ಮರಾಠಿ ಚಿತ್ರದಲ್ಲೂ ಕನ್ನಡದ ಶ್ಯಾನೆ ಟಾಪ್ ಹುಡುಗಿ

ಮರಾಠಿ ಚಾಂಪಿಯನ್​ನಲ್ಲಿ ಸಚಿನ್ ಧನ್​ಪಾಲ್ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಕನ್ನಡದಲ್ಲಿ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಸದ್ಯ ಮರಾಠಿ ವರ್ಷನ್​ನತ್ತ ಮುಖ ಮಾಡಿದೆ.

zahir | news18-kannada
Updated:January 22, 2020, 11:13 AM IST
ಮರಾಠಿ ಚಿತ್ರದಲ್ಲೂ ಕನ್ನಡದ ಶ್ಯಾನೆ ಟಾಪ್ ಹುಡುಗಿ
Aditi prabhudev
  • Share this:
ಸ್ಯಾಂಡಲ್​ವುಡ್​ನಲ್ಲಿ ಮಿಂಚುತ್ತಿರುವ ಚೆಂದುಳ್ಳಿ ಚೆಲುವೆ ಅದಿತಿ ಪ್ರಭುದೇವ ಇತ್ತ ಕನ್ನಡದಲ್ಲೂ ಅತ್ತ ಮರಾಠಿ ಚಿತ್ರದಲ್ಲೂ ಬಣ್ಣ ಹಚ್ಚಲು ರೆಡಿಯಾಗಿದ್ದಾರೆ. ಸಾಹುರಾಜ್ ಶಿಂಧೆ ನಿರ್ದೇಶಿಸಲಿರುವ 'ಚಾಂಪಿಯನ್' ಚಿತ್ರಕ್ಕೆ ಅದಿತಿ ಸಹಿ ಮಾಡಿದ್ದು, ಈ ಸಿನಿಮಾ ಎರಡು ಭಾಷೆಗಳಲ್ಲಿ ತೆರೆಗೆ ಬರಲಿದೆ.

ಅಂದರೆ ಕನ್ನಡದಲ್ಲೂ ಹಾಗೂ ಮರಾಠಿಯಲ್ಲೂ ಈ ಚಿತ್ರವನ್ನು ಪ್ರತ್ಯೇಕವಾಗಿ ಚಿತ್ರೀಕರಿಸಲಾಗುತ್ತದೆ. ಮರಾಠಿ ಚಾಂಪಿಯನ್​ನಲ್ಲಿ ಸಚಿನ್ ಧನ್​ಪಾಲ್ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಕನ್ನಡದಲ್ಲಿ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಸದ್ಯ ಮರಾಠಿ ವರ್ಷನ್​ನತ್ತ ಮುಖ ಮಾಡಿದೆ.

ಈ ಎರಡು ಸಿನಿಮಾದಲ್ಲೂ ನಾಯಕಿ ಅದಿತಿ ಪ್ರಭುದೇವ ಕಾಣಿಸಿಕೊಳ್ಳಲಿದ್ದು, ಇಲ್ಲಿ ಬ್ರಹ್ಮಚಾರಿ ಬೆಡಗಿ ಕಾಲೇಜು ಕುವರಿಯಾಗಿ ಬಣ್ಣ ಹಚ್ಚಲಿದ್ದಾರೆ. ಕ್ರೀಡಾ ಕಥಾಹಂದರ ಹೊಂದಿರುವ ಈ ಚಿತ್ರ ಲವ್ ಕಮ್ ಕಾಮಿಡಿ ಜಾನರ್​ನಲ್ಲಿ ಮೂಡಿ ಬರಲಿದೆ.

ಕನ್ನಡದ ಚಾಂಪಿಯನ್​ನಲ್ಲಿ  ದೇವರಾಜ್, ಅವಿನಾಶ್, ರಂಗಾಯಣ ರಘು, ಚಿಕ್ಕಣ್ಣ, ಸುಮನ್ ಮುಂತಾದವರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅಲ್ಲದೆ ಮರಾಠಿ ಚಾಂಪಿಯನ್​ಗಾಗಿ ತಾರಾಗಣದ ಆಯ್ಕೆಯಲ್ಲಿ ನಿರತರಾಗಿದ್ದಾರೆ ನಿರ್ದೇಶಕ ಸಾಹುರಾಜ್ ಶಿಂಧೆ.
First published:January 22, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ