Vinay Rajkumar: ದೊಡ್ಮನೆ ಹುಡುಗ ವಿನಯ್ ಸಾಫ್ಟ್ ಅಲ್ಲ! ಫುಲ್ ಸ್ಟ್ರಾಂಗ್‌

ಹೊಸ ಭರವಸೆ ಮೂಡಿಸಿದ ವಿನಯ್ ರಾಜ್‌ಕುಮಾರ್

ಹೊಸ ಭರವಸೆ ಮೂಡಿಸಿದ ವಿನಯ್ ರಾಜ್‌ಕುಮಾರ್

ಒಂದು ಸರಳ ಪ್ರೇಮ ಕಥೆ ಸಿನಿಮಾದ ಶೂಟಿಂಗ್ ಭರದಿಂದಲೇ ಸಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿನಯ್ ಪಾತ್ರದ ಒಂದಷ್ಟು ಝಲಕ್ ಇರೊ ವಿಡಿಯೋವನ್ನ ಡೈರೆಕ್ಟರ್ ಸಿಂಪಲ್ ಸುನಿ ಇದೀಗ ಬಿಟ್ಟಿದ್ದಾರೆ. ಹಾಗಾಗಿಯೇ ವಿನಯ್ ಪಾತ್ರ ಮತ್ತಷ್ಟು ಭರವಸೆ ಮೂಡಿಸಿದೆ.

  • News18 Kannada
  • 4-MIN READ
  • Last Updated :
  • Bangalore [Bangalore], India
  • Share this:

ದೊಡ್ಮನೆಯ ವಿನಯ್ ರಾಜ್‌ಕುಮಾರ್ (Vinay Rajkumar New Film Look) ಈ ವರ್ಷ ಎರಡು ಚಿತ್ರದ ಮೂಲಕ ಭರವಸೆ ಮೂಡಿಸಿದ್ದಾರೆ. ಎರಡೂ ಸಿನಿಮಾದಲ್ಲಿ ಸ್ಪೆಷಲ್ ಪಾತ್ರಗಳೇ ಇವೆ. ಒಂದು ಗೆಲುವಿನ ನಿರೀಕ್ಷೆಯಲ್ಲಿರೋ (New Movie Look Reveal) ವಿನಯ್ ಒಳ್ಳೆ ನಟ ಅನ್ನೋದನ್ನ ಸಾಬೀತು ಮಾಡಿ ಆಗಿದೆ. ಆದರೆ ಜನರ ಮನದಲ್ಲಿ ಅತಿ ದೊಡ್ಡ ಜಾಗ ಮಾಡಿಕೊಳ್ಳುವುದು ಬಾಕಿ ಇದೆ. ಅದಕ್ಕೆ ಈ ಸಲ ಎರಡು (Kannada Actor Vinay Rajkumar) ಸಿನಿಮಾ ರೆಡಿ ಆಗುತ್ತಿವೆ. ಎರಡೂ ಚಿತ್ರದ ಹೆಸರು ಸ್ಪೆಷಲ್ ಅನಿಸುತ್ತವೆ. ಅದರ ಹೊರತಾಗಿ ಈ ಎರಡೂ ಚಿತ್ರದ ಲುಕ್ ಮತ್ತು ಗ್ಲಿಮ್ಸ್ ಹೊರ ಬಂದಿವೆ. ಅದನ್ನ ನೋಡಿದಾಗ (Kannada Movie Latest Updates) ಇದೀಗ ಹೊಸ ಭರವಸೆ ಕಂಡಿತಾ ಮೂಡುತ್ತದೆ. 


ವಿನಯ್ ರಾಜ್‌ಕುಮಾರ್ ಪೆಪೆ ಲುಕ್ ಸೂಪರ್‌


ವಿನಯ್ ರಾಜ್‌ಕುಮಾರ್ ಪೆಪೆ ಚಿತ್ರದ ಮೂಲಕ ದೊಡ್ಡ ಭರವಸೆ ಮೂಡಿಸಿದ್ದಾರೆ. ರಗಢ್ ಫೀಲ್ ಇರೋ ಪಾತ್ರವನ್ನ ಮಾಡಿರೋ ವಿನಯ್ ರಾಜ್‌ಕುಮಾರ್ ಈ ಚಿತ್ರದಲ್ಲಿ ದೊಡ್ಡ ಭರವಸೆ ಮೂಡಿಸಿದ್ದಾರೆ.


Kannada Actor Vinay Rajkumar New Movie Look Reveal
ಒಂದು ಸರಳ ಪ್ರೇಮ ಕಥೆ ಚಿತ್ರದಲ್ಲಿ ವಿನಯ್ ರೋಲ್ ಏನು?


ಗ್ಯಾಂಗ್‌ಸ್ಟರ್ ವಿನಯ್ ರಾಜ್‌ಕುಮಾರ್ ಲುಕ್ ರಿವೀಲ್


ಪೆಪೆ ಹೆಸರಿನ ಈ ಚಿತ್ರದಲ್ಲಿ ವಿನಯ್ ರಾಜ್‌ಕುಮಾರ್ ಒಬ್ಬ ಗ್ಯಾಂಗ್‌ಸ್ಟರ್ ರೋಲ್‌ ಅಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಅದಕ್ಕೆ ಬೇಕಾಗೋ ಲುಕ್‌ ಅಲ್ಲಿ ವಿನಯ್ ಇಲ್ಲಿ ಕಾಣಿಸಿಕೊಂಡಿದ್ದಾರೆ. ಇದರಿಂದ ವಿನಯ್ ರಗಢ್ ರೂಪ ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ.




ಪೆಪೆ ಚಿತ್ರದಲ್ಲಿ ವಿನಯ್ ಗ್ಯಾಂಗ್‌ಸ್ಟರ್ ಅಬ್ಬರ


ವಿನಯ್ ರಾಜ್‌ಕುಮಾರ್ ತುಂಬಾ ಸಾಫ್ಟ್ ಆಗಿದ್ದಾರೆ. ರಿಯಲ್‌ ಲೈಫ್‌ ಅಲ್ಲಿ ಹೀಗೆ ಇರೋ ವಿನಯ್, ಹೆಚ್ಚು ಮಾತು ಕೂಡ ಆಡೋದಿಲ್ಲ. ಆದರೆ ಶ್ರೀಲೇಶ್ ಎಸ್.ನಾಯರ್ ಇಲ್ಲಿ ವಿನಯ್‌ಗೆ ವಿಭಿನ್ನ ರೂಪವನ್ನೆ ಕೊಟ್ಟಿದ್ದಾರೆ.


ರಗಢ್ ವಿನಯ್‌ಗೆ ಕಾಜಲ್ ಕುಂದರ್ ಜೋಡಿ-ಮೋಡಿ


ವಿನಯ್ ರಾಜ್‌ಕುಮಾರ್‌ ಪಾತ್ರಕ್ಕೆ ಇಲ್ಲಿ ಕಾಜಲ್ ಕುಂದರ್ ಜೋಡಿ ಆಗಿದ್ದಾರೆ. ಮಯೂರ್ ಪಟೇಲ್, ಯಶ್ ಶೆಟ್ಟಿ, ಬಾಲರಾಜ್ ವಾಡಿ ಹೀಗೆ ಇನ್ನೂ ಅನೇಕ ಕಲಾವಿದರು ಇಲ್ಲಿ ವಿಜಯ್‌ಗೆ ಜೋಡಿ ಆಗಿದ್ದು, ಪೂರ್ಣಚಂದ್ರ ತೇಜಸ್ವಿ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ.


ಹೊಸ ಭರವಸೆ ಮೂಡಿಸಿದ ವಿನಯ್ ರಾಜ್‌ಕುಮಾರ್


ವಿನಯ್ ರಾಜ್‌ಕುಮಾರ್ ಇನ್ನೂ ಒಂದು ಸಿನಿಮಾ ಕೂಡ ಭಾರೀ ಭರವಸೆ ಮೂಡಿಸಿದೆ. ಡೈರೆಕ್ಟರ್ ಸಿಂಪಲ್ ಸುನಿ ನಿರ್ದೇಶನದ ಒಂದು ಸರಳ ಪ್ರೇಮ ಕಥೆ ಚಿತ್ರದಲ್ಲೂ ವಿನಯ್ ವಿಭಿನ್ನವಾದ ಪಾತ್ರವನ್ನ ನಿರ್ವಹಿಸಿದ್ದಾರೆ. ಈ ಪಾತ್ರದ ಒಂದಷ್ಟು ಝಲಕ್ ಕೂಡ ರಿಲೀಸ್ ಆಗಿದೆ.


Kannada Actor Vinay Rajkumar New Movie Look Reveal
ಪೆಪೆ ಚಿತ್ರದಲ್ಲಿ ವಿನಯ್ ಗ್ಯಾಂಗ್‌ಸ್ಟರ್ ಅಬ್ಬರ


ಒಂದು ಸರಳ ಪ್ರೇಮ ಕಥೆ ಚಿತ್ರದಲ್ಲಿ ವಿನಯ್ ರೋಲ್ ಏನು?


ಒಂದು ಸರಳ ಪ್ರೇಮ ಕಥೆ ಚಿತ್ರದಲ್ಲಿ ವಿನಯ್ ಒಬ್ಬ ಸಂಗೀತಗಾರನಾಗಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ವಿನಯ್ ಜನರ ಮನದಲ್ಲಿ ಹೊಸದಾಗಿ ಜಾಗ ಮಾಡಿಕೊಳ್ಳಲು ಬರ್ತಿದ್ದಾರೆ. ಇವರ ಈ ಒಂದು ಪಾತ್ರದಲ್ಲಿ ಸಾಕಷ್ಟು ವಿಶೇಷ ಕೂಡ ಇದೆ.


ಒಂದು ಸರಳ ಪ್ರೇಮ ಕಥೆ ಚಿತ್ರದ ವಿನಯ್ ರೋಲ್ ರಿವೀಲ್


ವಿನಯ್ ಪಾತ್ರದ ಪೋಷಣೆಯನ್ನ ಕೂಡ ಇಲ್ಲಿ ವಿಭಿನ್ನವಾಗಿಯೇ ಕಾಣಬಹುದು. ಹಾಗಾಗಿಯೇ ಇಲ್ಲೂ ವಿನಯ್ ಸ್ಕೋರ್ ಮಾಡೋ ಚಾನ್ಸಸ್ ಜಾಸ್ತಿ ಇದೆ.


ಇದನ್ನೂ ಓದಿ: Yash New Look: ರಾಕಿ ಭಾಯ್ ನ್ಯೂ ಲುಕ್! ಇದು Yash-19 ಸ್ಟೈಲಾ?

top videos


    ಒಂದು ಸರಳ ಪ್ರೇಮ ಕಥೆ ಸಿನಿಮಾದ ಶೂಟಿಂಗ್ ಭರದಿಂದಲೇ ಸಾಗುತ್ತದೆ. ಈ ಹಿನ್ನೆಲೆಯಲ್ಲಿ ವಿನಯ್ ಪಾತ್ರದ ಒಂದಷ್ಟು ಝಲಕ್ ಇರೊ ವಿಡಿಯೋವನ್ನ ಡೈರೆಕ್ಟರ್ ಸಿಂಪಲ್ ಸುನಿ ಇದೀಗ ಬಿಟ್ಟಿದ್ದಾರೆ. ಹಾಗಾಗಿಯೇ ವಿನಯ್ ಪಾತ್ರ ಮತ್ತಷ್ಟು ಭರವಸೆ ಮೂಡಿಸಿದೆ.

    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು