ಸಂಕಷ್ಟದಲ್ಲಿ ಕನ್ನಡದ ಖ್ಯಾತ ನಟ; ಆರ್ಥಿಕ ನೆರವು ನೀಡುವಂತೆ ಮನವಿ

ರಾಜ್​ಕುಮಾರ್​ ಅವರ ಜೊತೆಗೆ ಶ್ರಾವಣ ಬಂತು, ಚಲಿಸುವ ಮೋಡ, ಜ್ವಾಲಮುಖಿ, ಗುರಿ ಸಿನಿಮಾದಲ್ಲಿ ವಿಶ್ವನಾಥ್​ ನಟಿಸಿದ್ದರು.

ವಿಶ್ವನಾಥ್

ವಿಶ್ವನಾಥ್

 • Share this:
  ಕಲಾವಿದರು ಐಷಾರಾಮಿ ಬದುಕು ಸಾಗಿಸುತ್ತಿದ್ದಾರೆ ಎಂಬುದು ಹಲವರ ನಂಬಿಕೆ. ಆದರೆ ಕೆಲವು ಸೆಲೆಬ್ರಿಟಿಗಳು ಐಷಾರಾಮಿಯಾಗಿ ಜೀವನ ನಡೆಸುತ್ತಿರುವುದೇನೊ ನಿಜ. ಇನ್ನುಳಿದ ಕಲಾವಿದರ ನಟನೆಯಿಂದಲೇ ತಮ್ಮ ಹೊಟ್ಟೆ ತುಂಬಿಸುತ್ತಿದ್ದಾರೆ ಎಂಬುದು ಅನೇಕರಿಗೆ ಗೊತ್ತಿಲ್ಲ. ಕೊರೋನಾ ಸಮಯದಲ್ಲಂತೂ ಕಲಾವಿದರ ಜೀವನ ಸಂಕಷ್ಟದಲ್ಲಿತ್ತು. ಅತ್ತ ನಟನೆಯಿಲ್ಲ, ಇತ್ತ ಹಣವಿಲ್ಲದ ಸಂಗತಿ ಎದುರಿಸಬೇಕಾದ ಸ್ಥಿತಿ ಎದುರಾಗಿತ್ತು. ಆದರೀಗ ಸಿನಿಮಾ ಶೂಟಿಂಗ್ ಆರಂಭಗೊಂಡು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಮುಂದಾಗಿದ್ದಾರೆ. ಅದರೆ ಇಲ್ಲೊಬ್ಬರು ಕನ್ನಡದ ಖ್ಯಾತ  ಕಲಾವಿದ ಭಾರೀ ಸಂಕಷ್ಟ ಎದುರಿಸುತ್ತಿದ್ದಾರೆ. ಚಿಕಿತ್ಸೆಗಾಗಿ ಹಣವಿಲ್ಲದೆ ಪರದಾಡುತ್ತಿದ್ದಾರೆ.

  ಡಾ.ರಾಜ್​ಕುಮಾರ್​, ವಿಷ್ಣುವರ್ಧನ್​, ಶಿವ ರಾಜ್​ಕುಮಾರ್​ ಹಾಗೂ ಹಲವಾರು ಸ್ಟಾರ್​ ನಟರ ಜೊತೆಗೆ ಬಣ್ಣ ಹಚ್ಚಿದ್ದ ನಟ ವಿಶ್ವನಾಥ್​ ಚಿಕಿತ್ಸೆಗೆ ಹಣವಿಲ್ಲದೆ ಪರದಾಡುತ್ತಿದ್ದಾರೆ.

  ರಾಜ್​ಕುಮಾರ್​ ಅವರ ಜೊತೆಗೆ ಶ್ರಾವಣ ಬಂತು, ಚಲಿಸುವ ಮೋಡ, ಜ್ವಾಲಮುಖಿ, ಗುರಿ ಸಿನಿಮಾದಲ್ಲಿ ವಿಶ್ವನಾಥ್​ ನಟಿಸಿದ್ದರು. ಖ್ಯಾತ ನಿರ್ದೇಶಕ ರಾಮ್​ಗೋಪಾಲ್​ ವರ್ಮ, ತೆಲುಗು ನಟ ಚಿರಂಜೀವಿ ಸಿನಿಮಾದಲ್ಲೂ ಬಣ್ಣ ಹಚ್ಚಿದ್ದರು. ಪುನೀತ್​ ರಾಜ್​ಕುಮಾರ್​ ಜೊತೆಗೆ ವಂಶಿ ಸಿನಿಮಾದಲ್ಲಿ ಅಭಿನಯಿಸಿದ್ದರು. ಆದರೀಗ ವಿಶ್ವನಾಥ್​ ಅವರಿಗೆ ಸಿನಿಮಾ ಅವಕಾಶಗಳು ಕಡಿಮೆಯಾಗಿರುವುರಿಂದ ಆರ್ಥಿಕವಾಗಿ ಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಅದರ ಜೊತೆಗೆ ಅನಾರೋಗ್ಯದಿಂದ ಬಳಲುತ್ತಿರುವ ಅವರು ಚಿಕಿತ್ಸೆಗೆ ಹಣವಿಲ್ಲದೆ ಪರದಾಡುತ್ತಿದ್ದಾರೆ.

  ವಿಶ್ವನಾಥ್​ ಅವರು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದಾರೆ. ಜೊತೆಗೆ ಗ್ಯಾಂಗ್ರಿನ್​ ಆಗಿ ಕಷ್ಟ ಪಡುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಬೆಂಗಳೂರಿನ ವಿಜಯನಗರದ ಬಿಜಿಎಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರ್ಥಿಕವಾಗಿ ಸಂಕಷ್ಟದಲ್ಲಿರುವ ಅವರಿಗೆ ಕಿಚ್ಚ ಸುದೀಪ್​ ಅವರ ಚಾರಿಟೇಬಲ್​ ಟ್ರಸ್ಟ್​ ಸಹಾಯ ಮಾಡಿದೆ. ಇನ್ನು ಚಿಕಿತ್ಸೆಗಾಗಿ ಹೆಚ್ಚಿನ ಹಣ ಬೇಕಾಗಿದ್ದು, ಯಾರಾದರು ಸಹಾಯ ಮಾಡಿ ಎಮದು ಮನವಿ ಮಾಡಿಕೊಂಡಿದ್ದಾರೆ.
  Published by:Harshith AS
  First published: