• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Lankasura Movie Teaser: ರಾಮ ಹುಟ್ಟಿದ ದಿನ ಲಂಕಾಸುರನ ಆಗಮನ, ಮರಿ ಟೈಗರ್ ವಿನೋದ್ ಪ್ರಭಾಕರ್ ಸೈಕ್ ರೂಪ!

Lankasura Movie Teaser: ರಾಮ ಹುಟ್ಟಿದ ದಿನ ಲಂಕಾಸುರನ ಆಗಮನ, ಮರಿ ಟೈಗರ್ ವಿನೋದ್ ಪ್ರಭಾಕರ್ ಸೈಕ್ ರೂಪ!

ಮರಿ ಟೈಗರ್ ವಿನೋದ್ ಪ್ರಭಾಕರ್ ಸೈಕ್ ರೂಪ!

ಮರಿ ಟೈಗರ್ ವಿನೋದ್ ಪ್ರಭಾಕರ್ ಸೈಕ್ ರೂಪ!

ಟೈಗರ್ ಪ್ರಭಾಕರ್ ಪುತ್ರ ವಿನೋದ್ ಪ್ರಭಾಕರ್ ಲಂಕಾಸುರನಾಗಿ ಅಬ್ಬರಿಸುತ್ತಿದ್ದಾರೆ. ಇದೀಗ ಈ ಸಿನಿಮಾದ ಟೀಸರ್ ರಾಮನವಮಿ ದಿನವೇ ರಿಲೀಸ್ ಆಗಿದೆ. ಈ ಮೂಲಕ ವಿನೋದ್ ಪ್ರಭಾಕರ್ ಪಾತ್ರದ ಝಲಕ್ ಕೂಡ ರಿವೀಲ್ ಆಗಿದೆ.

  • Share this:
  • published by :

ರಾಮನ ದಿನ ಲಂಕಾಸುರನ ಆಗಮನ. ಹೌದು (Lankasura Movie ) ಈ ಒಂದು ಮಾತು ಹೇಳೋಕೆ ಕಾರಣ ಇದೆ. ಆ ಕಾರಣದ ಹೆಸರು ಲಂಕಾಸುರ ಸಿನಿಮಾದ ಟೀಸರ್ ರಿಲೀಸ್. ಟೈಗರ್ ಪ್ರಭಾಕರ್ ಪುತ್ರ ವಿನೋದ್ ಪ್ರಭಾಕರ್ ಈಗೊಂದು ಸಿನಿಮಾ ಮಾಡಿದ್ದಾರೆ. ಈ ಸಿನಿಮಾದ ಹೆಸರೇ ಲಂಕಾಸುರ. ಲಂಕಾಸುರ ( Teaser Review) ಅಂದ್ರೆ ರಾವಣ ಅನ್ನೊದು ಗೊತ್ತೇ ಇದೆ. ಲಂಕಾಸುರ ಒಳ್ಳೆಯವನಾ ಕೆಟ್ಟವನಾ ಅನ್ನೋ ಪ್ರಶ್ನೆ ಇದ್ದೇ ಇದೆ. ಶ್ರೀಲಂಕಾದಲ್ಲಿ ರಾವಣ ತುಂಬಾ ಒಳ್ಳೆ ವ್ಯಕ್ತಿ ಅಂತಲೇ (Lankasura Teaser Release) ಹೇಳಲಾಗುತ್ತದೆ. ಆದರೆ ಭಾರತದಲ್ಲಿ ರಾವಣ ಒಬ್ಬ ವಿಲನ್ ಅಂತ ಹೆಚ್ಚು ಬಿಂಬಿತವಾಗಿದೆ. ಆದರೆ ಲಂಕಾಸುರ ಚಿತ್ರದ ಟೀಸರ್ ನೋಡಿದ್ರೆ, ಎಲ್ಲೋ ಇದು ವಿಲನ್ ಶೇಡ್ ಇರೋ ವಿನೋದ್ ( Lankasura Movie) ಸಿನಿಮಾ ಅನಿಸುತ್ತದೆ.


ಇದರ ಜೊತೆಗೆ ಸಿನಿಮಾದಲ್ಲಿ ಭಯಂಕರ ಪಾತ್ರಗಳೂ ಇವೆ. ಇದರ ಸುತ್ತ ಒಂದು ಸ್ಟೋರಿ ಇಲ್ಲಿದೆ.


Kannada Actor Vinnod Prabhakar Acted Lankasura Movie Teaser Release
ರಾಮ ಹುಟ್ಟಿದ ದಿನ ಲಂಕಾಸುರನ ಆಗಮನ


ವಿನೋದ್ ಪ್ರಭಾಕರ್ ಪ್ರೋಡಕ್ಷನ್ ಹೌಸ್ ಆರಂಭಿಸಿದ್ದಾರೆ. ಟೈಗರ್ ಟಾಕೀಸ್ ಈ ಪ್ರೋಡಕ್ಷನ್ ಹೌಸ್ ಹೆಸರು. ಪ್ರಭಾಕರ್ ಅವರ ಹೆಸರಿನಿಂದಲೇ ಇದು ಶುರು ಆಗಿದೆ. ಈ ಮೂಲಕ ವಿನೋದ್ ಪ್ರಭಾಕರ್ ನಿರ್ಮಾಪಕರೂ ಆಗಿದ್ದಾರೆ.
ಲಂಕಾಸುರ ಸಿನಿಮಾ ವಿನೋದ್ ಕನಸಿನ ಪ್ರೋಜೆಕ್ಟ್


ಸ್ವತಃ ನಿರ್ಮಾಣದ ಸಿನಿಮಾ ಅಂದ್ಮೇಲೆ ಸಾಕಷ್ಟು ಪ್ರೀತಿನೂ ಇರುತ್ತದೆ. ಶ್ರಮ ಕೂಡ ಅಷ್ಟೇ ಇರುತ್ತದೆ. ವಿನೋದ್ ಅವರ ಲಂಕಾಸುರ ಚಿತ್ರದ ಟೀಸರ್ ನೋಡಿದ್ರೆ, ಆ ಒಂದು ಪರಿಶ್ರಮ ಎದ್ದು ಕಾಣುತ್ತದೆ. ವಿನೋದ್ ಪ್ರಭಾಕರ್ ಈ ಒಂದು ಲಂಕಾಸುರ ಪಾತ್ರಕ್ಕೆ ಸಾಕಷ್ಟು ಸಣ್ಣ ಆಗಿದ್ದಾರೆ. ದೇಹವನ್ನ ಮತ್ತಷ್ಟು ಸ್ಟ್ರಾಂಗ್ ಮಾಡಿಕೊಂಡಿದ್ದಾರೆ.
ವಿನೋದ್ ಪ್ರಭಾಕರ್ ಅವರು ತಮ್ಮ ಈ ಚಿತ್ರಕ್ಕಾಗಿಯೇ ಲಾಂಗ್ ಹೇರ್ ಮತ್ತು ಲಾಂಗ್ ಬಿಯರ್ಡ್ ಲುಕ್ ಮೆಂಟೇನ್ ಮಾಡಿದ್ದಾರೆ. ವಿನೋದ್ ಅವರ ಈ ಒಂದು ಲುಕ್ ನೋಡಿದಾಗ, ಏನೋ ಸ್ಪೆಷಲ್ ಅನಿಸುತ್ತದೆ. ಜೊತೆಗೆ ಭಯಾನಕ ಅನ್ನುವ ಭಾವನೆ ಕೂಡ ಮೂಡುತ್ತದೆ.


ಲಂಕಾಸುರ ಸಿನಿಮಾದಲ್ಲಿ ಹತ್ತು ಹಲವು ಪಾತ್ರಗಳ ಸೃಷ್ಟಿ


ಲಂಕಾಸುರ ಚಿತ್ರದಲ್ಲಿ ಸಾಕಷ್ಟು ಪಾತ್ರಗಳಿರೋದು ಕೂಡ ಕಂಡು ಬರುತ್ರದೆ. ಡೈನಾಮಿಕ್ ಹೀರೋ ದೇವರಾಜ್ ಅವರ ಕ್ಯಾರೆಕ್ಟರ್ ಕೂಡ ಇಲ್ಲಿ ವಿಭಿನ್ನವಾಗಿಯೇ ಕಂಡು ಬರುತ್ತದೆ. ವಿಲನ್ ಪಾತ್ರಕ್ಕೆ ಹೆಸರಾದ ರವಿಶಂಕರ್ ಶರ್ಮಾ ಅವರು ಭಯಂಕರವಾಗಿಯೇ ಕಾಣಿಸಿಕೊಂಡಿದ್ದಾರೆ.


Kannada Actor Vinnod Prabhakar Acted Lankasura Movie Teaser Release
ಲಂಕಾಸುರ ಸಿನಿಮಾದಲ್ಲಿ ಹತ್ತು ಹಲವು ಪಾತ್ರಗಳ ಸೃಷ್ಟಿ


ಲಂಕಾಸುರ ಸಿನಿಮಾದಲ್ಲಿ ಇನ್ನೂ ಒಂದು ವಿಶೇಷತೆ ಕೂಡ ಇದೆ. ಆ ವಿಶೇಷತೆ ಬೇರೆ ಏನೋ ಅಲ್ಲ. ನಟ ಲೂಸ ಮಾದ ಯೋಗಿ ಅಂತಲೇ ಹೇಳಬಹುದು. ಲಂಕಾಸುರ ಸಿನಿಮಾದಲ್ಲಿ ಲೂಸು ಅನ್ನೋ ರೋಲ್ ಅನ್ನೇ ನಿರ್ವಹಿಸಿದ್ದಾರೆ.


ಲಂಕಾಸುರ ಚಿತ್ರದ ಹಿಂದೆ ನುರಿತ ತಂಡದ ಪರಿಶ್ರಮ


ಲಂಕಾಸುರ ಚಿತ್ರವನ್ನ ಪ್ರಮೋದ್ ಕುಮಾರ್ ಡಿ. ಎಸ್. ನಿರ್ದೇಶನ ಮಾಡಿದ್ದಾರೆ. ಈ ಮೂಲಕ ವಿನೋದ್ ಪ್ರಭಾಕರ್ ಅವರನ್ನ ವಿಭಿನ್ನವಾಗಿಯೇ ತೋರಿಸಿದ್ದಾರೆ. ವಿಜೇತ್ ಕೃಷ್ಣ ಚಿತ್ರಕ್ಕೆ ಸಂಗೀತ ನಿರ್ದೇಶನದ ಮಾಡಿದ್ದಾರೆ.


ಇದನ್ನೂ ಓದಿ: Ramya-Dhananjaya: ಡಾಲಿ-ಅಮೃತಾ ಲವ್ ಮ್ಯಾಟರ್ ಸುಳಿವು ಕೊಟ್ಟ ರಮ್ಯಾ! ಇದೇನ್ ಮೇಡಂ ಹಿಂಗ್ ಬಾಂಬ್ ಇಟ್ರಿ ಎಂದ ನಟರಾಕ್ಷಸ!


ಇನ್ನು ಸಿನಿಮಾದ ಬಹುತೇಕ ಕೆಲಸ ಪೂರ್ಣ ಆಗಿದೆ. ಇನ್ನೇನು ಅತೀ ಶೀಘ್ರದಲ್ಲಿಯೇ ಸಿನಿಮಾ ರಿಲೀಸ್ ಆಗುತ್ತದೆ ಅನ್ನುವ ವಿಷಯವನ್ನ ಸಿನಿಮಾ ಟೀಮ್ ಟೀಸರ್ ಜೊತೆಗೆ ಹೇಳಿಕೊಂಡಿದೆ. ಉಳಿದಂತೆ ಟೀಸರ್ ನೋಡಿದವ್ರು ಒಳ್ಳೆ ಅಭಿಪ್ರಾಯ ವ್ಯಕ್ತಡಿಸುತ್ತಿದ್ದಾರೆ. ವಿನೋದ್ ಪ್ರಭಾಕರ್ ಅವರಿಗೆ ಗುಡ್ ಲಕ್ ಕೂಡ ಹೇಳುತ್ತಿದ್ದಾರೆ.

top videos
    First published: