Actor Vivek Simha: ಉತ್ಸಾಹದ ಚಿಲುಮೆ ಪ್ರೀಮಿಯರ್ ಪದ್ಮಿನಿ ಹುಡುಗ-ವಿವೇಕ್ ಸಿಂಹನ SPOOKY ಕಾಲೇಜ್ ಎಲ್ಲಿಗೆ ಬಂದಿದೆ ಗೊತ್ತೇ?

SPOOKY ಕಾಲೇಜ್ ಸಿನಿಮಾ ಒಂದು ಸೈಕಾಲಜಿಕಲ್ ಚಿತ್ರ. ಇದರಲ್ಲಿ ಥ್ರಿಲ್ ಕೂಡ ಇದೆ. ಹಾರರ್ ಕಾಮಿಡಿ ಈ ಚಿತ್ರದ ಮೂಲಕ ವಿವೇಕ್ ಸಿಂಹ ಹೀರೋ ಆಗಿ ಬಿಟ್ಟಿದ್ದಾರೆ. ಈ ಚಿತ್ರದ ಶೂಟಿಂಗ್ ಕೂಡ ಬಹುತೇಕ ಪೂರ್ಣ ಆಗಿದೆ.

ಪ್ರಿಮಿಯರ್ ಪದ್ಮಿನಿ ವಿವೇಕ್ ಸಿಂಹ ಭಯಂಕರ್ ಲುಕ್

ಪ್ರಿಮಿಯರ್ ಪದ್ಮಿನಿ ವಿವೇಕ್ ಸಿಂಹ ಭಯಂಕರ್ ಲುಕ್

  • Share this:
ಸ್ಯಾಂಡಲ್​ವುಡ್​ ನಲ್ಲಿ (Sandalwood) ಹಿರಿತೆರೆಯಿಂದ ಕಿರುತೆರೆಗೆ ಕಿರುತೆರೆಯಿಂದ ಹಿರಿತೆರೆಗೆ ಕಲಾವಿದರು ಟ್ರಾವೆಲ್ (Travel) ಮಾಡ್ತಾನೆ ಇರುತ್ತಾರೆ. ಆದರೆ ಎಲ್ಲರಿಗೂ ಅದೃಷ್ಟ ಖುಲಾಯಿಸೋದಿಲ್ಲ. ಸಿನಿಮಾ (Cinema) ಒಂದು ದೊಡ್ಡ ಪರದೆ ಆದರೆ, ಕಿರುತೆರೆಯ ಖದರ್ ಬೇರೆ. ನೇರವಾಗಿ ಪ್ರೇಕ್ಷಕರ ಮನೆಗೆ ಹೋಗುವ ಚಾನ್ಸ್ ಕಿರುತೆರೆಯಲ್ಲಿರುತ್ತದೆ. ಹಿರಿತೆರೆ ಹಾಗಲ್ಲ, ಅದು ಪ್ರೇಕ್ಷಕನ ಎದೆಯಲ್ಲಿ ಫ್ಯಾನ್ ಫಾಲೋಯಿಂದ ಕ್ರೇಜ್ ಅನ್ನ ಹುಟ್ಟುಹಾಕಿ ಬಿಡುತ್ತದೆ. ಈ ರೀತಿಯ ಬಿಗ್​ ಪರದೆಗೆ ಬರೋ ಕಿರುತೆರೆಯ ಕಲಾವಿದರಲ್ಲಿ ಅನೇಕರು ಒಳ್ಳೆ ಹೆಸರು ಮಾಡಿಕೊಂಡಿದ್ದಾರೆ. ಅದ್ರಂತೆ ಯುವ ನಟ ವಿವೇಕ್ ಸಿಂಹ (Vivek Simha) ಕಿರುತೆರೆಯಲ್ಲಿ ಗುರುತಿಸಿಕೊಂಡವರು. ಸೀರಿಯಲ್ ಮಾಡ್ತಾನೇ ರಿಯಾಲಿಟಿ ಶೋಗಳಲ್ಲೂ  (Reality Show) ಧಮಾಕಾ ಮಾಡಿದವರು. ಆದರೆ ಇವರ ಪಯಣ ಈಗ ಬೆಳ್ಳಿ ಪರದೆ (Big Screen) ಮೇಲೂ ಶುರು ಆಗಿದೆ. ಮೊದಲೆರಡು ಸಿನಿಮಾದಲ್ಲಿ (Cinema) ಜನರಿಗೆ ಪರಿಚಯ ಆಗಿದ್ದಾರೆ. ಮೂರನೇ ಸಿನಿಮಾದಲ್ಲಿ ಹೀರೋನೇ ಆಗಿದ್ದಾರೆ.

ಕನ್ನಡದ ವಿವೇಕ್ ಸಿಂಹ ಒಳ್ಳೆಯ ನಟ. ಸಿಕ್ಕಾಪಟ್ಟೆ ಎನರ್ಜಿ ಇದೆ. ಇವರ ಎನರ್ಜಿಗೆ ಸ್ಟೇಜ್ ಶೇಕ್ ಆಗುತ್ತದೆ. ಅಂತಹ ಈ ನಟ ಪ್ರಿಮಿಯರ್ ಪದ್ಮಿನಿ ಸಿನಿಮಾದಿಂದಲೇ ಬೆಳ್ಳಿ ತೆರೆ ಮೇಲೆ ಹೆಚ್ಚು ಪರಿಚಯ ಆಗಿದ್ದಾರೆ. ನವರಸ ನಾಯಕ ಜಗ್ಗೇಶ್ ಅವರ ಪುತ್ರನ ಪಾತ್ರದಲ್ಲಿ ಕಾಣಿಸಿಕೊಂಡು ಅದ್ಭುತವಾಗಿಯೇ ನಟಿಸಿದ್ದರು.

ವಿವೇಕ್ ಸಿಂಹ ಒಂದು ರೀತಿ ಉತ್ಸಾಹದ ಚಿಲುಮೆ ಅಂತ ಹೇಳಬಹುದು. ಉತ್ಸಾಹ ಮಾತಿನಲ್ಲೂ ಕಾಣಿಸುತ್ತದೆ. ಅಭಿನಯದಲ್ಲೂ ನೋಡಬಹುದು. ಇಷ್ಟು ವಿಶೇಷ ಇರೋ ವಿವೇಕ್ ಸಿಂಹ ಚೂರಿ ಕಟ್ಟೆ ಚಿತ್ರದಲ್ಲಿ ಒಂದು ಸಣ್ಣ ಪಾತ್ರ ಮಾಡಿದ್ದರು. ಅದು ಬಿಟ್ಟರೆ ದೊಡ್ಡಪರದೆಯಲ್ಲಿ ಪ್ರಿಮಿಯರ್ ಪದ್ಮಿನಿ ಒಳ್ಳೆ ಹೆಸರು ತಂದು ಕೊಡ್ತು.

SPOOKY ಕಾಲೇಜ್ ಚಿತ್ರದಲ್ಲಿ ವಿಕೇಕ್  ಸಿಂಹ ಈಗ ಹೀರೋ

SPOOKY ಕಾಲೇಜ್ ಸಿನಿಮಾ ಒಂದು ಸೈಕಾಲಜಿಕಲ್ ಚಿತ್ರ. ಇದರಲ್ಲಿ ಥ್ರಿಲ್ ಕೂಡ ಇದೆ. ಹಾರರ್ ಕಾಮಿಡಿ ಇರೋದು ವಿಶೇಷ. ಇಷ್ಟು ಸ್ಪೆಷಲ್ ಅನಿಸೋ ಚಿತ್ರದ ಮೂಲಕ ವಿವೇಕ್ ಸಿಂಹ ಹೀರೋ ಆಗಿ ಬಿಟ್ಟಿದ್ದಾರೆ. ಈ ಹೀರೋಗಿರಿ ಮೇಲೆ ವಿವೇಕ್ ತುಂಬಾ ಹೋಪ್ ಇಟ್ಟುಕೊಂಡಿದ್ದಾರೆ. ಇದೇ ಚಿತ್ರದಲ್ಲಿಯೇ ವಿವೇಕ್​ಗೆ ದಿಯಾ ಚಿತ್ರದ ನಾಯಕಿ ಖುಷಿ ಜೋಡಿ ಆಗಿದ್ದಾರೆ.

Vivek Simha New Film Spooky College Now Complete
ವಿವೇಕ್ ಸಿಂಹ ಸಖತ್ ಲುಕ್


SPOOKY ಅಂದ್ರೆ ವಿಚಿತ್ರ ಅಂತಲೂ ಹೇಳಬಹುದು. ಭಯಂಕರ ಅಂತಾ ಕೂಡ ಅರ್ಥ ಬರುತ್ತದೆ. SPOOKY ಅಂದ್ರೆ ಪುಕ್ಕಲುತನ ಅನ್ನೋ ಇನ್ನೂ ಒಂದು ಅರ್ಥ ಸಹ ಇದೆ. ಇಷ್ಟೆಲ್ಲ ಅರ್ಥ ಇರೋ SPOOKY ಚಿತ್ರದಲ್ಲಿ ಮೇಲೆ ಹೇಳಿದ ಎಲ್ಲ ಕಂಟೆಂಟ್ ಇದೆ. ಇದನ್ನ ನಿಭಾಯಿಸಿರೋ ರೀತಿ ತುಂಬಾ ಚೆನ್ನಾಗಿದೆ.

103 ವರ್ಷದ ಹಳೆಯ ಕಾಲೇಜಿನಲ್ಲಿ SPOOKY ಕಾಲೇಜ್ ಚಿತ್ರೀಕರಣ
SPOOKY ಕಾಲೇಜ್ ಚಿತ್ರವನ್ನ 103 ವರ್ಷದ ಹಳೆ ಕಾಲೇಜಿನಲ್ಲಿಯೇ ಚಿತ್ರೀಕರಣಿಸಲಾಗಿದೆ. ಚಿತ್ರದ ಅಷ್ಟೂ ಭಾಗವನ್ನ ಇದೇ ಕಾಲೇಜಿನಲ್ಲಿಯೇ ತೆಗೆಯಲಾಗಿದೆ. ಒಂದಷ್ಟು ಪ್ರಮುಖ ಭಾಗಗಳ ಚಿತ್ರೀಕರಣವನ್ನ ದಾಂಡೇಲಿಯಲ್ಲಿ ಶೂಟ್ ಮಾಡಲಾಗಿದೆ.
ಧಾರವಾಡದಲ್ಲಿಯೇ 103 ವರ್ಷದ ಹಿಂದಿನ ಕಾಲೇಜ್ ಇದೆ. ಇದನ್ನ ಕೆಸಿಡಿ ಅಂತಲೇ ಕರೆಯೋದು. ಇಲ್ಲಿಯ ಹೆಸರಾಂತ ಕಾಲೇಜ್ ಇದಾಗಿದ್ದು, ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ಪ್ರತಿ ವರ್ಷ ಓದುತ್ತಾರೆ. ಇದೇ ಕಾಲೇಜಿನಲ್ಲಿಯೇ ಚಿತ್ರ ತಂಡ 40 ರಿಂದ 50 ದಿನ ಚಿತ್ರೀಕರಣ ಮಾಡಿದೆ.

ಇದನ್ನೂ ಓದಿ: Actor Anirudh: ಅನಿರುದ್ಧ್ ಬಿಗ್ ಬಾಸ್​ಗೆ ಹೋಗ್ತಾರಾ? ವದಂತಿಗೆ ತೆರೆ ಎಳೆದ ನಟ

ಚಿತ್ರದಲ್ಲಿ 3000 ಸಾವಿರಕ್ಕೂ ಹೆಚ್ಚು ಕಲಾವಿದರ ಅಭಿನಯ
ಕಾಲೇಜ್ ಸಿನಿಮಾ ಅಂದ್ಮೇಲೆ ಯುವಕರು ಯುವತಿಯರು ಬೇಕಲ್ವೇ. ಉತ್ತರ ಕರ್ನಾಟಕ ಭಾಗದ ವಿದ್ಯಾರ್ಥಿಗಳನ್ನೆ ಸಿನಿಮಾದಲ್ಲಿ ಹಾಕಿಕೊಂಡಿದ್ದಾರೆ. ಜ್ಯೂನಿಯರ್ ಆರ್ಟಿಸ್ಟ್ ಕೂಡ ಇಲ್ಲಿ ಅಭಿನಯಿಸಿದ್ದಾರೆ. ವಿಶೇಷ ಅನಿಸೋ ಈ ಚಿತ್ರದಲ್ಲಿ ಕಾಮಿಡಿ ಕಿಲಾಡಿಗಳು ಕಲಾವಿದರೂ ಇದ್ದಾರೆ.

Vivek Simha New Film Spooky College Now Complete
ವಿವೇಕ್ ಸಿಂಹ ಸೂಪರ್ ಪೋಸ್


ಎಚ್​.ಕೆ.ಪ್ರಕಾಶ್ ನಿರ್ಮಾಣದ ಈ ಚಿತ್ರವನ್ನ ನವ ನಿರ್ದೇಶಕ ಭರತ್ ಜಿ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಎರಡು ಹಾಡುಗಳು ಇವೆ. ಅಜನೀಶ್ ಲೋಕನಾಥ್ ಅವುಗಳಿಗೆ ಸಂಗೀತ ಕೊಟ್ಟಿದ್ದಾರೆ. ಸೌಂಡ್ ಎಫೆಕ್ಟ್​ ಅನ್ನ ರಂಗಸ್ಥಳಂ ಚಿತ್ರಕ್ಕೆ ಕೆಲಸ ಮಾಡಿರೋ ರಾಧಾ ಕೃಷ್ಣ ಮಾಡಿದ್ದಾರೆ.

ಇದನ್ನೂ ಓದಿ: Kendasampige: ಅಕ್ಕ-ತಮ್ಮ ಒಂದಾಗೋ ಟೈಮ್‍ಗೆ ಆಪತ್ತು? ಸಾವಿನ ಅಂಚಿನಲ್ಲಿ ರಾಜೇಶ!

ಮನೋಹರ್ ಜೋಶಿ ಕ್ಯಾಮೆರಾ ವರ್ಕ್ ಮಾಡಿದ್ದಾರೆ. ಎಲ್ಲ ಮುಗಿಸಿಕೊಂಡು ರಿಲೀಸ್ ಹಂತಕ್ಕೆ ಬಂದಿರೋ ಈ ಚಿತ್ರ ರಿಲೀಸ್ ಆದ್ಮೇಲೆ ನಾಯಕ ನಟ ವಿವೇಕ್ ಸಿಂಹ ಲಕ್ ಚೇಂಜ್ ಆಗೋ ಚಾನ್ಸಸ್ ಜಾಸ್ತಿ ಇದೆ.
First published: