• Home
  • »
  • News
  • »
  • entertainment
  • »
  • Rocking Star Yash Next Movie: ರಾಕಿಂಗ್ ಸ್ಟಾರ್ ಮುಂದಿನ ಸಿನಿಮಾ ಯಾವುದು? ಡೈರೆಕ್ಟರ್ ನರ್ತನ್ ಹೇಳಿದ್ದಿಷ್ಟು

Rocking Star Yash Next Movie: ರಾಕಿಂಗ್ ಸ್ಟಾರ್ ಮುಂದಿನ ಸಿನಿಮಾ ಯಾವುದು? ಡೈರೆಕ್ಟರ್ ನರ್ತನ್ ಹೇಳಿದ್ದಿಷ್ಟು

ರಾಕಿಂಗ್ ನ್ಯೂಸ್ ಫೇಕ್ ಫೇಕ್ ಎಂದ ಡೈರೆಕ್ಟರ್ ನರ್ತನ್

ರಾಕಿಂಗ್ ನ್ಯೂಸ್ ಫೇಕ್ ಫೇಕ್ ಎಂದ ಡೈರೆಕ್ಟರ್ ನರ್ತನ್

"ನನ್ನ ಮತ್ತು ಯಶ್ ಸಿನಿಮಾ ಬಗೆಗಿನ ಈಗಿನ ಸುದ್ದಿ ಸುಳ್ಳು. ಆ ರೀತಿ ಸದ್ಯಕ್ಕೆ ಏನೂ ಆಗಿಲ್ಲ. ಮುಂದಿನ ಒಂದು ವಾರದಲ್ಲಿ ಒಂದು ಹೊಸ ಸುದ್ದಿ ಕೊಡುತ್ತೇನೆ. ಆದರೆ ಈಗಿನ ಸುದ್ದಿ ಮಾತ್ರ ನಿಜ ಅಲ್ಲವೇ ಅಲ್ಲ ಎಂದಿದ್ದಾರೆ ನರ್ತನ್.

  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡದ ಪ್ಯಾನ್ (Pan India) ಇಂಡಿಯಾ ಹೀರೋ ರಾಕಿಂಗ್ (Rocking Star Yash) ಸ್ಟಾರ್ ಯಶ್ ಮುಂದಿನ ಸಿನಿಮಾ ಯಾವುದು ? ಯಾವಾಗ ಈ ಸಿನಿಮಾ ಶುರು ಆಗುತ್ತದೆ. ಹಾಗೆ ಶುರು ಆಗೋ ಚಿತ್ರದ ಡೈರೆಕ್ಟರ್ (Who is the Director) ಯಾರು? ಯಶ್ ಒಪ್ಪಿಕೊಂಡಿರೋ ಆ ಕಥೆಯಾದ್ರೂ ಯಾವುದು. ಇಂತಹ ಪ್ರಶ್ನೆಗಳೂ (KGF Cinema) ಕೆಜಿಎಫ್-2 ಸಿನಿಮಾ ಬರುವ ಮುಂಚೇನು ಇದ್ದವು. ಸಿನಿಮಾ ಬಂದು ಸೂಪರ್ ಹಿಟ್ ಆದ್ಮೇಲೆ ಇವೆ. ಆದರೆ ದೀಪಾವಳಿ ಹಬ್ಬಕ್ಕೆ ಒಂದು ಬ್ಲಾಸ್ಟಿಂಗ್ ನ್ಯೂಸ್ ಕೂಡ ಹೊರ ಬಿದ್ದಿದೆ. ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಅನೌನ್ಸ್. ಕೆವಿಎನ್​ ಪ್ರೋಡಕ್ಷನ್ ಹೌಸ್​ ನಿಂದಲೇ ಸಿನಿಮಾ ನಿರ್ಮಾಣ. ಡೈರೆಕ್ಟರ್ ನರ್ತನ್ ಈ ಸಿನಿಮಾ ಡೈರೆಕ್ಟರ್. ಈ ಎಲ್ಲ ವಿಷಯ ಕೆವಿನ್ ಪ್ರೋಡಕ್ಷನ್ ಹೌಸ್​ನ ಹೆಸರಿನ ಸೋಷಿಯಲ್ ಮೀಡಿಯಾ ಪೇಜ್​​ನಲ್ಲಿಯೇ ರಿವೀಲ್ ಆಗಿದೆ. ಈ ಮೂಲಕ ಯಶ್ ಫ್ಯಾನ್ಸ್ ಗೆ ಸಿಹಿ ಸುದ್ದಿ ಕೂಡ ಸಿಕ್ಕಿದೆ.


ರಾಕಿಂಗ್ ಫ್ಯಾನ್ಸ್​​ಗೆ ದೀಪಾವಳಿ ಹಬ್ಬಕ್ಕೆ ಸಿಹಿ-ಕಹಿ ಸುದ್ದಿ !


ರಾಕಿಂಗ್ ಸ್ಟಾರ್ ಯಶ್ ಫ್ಯಾನ್ಸ್ ಯಶ್ ಮುಂದಿನ ಚಿತ್ರಕ್ಕೆ ಕಾತರದಿಂದಲೇ ಕಾಯುತ್ತಿದ್ದಾರೆ. ಕೆಜಿಎಫ್​-2 ಬಂದ್ಮೇಲೆ ಅದನ್ನ ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದಾರೆ. ದೊಡ್ಡ ಹಬ್ಬದ ರೀತಿನೂ ಸೆಲೆಬ್ರೇಟ್ ಮಾಡಿದ್ದಾರೆ.


ಆದರೆ ಕಳೆದ ಎರಡ್ಮೂರು ವರ್ಷದಿಂದಲೂ ಯಶ್​ ಫ್ಯಾನ್ಸ್ ಇನ್ನೂ ಕೆಜಿಎಫ್​ ಗುಂಗಿನಲ್ಲಿಯೇ ಉಳಿಯುವಂತೆ ಆಗಿದೆ. ಫ್ಯಾನ್ ಇಂಡಿಯಾ ಹೀರೋ ಆಗಿರೋ ರಾಕಿಂಗ್ ಸ್ಟಾರ್ ಯಶ್ ಹೊಸ ಸಿನಿಮಾ ಯಾವುದೂ ಅಧಿಕೃತವಾಗಿ ಅನೌನ್ಸ್ ಆಗಿಲ್ಲ.


ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಯಾವುದು,ಯಾವಾಗ?


ಈ ಒಂದು ಕಾರಣದಿಂದಲೇ ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಬಗ್ಗೆ ಭಾರೀ ಕುತೂಹ ಈಗಲೂ ಇದೆ. ಯಶ್ ಮಾಡುವ ಮುಂದಿನ ಸಿನಿಮಾ ಹೇಗಿರುತ್ತದೆ. ಇದರಲ್ಲಿ ಯಶ್ ಹೇಗೆ ಕಾಣಿಸಿಕೊಳ್ತಾರೆ?


Kannada Actor Yash Next Film Viral News
ರಾಕಿಂಗ್ ಸ್ಟಾರ್ ಮುಂದಿನ ಸಿನಿಮಾ ಯಾವುದು?


ಕೆಜಿಎಫ್ ಫ್ಯಾನ್ ಇಂಡಿಯಾ ಹೀರೋನನ್ನ ಯಾರು ಡೈರೆಕ್ಷನ್ ಮಾಡ್ತಾರೆ? ಈ ಎಲ್ಲ ಕುತೂಹಲ ಭರಿತ ಪ್ರಶ್ನೆಗಳು ಇದ್ದೇ ಇವೆ. ಇವುಗಳಿಗೆ ಇನ್ನೂ ಉತ್ತರವೂ ಸಿಕ್ಕಿಲ್ಲ.


ದೀಪಾವಳಿ ಹಬ್ಬಕ್ಕೆ ಹೊರ ಬಿತ್ತು ರಾಕಿಂಗ್ ಸ್ಟಾರ್ ರಾಕಿಂಗ್ ನ್ಯೂಸ್
ಹೌದು, ದೀಪಾವಳಿ ಹಬ್ಬದ ಮೊದಲ ದಿನವೇ ಇಂತಹ ಒಂದು ನ್ಯೂಸ್ ಹೊರ ಬಿತ್ತು. ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಅನೌನ್ಸ್. ರಾಕಿಂಗ್ ಸ್ಟಾರ್ ಚಿತ್ರವನ್ನ ನಿರ್ದೇಶಕ ನರ್ತನ್ ರಿಂದ ಡೈರೆಕ್ಷನ್. ಕೆವಿಎನ್ ಪ್ರೋಡಕ್ಷನ್ ಹೌಸ್​ನಿಂದ ಸಿನಿಮಾ ಪ್ರೋಡ್ಯೂಸ್.


ಇದನ್ನೂ ಓದಿ: Deepavali Celebration: ವಾಸುಕಿ ವೈಭವ್ ಮತ್ತು ಚಂದನಾ ಅವರ ಸಂಭ್ರಮದ ದೀಪಾವಳಿ ನೋಡಿ


ಈ ಒಂದು ಸುದ್ದಿ ಇಡೀ ರಾಕಿಂಗ್ ಫ್ಯಾನ್ಸ್ ಗೆ ದೊಡ್ಡ ಹಬ್ಬವೇ ಆಗಿತ್ತು. ಇದರಿಂದ ರಾಕಿಂಗ್ ಫ್ಯಾನ್ಸ್ ದಿಲ್ ಫುಲ್ ಖುಷ್ ಆಗಿತ್ತು. ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಅಂದ್ಮಲೆ ಫ್ಯಾನ್ಸ್ ಗೆ ಸಂತೋಷ ಆಗೋದಿಲ್ವೇ? ಆದರೆ ಸಂಜೆ ಹೊತ್ತಿಗೆ ಎಲ್ಲವೂ ಕ್ಲೀಯರ್ ಆಗಿಬಿಡ್ತು.


ರಾಕಿಂಗ್ ನ್ಯೂಸ್ ಸಂಜೆ ಹೊತ್ತಿಗೆ ಆಯ್ತು ಶಾಕಿಂಗ್ ನ್ಯೂಸ್
ನಿಜ, ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಸುದ್ದಿ ಫೇಕ್ ಅನ್ನೋದು ತಿಳಿದೆ ಹೋಯಿತು. ಕೆವಿಎನ್​ ಪ್ರೋಡಕ್ಷನ್ ಹೌಸ್​ ಹೆಸರಿನ ಫೇಕ್ ಅಕೌಂಟ್​ನಿಂದಲೇ ಈ ಒಂದು ಫೇಕ್ ನ್ಯೂಸ್ ಹೊರ ಬಿದ್ದಿದೆ. ಅಲ್ಲಿಗೆ ಇದು ಸುಳ್ಳು ಅನ್ನೋದು ಕೂಡ ರಾಕಿಂಗ್ ಫ್ಯಾನ್ಸ್ ಗೆ ಶಾಕಿಂಗ್ ನ್ಯೂಸ್ ಆಗಿಯೇ ಹೋಗಿದೆ.


ರಾಕಿಂಗ್ ನ್ಯೂಸ್ ಫೇಕ್ ಫೇಕ್ ಎಂದ ಡೈರೆಕ್ಟರ್ ನರ್ತನ್
ರಾಕಿಂಗ್ ಸ್ಟಾರ್​ ಯಶ್ ಹಾಗೂ ಡೈರೆಕ್ಟರ್ ನರ್ತನ್ ಹೆಸರು ಕೇಳಿ ಬರ್ತಾನೇ ಇದೆ. ಪ್ರತಿ ಸಲವೂ ನರ್ತನ್ ಈ ಬಗ್ಗೆ ಮಾತನಾಡುತ್ತಲೇ ಇದ್ದಾರೆ. ಬರುವ ಅಷ್ಟೂ ಫೇಕ್ ನ್ಯೂಸ್​​ಗೆ ಉತ್ತರ ಕೊಡ್ತಾನೇ ಬಂದಿದ್ದಾರೆ. ಈಗ ಹರಿದಾಡ್ತಿರೋ ಸುದ್ದಿ ಬಗ್ಗೆನೂ ನ್ಯೂಸ್-18 ಕನ್ನಡ ಡಿಜಿಟಲ್​ಗೂ ನರ್ತನ್ ರಿಯಾಕ್ಟ್ ಮಾಡಿದ್ದಾರೆ. ಹೀಗೆ


"ನನ್ನ ಮತ್ತು ಯಶ್ ಸಿನಿಮಾ ಬಗೆಗಿನ ಈಗೀನ ಸುದ್ದಿ ಸುಳ್ಳು. ಆ ರೀತಿ ಸದ್ಯಕ್ಕೆ ಏನೂ ಆಗಿಲ್ಲ. ಮುಂದಿನ ಒಂದು ವಾರದಲ್ಲಿ ಒಂದು ಹೊಸ ಸುದ್ದಿ ಕೊಡುತ್ತೇನೆ. ಆದರೆ ಈಗೀನ ಸುದ್ದಿ ಮಾತ್ರ ನಿಜ ಅಲ್ಲವೇ ಅಲ್ಲ."


ನರ್ತನ್ ಮುಂದಿನ ಸಿನಿಮಾ ಯಾರ ಜೊತೆಗೆ ?
ನರ್ತನ್ ಮುಂದಿನ ಸಿನಿಮಾ ಮಾಡೋ ತಯಾರಿಯಲ್ಲಿಯೇ ಇದ್ದಾರೆ. ಕೆವಿಎನ್​ ಪ್ರೋಡಕ್ಷನ್ ಜೊತೆಗೆ ಒಳ್ಳೆ ಸಂಬಂಧವನ್ನೂ ಹೊಂದಿದ್ದಾರೆ. ಈ ಸಂಸ್ಥೆಗಾಗಿಯೇ ಒಂದು ಕಥೆಯನ್ನೂ ರೆಡಿ ಮಾಡಿಕೊಳ್ಳುತ್ತಿದ್ದಾರೆ. ಆ ಬಗ್ಗೆ ಇನ್ನೇನು ಮಾತುಕತೆಗೂ ಕುಳಿತುಕೊಳ್ಳಲಿದ್ದಾರೆ.


Kannada Actor Yash Next Film Viral News
ರಾಕಿಂಗ್ ಫ್ಯಾನ್ಸ್​​ಗೆ ದೀಪಾವಳಿ ಹಬ್ಬಕ್ಕೆ ಸಿಹಿ-ಕಹಿ ಸುದ್ದಿ !


ಇದರ ಹೊರತಾಗಿ ಸದ್ಯಕ್ಕೆ ಯಾವುದೇ ಅಪ್​ಡೇಟ್ಸ್ ಇಲ್ಲವೇ ಇಲ್ಲ. ನರ್ತನ್ ಮತ್ತು ಯಶ್ ಸಿನಿಮಾ ಮಾಡ್ತಾರೋ ಇಲ್ಲವೋ ಸದ್ಯಕ್ಕೆ ಯಾವುದೇ ಅಧಿಕೃತ ಮಾಹಿತಿ ಇಲ್ವೇ ಇಲ್ಲ. ಅದನ್ನ ಯಾರೂ ಈಗ ಕನ್ಫರ್ಮ ಕೂಡ ಮಾಡಿಲ್ಲ. ಆದರೆ ಸುದ್ದಿ ಮಾತ್ರ ರೋಚಕವಾಗಿಯೇ ಹರಿದಾಡುತ್ತಿದೆ.


ಫೇಕ್ ಅಕೌಂಟ್ ಕ್ರಿಯೆಟ್ ಮಾಡಿರೋರ ವಿರುದ್ಧ ಕೆವಿಎನ್ ಪ್ರೋಡಕ್ಷನ್ ಹೌಸ್, ದೂರು ಕೂಡ ನೀಡಿದೆ ಎಂದು ಡೈರೆಕ್ಟರ್ ನರ್ತನ್ ಹೇಳಿದ್ದಾರೆ. ಉಳಿದಂತೆ, ಈ ಸುದ್ದಿ ವೈರಲ್ ಆಗುತ್ತಿದ್ದಂತೇನೆ, ಅನೇಕ ಪೋನ್ ಕಾಲ್​ಗಳೂ ಬಂದಿವೆ ಅಂತಲೂ ನರ್ತನ್ ಹೇಳಿಕೊಂಡಿದ್ದಾರೆ.


ಇದನ್ನೂ ಓದಿ: Yash Deepavali: ಯಶ್ ದೀಪಾವಳಿ ಸಂಭ್ರಮ, ಮಕ್ಕಳೊಂದಿಗೆ ಪಟಾಕಿ ಹಚ್ಚಿ ಸಂಭ್ರಮಿಸಿದ ರಾಕಿಭಾಯ್


ಆದರೆ ಈಗೀನ ಸುದ್ದಿ ಮಾತ್ರ ಸುಳ್ಳು ಅಂತಲೇ ಹೇಳುವ ನರ್ತನ್ ಈ ಬಗ್ಗೆ ಹೆಚ್ಚಿಗೆ ಏನೂ ಹೇಳಿಕೊಂಡಿಲ್ಲ. ವೇಟ್ ಮಾಡಿ ಹೊಸ ಸುದ್ದಿ ಕೊಡ್ತೀನಿ ಅಂತಲೂ ಈಗ ಒಂದು ಕುತೂಹಲ ಮೂಡಿಸಿದ್ದಾರೆ. ಯಾವುದಕ್ಕೂ ವೇಟ್ ಮಾಡೋಣ ಅಲ್ವೇ?

First published: