ಕನ್ನಡ (Kannada) ಅಂದರೆ ಈ ನಟಿಗೆ ಪಂಚ ಪ್ರಾಣ. ಕನ್ನಡ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು ಅದಿತಿ ಪ್ರಭುದೇವ (Aditi Prabhudeva). ಬೇರೆ ಭಾಷೆಯಿಂದ ಆಫರ್ ಬಂದರೂ ಎಲ್ಲವನ್ನೂ ತಿರಸ್ಕರಿಸ ಕೇವಲ ಕನ್ನಡ ಸಿನಿಮಾದಲ್ಲಿ ಮಾತ್ರ ನಟಿಸುತ್ತೇನೆ ಎಂದು ಹೇಳಿದ ಏಕೈಕ ನಟಿ ಅಂದರೆ ಅದು ನಮ್ಮ ಆದತಿ ಪ್ರಭುದೇವ ಇರಬೇಕು. ಇತ್ತೀಚೆಗಷ್ಟೇ ಯಾರಿಗೂ ಹೇಳದೇ ಅದಿತಿ ಪ್ರಭುದೇವ ಯಶಸ್ ಎಂಬುವವರ ಜೊತೆ ನಿಶ್ಚಿತಾರ್ಥ (Engagement) ಮಾಡಿಕೊಂಡಿದ್ದರು. ಶಾನೆ ಟಾಪಾಗವಳೆ ಎಂದು ಕನ್ನಡಿಗರನ ಮನ ಗೆದ್ದಿದ್ದ ದಾವಣಗೆರೆಯ ಸುಂದರಿ ಅದಿತಿ ಪ್ರಭುದೇವ ಎಂಗೇಜ್ (Engage) ಆಗಿದ್ದರು. ಈ ವಿಚಾರ ಸ್ಯಾಂಡಲ್ವುಡ್ನಲ್ಲಿ ಸಖತ್ ಸೌಂಡ್ (Sound) ಮಾಡಿತ್ತು. ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಾಕುವ ಮೂಲಕ ತಮ್ಮ ನಿಶ್ಚಿತಾರ್ಥದ ಬಗ್ಗೆ ಅದಿತಿ ಪ್ರಭುದೇವ ಮಾಹಿತಿ ನೀಡಿದ್ದರು. ಕೊಡಗಿ (Kodagu)ನಲ್ಲಿ ಕಾಫಿ ತೋಟದ ಮಾಲೀಕರಾಗಿರುವ ಯಶಸ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡು ತಮ್ಮ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ಇದೀಗ ನಟಿ ಅದಿತಿ ಪ್ರಭುದೇವ ಅವರ ಭಾವಿ ಪತಿ ಯಶಸ್ ಜೊತೆ ಹೊಸ ವರ್ಷ ಸಂಭ್ರಮಾಚರಣೆ ಮಾಡಿದ್ದಾರೆ. ತಮ್ಮ ಸಂಭ್ರಮಾಚರಣೆಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಕೊಡಗಿನಲ್ಲಿ ಹೊಸ ವರ್ಷ ಸೆಲೆಬ್ರೆಟ್ ಮಾಡಿದ ಅದಿತಿ!
ಅದಿತಿ ಪ್ರಭುದೇವ ಹೊಸ ವರ್ಷವನ್ನು ಬರಮಾಡಿಕೊಳ್ಳಲು ತನ್ನ ಭಾವಿ ಪತಿ ಊರು ಕೊಡಗಿಗೆ ತೆರಳಿದ್ದರು. ಯಶಸ್ ಅವರ ಮನೆಯಿಂದ ಕೆಲವೇ ನಿಮಿಷಗಳ ದೂರದಲ್ಲಿ ಪಶ್ಚಿಮ ಘಟ್ಟಗಳಿವೆ. ಆ ಘಟ್ಟಗಳ ಮೇಲೆ ಟೆಂಟ್ ಹಾಕಿಕೊಂಡು ಹೊಸ ವರ್ಷವನ್ನು ಸೆಲೆಬ್ರೆಟ್ ಮಾಡಿದ್ದಾರೆ. ಈ ವೇಳೆ ಸಾಗುವ ದಾರಿಯಲ್ಲಿ ಕಾಡು ಕೋಣ, ಕಾಡಾನೆಯನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಫೈಯರ್ ಕ್ಯಾಂಪ್ ಹಾಕೊಂಡು ಎಂಜಾಯ್ ಮಾಡಿದ್ದಾರೆ. ಬೆಟ್ಟದಿಂದ ಹರಿದು ಬರುವ ಫ್ರೆಶ್ ನೀರನ್ನು ಕುಡಿದು ಖುಷಿ ಪಟ್ಟಿದ್ದಾರೆ. ಪ್ರಕೃತಿ ಸೌಂದರ್ಯವನ್ನು ಕಂಡು ಎಂಜಾಯ್ ಮಾಡಿದ್ದಾರೆ. ಇದನ್ನು ವಿಡಿಯೋ ಮಾಡಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಇದನ್ನು ಓದಿ : Aditi Prabhudeva ಮನ ಗೆದ್ದ ರೈತನ ಮಗ.. ಗುಟ್ಟಾಗಿ ಎಂಗೇಜ್ಮೆಂಟ್ ಮಾಡಿಕೊಂಡ ಸ್ಯಾಂಡಲ್ವುಡ್ ನಟಿ!
ಆರೆಂಜ್ ಮ್ಯಾರೇಜ್ ಆಗ್ತಿದ್ದಾರೆ ನಟಿ ಅದಿತಿ!
ನಟಿ ಅದಿತಿ ಪ್ರಭುದೇವ ಲವ್ ಮಾಡಿ ಮದುವೆ ಆಗುತ್ತಿದ್ದಾರೆ ಎನ್ನಲಾಗಿತ್ತು. ಆದರೆ ಅದಿತಿ ಮಾತ್ರ ಈ ವಿಚಾರದಲ್ಲಿ ತಾವು, ಮದುವೆ ಆದರೆ ಅರೇಂಜ್ ಮ್ಯಾರೇಜ್ ಆಗುವುದು ಎನ್ನುತ್ತಿದ್ದರು. ಅಂತೆಯೇ ಈಗ ಮದುವೆಗೆ ಅಣಿಯಾಗಿದ್ದಾರೆ. ಮನೆಯವರು ನೋಡಿದ ಹುಡುಗ ಯಶಸ್ ಜೊತೆಗೆ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ. ರೈತರನ್ನು ಮದುವೆ ಆಗಬೇಕು ಎನ್ನುವ ಆಸೆ ಅದಿತಿಗೆ ಮೊದಲಿಂದಲೂ ಇತ್ತು. ಹಾಗೆಯೇ ಮನೆಯಲ್ಲಿ ಅಂತಹ ಹುಡುಗನನ್ನೇ ಹುಡುಕಿದ್ದಾರೆ. ಯಶಸ್ ಅವರು ಅದಿತಿ ಕುಟುಂಬಕ್ಕೆ ಸ್ನೇಹಿತರಾಗಿದ್ದರು. ಹಾಗಾಗಿ ಕುಟುಂಬಸ್ಥರೆ ಅದಿತಿಗೆ ಯಶಸ್ ಅವರನ್ನು ಮದುವೆ ಮಾಡಲು ನಿರ್ಧರಿಸಿದ್ದಾರೆ. ಯಶಸ್ ಕಾಫಿ ತೋಟದ ಮಾಲಿಕ ಮತ್ತು ಬಿಲ್ಡರ್.
ಇದನ್ನು ಓದಿ : ಪ್ರೇಕ್ಷಕರಿಗೆ 10 ಕೋಟಿ ರೂ. ವಾಪಸ್ ಕೊಡ್ಬೇಕು ಪ್ರೊಡ್ಯೂಸರ್: ಹಿಂಗಾದ್ರೆ... ಮುಂದೆ ಹೆಂಗೆ ಸ್ವಾಮಿ!
ಭಾವಿ ಪತ್ನಿ ಜೊತೆ ಫೋಟೋ ಪೋಸ್ಟ್ ಮಾಡಿದ ಯಶಸ್!
ಇನ್ನೂ ಅದಿತಿ ಪ್ರಭುದೇವ ಅವರನ್ನು ಮದುವೆಯಾಗುತ್ತಿರುವ ಯಶಸ್ ಕೂಡ ಅದಿತಿ ಜೊತೆ ಇರುವ ಫೋಟೋವೊಂದನ್ನು ಶೇರ್ ಮಡಿಕೊಂಡಿದ್ದಾರೆ. ಈ ಫೋಟೋ ಕಂಡ ನೆಟ್ಟಿಗರು ಇಬ್ಬರು ತುಂಬಾ ಚೆನ್ನಾಗಿ ಕಾಣಿಸುತ್ತೀರ. ನಿಮ್ಮ ಜೋಡಿ ತುಂಬಾ ಮುದ್ದಾಗಿದೆ. ಆದಷ್ಟು ಬೇಗ ಮದುವೆಯಾಗಿಬಿಡಿ ಎಂದು ಕಮೆಂಟ್ ಮಾಡುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ