ಕನ್ನಡದ ಆ್ಯಕ್ಷನ್ ಕ್ವೀನ್ ಮಾಲಾಶ್ರೀ (Action Queen Malashri New Movie) ಅವರು ಮತ್ತೆ ಬಂದಿದ್ದಾರೆ. ಇಡೀ ಚಿತ್ರದಲ್ಲಿ ಇವರದ್ದೇ ಫುಲ್ ಖದರ್ ಇದೆ. ಈ ಹಿಂದಿನ ಚಿತ್ರದ (Malashri Special Role) ಪಾತ್ರಗಳನ್ನ ಈ ಚಿತ್ರಕ್ಕೆ ಹೋಲಿಸಿದ್ರೆ ಮಾಲಾಶ್ರೀ ಅವರಿಗೆ ಈ ಚಿತ್ರದ ಪಾತ್ರ ವಿಭಿನ್ನವಾದ ಫೀಲ್ ಕೊಟ್ಟಿದೆ. ಮಾಲಾಶ್ರೀ (Malashri Movie Teaser Released) ಅವರು ಚಿತ್ರದ ಕಥೆ ಕೇಳಿಯೇ ಈ ಪಾತ್ರ ಒಪ್ಪಿದ್ದಾರೆ. ತುಂಬಾ ಇಷ್ಟವಾದ ಪಾತ್ರವನ್ನ ಈ ಚಿತ್ರದಲ್ಲಿ ಮಾಡಿದ್ದಾರೆ. ಮಾಲಾಶ್ರೀ ಚಿತ್ರ ಜೀವನದಲ್ಲಿ ಎಲ್ಲ ರೀತಿ (Kendada Seragu Cinema) ಸಿನಿಮಾ ಮಾಡಿದ್ದಾರೆ. ಆದರೆ ಈ ಸಿನಿಮಾ ಸಿಕ್ಕಾಪಟ್ಟೆ ಡಿಫರಂಟ್ ಅನ್ನೋದು ವಿಶೇಷ. ಈ ಚಿತ್ರದಲ್ಲಿ ಮಾಲಾಶ್ರೀ ಅವರ ಪಾತ್ರ ಏನು? ಎಲ್ಲ ಡಿಟೈಲ್ಸ್ ಇಲ್ಲಿದೆ.
ಆ್ಯಕ್ಷನ್ ಕ್ವೀನ್ ಮಲಾಶ್ರೀ ಮತ್ತೆ ಬಂದರು ನೋಡಿ!
ಕನ್ನಡದ ಕನಸಿನ ರಾಣಿ ಮಾಲಾಶ್ರೀ ಅವರು ಮತ್ತೆ ಬಣ್ಣ ಹಚ್ಚಿದ್ದಾರೆ. ಇವರು ಬಣ್ಣ ಹಚ್ಚಿದ ಈ ಚಿತ್ರದಲ್ಲಿ ಇವರು ಮೇನ್ ಲೀಡ್ ಪಾತ್ರಧಾರಿ ಅಲ್ವೇ ಅಲ್ಲ. ಸೆಕೆಂಡ್ ಹಾಫ್ನಲ್ಲಿ ಇವರ ಎಂಟ್ರಿ ಆಗುತ್ತದೆ. ಹಾಗೆ ಬರುವ ಮಾಲಾಶ್ರೀ ಅವರ ಪಾತ್ರದ ಖದರ್ ಜೋರಾಗಿಯೇ ಇರುತ್ತದೆ.
ಚಿತ್ರದ ನಿರ್ದೇಶಕ ರಾಕಿ ಸೋಮ್ಲಿ ಚಿತ್ರದಲ್ಲಿ ಮಾಲಾಶ್ರೀ ಅವರಿಂದ ಒಂದು ಪಾತ್ರ ಮಾಡಿಸಬೇಕು ಅಂದುಕೊಂಡರು. ಅದಕ್ಕಾಗಿಯೇ ಮಲಾಶ್ರೀ ಅವರನ್ನ ಅಪ್ರೋಚ್ ಮಾಡಿದರು. ಕಥೆ ಕೇಳಿದ ಬಳಿಕ ಓಕೆ ಅಂತಲೇ ಹೇಳಿದರು. ಅದರ ಫಲ ಈಗ ಮಾಲಾಶ್ರೀ ಈ ಚಿತ್ರದಲ್ಲಿ ಬೇರೆ ರೂಪದಲ್ಲಿಯೇ ಕಂಗೊಳಿಸುತ್ತಿದ್ದಾರೆ.
ಕೆಂಡದ ಸೆರಗು ಚಿತ್ರದಲ್ಲಿ ಮಾಲಾಶ್ರೀ ಪೊಲೀಸ್ ಕಮಿಷನರ್!
ಮಾಲಾಶ್ರೀ ಅವರಿಗೆ ಪೊಲೀಸ್ ಪಾತ್ರ ಹೊಸದೇನೂ ಅಲ್ಲ. ಈ ಹಿಂದಿನ ಚಿತ್ರಗಳಲ್ಲಿ ಮಾಲಾಶ್ರೀ ಅನೇಕ ಸಲ ಪೊಲೀಸ್ ಪಾತ್ರ ನಿರ್ವಹಿಸಿದ್ದಾರೆ. ಆದರೆ ಕೆಂಡದ ಸೆರಗು ಸಿನಿಮಾದ ಪಾತ್ರ ಮಾಲಾಶ್ರೀ ಅವರಿಗೆ ಬೇರೆಯದ್ದೇ ಫೀಲ್ ಕೊಟ್ಟಿದೆ. ಅಷ್ಟು ವಿಶೇಷ ಅನಿಸೋ ಈ ಪಾತ್ರಕ್ಕೆ ಮಾಲಾಶ್ರೀ ಅವರು ಇಲ್ಲಿ ಜೀವ ತುಂಬಿದ್ದಾರೆ.
ಮಾಲಾಶ್ರೀ ಈ ಚಿತ್ರದಲ್ಲಿ ಕಮಿಷನರ್ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ಪಾತ್ರದ ಮೂಲಕ ಎಲ್ಲರ ಹೃದಯವನ್ನ ಕದಿಯಲು ಬರುತ್ತಿದ್ದಾರೆ. ವಿಶೇಷವೆಂದ್ರೆ, ಮಾಲಾಶ್ರೀ ಅವರು ತಮ್ಮ ಈ ಪಾತ್ರಕ್ಕೆ ತಾವೇ ಡಬ್ ಮಾಡುತ್ತಿದ್ದಾರೆ. ಅಲ್ಲಿಗೆ ಮಾಲಾಶ್ರೀ ಅವರ ಓರಿಜಿನಲ್ ವಾಯ್ಸ್ನಲ್ಲಿ ಡೈಲಾಗ್ಗಳನ್ನು ಈ ಚಿತ್ರದಲ್ಲಿ ಕೇಳಬಹುದು.
ಕೆಂಡದ ಸೆರಗು ಚಿತ್ರದಲ್ಲಿ ಬಿಗ್ ಬಾಸ್ ಭೂಮಿ ಶೆಟ್ಟಿ!
ಕೆಂಡದ ಸೆರಗು ಸಿನಿಮಾದಲಿ ಬಿಗ್ ಬಾಸ್ ಭೂಮಿ ಶೆಟ್ಟಿ ಮೇನ್ ಲೀಡ್ ನಲ್ಲಿದ್ದಾರೆ. ಚಿತ್ರದಲ್ಲಿ ವೇಶ್ಯೆ ಪುತ್ರಿಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅದಕ್ಕೂ ಹೆಚ್ಚಾಗಿ ಭೂಮಿ ಶೆಟ್ಟಿ ಈ ಚಿತ್ರದಲ್ಲಿ ಕುಸ್ತಿಪಟು ಆಗಿ ಅಭಿನಯಿಸಿದ್ದಾರೆ.
ಈ ಒಂದು ಪಾತ್ರಕ್ಕಾಗಿ ಸಾಕಷ್ಟು ತಯಾರಿ ಕೂಡ ಮಾಡಿದ್ದಾರೆ. ಈ ಒಂದು ತಯಾರಿಯಿಂದಲೇ ಭೂಮಿ ಶೆಟ್ಟಿ ಪಾತ್ರ ಈ ಚಿತ್ರದಲ್ಲಿ ಅದ್ಭುತವಾಗಿ ಮೂಡಿ ಬಂದಿದೆ. ರಿಯಲ್ ಕುಸ್ತಿಪಟು ರೀತಿಯಲ್ಲಿ ಭೂಮಿ ಶೆಟ್ಟಿ ಇಡೀ ಚಿತ್ರದಲ್ಲಿ ಕಂಗೊಳಿಸಿದ್ದಾರೆ.
ಬೀಡಿ ಅಂಗಡಿ ಸ್ನೇಹಿತನೇ ಈ ಚಿತ್ರದ ನಿರ್ಮಾಪಕ!
ಕೆಂಡದ ಸೆರಗು ಚಿತ್ರ ಕಾದಂಬರಿಯನ್ನ ಆಧರಿಸಿದೆ. ಈ ಕಾದಂಬರಿ ಬರೆದವರು ಬೇರೆ ಯಾರೋ ಅಲ್ಲ. ಚಿತ್ರದ ನಿರ್ದೇಶಕ ರಾಕಿ ಸೋಮ್ಲಿ ಮೊದಲು ಕೆಂಡದ ಸೆರಗು ಹೆಸರಿನ ಕಾದಂಬರಿ ಬರೆದಿದ್ದಾರೆ. ಅದೇ ಕಾದಂಬರಿಯನ್ನ ಆಧರಿಸಿಯೇ ಈಗ ಕೆಂಡದ ಸೆರಗು ಚಿತ್ರ ಮಾಡಿದ್ದಾರೆ.
ರಾಕಿ ಸೋಮ್ಲಿ ಸ್ನೇಹಿತ ಕೆ.ಕೊಟ್ರೇಶ್ ಗೌಡ ಈ ಚಿತ್ರವನ್ನ ನಿರ್ಮಿಸಿದ್ದಾರೆ. ದಾವಣಗೆರೆಯಲ್ಲಿ ಇವರದೊಂದು ಬೀಡಿ ಅಂಗಡಿ ಇದೆ. ಗೆಳೆಯನ ಸಿನಿಮಾ ಆಸಕ್ತಿ ಮತ್ತು ಕಾದಂಬರಿಯ ಬಗ್ಗೆ ತಿಳಿದುಕೊಂಡಿದ್ದಾರೆ. ಈ ಒಂದು ಕಾರಣಕ್ಕೆ ಇದ್ದ ಸೈಟ್ ಮತ್ತು ಚಿನ್ನವನ್ನ ಮಾರಿ ಈ ಚಿತ್ರವನ್ನ ಮಾಡಿದ್ದಾರೆ.
ಇದನ್ನೂ ಓದಿ: BBC ಸಾಕ್ಷ್ಯಚಿತ್ರಕ್ಕೆ ಬೀಳುತ್ತಾ ಬ್ರೇಕ್? ಈವರೆಗೆ ಭಾರತ ಸರ್ಕಾರ ಬ್ಯಾನ್ ಮಾಡಿದ ಸಿನಿಮಾಗಳ ಲಿಸ್ಟ್ ಇಲ್ಲಿದೆ
ಕೆಂಡದ ಸೆರಗು ಚಿತ್ರದ ಟೀಸರ್ ರಿಲೀಸ್ ಆಗಿದೆ. ಸಿನಿಮಾ ತಂಡ ತಮ್ಮ ಈ ಚಿತ್ರದ ಮಾಹಿತಿಯನ್ನ ಕೂಡ ಈಗ ಹಂಚಿಕೊಂಡಿದೆ. ಚಿತ್ರದಲ್ಲಿ ಯಶ್ ಶೆಟ್ಟಿ, ವರ್ಧನ್ ತೀರ್ಥಹಳ್ಳಿ, ಸಿಂಧು ಲೋಕನಾಥ್ ಸೇರಿದಂತೆ ಇನ್ನು ಅನೇಕರು ಅಭಿನಯಿಸಿದ್ದಾರೆ. ಇನ್ನುಳಿದಂತೆ ಈ ಚಿತ್ರ ತನ್ನದೇ ರೀತಿಯಲ್ಲಿ ಈಗಾಗಲೆ ಗಮನ ಸೆಳೆದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ