Garadi Hero Yashas: ಭಟ್ಟರ ಗರಡಿಯಲ್ಲಿ ಹ್ಯಾಂಡ್ಸಮ್ ಪೈಲ್ವಾನ್! ಸಿನಿಮಾ ಗುಟ್ಟು ರಿವೀಲ್

ಈ ಸಾಫ್ಟ್ ಹೀರೋ ಗರಡಿ ಸಿನಿಮಾದಲ್ಲಿ ಖಡಕ್ ಫೈಲ್ವಾನ್ ಆಗಿ ಬಿಟ್ಟಿದ್ದಾರೆ. ಡೈರೆಕ್ಟರ್ ಯೋಗರಾಜ್ ಭಟ್ಟರ ಹೇಳಿದಂತೆ ಈ ಚಿತ್ರಕ್ಕೆ ತಯಾರ್ ಆಗಿದ್ದ ಯಶಸ್ ಅಪ್ಪಟ ದೇಶಿಯ ಕುಸ್ತಿ ಪೈಲ್ವಾನ್ ಆಗಿ ಹೊಳೆಯುತ್ತಿದ್ದಾರೆ.

ಗರಡಿ ಸಿನಿಮಾದ ನಾಯಕ ನಟ ಯಶಸ್ ಸೂರ್ಯ

ಗರಡಿ ಸಿನಿಮಾದ ನಾಯಕ ನಟ ಯಶಸ್ ಸೂರ್ಯ

  • Share this:
ಒಂದು ಸಿನಿಮಾ. ಆ ಸಿನಿಮಾ ಹೆಸರು ಗರಡಿ. ಈ ಗರಡಿ ಮನೆಯ ಮಾಸ್ಟರ್ ಯಾರು? ಅದಕ್ಕೆ ಉತ್ತರ ಸಿಂಪಲ್ ಆಗಿದೆ. ಅದು ಯೋಗರಾಜ್ ಭಟ್ ಅನ್ನೋದು ಅಷ್ಟೇ ಸತ್ಯ. ಗರಡಿ ಸಿನಿಮಾದ (Cinema) ಭಟ್ಟರ ಗರಡಿಯಲ್ಲಿ ಕುಸ್ತಿ ಆಡೋಕೆ ನಿಂತಿರೋ ಹೀರೋ ಯಾರ್ ಗೊತ್ತಿದೇ ಅಲ್ವೆ? ಹೌದು, ಅದು ಬೇರೆ ಯಾರೋ ಅಲ್ಲ. ಕನ್ನಡದ ಹ್ಯಾಂಡ್ಸಮ್ ಹೀರೋ (Handsome Hero) ಮಿಸ್ಟರ್ ಯಶಸ್. ಭಟ್ಟರ ಗರಡಿ ಸಿನಿಮಾದಲ್ಲಿ ಯಶಸ್ ಕುಸ್ತಿ ಆಡಿದ್ದಾರೆ. ರಿಯಲ್ ಕುಸ್ತಿನೇ ಆದಾಗಿದೆ. ಸಿನಿಮಾಗೋಸ್ಕರ ಯಶಸ್ ಸಖತ್ ತಯಾರಿ ಕೂಡ ಮಾಡಿಕೊಂಡಿದ್ದಾರೆ. ಭಟ್ಟರ ಜೊತೆಗಿನ ತಮ್ಮ ಈ ಮೊದಲ ಸಿನಿಮಾದ ಬಗ್ಗೆ ನಾಯಕ ನಟ ಯಶಸ್ (Yashas) ತುಂಬಾ ವಿಶೇಷ ವಿಚಾರಗಳನ್ನ ನಮ್ಮ ಜೊತೆಗೆ ಶೇರ್​ ಮಾಡಿಕೊಂಡಿದ್ದಾರೆ.

ಕನ್ನಡದ ಯುವ ನಾಯಕ ನಟ ಯಶಸ್ ಸಿಂಪಲ್ ಆಗಿಯೇ ಕಾಣ್ತಾರೆ. ರಫ್ ಆ್ಯಂಡ್ ಟಫ್ ಅನಿಸೋದೇ ಇಲ್ಲ. ಸಾಫ್ಟ್ ಕ್ಯಾರೆಕ್ಟರ್​ಗಳಿಗೆ ಯಶಸ್ ಸೂಟೇಬಲ್ ಅನ್ನೋ ಅಭಿಪ್ರಾಯ ಕೂಡ ಮೂಡುತ್ತದೆ.

ಕನ್ನಡದ ಸಾಫ್ಟ್ ಹೀರೋ ಗರಡಿ ಚಿತ್ರದಲ್ಲಿ ಖಡಕ್ ಪೈಲ್ವಾನ್
ಈ ಸಾಫ್ಟ್ ಹೀರೋ ಗರಡಿ ಸಿನಿಮಾದಲ್ಲಿ ಖಡಕ್ ಫೈಲ್ವಾನ್ ಆಗಿ ಬಿಟ್ಟಿದ್ದಾರೆ. ಡೈರೆಕ್ಟರ್ ಯೋಗರಾಜ್ ಭಟ್ಟರು ಹೇಳಿದಂತೆ ಈ ಚಿತ್ರಕ್ಕೆ ತಯಾರ್ ಆಗಿದ್ದ ಯಶಸ್ ಅಪ್ಪಟ ದೇಶಿಯ ಕುಸ್ತಿ ಪೈಲ್ವಾನ್ ಆಗಿ ಹೊಳೆಯುತ್ತಿದ್ದಾರೆ.

Kannada Actor Yashas Surya Shared Experience of his Garadi Movie
ಗರಡಿ ಸಿನಿಮಾದ ಸಖತ್ ಪೋಸ್ಟರ್


ಯಶಸ್ ಈ ಹಿಂದಿನ ಸಿನಿಮಾಗಳಲ್ಲಿ ಸಾಫ್ಟ್ ಕ್ಯಾರೆಕ್ಟರ್ ಗಳಲ್ಲಿಯೇ ಕಾಣಿಸಿಕೊಂಡಿದ್ದಾರೆ. ಗರಡಿ ಸಿನಿಮಾದಲ್ಲಿ ಆ ಎಲ್ಲ ಸಾಫ್ಟ್ ನೆಸ್ ಮಾಯವಾಗಿದೆ. ರಫ್​ ಆ್ಯಂಡ್ ಟಫ್ ಪೈಲ್ವಾನ್ ಆಗಿಯೇ ಹೊಸ ಅಧ್ಯಾಯವನ್ನೆ ಆರಂಭಿಸಿದ್ದಾರೆ.

ಗರಡಿ ಚಿತ್ರಕ್ಕಾಗಿ ನಾಯಕ ನಟ ಯಶಸ್ ಭಾರೀ ತಯಾರಿ
ಯೋಗರಾಜ್ ಭಟ್ಟರ ಈ ಗರಡಿ ಸಿನಿಮಾಕ್ಕಾಗಿಯೇ ಯಶಸ್, ಭಾರೀ ತಯಾರಿ ಕೂಡ ಮಾಡಿಕೊಂಡಿದ್ದರು. ರಿಯಲ್ ಪೈಲ್ವಾನರು ಮಾಡೋ ಎಲ್ಲ ಕಸರತ್ತುಗಳನ್ನ ಯಶಸ್ ಈ ಚಿತ್ರಕ್ಕಾಗಿಯೇ ಮಾಡಿದ್ದಾರೆ.

ಇದನ್ನೂ ಓದಿ: Olavina Nildana: ಪಾಲಾಕ್ಷ-ಚಕ್ರವರ್ತಿ ಸಂಚು ಸಫಲ, ಕಾಲೇಜಿನಿಂದ ಡಿಬಾರ್ ಆಗ್ತಾನಾ ಸಿದ್ಧಾಂತ್?

ಬರೋಬ್ಬರಿ ಎರಡು ತಿಂಗಳು ಪೈಲ್ವಾನ್ ಪಾತ್ರಕ್ಕಾಗಿ ಕಠಿಣ ಕಸರತ್ತು ಮಾಡಿದ್ದಾರೆ. ಡಯೆಟ್ ಅನ್ನೂ ಫಾಲೋ ಮಾಡಿದ್ದಾರೆ. ಯಶಸ್ ಈ ಚಿತ್ರಕ್ಕಾಗಿ ಮಾಡಿದ ಶ್ರಮ ತುಂಬಾನೆ ಇದೆ. ಅದರ ಫಲವೇ ಸಾಫ್ಟ್ ಯಶಸ್ ಈಗ ಅಪ್ಪಟ ಪೈಲ್ವಾನ್ ಆಗಿಯೇ ಕಾಣಿಸಿಕೊಂಡಿದ್ದಾರೆ.

Kannada Actor Yashas Surya Shared Experience of his Garadi Movie
ಗರಡಿ ಸಿನಿಮಾದ ಡಬ್ಬಿಂಗ್ ಶುರು


ಗರಡಿ ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣ
ಯೋಗರಾಜ್ ಭಟ್ಟರ ಗರಡಿ ಸಿನಿಮಾದ ಚಿತ್ರೀಕರಣದ ಕೆಲಸ ಬಹುತೇಕ ಪೂರ್ಣ ಆಗಿದೆ. ಇನ್ನೂ 10 ದಿನ ಚಿತ್ರೀಕರಣದ ಕೆಲಸ ಮಾತ್ರ ಬಾಕಿ ಇದೆ. ಹಾಡಿನ ಚಿತ್ರೀಕರಣವೂ ಇನ್ನಷ್ಟೇ ಆಗಬೇಕಿದೆ ಅನ್ನುತ್ತಾರೆ ಗರಡಿ ಸಿನಿಮಾದ ನಾಯಕ ನಟ ಯಶಸ್.

ಯೋಗರಾಜ್ ಭಟ್ಟರ ಸಿನಿಮಾ ತೆಗೆಯೋ ರೀತಿನೇ ಬೇರೆ
ಹೌದು, ಯೋಗರಾಜ್ ಭಟ್ಟರು ಸಿನಿಮಾ ತೆಗೆಯೋ ರೀತಿನೇ ಬೇರೆ ಇದೆ. ಪಾತ್ರಧಾರಿಗಳ ಮನಸ್ಸಿನಲ್ಲಿ ಆಯಾ ಪಾತ್ರಗಳನ್ನು ಮೊದಲು ತುಂಬುತ್ತಾರೆ. ಒಮ್ಮೆ ಆ ಕಲಾವಿದ ಪಾತ್ರದೊಳಗೆ ಇದ್ದಾನೆ ಅಂತ ತಿಳಿದ ಮೇಲೆ ಅಲ್ಲಿ ಭಟ್ಟರ ಆ ಕಲಾವಿದನಿಗೆ ಕಂಫರ್ಟ್ ಜೋನ್ ಕ್ರಿಯೇಟ್ ಮಾಡುತ್ತಾರೆ.

ಇದನ್ನೂ ಓದಿ: Koffe with Karan 7: ಕರಣ್ ಜೋಹರ್ ರಿಲೇಶನ್‌ಶಿಪ್‌ನಲ್ಲಿದ್ರಾ? ವರುಣ್ ಧವನ್ ಪ್ರಶ್ನೆಗೆ ನಟ ಹೇಳಿದ್ದು ಹೀಗೆ

ನಿಜ, ಈ ಒಂದು ಸತ್ಯವನ್ನ ಸ್ವತಃ ಗರಡಿ ಚಿತ್ರದ ನಾಯಕ ನಟ ಯಶಸ್ ಹೇಳಿಕೊಡಿದ್ದಾರೆ. ಯೋಗರಾಜ್ ಭಟ್ಟರು ಕಲಾವಿದರು ಹೇಳೋದನ್ನ ಕೇಳಿಸಿಕೊಳ್ತಾರೆ. ಚೆನ್ನಾಗಿದೆ ಅನಿಸಿದ್ರೆ ಅದನ್ನೂ ತೆಗೆದುಕೊಳ್ಳುತ್ತಾರೆ. ಭಟ್ಟರ ಸಿನಿಮಾ ಮೇಕಿಂಗ್ ಬೇರೆನೆ ಇದೆ.

ಭಟ್ಟರ ಸಿನಿಮಾ ಮೇಕಿಂಗ್ ಸ್ಟೈಲೇ ಬೇರೆ-ಯಶಸ್
ಗರಡಿ ಸಿನಿಮಾಗೋಸ್ಕರ ಮೂರು, ಮೂರು ಕ್ಯಾಮೆರಾಗಳನ್ನ ಬಳಸಿಕೊಳ್ಳಲಾಗಿದೆ. ಒಳ್ಳೆ ದೃಶ್ಯಕ್ಕಾಗಿಯೇ ಪಕ್ಕಾ ಪ್ಲಾನಿಂಗ್ ನಲ್ಲಿಯೇ ಭಟ್ಟರು ಸೆಟ್​ಗೆ ಬರ್ತಾರೆ. ಅವರು ಹೇಳೋವಾಗ ಬೇರೆ ಫೀಲ್ ಬರುತ್ತದೆ. ಒಂದು ಸಾರಿ ಅದನ್ನ ಮಾನಿಟರ್​ ನಲ್ಲಿ ನೋಡಿದಾಗ ಆಗೋ ಖುಷಿನೇ ಬೇರೆ. ನಿಜಕ್ಕೂ ಭಟ್ಟರು ಗ್ರೇಟ್ ಡೈರೆಕ್ಟರ್ ಅಂತಲೇ ಯಶಸ್ ಹೇಳಿಕೊಳ್ತಾರೆ.

Kannada Actor Yashas Surya Shared Experience of his Garadi Movie
ಗರಡಿ ಸಿನಿಮಾದ ಪ್ರಮುಖ ಪಾತ್ರದಲ್ಲಿ ಬಿ.ಸಿ.ಪಾಟೀಲ್


ಗರಡಿ ಸಿನಿಮಾದ ಡಬ್ಬಿಂಗ್ ಕೆಲಸವೂ ಈಗ ನಡೀತಾ ಇದೆ. ನಟ-ನಿರ್ಮಾಪಕ ಬಿ.ಸಿ.ಪಾಟೀಲ್​ ಅವರು ಈ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರವನ್ನು ಮಾಡುತ್ತಿದ್ದಾರೆ. ಅದರ ಡಬ್ಬಿಂಗ್ ಕೆಲಸವೂ ಈಗ ನಡೆಯುತ್ತಿದ್ದು, ಗರಡಿ ಸಿನಿಮಾ ಬಾದಾಮಿ, ಬೆಂಗಳೂರು, ರಾಮನಗರದಲ್ಲೆಡೆ ಚಿತ್ರೀಕರಣ ಆಗಿದೆ. ಈ ಮೂಲಕ ಯೋಗರಾಜ್ ಭಟ್ಟರು ಹೊಸ ರೀತಿಯ ಸಿನಿಮಾ ಕೊಡ್ತಿದ್ದಾರೆ. ವೇಟ್ ಮಾಡಿ.
First published: