ಸೂಪರ್​ ಸ್ಟಾರ್​ ಮಮ್ಮುಟಿ ಅಭಿನಯಿದ 'ಯಾತ್ರ' ಸಿನಿಮಾದ ಟ್ರೈಲರ್​ ಬಿಡುಗಡೆ ಮಾಡಲಿರುವ ಯಶ್​..!

ಯಶ್​ ಈಗ ನ್ಯಾಷನಲ್​ ಸ್ಟಾರ್. ದೇಶ ಮೂಲೆ ಮೂಲೆಗೂ 'ಕೆ.ಜಿ.ಎಫ್​' ಮೂಲಕ ಪರಿಚಿತರಾಗಿರುವ ಯಶ್​ಗೆ ಕಾಲಿವುಡ್​, ಮಾಲಿವುಡ್​, ಬಾಲಿವುಡ್​ ಹಾಗೂ ಟಾಲಿವುಡ್​ನಲ್ಲಿ ಬೇಡಿಕೆ ಹೆಚ್ಚುತ್ತಿದೆ. ಕನ್ನಡದ ಸ್ಟಾರ್​ರೊಬ್ಬರು ಈಗ ಬೇರೆ ಭಾಷೆಯ ದಿಗ್ಗಜ ನಟರ ಸಿನಿಮಾದ ಟ್ರೈಲರ್​ ಬಿಡುಗಡೆ ಮಾಡುವ ಮಟ್ಟಕ್ಕೆ ಬೆಳೆದಿದ್ದಾರೆ ಎಂದರೆ ಅದು ಚಂದನವನಕ್ಕೆ ಹೆಮ್ಮೆಯ ವಿಷಯ.

Anitha E | news18
Updated:February 4, 2019, 7:10 PM IST
ಸೂಪರ್​ ಸ್ಟಾರ್​ ಮಮ್ಮುಟಿ ಅಭಿನಯಿದ 'ಯಾತ್ರ' ಸಿನಿಮಾದ ಟ್ರೈಲರ್​ ಬಿಡುಗಡೆ ಮಾಡಲಿರುವ ಯಶ್​..!
ಮಮ್ಮುಟಿ ಅಭಿನಯದ 'ಯಾತ್ರ' ಸಿನಿಮಾದ ಟ್ರೈಲರ್​ ಬಿಡುಗಡೆ ಮಾಡಲಿರುವ ಯಶ್​
Anitha E | news18
Updated: February 4, 2019, 7:10 PM IST
'ಕೆ.ಜಿ.ಎಫ್' ಸಿನಿಮಾ ರಾಕಿಂಗ್ ಸ್ಟಾರ್ ಯಶ್​ರ ಲೆವೆಲ್​ ಅನ್ನೇ ಬದಲಾಯಿಸಿ ಬಿಟ್ಟಿದೆ.  ಈ ಹಿಂದೆ ಕನ್ನಡ ಸೂಪರ್​ ಸ್ಟಾರ್​ ಆಗಿದ್ದ ಯಶ್ ಈಗ ನ್ಯಾಷನಲ್ ಸ್ಟಾರ್ ಆಗಿ ಬದಲಾಗಿ ಹೋಗಿದ್ದಾರೆ. ಸೋ ಇಂತಹ ಯಶ್ ಮೇಲೆ ಈಗ ಬಾಲಿವುಡ್ - ಟಾಲಿವುಡ್ ಮಾತ್ರ ಅಲ್ಲ ಕಾಲಿವುಡ್ ಕಣ್ಣು ಕೂಡ ಬಿದ್ದಿದೆ.

ಇದನ್ನೂ ಓದಿ: ಅಪ್ಪು ಅಭಿಮಾನಿಗಳಲ್ಲಿ 'ನಟಸಾರ್ವಭೌಮ'ನ ಫೀವರ್​: ಎರಡು ಚಿತ್ರಮಂದಿರಗಳಲ್ಲಿ ಸತತ 24 ಗಂಟೆಗಳ ಶೋ..!

'ಕೆ.ಜಿ.ಎಫ್ -ಚಾಪ್ಟರ್ 1' ಬರೋತನಕ ಯಶ್ ಅನ್ನೋ ಹೆಸರು ಕರ್ನಾಟಕದ ಗಡಿ ದಾಟಿರಲಿಲ್ಲ. ಆದರೆ ಈಗ ಯಶ್ ಅನ್ನೋ ಹೆಸರಿಗೆ ಬಾಲಿವುಡ್-ಟಾಲಿವುಡ್, ಕಾಲಿವುಡ್, ಅಷ್ಟೇ ಅಲ್ಲ ಮಾಲಿವುಡ್‍ನಲ್ಲೂ ಬೇಡಿಕೆ ಹೆಚ್ಚಿದೆ.

ರಾಕಿಂಗ್​ ಸ್ಟಾರ್​ ಯಶ್​-ಮಲಯಾಳಂನ ನಟ ಮಮ್ಮುಟಿ


ಹೌದು, ರಾಕಿಂಗ್ ಸ್ಟಾರ್ ಯಶ್ ಈಗ ರಾಷ್ಟ್ರಮಟ್ಟದಲ್ಲಿ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾರೆ. ಸೂಪರ್​ಸ್ಟಾರ್​, ಮೆಗಾಸ್ಟಾರ್ ನಟರ ಚಿತ್ರಗಳ ಕಾರ್ಯಕ್ರಮಕ್ಕೆ ರಾಕಿ ಭಾಯ್​ ಅತಿಥಿಯಾಗಿ ಬರಬೇಕು ಎನ್ನುವಷ್ಟರ ಮಟ್ಟಿಗೆ ಯಶ್ ಹೆಸರುವಾಸಿಯಾಗಿದ್ದಾರೆ.

ಇದನ್ನೂ ಓದಿ: ತೆರೆ ಕಂಡ 25 ದಿನಗಳಲ್ಲಿ 'ಉರಿ' ಬಾಚಿಕೊಂಡಿದ್ದು 250 ಕೋಟಿ..!
Loading...

ಅದಕ್ಕೆ ಸಾಕ್ಷಿ ಮಲಯಾಳಂನ ಮೆಗಾಸ್ಟಾರ್ ಮಮ್ಮುಟಿಯಂತಹ ನಟರ ಚಿತ್ರದ ಟ್ರೈಲರ್​ ಅನ್ನು ಯಶ್ ಲಾಂಚ್ ಮಾಡುತ್ತಿರೋದು. ಅಂದಹಾಗೆ ಆಂಧ್ರದ ರಾಜಕೀಯ ಧುರೀಣ ವೈಎಸ್‍ಆರ್ ಬಗ್ಗೆ ಯಾತ್ರ ಎಂಬ ಸಿನಿಮಾ ಬರುತ್ತಿದ್ದು, ಇದರಲ್ಲಿ ವೈಎಸ್‍ಆರ್ ಪಾತ್ರವನ್ನ ಮಮ್ಮುಟಿ ಮಾಡುತ್ತಿದ್ದಾರೆ. ಇದರ ಟ್ರೈಲರ್ ಬಿಡುಗಡೆ ಕೊಚ್ಚಿಯಲ್ಲಿ ಫೆಬ್ರುವರಿ 4ರಂದು ನಡೆಯಲಿದ್ದು, ಮುಖ್ಯ ಅತಿಥಿಯಾಗಿ ಕನ್ನಡದ ರಾಕಿಭಾಯ್ ಪಾಲ್ಗೊಳಲಿದ್ದಾರೆ. ಇದನ್ನೇ ಅಲ್ವೇ ಸಾಧನೆ ಅನ್ನೋದು.

ಹರಿಕೃಷ್ಣರ ಕಾಲೆಳೆದ ದರ್ಶನ್​: ದಚ್ಚು ಮಾಡುವ ತಮಾಷೆ ಹೇಗಿರುತ್ತೆ ಗೊತ್ತಾ..?
First published:February 4, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626