ಕನ್ನಡದ ರಾಕಿಂಗ್ ಸ್ಟಾರ್ (Rocking Star Yash) ಯಶ್ ಯಾವ ಪಾತ್ರ ಮಾಡಿದ್ರೆ ಚೆನ್ನಾಗಿರುತ್ತದೆ. ಈ ಒಂದು ಕ್ವಶ್ಚನ್ ಇದ್ದೇ ಇದೆ. ಕೆಜಿಎಫ್ ರಾಕಿ ಭಾಯ್ ಬಿಯರ್ಡ್ (Beard Look) ಲುಕ್ ನಲ್ಲಿ ಕಾಣಿಸಿಕೊಂಡಿದ್ದೇ ತಡ, ಎಲ್ಲರಿಗೂ ಅದು ಕ್ರೇಜ್ (Craze) ರೂಪದಲ್ಲಿಯೇ ಕಾಣಿಸಿಕೊಂಡಿತು. ಈಗಲೂ ಈ ಬೀಯರ್ಡ್ ಲುಕ್ ಟ್ರೆಂಡಿಯಾಗಿಯೇ ಇದೆ. ಬಿಯರ್ಡ್ ಜಾಹೀರಾತಿನಲ್ಲೂ ರಾಕಿಂಗ್ ಸ್ಟಾರ್ ಯಶ್ ಕಾಣಿಸಿಕೊಂಡಿದ್ದಾರೆ. 2022 ರಲ್ಲಿ ಬಂದ ಕೆಜಿಎಫ್-2 ಬಂದ್ಮೇಲಂತೂ ಬಿಯರ್ಡ್ ಲುಕ್ನ ಕ್ರೇಜ್ ಡಬಲ್ ಟ್ರಿಪಲ್ ಆಗಿದೆ. ಅದೇ ಲುಕ್ ನಲ್ಲಿಯೇ ರಾಕಿಂಗ್ ಸ್ಟಾರ್ ಯಶ್ ಇದ್ದಾರೆ. ಅದನ್ನೆ ಮೆಂಟೇನ್ ಮಾಡುತ್ತಿದ್ದಾರೆ. ಇದರ ಹಿಂದಿನ ಗುಟ್ಟೇನು? (KGF-3) ಕೆಜಿಎಫ್-3 ಅನ್ನೋ ಮಾತು ಅತಿ ಹೆಚ್ಚು ಇದೆ. ಆದರೆ ಈಗೊಂದು ಫೋಟೋ ವೈರಲ್ ಆಗಿದೆ. ಇದರ ಸುತ್ತ ಒಂದಷ್ಟು ಇಂಟ್ರಸ್ಟಿಂಗ್ ವಿಷಯ ಇಲ್ಲಿದೆ ಓದಿ.
ಬಿಯರ್ಡ್ ಲುಕ್ ತಂದ ಶಿವಾಜಿ ರೂಪ-ಇದು ನಿಜವೇ?
ರಾಕಿಂಗ್ ಸ್ಟಾರ್ ಯಶ್ ಯಾವ ಪಾತ್ರ ಮಾಡಿದ್ರೆ ಚೆನ್ನಾಗಿ ಕಾಣುತ್ತಾರೆ. ಈ ಒಂದು ಪ್ರಶ್ನೆಗೆ ಫ್ಯಾನ್ಸ್ ತಮ್ಮದೇ ಆದ ರೀತಿಯಲ್ಲಿ ಅವರನ್ನ ಬಿಂಬಿಸುತ್ತಲೇ ಇರುತ್ತಾರೆ. ರಾಕಿಂಗ್ ಸ್ಟಾರ್ ಯಶ್ ಚಿತ್ರದ ಜೀವನದಲ್ಲಿ ಯಶ್ ಎಂದು ಲಾಂಗ್ ಬಿಯರ್ಡ್ ಬಿಟ್ಟವ್ರೇ ಅಲ್ಲ. ಟ್ರಿಮ್ಡ್ ಲುಕ್ ನಲ್ಲಿಯೇ ಕಾಣಿಸಿಕೊಂಡಿದ್ದರು.
ಮೊಗ್ಗಿನ ಮನಸು ಸಿನಿಮಾದಲ್ಲಂತೂ ಕ್ಲೀನ್ ಶೇವ್ಡ್ ಲುಕ್ನಲ್ಲಿಯೇ ಇದ್ದರು. ಲಕ್ಕಿ ಸಿನಿಮಾದಲ್ಲಿ ಟ್ರಿಮ್ಡ್ ಲುಕ್ ಇತ್ತು. ಮೊದಲ ಸಲ ಚಿತ್ರದಲ್ಲೂ ರಾಕಿ ಭಾಯ್ ಟ್ರಿಮ್ಡ್ ಲುಕ್ ಅಲ್ಲಿಯೇ ಕಾಣಿಸಿಕೊಂಡಿದ್ದರು. ಅದೇ ಲಕ್ಕಿ ಭಾಯ್ ಕೆಜಿಎಫ್ ಮೂಲಕ ಬಿಯರ್ಡ್ ಮ್ಯಾನ್ ಆಗಿ ಹೊಳೀತಾನೇ ಇದ್ದಾರೆ.
ಬಿಯರ್ಡ್ ಮ್ಯಾನ್ ಲಕ್ಕಿ ಶಿವಾಜಿ ಪಾತ್ರದಲ್ಲಿ ಹೇಗೆ ಕಾಣಿಸ್ತಾರೆ?
ಇದು ಈಗೀನ ಪ್ರಶ್ನೆ ಅಲ್ವೇ ಅಲ್ಲ. ಕೆಜಿಎಫ್ ವಿಶ್ವದಾದ್ಯಂತ ಹವಾ ಮಾಡಿದ್ದೇ ತಡ, ಶಿವಾಜಿ ರೋಲ್ ಮಾಡ್ಬೇಕು ಅನ್ನೋ ಒತ್ತಾಸೆ ಯಾರಿಂದ ಬಂತೋ ಗೊತ್ತಿಲ್ಲ. ಆದರೆ, ಫ್ಯಾನ್ ಮೇಡ್ ಫೋಸ್ಟರ್ ಗಳು ಸಿಕ್ಕಾಪಟ್ಟೆ ಹರಿದಾಡಿದ್ದವು. ಅದರಲ್ಲೂ ಒಂದು ಫೋಟೋವಂತೂ ಶಿವಾಜಿ ರೂಪವೇ ಆಗಿತ್ತು.
ಹೌದು, ಈ ಒಂದು ಫೋಟೋ ವರ್ಷ ವರ್ಷವೂ ಹರಿದಾಡುತ್ತಲೇ ಇದೆ. ಅದರಲ್ಲೂ ರಾಕಿಂಗ್ ಸ್ಟಾರ್ ಯಶ್ ಈ ಬಗ್ಗೆ ಎಲ್ಲೂ ಹೇಳಿಕೊಂಡಿಲ್ಲ. ನಾನು ಶಿವಾಜಿ ಪಾತ್ರವನ್ನ ಮಾಡ್ತಾ ಇದ್ದೀನಿ ಅನ್ನೋದನ್ನ ಕೂಡ ಮತ್ಯಾರು ಕನ್ಫರ್ಮ್ ಮಾಡಿಯೇ ಇಲ್ಲ. ಆದರೂ ಈ ಒಂದು ಫೋಟೋ ವೈರಲ್ ಆಗುತ್ತಲೇ ಇದೆ.
ರಾಕಿಂಗ್ ಸ್ಟಾರ್ ಯಶ್ ಜನ್ಮ ದಿನದ ತಯಾರಿ ಈಗಲೇ ಶುರು!
ಜನವರಿ-8 ರಂದು ಯಶ್ ಜನ್ಮ ದಿನ ಇದೆ. ಈ ದಿನಕ್ಕೆ ಈಗಲೇ ಅಭಿಮಾನಿಗಳ ತಯಾರಿ ನಡೆದಿದೆ. ಸೋಷಿಯಲ್ ಮೀಡಿಯಾದಲ್ಲಿ ಯಶ್ ಫ್ಯಾನ್ಸ್ ದಿನಗಳನ್ನ ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಮತ್ತೆ ಯಶ್ ಶಿವಾಜಿ ರೂಪದ ಫೋಟೋ ಮತ್ತೆ ಹರಿದಾಡುತ್ತಿದೆ.
ರಾಕಿಂಗ್ ಸ್ಟಾರ್ ಯಶ್ ಜನ್ಮ ದಿನಕ್ಕೆ ಫ್ಯಾನ್ಸ್ ಪಕ್ಕಾ ಪ್ಲಾನ್ ಮಾಡಿಕೊಂಡಿದ್ದಾರೆ. ಅದರ ಝಲಕ್ ಫ್ಯಾನ್ಸ್ ಪೇಜ್ ನಲ್ಲಿ ಅದರದ್ದೇ ರೀತಿಯಲ್ಲಿಯೇ ಕಾಣಿಸುತ್ತಿದೆ. ಇನ್ನುಳಿದಂತೆ ಯಶ್ ಜನ್ಮ ದಿನಕ್ಕೆ ಹೊಸ ಸಿನಿಮಾ ಅನೌನ್ಸ್ ಆಗುತ್ತದೆಯೇ? ಈ ಒಂದು ಪ್ರಶ್ನೆ ಈಗ ಮತ್ತೆ ಎದ್ದಿದೆ.
ರಾಕಿಂಗ್ ಸ್ಟಾರ್ ಯಶ್ ಜನ್ಮ ದಿನಕ್ಕೆ ಹೊಸ ಸಿನಿಮಾ ಅನೌನ್ಸ್ ಆಗುತ್ತಾ?
ರಾಕಿ ಭಾಯ್ ಎರಡು ವರ್ಷಕ್ಕೊಂದು ಮೂರು ವರ್ಷಕ್ಕೊಂದು ಅಂತ ಸಿನಿಮಾ ಮಾಡ್ತಿದ್ದಾರೆ. ಅದು ಕೆಜಿಎಫ್ ಸಿನಿಮಾದ ವಿಚಾರದಲ್ಲಿಯೇ ಎಲ್ಲರಿಗೂ ಗೊತ್ತಾಗಿದೆ. ಆದರೆ, ಕೆಜಿಎಫ್-2 ಬಂದ್ಮೇಲೆ ಯಶ್ ಬೇರೆ ಯಾವುದೇ ಸಿನಿಮಾ ಅನೌನ್ಸ್ ಆಗಿಯೇ ಇಲ್ಲ.
ಇದನ್ನೂ ಓದಿ: Kabir Bedi: ಕನ್ನಡಕ್ಕೆ ಮತ್ತೆ ಬಂದ ಹಾಲಿವುಡ್ ನಟ ಕಬೀರ್ ಬೇಡಿ, ಸಿನಿಮಾ ಬಗ್ಗೆಯೂ ಮಾಹಿತಿ ರಿವೀಲ್
ಈ ಹಿನ್ನೆಲೆಯಲ್ಲಿ ಕುತೂಹಲ ಇನ್ನಷ್ಟು ಮತ್ತಷ್ಟು ಹೆಚ್ಚಾಗುತ್ತಲೇ ಇದೆ. ಇದರ ಬೆನ್ನಲ್ಲಿಯೇ ಯಶ್ ತಮ್ಮ ಜನ್ಮ ದಿನಕ್ಕೆ ಹೊಸದೇನೋ ಹೇಳ್ತಾರೆ ಅನ್ನೋ ನಿರೀಕ್ಷೆ ಕೂಡ ಇದೆ. ಇಷ್ಟೆ ಯಾಕೆ? ತಮ್ಮ ಮುಂದಿನ ಚಿತ್ರವನ್ನ ಅನೌನ್ಸ್ ಮಾಡಬಹುದು ಅನ್ನೋ ಕುತೂಹಲವೂ ಇದೆ. ಯಾವುದಕ್ಕೂ ವೇಟ್ ಮಾಡ್ತಾಯಿರಿ. ರಾಕಿ ಭಾಯ್ ಮಹತ್ವದ ಸುದ್ದಿಯ ಅಪ್ಡೇಟ್ ಕೊಡ್ತಾ ಇರುತ್ತೇವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ