• Home
  • »
  • News
  • »
  • entertainment
  • »
  • Vinay Rajkumar: ಹಸಿರ ಸಿರಿಯ ಹಸಿ ಹಸಿ ಕ್ರೌರ್ಯ; ರಾಜ್ ಮೊಮ್ಮಗನ ರಗಡ್​ ರೂಪ-ಡೈರೆಕ್ಟರ್ ಏನ್ ಹೇಳ್ತಾರೆ?

Vinay Rajkumar: ಹಸಿರ ಸಿರಿಯ ಹಸಿ ಹಸಿ ಕ್ರೌರ್ಯ; ರಾಜ್ ಮೊಮ್ಮಗನ ರಗಡ್​ ರೂಪ-ಡೈರೆಕ್ಟರ್ ಏನ್ ಹೇಳ್ತಾರೆ?

ರಾಜ್ ಮೊಮ್ಮಗನ ರಗಢ್ ರೂಪ-ಡೈರೆಕ್ಟರ್ ಏನ್ ಹೇಳ್ತಾರೆ?

ರಾಜ್ ಮೊಮ್ಮಗನ ರಗಢ್ ರೂಪ-ಡೈರೆಕ್ಟರ್ ಏನ್ ಹೇಳ್ತಾರೆ?

ವಿನಯ್ ರಾಜ್ ಕುಮಾರ್ ಅವರ ಆ್ಯಕ್ಷನ್ ಇಲ್ಲಿ ರಿಯಲ್ ಆಗಿಯೇ ಇವೆ. ಎಲ್ಲೂ ಅಬ್ಬರ ಕಾಣಿಸೋದೇ ಇಲ್ಲ. ಮಲೆನಾಡಿನ ಮೌನದಲ್ಲಿ ಅಷ್ಟೇ ಪರಿಣಾಮ ಬೀರೋ ಹಾಗೆ ಕಾಣುತ್ತವೆ. ಫೈಟ್ ಮಾಸ್ಟರ್ ರವಿ ವರ್ಮ, ಚೇತನ್ ಡಿಸೋಜಾ ಕಲ್ಪನೆಯಲ್ಲಿಯೇ ಇಲ್ಲಿ ಸಾಹಸಗಳು ಅದ್ಭುತವಾಗಿಯೇ ಮೂಡಿ ಬಂದಿವೆ.

  • News18 Kannada
  • Last Updated :
  • Bangalore [Bangalore], India
  • Share this:

ರಾಜ್ ಫ್ಯಾಮಿಲಿಯ ರಾಜ್ (Vinay Rajkumar) ಮೊಮ್ಮಗ ವಿನಯ್ ರಾಜಕುಮಾರ್ ಒಳ್ಳೆ ಕಥೆ ಇರೋ ಸಿನಿಮಾ ಒಪ್ಪಿಕೊಂಡು ಅಭಿನಯಿಸಿದ್ದಾರೆ. ವಿನಯ್ ಅಭಿನಯದ Run Antony ಸಿನಿಮಾದ ಕಥೆ ಕೂಡ ಚೆನ್ನಾಗಿಯೇ ಇತ್ತು. ಅನಂತು ವರ್ಸಸ್ ನುಸ್ರತ್ ಕೂಡ ವಿಶೇಷವಾದ ಕಥೆ ಹೊಂದಿತ್ತು. ಒಳ್ಳೆ ಕಥೆ ಮತ್ತು ಒಳ್ಳೆ ನಿರೂಪಣೆಯ ಚಿತ್ರಗಳನ್ನ ವಿನಯ್ ರಾಜಕುಮಾರ್ ಮಾಡಿಕೊಂಡು ಬಂದಿದ್ದಾರೆ. ಇವರ ಸಿನಿ ಜರ್ನಿಯಲ್ಲಿ ಒಳ್ಳೆ (Project) ಪ್ರೋಜೆಕ್ಟ್​ಗಳನ್ನೆ ಆಯ್ದುಕೊಂಡಿದ್ದಾರೆ. ಆ ಸಾಲಿನಲ್ಲಿ ಈಗ ಪೆಪೆ ಎಂಬ ವಿಶೇಷ ಹೆಸರಿನ (Special Title Film) ಸಿನಿಮಾ ಅತಿ ಹೆಚ್ಚು ಗಮನ ಸೆಳೆಯುತ್ತಿದೆ. ಅದಕ್ಕೂ ಹೆಚ್ಚಾಗಿ ಸಾಫ್ಟ್ ವಿನಯ್ ರಾಜ್​ ಕುಮಾರ್ ಇಲ್ಲಿ ರಫ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಟೀಸರ್ ನೋಡಿದ್ರೆ, ಹಸಿರ ಸಿರಿಯ ಹಸಿ ಹಸಿ ಕ್ರೌರ್ಯದ ಕಥೆ ಅನಿಸುತ್ತದೆ.


ಪೆಪೆ ಸಿನಿಮಾದ ಒಂದಷ್ಟು ಇಂಟ್ರಸ್ಟಿಂಗ್ ವಿಷಯಗಳನ್ನ ನವ ನಿರ್ದೇಶಕ ಶ್ರೀಲೇಶ್ ಎಸ್ ನಾಯರ್, ನ್ಯೂಸ್-18 ಕನ್ನಡ ಡಿಜಿಟಲ್​ ಜೊತೆಗೆ ಹಂಚಿಕೊಂಡಿದ್ದಾರೆ. ತಮ್ಮ ಚಿತ್ರದ ವಿಶೇಷಗಳನ್ನ ಇಲ್ಲಿ ಒಂದಷ್ಟು ಬಿಟ್ಟುಕೊಟ್ಟಿದ್ದಾರೆ.


ಪೆಪೆ ಎಂಬ ಮಲೆನಾಡ ಹಸಿರ ಸಿರಿಯಲ್ಲಿ ನಡೆಯೋ ಕಥೆ
ಪೆಪೆ ಅಂದಾಕ್ಷಣ ಏನಪ್ಪ ಇದು, ಟೈಟಲ್ ಹೀಗಿದೆ ಅಂತ ನಿಮಗೆ ಅನಿಸುತ್ತದೆ. ಈ ಟೈಟಲ್ ನಲ್ಲಿ ಒಂದು ಸಣ್ಣ ಆಪ್ತತೆ ಇದೆ. ಪ್ರೀತಿಯನ್ನ ಕೂಡ ಇಲ್ಲಿ ಕಾಣಬಹುದು. ಅದ್ಹೇಗೆ? ಈ ಒಂದು ಪ್ರಶ್ನೆಗೆ ಉತ್ತರ ಸಿಂಪಲ್ ಆಗಿಯೇ ಇದೆ.


Kannada Actor Vinay Rajkumar New Film Pepe Completed its Shooting Now
ಪೆಪೆ ಎಂಬ ವಿಶೇಷ ಸಿನಿಮಾದ ಶೂಟಿಂಗ್ ಕಂಪ್ಲೀಟ್


ಯಾಕೆಂದ್ರೆ, ಪೆಪೆ ಅನ್ನೋದಕ್ಕೆ ಇಲ್ಲಿ ವಿಶೇಷ ಅರ್ಥ ಏನೂ ಇಲ್ಲ. ಪ್ರೀತಿಯಿಂದ ಕರೆಯೋ ಅದ್ಯಾವುದೇ ನಿಕ್​ ನೇಮ್​ಗಳಿಗೆ ಅಂತಹ ಸ್ಪೆಷಲ್ ಅರ್ಥ ಏನೂ ಇರೋದಿಲ್ಲ. ಇದು ಹಾಗೇನೆ, ಪೆಪೆ ಅಂದ್ರೆ, ಪ್ರದೀಪ್ ಅಂತಲೇ ಮೀನಿಂಗ್, ಇದು ನಾಯಕ ನಟ ವಿನಯ್ ರಾಜಕುಮಾರ್ ಪಾತ್ರದ ಹೆಸರೂ ಆಗಿದೆ.




ವಿನಯ್ ಚಿತ್ರದ ಜೀವನದಲ್ಲಿ ಇಂತಹ ಪಾತ್ರ ಮಾಡಿಯೇ ಇಲ್ಲ!
ಹೌದು, ವಿನಯ್ ರಾಜಕುಮಾರ್ ಅಭಿನಯದ ಮೊದಲ ಸಿನಿಮಾ ಸಿದ್ಧಾರ್ಥ ಅನ್ನೆ ತೆಗೆದುಕೊಳ್ಳಿ, ಅಲ್ಲೂ ವಿನಯ್ ರಗಢ್ ಆಗಿ ಬಿಹೇವ್ ಮಾಡಿರಲಿಲ್ಲ. ಅನಂತು ವರ್ಸಸ್ ನುಸ್ರತ್ ಕೂಡ ಸೂಪರ್ ಫಿಲ್ಮ ಆಗಿದೆ. ಅಲ್ಲೂ ವಿನಯ್ ರಫ್ ಆಗಿಯೇ ಕಾಣಿಸಿಕೊಳ್ಳಲೇ ಇಲ್ಲ.


ಆದರೆ ಪೆಪೆ ಸಿನಿಮಾದಲ್ಲಿ ಸಾಫ್ಟ್ ವಿನಯ್ ರಾಜಕುಮಾರ್ ನಿಮಗೆ ಸಿಗೋದೇ ಇಲ್ಲ. ಮಲೆನಾಡಿನ ಆ ರಗಢ್ ಪೆಪೆ ಪ್ರದೀಪ್ ಮಾತ್ರ ಸಿಗುತ್ತಾನೆ. ಆತನ ಕ್ರೌರ್ಯ ಇಲ್ಲಿ ಹಸಿರ ನಾಡಿನ ಅಸಲಿ ಸತ್ಯವನ್ನ ಹೇಳ್ತಾ ಹೋಗುತ್ತದೆ. ಪೆಪೆ ರಕ್ತಸಿಕ್ತ ದೇಹದ ಆ ರೂಪ ಒಮ್ಮೆ ನಿಮ್ಮಲ್ಲಿ ಸಣ್ಣಗೆ ನಡುಕ ಹುಟ್ಟಿಸುತ್ತದೆ.




ಚಿತ್ರದ ಟೀಸರ್ ಗಳು ನಿಮ್ಮಲ್ಲಿ ಒಂದು ಹೊಸ ಅನುಭವ ಕೂಡ ಮೂಡಿಸುತ್ತವೆ. ಮಲೆನಾಡಿನ ಹಸಿರ ಸಿರಿಯ ತಂಪನ್ನೂ ಕೊಡುತ್ತವೆ. ಅದರ ಜೊತೆಗೆ ಮಲೆನಾಡನಲ್ಲಿ ನಡೆಯೋ ಕ್ರೌರ್ಯದ ಚಿತ್ರಣವನ್ನೂ ಕೊಡುತ್ತವೆ.


ಪೆಪೆ ಎಂಬ ವಿಶೇಷ ಸಿನಿಮಾದ ಶೂಟಿಂಗ್ ಕಂಪ್ಲೀಟ್
ಪೆಪೆ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಅಭಿಷೇಕ್ ಕಾಸರಗೋಡ ಛಾಯಾಗ್ರಹಣದಲ್ಲಿ ಇಡೀ ಸಿನಿಮಾ ಅದ್ಭುತವಾಗಿಯೇ ಬಂದಿದೆ. ಲೂಸಿಯಾ ಚಿತ್ರಕ್ಕೆ ಸಂಗೀತ ಕೊಟ್ಟಿದ್ದ ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತದಲ್ಲಿ ಪೆಪೆ ಇನ್ನಷ್ಟು ಹೊಸ ಹೊಳಪು ಪಡೆದಂತಿದೆ.


Kannada Actor Vinay Rajkumar New Film Pepe Completed its Shooting Now
ವಿನಯ್ ಚಿತ್ರದ ಜೀವನದಲ್ಲಿ ಇಂತಹ ಪಾತ್ರ ಮಾಡಿಯೇ ಇಲ್ಲ!


ವಿನಯ್ ರಾಜ್ ಕುಮಾರ್ ಅವರ ಆ್ಯಕ್ಷನ್ ಇಲ್ಲಿ ರಿಯಲ್ ಆಗಿಯೇ ಇವೆ. ಎಲ್ಲೂ ಅಬ್ಬರ ಕಾಣಿಸೋದೇ ಇಲ್ಲ. ಮಲೆನಾಡಿನ ಮೌನದಲ್ಲಿ ಅಷ್ಟೇ ಪರಿಣಾಮ ಬೀರೋ ಹಾಗೆ ಕಾಣುತ್ತವೆ. ಫೈಟ್ ಮಾಸ್ಟರ್ ರವಿ ವರ್ಮ, ಚೇತನ್ ಡಿಸೋಜಾ ಕಲ್ಪನೆಯಲ್ಲಿಯೇ ಇಲ್ಲಿ ಸಾಹಸಗಳು ಅದ್ಭುತವಾಗಿಯೇ ಮೂಡಿ ಬಂದಿವೆ.


ಪೆಪೆ ಚಿತ್ರೀಕರಣದ ಕೆಲಸ ಈಗ ಶುರು
ಪೆಪೆ ಸಿನಿಮಾದ ಚಿತ್ರೀಕರಣ ಮುಗಿಸಿರೋ ಡೈರೆಕ್ಟರ್ ಶ್ರೀಲೇಶ್ ಎಸ್.ನಾಯರ್, ಸದ್ಯ ಚಿತ್ರೀಕರಣದ ನಂತರದ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಒಂದ್ ಒಳ್ಳೆ ಸಿನಿಮಾ ಮಾಡಿರೋ ಖುಷಿಯಲ್ಲು ಇದ್ದಾರೆ. ಫೈನಲ್ ಕಟ್ ನಲ್ಲಿ ಇನ್ನೂ ಅದ್ಭುತವಾಗಿಯೇ ಸಿನಿಮಾ ಬರುತ್ತದೆ ಎಂಬ ನಂಬಿಕೆ ಬಲವಾಗಿದೆ.


ಇದನ್ನೂ ಓದಿ: Janhvi Kapoor: ಕುಳಿತುಕೊಂಡೇ ಸಖತ್ ಪೋಸ್ ಕೊಟ್ಟ ಶ್ರೀದೇವಿ ಪುತ್ರಿ


ಇನ್ನು ಸಿನಿಮಾದಲ್ಲಿ ವಿನಯ್ ರಾಜ್ ಕುಮಾರ್ ಜೊತೆಗೆ ಮೇದಿನಿ ಕೆಳಮನೆ, ಕಾಜಲ್ ಕುಂದರ್ ಅಭಿನಯಿಸಿದ್ದಾರೆ. ಯಶ್ ಶೆಟ್ಟಿ, ನವೀನ್ ಪಡೀಲ್ ಹೀಗೆ ಇನ್ನು ಹಲವು ಪ್ರಮುಖ ಪಾತ್ರಗಳು ಚಿತ್ರದಲ್ಲಿದ್ದಾರೆ.


ಸದ್ಯಕ್ಕೆ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಈಗಾಗಲೇ ರಿಲೀಸ್ ಆದ ಟೀಸರ್ ಮೂಲಕ ಎಲ್ಲರ ಗಮನ ಸೆಳೆಯುತ್ತಿವೆ. ಇಡೀ ಸಿನಿಮಾ ಟೀಸರ್​​ ನಲ್ಲಿ ನೀವು ನೋಡಿರೋ ಹಾಗೇನೆ ಇರುತ್ತದೆ. ಸಿನಿ ಪ್ರೇಕ್ಷಕರಿಗೆ ಮಲೆನಾಡಿನ ಹಸಿ ಕ್ರೌರ್ಯದ ಸತ್ಯ ದರುಶನವನ್ನೂ ಮಾಡಲಿದೆ.

First published: