• Home
  • »
  • News
  • »
  • entertainment
  • »
  • Actress Aditi Prabhudeva: ಸ್ಯಾಂಡಲ್​ವುಡ್ ನಟಿ ಅದಿತಿ ಪ್ರಭುದೇವ ಮದುವೆ ಆಮಂತ್ರಣ ಪತ್ರಿಕೆ ಹೇಗಿದೆ?

Actress Aditi Prabhudeva: ಸ್ಯಾಂಡಲ್​ವುಡ್ ನಟಿ ಅದಿತಿ ಪ್ರಭುದೇವ ಮದುವೆ ಆಮಂತ್ರಣ ಪತ್ರಿಕೆ ಹೇಗಿದೆ?

ಅದಿತಿ ಮದುವೆ ಆಮಂತ್ರಣ ಪತ್ರಿಕೆಯಲ್ಲಿ QR CODE

ಅದಿತಿ ಮದುವೆ ಆಮಂತ್ರಣ ಪತ್ರಿಕೆಯಲ್ಲಿ QR CODE

ಮುದ್ದು ಮನಸುಗಳೆರಡು ಒಂದಾಗಿವೆ. ಜೊತೆಗೂಡಿ ಜೀವಿಸಲು ಸಜ್ಜಾಗಿವೆ. ಸವಿ ನುಡಿಗಳೊಂದಿಗೆ ಆಮಂತ್ರಿಸುತ್ತಿರುವೆವು. ಮಮತೆಯೊಂದಿಗೆ ಬಂದು ಆಶೀರ್ವದಿಸಬೇಕು ಎಂದು ಕೋರುವ ಎಂದು ಲಗ್ನಪತ್ರಿಕೆಯಲ್ಲಿ ಬರೆಯಲಾಗಿದೆ.

  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡದ ನಾಯಕಿ ನಟಿ ಅದಿತಿ (Aditi Prabhudeva) ಪ್ರಭುದೇವ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದಕ್ಕಾಗಿಯೆ ವಿಶೇಷ ಮದುವೆ ಆಮಂತ್ರಣ (Marrage Invitation) ಪತ್ರಿಕೆಯನ್ನು ಮಾಡಿಸಿದ್ದಾರೆ. ಇದು ಸರಳವಾಗಿಯೇ ಇದೆ. ಅಷ್ಟೇ ವಿಶೇಷವಾಗಿಯೂ ಇದೆ. ಇಡೀ ಮದುವೆ ಆಮಂತ್ರಣ ಪತ್ರಿಕೆ ಕನ್ನಡಮಯವಾಗಿಯೇ ಇದೆ. ಇಂಗ್ಲಿಷ್ ಇನ್​ವಿಟೇಷನ್ ಕೂಡ ಇದೆ. ಆದರೆ ಇಲ್ಲಿ ಕನ್ನಡದ ನಟಿಯ (Kannada Actress) ಕನ್ನಡ ಆಮಂತ್ರಣ ಪತ್ರಿಕೆ ಗಮನ ಸೆಳೆಯುವಂತಿದೆ. ಸಾಹಿತಿಕವಾಗಿಯೂ ಈ ಮದುವೆ ಕರೆಯೋಲೆ ಇದೆ.  ಒಲವಿನ ಹೊಸ ಅಧ್ಯಾಯಕ್ಕೆ ನಿಮ್ಮ ಆಶೀರ್ವಾದ ಬೇಕು. ಮದುವೆಗೆ ಬಂದು ನಮ್ಮನ್ನ ಆಶೀರ್ವದಿಸಿ ಅಂತಲೇ ಅದಿತಿ ಹಾಗೂ ಯಶಸ್ವಿ ಕೋರಿದ್ದಾರೆ. ಇದರ ಬಗ್ಗೆ ಇನ್ನಷ್ಟು ಡಿಟೈಲ್ಸ್ ಇಲ್ಲಿದೆ.


ಕನ್ನಡ ನಟಿಯ ಕನ್ನಡಮಯ ಮದುವೆ ಕರೆಯೋಲೆ
ಕನ್ನಡದ ಹುಡುಗಿ ನಟಿ ಅದಿತಿ ಪ್ರಭುದೇವ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ತಮ್ಮ ಮದುವೆ ಆಮಂತ್ರಣ ಪತ್ರಿಕೆಯನ್ನ ವಿಶೇಷವಾಗಿಯೇ ಮಾಡಿಸಿದ್ದಾರೆ. ಇದು ಅಷ್ಟೇ ಸರಳವಾಗಿಯ ಇರೋದು ವಿಶೇಷ.


ನಟ-ನಟಿಯರ ಮದುವೆ ಅಂದ್ಮಲೇ ಅಲ್ಲಿ ಅದ್ದೂರಿ ಮದುವೆ ಆಮಂತ್ರಣ ಪತ್ರಿಕೆ ರೆಡಿ ಆಗುತ್ತದೆ. ಆದರೆ ಅದಿತಿ ಪ್ರಭುದೇವ ಮತ್ತು ಯಶಸ್ವಿ ಅವರ ಲಗ್ನಪತ್ರಿಕೆ ಸರಳವಾಗಿಯೇ ಇದೆ. ಅಷ್ಟೇ ಕನ್ನಡಮಯವಾಗಿಯೂ ಇದೆ.


ಅದಿತಿ-ಯಶಸ್ವಿ ಲಗ್ನಪತ್ರಿಕೆಯಲ್ಲಿ ಕವಿತೆಯ ಸಾಲುಗಳು
ಅದಿತಿ ಪ್ರಭುದೇವ ಲಗ್ನಪತ್ರಿಕೆಯಲ್ಲಿ ಅದ್ಭುತ ಸಾಲುಗಳಿವೆ. ಕರುನಾಡ ತಾಯಿ ಭುವನೇಶ್ವರಿ ಆಶೀರ್ವಾದದೊಂದಿಗೆ ಅಂತಲೇ ಮೊದಲು ಪುಟ ನಿಮ್ಮನ್ನ ಸೆಳೆಯುತ್ತದೆ.


Kannada Actress Aditi Prabhudeva Marriage Invitation
ಅದಿತಿ-ಯಶಸ್ವಿ ಲಗ್ನಪತ್ರಿಕೆಯಲ್ಲಿ ಕವಿತೆಯ ಸಾಲುಗಳು


ಪುಟ ತಿರುವಿ ಓದುತ್ತಾ ಹೋದ್ರೆ, ಅಲ್ಲಿ ಅದ್ಭುತ ಸಾಲುಗಳು ನಿಮ್ಮ ಗಮನವನ್ನ ತನ್ನತ್ತ ಸೆಳೆಯುತ್ತದೆ. ಕನ್ನಡದ ಈ ಸಾಲುಗಳನ್ನ ಓದಿದ್ರೆ, ಇಲ್ಲಿ ಒಲವು ಎಂಬ ಪದ ಇದೆ. ಹಾಜರಿ ಅನ್ನೋ ಪದವೂ ನಿಮ್ಮನ್ನ ಆಕರ್ಷಿಸುತ್ತದೆ. ಈ ಸಾಲಿನ ಒಂದಷ್ಟು ಎಕ್ಸಾಂಪಲ್ ಇಲ್ಲಿದೆ.


ಮುದ್ದು ಮನಸುಗಳೆರಡು ಒಂದಾಗಿವೆ. ಜೊತೆಗೂಡಿ ಜೀವಿಸಲು ಸಜ್ಜಾಗಿವೆ. ಸವಿ ನುಡಿಗಳೊಂದಿಗೆ ಆಮಂತ್ರಿಸುತ್ತಿರುವೆವು. ಮಮತೆಯೊಂದಿಗೆ ಬಂದು ಆಶೀರ್ವದಿಸಬೇಕು ಎಂದು ಕೋರುವ.


ಇದನ್ನೂ ಓದಿ: Kantara Break KGF Record: ಬಾಲಿವುಡ್​​ನಲ್ಲಿ ಕೆಜಿಎಫ್ ದಾಖಲೆ ಬ್ರೇಕ್ ಮಾಡ್ತಿದೆ ಕಾಂತಾರ! ತರಣ್ ಆದರ್ಶ್ ಹೇಳಿದ್ದಿಷ್ಟು


ಹೀಗೆ ಆಮಂತ್ರಣ ಪತ್ರಿಕೆಯಲ್ಲಿ ಬರೆಯಲಾಗಿದೆ. ಪ್ರೀತಿಯ ಸ್ನೇಹಿತರೇ, ಅಂತಲೇ ಇನ್ನೂ ಒಂದು ಪುಟದಲ್ಲಿ ಶುರುವಾಗೋ ಪ್ರೀತಿಯ ಆಹ್ವಾನದಲ್ಲಿ ಕವಿತೆ ಅನಿಸೋ ಇನ್ನೂ ಒಂದಷ್ಟು ಸಾಲುಗಳೂ ಇವೆ. ಅವು ಇಂತಿವೆ.


ಹೊಸ ಕನಸುಗಳೊಂದಿಗೆ, ಹೊಸ ನಂಬಿಕೆಗಳೊಂದಿಗೆ, ಹೊಸ ದಿಗಂತಗಳನ್ನ ಸಾಧಿಸುವ ಬಯಕೆ ಹೊತ್ತು,ಮದುವೆ ಎಂಬ ಜೀವನದ ಒಲವಿನ ಅಧ್ಯಾಯವನ್ನ ಪ್ರಾರಂಭಿಸುತ್ತಿದ್ದೇವೆ ಅಂತಲೂ ಈ ಲಗ್ನಪತ್ರಿಕೆಯಲ್ಲಿ ಬರೆಯಲಾಗಿದೆ.


ಮದುವೆ ಆಮಂತ್ರಣ ಪತ್ರಿಕೆಯಲ್ಲಿ QR CODE
ಅದಿತಿ ಪ್ರಭುದೇವ ಮತ್ತು ಯಶಸ್ವಿ ಮದುವೆ ಲಗ್ನಪತ್ರಿಕೆಯಲ್ಲಿ QR CODE ಕೂಡ ಇದೆ. ಆದರೆ ಇದು ದುಡ್ಡಿನ QR CODE ಅಲ್ಲವೇ ಅಲ್ಲ. ಇದರ ಕೆಳಗೆ Scan for Venue ಅಂತಲೆ ಸ್ಪಷ್ಟವಾಗಿಯೇ ಬರೆಯಲಾಗಿದೆ.


Kannada Actress Aditi Prabhudeva Marriage Invitation
ಕನ್ನಡ ನಟಿಯ ಕನ್ನಡಮಯ ಮದುವೆ ಕರೆಯೋಲೆ


ಇದರಿಂದ ಮದುವೆಗೆ ಬರುವ ಸ್ನೇಹಿತರು, ಆಪ್ತರಿಗೆ ಮದುವೆ ಸ್ಥಳ ತಿಳಿಯದೇ ಇದ್ರೆ, ಸ್ಕ್ಯಾನ್ ಮಾಡಿದ್ರೆ ಸಾಕು. ಮದುವೆ ನಡೆಯೋ ಸ್ಥಳದ ವಿವರಣೆ ದೊರೆಯುತ್ತದೆ. ಇಷ್ಟು ಬಿಟ್ರೆ, ಇದೇ ತಿಂಗಳು-27 ರಂದು ಭಾನುವಾರ ಮದುವೆ ನೆರವೇರುತ್ತಿದೆ.


ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದಿತಿ-ಯಶಸ್ವಿ ಮದುವೆ
ಅದಿತಿ ಪ್ರಭುದೇವ ಮತ್ತು ಯಶಸ್ವಿ ಮದುವೆಯ ಸಮಾರಂಭ ಬೆಂಗಳೂರಿನಲ್ಲಿ ಪ್ಲಾನ್ ಆಗಿದೆ. ಅರಮನೆಯ ಮೈದಾನದಲ್ಲಿ ಯಶಸ್ವಿ ಹಾಗೂ ಅದಿತಿ ಪ್ರಭುದೇವ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಯಶಸ್ವಿ ಒಬ್ಬ ಉದ್ಯಮಿ ಆಗಿದ್ದಾರೆ. ಕಾಫಿ ಪ್ಲಾಂಟರ್ ಕೂಡ ಹೌದು.


ಇದನ್ನೂ ಓದಿ: Manasi Sudhir: ಮತ್ತೊಮ್ಮೆ ಅಮ್ಮನಾಗಿ ಪ್ರೇಕ್ಷಕರ ಮುಂದೆ ಬಂದ ಕಾಂತಾರದ ಕಮಲಕ್ಕ!


ಗುರು-ಹಿರಿಯರ ಸಮ್ಮುಖದಲ್ಲಿಯೇ ಅದಿತಿ ಮತ್ತು ಯಶಸ್ವಿ ಹೊಸ ಜೀವನದ ಒಲವಿನ ಅಧ್ಯಾಯವನ್ನ ಆರಂಭಿಸುತ್ತಿದ್ದಾರೆ.

First published: