Yuva Movie: ಆ್ಯಕ್ಷನ್​ನೊಂದಿಗೆ ಶುರುವಾಗುತ್ತೆ ಓಪನಿಂಗ್ ಸೀನ್! ಯುವ ಶೂಟಿಂಗ್ ಶುರು

ಯುವ ಸಿನಿಮಾದಲ್ಲಿ ಭರ್ಜರಿ ಆ್ಯಕ್ಷನ್ ಸೀನ್ ಪ್ಲಾನ್

ಯುವ ಸಿನಿಮಾದಲ್ಲಿ ಭರ್ಜರಿ ಆ್ಯಕ್ಷನ್ ಸೀನ್ ಪ್ಲಾನ್

ತುಂಬಾನೇ ಥ್ರಿಲ್ಲಿಂಗ್ ಅನಿಸೋ ಸಾಹಸದ ಮೂಲಕವೇ ಯುವ ಸಿನಿಮಾದ ಶೂಟಿಂಗ್ ಶುರು ಆಗುತ್ತಿದೆ. ಆದರೆ ಯಾವಾಗ ಅನ್ನೋ ಪ್ರಶ್ನೆ ಕೂಡ ಇತ್ತು. ಅದಕ್ಕೆ ಉತ್ತರ ಕೂಡ ಈಗ ಸಿಕ್ಕಿದೆ.

  • News18 Kannada
  • 2-MIN READ
  • Last Updated :
  • Bangalore [Bangalore], India
  • Share this:
  • published by :

ಸ್ಯಾಂಡಲ್‌ವುಡ್‌ಗೆ ದೊಡ್ಮನೆ ಯುವ ರಾಜಕುಮಾರ್ (Yuva Movie Updates) ಎಂಟ್ರಿ ಕೊಟ್ಟಾಗಿದೆ. ಸಿನಿಮಾದ ಮುಹೂರ್ತ ಕೂಡ ಅದ್ಧೂರಿಯಾಗಿಯೇ ಆಗಿದೆ. ಅಷ್ಟೇ ಯಾಕೆ ಟೈಟಲ್ ಜೊತೆಗೆ ಟೀಸರ್ ಸಹ ರಿಲೀಸ್ ಆಗಿದೆ. ಚಿತ್ರಕ್ಕೆ (Yuva Film Latest Updates) ಬೇಕಾಗೋ ಎಲ್ಲ ತಯಾರಿನೂ ನಡೆಯುತ್ತಿದೆ. ನಾಯಕ ನಟ ಯುವ ರಾಜಕುಮಾರ್ ಕೂಡ ಎಲ್ಲ ಸಿದ್ದತೆ ಮಾಡಿಕೊಂಡಿದ್ದಾರೆ. ಚಿತ್ರಕ್ಕೆ ಬೇಕಾಗೋ ಎಲ್ಲ (Yuva Movie Shooting Soon) ಆ್ಯಕ್ಷನ್‌ಗಳನ್ನು ಚಿತ್ರಕ್ಕೆ ಬೇಕಾಗೋ ಡ್ಯಾನ್ಸ್ ಅನ್ನ ಕಲಿತುಕೊಂಡೇ ಫ್ಲೋರ್‌ಗೆ ಬರ್ತಿದ್ದಾರೆ. ಆದರೆ ಸಿನಿಮಾದ ಡೈರೆಕ್ಟರ್ ಸಂತೋಷ್ ಆನಂದರಾಮ್ ಸಿನಿಮಾವನ್ನ ದೊಡ್ಡಮಟ್ಟದ (Yuva Rajkumar Cinema Updates) ಸೀನ್‌ನೊಂದಿಗೇನೆ ಆರಂಭಿಸುತ್ತಿದ್ದಾರೆ. ಆ ಬಗೆಗಿನ ಒಂದಷ್ಟು ಮಾಹಿತಿ ಇಲ್ಲಿದೆ ಓದಿ.


ಯುವ ರಾಜಕುಮಾರ್ ಯುವ ಚಿತ್ರದ ಶೂಟಿಂಗ್ ಯಾವಾಗ?


ಕನ್ನಡದ ಯುವ ಸಿನಿಮಾ ಭರವಸೆ ಮೂಡಿಸಿದೆ. ಚಿತ್ರದ ಒಂದೇ ಒಂದು ಟೀಸರ್ ಈಗ ಕುತೂಹಲ ಮೂಡಿಸಿದೆ. ನಮ್ಮ ಸಿನಿಮಾ ಹಾಗೂ ನಮ್ಮ ಸಿನಿಮಾದ ಹೀರೋ ಹೀಗೆ ಕಾಣ್ತಾರೆ ಅನ್ನೊದನ್ನ ತಿಳಿಸಲೆಂದೇ ಡೈರೆಕ್ಟರ್ ಸಂತೋಷ್ ಆನಂದರಾಮ್ ಒಂದು ಟೀಸರ್ ಮಾಡಿದ್ದರು.


Kannada Actor Yuva Rajkumar Yuva Movie Latest Updates
ಯುವ ಸಿನಿಮಾದಲ್ಲಿ ಭರ್ಜರಿ ಆ್ಯಕ್ಷನ್ ಸೀನ್ ಪ್ಲಾನ್


ಯುವ ರಾಜಕುಮಾರ್ ಸಿನಿಮಾದ ಹೊಸ ಅಪ್‌ಡೇಟ್ಸ್ ಏನು?

ಆ ಟೀಸರ್ ಮಾರ್ಚ್-03 ನೇ ತಾರೀಖು ರಿಲೀಸ್ ಆಗಿತ್ತು. ರಾಜವಂಶದ ಅಭಿಮಾನಿಗಳಲ್ಲಿ ಹೊಸದೊಂದು ಭರವಸೆ ಮೂಡಿತ್ತು ಅದೇ ಚಿತ್ರದ ಟೀಸರ್ ಈಗಲೂ ಒಂದು ಸೆಳೆತ ಹುಟ್ಟಿಸಿದೆ. ಹಾಗೇನೆ ದಿನೇ ದಿನೇ ಸಿನಿಮಾದ ಬಗೆಗಿನ ಒಂದು ಕುತೂಹಲವನ್ನೂ ಹೆಚ್ಚಿಸಿದೆ.




ಇದೀಗ ಸಿನಿಮಾದ ಹೊಸ ಮಾಹಿತಿ ಕೂಡ ಹೊರ ಬಂದಿದೆ. ಮೊನ್ನೆ ಮೊನ್ನೆ ಚಿತ್ರದ ಸೆಟ್ ನಿರ್ಮಾಣ ಕಾರ್ಯ ಶುರು ಆಗಿದೆ. ಅದಕ್ಕಾಗಿಯೇ ಸರಳ ಪೂಜೆ ಕೂಡ ನಡೆದಿದೆ. ಸೆಟ್ ವರ್ಕ್ ಅನ್ನ ಸ್ಪೆಷಲ್ ಆ್ಯಕ್ಷನ್ ದೃಶ್ಯಕ್ಕಾಗಿಯೇ ಹಾಕಲಾಗುತ್ತಿದೆ.


ಯುವ ಸಿನಿಮಾದಲ್ಲಿ ಭರ್ಜರಿ ಆ್ಯಕ್ಷನ್ ಸೀನ್ ಪ್ಲಾನ್


ಆ್ಯಕ್ಷನ್ ದೃಶ್ಯ ಸಾಮಾನ್ಯವಾಗಿ ಇರೋದಿಲ್ಲ ಅನಿಸುತ್ತದೆ. ತುಂಬಾನೇ ಥ್ರಿಲ್ಲಿಂಗ್ ಅನಿಸೋ ಸಾಹಸದ ಮೂಲಕವೇ ಯುವ ಸಿನಿಮಾದ ಶೂಟಿಂಗ್ ಶುರು ಆಗುತ್ತಿದೆ. ಆದರೆ ಯಾವಾಗ ಅನ್ನೋ ಪ್ರಶ್ನೆ ಕೂಡ ಇತ್ತು. ಅದಕ್ಕೆ ಉತ್ತರ ಕೂಡ ಈಗ ಸಿಕ್ಕಿದೆ.




ಸದ್ಯದ ಮಾಹಿತಿಯ ಪ್ರಕಾರ ಯುವ ಸಿನಿಮಾ ಶೂಟಿಂಗ್ ಅತೀ ಶೀಘ್ರದಲ್ಲಿಯೇ ಶುರು ಆಗುತ್ತಿದ್ದು, ಹೊಂಬಾಳೆ ನಿರ್ಮಾಣ ಸಂಸ್ಥೆಯ ಈ ಸಿನಿಮಾ ದೊಡ್ಡ ಬಜೆಟ್‌ನಲ್ಲಿಯೇ ತಯಾರಾಗುತ್ತಿದೆ. ಸಿನಿಮಾ ಶೂಟಿಂಗ್‌ಗಾಗಿ ಇತರ ಕೆಲಸವೂ ಭರದಿಂದಲೇ ಸಾಗಿವೆ.


ಏಪ್ರಿಲ್-09 ರಿಂದ ಯುವ ಸಿನಿಮಾ ಶೂಟಿಂಗ್ ಶುರು


ಇನ್ನು ಚಿತ್ರದ ಶೂಟಿಂಗ್ ಅನ್ನ ಏಪ್ರಿಲ್-09 ರಿಂದ ಆರಂಭಿಸಲಾಗುತ್ತಿದೆ. ಸಿನಿಮಾದ ಚಿತ್ರೀಕರಣವನ್ನ ಈ ದಿನವೇ ಆರಂಭಿಸಲು ಸಿನಿಮಾ ತಂಡ ಕೂಡ ಪ್ಲಾನ್ ಮಾಡಿದೆ. ಇದರ ಹೊರತಾಗಿ ಈ ಸಿನಿಮಾದ ಹೊಸ ಮಾಹಿತಿ ಏನೂ ಹೊರ ಬಿದ್ದಿಲ್ಲ ಅಂತಲೇ ಹೇಳಬಹುದು.


ಈ ಮೊದಲೇ ಸಿನಿಮಾ ತಂಡ ಹೇಳಿಕೊಂಡಂತೆ, ಯುವ ಸಿನಿಮಾದಲ್ಲಿ ಯುವ ರಾಜಕುಮಾರ್‌ಗೆ ಕಾಂತಾರ ಚೆಲುವೆ ಸಪ್ತಮಿ ಗೌಡ ಜೋಡಿ ಆಗುತ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನದ ಮಾಡುತ್ತಿದ್ದಾರೆ. ಇನ್ನುಳಿದಂತೆ ಸಿನಿಮಾದ ಮೊದಲ ಟೈಟಲ್ ಟೀಸರ್‌ ಮೂರು ಮಿಲಿಯನ್ ವೀವ್ಸ್ ಪಡೆದು ಮುನ್ನುಗ್ಗುತ್ತಿದೆ.


Kannada Actor Yuva Rajkumar Yuva Movie Latest Updates
ಏಪ್ರಿಲ್-09 ರಿಂದ ಯುವ ಸಿನಿಮಾ ಶೂಟಿಂಗ್ ಶುರು


ಅಂದು ಯುವರತ್ನ ಅಪ್ಪು ಇಂದು ಯುವ ಮೂಲ ಯುವರಾಜ್


ಯುವ ಸಿನಿಮಾ ಒಂದು ಯೂಥ್ ಮೂವಿನೇ ಆಗಿದೆ. ಈ ಮೂಲಕ ಡೈರೆಕ್ಟರ್ ಸಂತೋಷ್ ಆನಂದರಾಮ್ ಸ್ಪೆಷಲ್ ಕಥೆಯನ್ನ ಹೇಳುತ್ತಿದ್ದಾರೆ. ಸಂತೋಷ್ ಆನಂದರಾಮ್ ಈ ಹಿಂದೆ ಅಪ್ಪು ಜೊತೆಗೆ ಮಾಡಿದ್ದ ಯುವರತ್ನ ಚಿತ್ರದಲ್ಲಿ ಕಾಲೇಜ್ ಕಥೆಯನ್ನ ಹೇಳಿದ್ದರು.


ಇದನ್ನೂ ಓದಿ: Salman Khan: ಸಲ್ಲೂ ಶರ್ಟ್​ಲೆಸ್ ಫೋಟೋಗೆ ಫುಲ್ ಡಿಮ್ಯಾಂಡ್! ಶೇರ್ ಮಾಡಿ ಕೆಲವೇ ಗಂಟೆಗಳಲ್ಲಿ 2 ಮಿಲಿಯನ್ ಲೈಕ್ಸ್

top videos


    ಅದೇ ರೀತಿ ಯುವ ಸಿನಿಮಾದಲ್ಲೂ ಅಂತಹದ್ದೇ ಕಥೆ ಇರುತ್ತದೆಯೇ ಅನ್ನೋ ಪ್ರಶ್ನೆ ಕೂಡ ಇದೆ. ಸಿನಿಮಾದ ಟೈಟಲ್ ಟೀಸರ್ ನೋಡಿದ್ರೆ ಇದೊಂದು ಆ್ಯಕ್ಷನ್ ಪ್ಯಾಕ್ಡ್ ಸಿನಿಮಾ ಅಂತಲೇ ಅನಿಸುತ್ತದೆ. ಒಟ್ಟಾರೆ ಯುವ ಸಿನಿಮಾ ನಿರೀಕ್ಷೆ ಹುಟ್ಟಿಸುತ್ತಲೇ ಇದೆ.

    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು