆದರು. ಬಹು ಭಾಷೆಯಲ್ಲಿ ಸಿನಿಮಾ ಬಂದಿದ್ದರಿಂದಲೇ ಆಗ ಅದಿತಿ ಈ ಒಂದು ಹಾಡನ್ನ ಬಹು ಭಾಷೆ ಇರೋ ಹಾಗೇನೆ ಒಂದೇ ಹಾಡು ಬರೆದುಕೊಟ್ರು. ತಾವೇ ಅದನ್ನ ಹಾಡಿದರು.
ಕೆಜಿಎಫ್-2 ಸಿನಿಮಾ ಈ ಹಾಡಿನ ಹಿಂದೆ 3 ಜನ!
ಕೆಜಿಎಫ್-2 ಚಿತ್ರದ Monster ಹಾಡಿನ ಹಿಂದೆ ಮೂವರಿದ್ದಾರೆ. ಆ ಮೂವರಲ್ಲಿ ರಾಕಿಂಗ್ ಸ್ಟಾರ್ ಯಶ್ ಇದ್ದಾರೆ. ಪ್ರಶಾಂತ್ ನೀಲ್ ಹೀಗೆ ಬೇಕು ಅಂತ ತಿಳಿಸಿದ್ದಾರೆ. ಸಂಗೀತ ನಿರ್ದೇಶಕ ರವಿ ಬಸ್ರೂರು ಸಾಥ್ ನೀಡಿದ್ದಾರೆ. ಆಗಲೇ ಅದಿತಿ ಈ ಒಂದು ಹಾಡನ್ನ ಹಾಡಲು ಸಾಧ್ಯವಾಗಿದೆ.
ಈ ಒಂದು ವಿಚಾರವನ್ನ ಅನೇಕ ಯುಟ್ಯೂಬ್ ಚಾನೆಲ್ಗಳ ಸಂದರ್ಶನದಲ್ಲೂ ಅದಿತಿ ಸಾಗರ್ ಹೇಳಿಕೊಂಡಿದ್ದಾರೆ. "ಯಶ್ ಅಣ್ಣ ಹೇಳಿದರು. ಅದಕ್ಕೇನೆ ಈ ಹಾಡು ಬರೆದೆ. ಪ್ರಶಾಂತ್ ನೀಲ್ ಅವ್ರು ಐಡಿಯಾ ಕೊಟ್ಟರು.
ಈ ಒಂದೇ ಹಾಡಲ್ಲಿ ಎಲ್ಲ ಭಾಷೆ ಬರುವ ಹಾಗೆ ಬರೆದು ಬಿಡು ಅಂದ್ರು, ಹಾಗೇನೆ ರಿಲಿಕ್ಸ್ ಬರೆದೆ. ರವಿ ಬಸ್ರೂರು ಅವ್ರು ಹೀಗೆ ಹಾಡು ಅಂತಲೇ ತಿಳಿಸಿದ್ರು, ಅವರು ಹೇಳಿದ ಹಾಗೆ ಅದನ್ನ ಹಾಡಿದೆ" ಎಂದು ಅದಿತಿ ಹೇಳಿದ್ದಾರೆ.
ಅದಿತಿ ಸಾಗರ್ ಗಾಯಕಿ ಅಷ್ಟೇ ಅಲ್ಲ ಒಳ್ಳೆ ನಟಿನೂ ಹೌದು!
ಅದಿತಿ ಸಾಗರ್ ಸದ್ಯ ವೇದ ಚಿತ್ರದ ಕನಕ ಪಾತ್ರದ ಮೂಲಕ ಕನ್ನಡ ಜನತೆಯ ಹೃಯದಲ್ಲಿ ಜಾಗ ಮಾಡಿಕೊಂಡಿದ್ದಾರೆ. ಅನ್ಯಾಯವಾದ್ರೆ, ಹೆಣ್ಣು ಮಕ್ಕಳು ಯಾರೂ ಅದನ್ನ ಸಹಿಕೊಳ್ಳಬೇಕಿಲ್ಲ ಅನ್ನೋದನ್ನ ಅದಿತಿ ಈ ಚಿತ್ರದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: Kantara: ಕಾಂತಾರ ಡಿಜಿಟಲ್ ಆರ್ಟ್ ಪೋಸ್ಟರ್! ರಿಷಬ್ಗೆ ಅಭಿಮಾನಿಯ ಸ್ಪೆಷಲ್ ಪೋಸ್ಟ್
ಇದನ್ನ ಕಂಡ ಹೆಣ್ಣುಮಕ್ಕಳು ತುಂಬಾ ಖುಷಿಪಟ್ಟಿದ್ದಾರೆ. ಅದಿತಿ ಸಾಗರ್ ಪಾತ್ರವನ್ನ ಬಹುವಾಗಿಯೇ ಕೊಂಡಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅದಿತಿ ಸಾಗರ್ ಸಂದರ್ಶನ ಮಾಡೋರು ಕೊನೆಯಲ್ಲಿ Monster ಹಾಡಿನ ಬಗ್ಗೆ ಕೇಳುತ್ತಲೇ ಇದ್ದಾರೆ. ಆಗ ಅದಿತಿ ಸಾಗರ್, ರಾಕಿಂಗ್ ಸ್ಟಾರ್ ಯಶ್ ಹೆಸರನ್ನ ಹೇಳೋಕೆ ಮರೆತಿಲ್ಲ. ಅದನ್ನ ಯಾರೆ ಕೇಳಿದ್ರೂ ಹೇಳ್ತಾನೆ ಇದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ