ಸ್ಯಾಂಡಲ್ವುಡ್ ಕ್ರೇಜಿ ಸ್ಟಾರ್ ರವಿಚಂದ್ರನ್ (Ravichandran) ಸಿನಿಮಾ ಪ್ರೀತಿಗೆ ಸಾಟಿನೇ ಇಲ್ಲ. ಇವರ ಮಕ್ಕಳಾದ ವಿಕ್ರಮ್ ಮತ್ತು ಮನೋರಂಜನ್ ಕೂಡ ಅಷ್ಟೆ. ಅಪ್ಪನಂತೆ ಸಿನಿಮಾ (Cinema Love) ಪ್ರೀತಿಯನ್ನ ಬೆಳೆಸಿಕೊಂಡಿದ್ದಾರೆ. ಇಬ್ಬರು ಈಗಾಗಲೇ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಇವರ ಸಿನಿಮಾಗಳು ಜನರಲ್ಲಿ ತಮ್ಮದೇ ರೀತಿಯಲ್ಲಿಯೇ ರೀಚ್ ಆಗಿವೆ. ಅಷ್ಟರಲ್ಲಿಯೇ ಈಗ ರವಿಚಂದ್ರನ್ ಎರಡನೇ ಪುತ್ರ (Vikram) ವಿಕ್ರಮ್ ಮತ್ತೊಂದು ಸಿನಿಮಾ ಒಪ್ಪಿದ್ದಾರೆ. ಈ ಚಿತ್ರದಲ್ಲಿ ಈ ಹಿಂದಿನ ಚಿತ್ರದ ವಿಕ್ರಮ್ ನಿಮಗೆ ಕಾಣೋದೇ ಇಲ್ಲ. ಇಲ್ಲಿ ಇರೋ ವಿಕ್ರಮ್ ಬೇರೆನೆ ಇದ್ದಾರೆ. ಗ್ಯಾಂಗಸ್ಟರ್ (Gangster Look) ರೂಪ ತಾಳಿರೋದು ಈ ಚಿತ್ರದ ವಿಶೇಷವೇ ಆಗಿದೆ. ಇದರ ಸುತ್ತ ಇನ್ನೂ ಒಂದಷ್ಟು ಮಾಹಿತಿ ಇಲ್ಲಿದೆ ಓದಿ.
ತ್ರಿವಿಕ್ರಮ ಸಿನಿಮಾದ ಹೀರೋ ಈಗ ಗ್ಯಾಂಗ್ಸ್ಟರ್ !
ಕ್ರೇಜಿ ಸ್ಟಾರ್ ರವಿಚಂದ್ರನ್ ಪುತ್ರ ವಿಕ್ರಮ್ ಈಗೊಂದು ಸಿನಿಮಾ ಒಪ್ಪಿದ್ದಾರೆ. ತ್ರಿವಿಕ್ರಮ ಸಿನಿಮಾ ಆದ್ಮೇಲೆ ಯಾವ ಚಿತ್ರವನ್ನ ವಿಕ್ರಮ್ ಓಕೆ ಅಂತಾರೆ ಅನ್ನೋ ಕುತೂಹಲ ಇತ್ತು. ಅದಕ್ಕೆ ಈಗ ತೆರೆ ಬಿದ್ದಿದೆ. ವಿಕ್ರಮ್ ಮತ್ತೊಂದು ಒಳ್ಳೆ ಕಥೆಯನ್ನೆ ಆಯ್ಕೆ ಮಾಡಿಕೊಂಡಿದ್ದಾರೆ.
ಚಿತ್ರದ ನಿರ್ದೇಶಕ ಕಾರ್ತಿಕ್ ರಾಜನ್ ಹೇಳಿದ ಕಥೆಯನ್ನ ವಿಕ್ರಮ್ ಕೇಳಿದ್ದಾರೆ. ಕೇಳಿದ ಮೇಲೆ ವಿಕ್ರಮ್ ಈ ಚಿತ್ರ ಮಾಡಲು ಒಪ್ಪಿಕೊಂಡಿದ್ದಾರೆ. ಸಿನಿಮಾದ ಕಥೆಯಲ್ಲಿ ಒಂದಷ್ಟು ಬೇರೆ ವಿಷಯ ಇದೆ. ಆದರೆ ಇಲ್ಲಿರೋದು ರಾ ಸಬ್ಜೆಕ್ಟ್ ಅನ್ನೋದೇ ವಿಶೇಷ.
ವಿಕ್ರಮ್ ರವಿಚಂದ್ರನ್ ಮುಂದಿನ ಚಿತ್ರ ಫುಲ್ ರಾ!
ಹೌದು, ವಿಕ್ರಮ್ ಒಪ್ಪಿರೋ ಚಿತ್ರದ ಕಥೆ ರಾ ಆಗಿಯೇ ಇದೆ. ಗ್ಯಾಂಗ್ಸ್ಟರ್ ಟಚ್ ಬೇರೆ. ಅಲ್ಲಿಗೆ ವಿಕ್ರಮ್ ರವಿಚಂದ್ರನ್ ಕನ್ನಡದಲ್ಲಿ ಮತ್ತೊಬ್ಬ ಮಾಸ್ ಹೀರೋ ಆಗೋಕೆ ರೆಡಿ ಆಗಿದ್ದಾರೆ. ರವಿಚಂದ್ರನ್ ಅವರ ಹಾಗೆ ನೇರವಾಗಿಯೇ ಮಾತನಾಡೋ ವಿಕ್ರಮ್, ಈ ಮೂಲಕ ಪಕ್ಕಾ ಗ್ಯಾಂಗ್ಸ್ಟರ್ ಲುಕ್ ಅಲ್ಲಿಯೇ ಬರ್ತಿದ್ದಾರೆ.
ಡೈರೆಕ್ಟರ್ ಕಾರ್ತಿಕ್ ರಾಜನ್ ಗೆ ಇದು ಮೊದಲ ಸಿನಿಮಾ
ಕಾರ್ತಿಕ್ ರಾಜನ್ ಇತ್ತೀಚಿಗೆ ಬಂದ ಹೆಡ್ ಬುಷ್ ಚಿತ್ರಕ್ಕೂ ಕೆಲಸ ಮಾಡಿದ್ದಾರೆ. ಈ ಮೊದಲು ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಬರಹಗಾರನಾಗಿ, ಸಹ ನಿರ್ದೇಶಕನಾಗಿಯೆ ಅನುಭವ ಪಡೆದಿದ್ದಾರೆ. ಅಲ್ಲಿ ಒಳ್ಳೇ ಹೆಸರನ್ನೂ ಮಾಡಿದ್ದಾರೆ.
ಅದೇ ಅನುಭವದ ಮೇಲೆ ಸ್ವತಂತ್ರವಾಗಿಯೇ ರಾ ವಿಷಯದ ಗ್ಯಾಂಗ್ಸ್ಟರ್ ಕಥೆಯನ್ನ ವಿಕ್ರಮ್ ರವಿಚಂದ್ರನ್ ಗಾಗಿಯೇ ಮಾಡಿದ್ದಾರೆ. ಈಗಾಗಲೇ ಈ ಚಿತ್ರಕ್ಕೆ ಪೂಜೆ ಕೂಡ ಆಗಿದೆ.
ವಿಕ್ರಮ್ ಚಿತ್ರಕ್ಕೆ ಮನೋರಂಜನ್ ಕ್ಲಾಪ್!
ಕ್ರೇಜಿ ಸ್ಟಾರ್ ರವಿಚಂದ್ರನ್ ಕ್ಲಾಪ್ ಮಾಡಿದ ಸಿನಿಮಾಗಳು ಹಿಟ್ ಆಗುತ್ತವೆ. ಈ ಒಂದು ನಂಬಿಕೆ ಹಿಂದಿನಿಂದಲೂ ಇದೆ. ಹಾಗಾಗಿಯೇ ರವಿಚಂದ್ರನ್ ಹೊಸ ಚಿತ್ರಗಳಿಗೆ ಕ್ಲಾಪ್ ಮಾಡುತ್ತಾರೆ. ಆದರೆ ವಿಕ್ರಮ್ ರವಿಚಂದ್ರನ್ ಚಿತ್ರಕ್ಕೆ ಕ್ರೇಜಿ ಪುತ್ರ ಮನೋರಂಜನ್ ಕ್ಲಾಪ್ ಮಾಡಿದ್ದಾರೆ. ಸಹೋದರನ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಗುಡ್ ಲಕ್ ಹೇಳಿದ್ದಾರೆ.
ವಿಕ್ರಮ್ ರವಿಚಂದ್ರನ್ ಚಿತ್ರದ ಹಿಂದೆ ಯಾರೆಲ್ಲ ಇದ್ದಾರೆ?
ವಿಕ್ರಮ್ ರವಿಚಂದ್ರನ್ ಒಪ್ಪಿರೋ ಈ ಚಿತ್ರಕ್ಕೆ ಈಗಷ್ಟೆ ಪೂಜೆ ಆಗಿದೆ. ಚಿತ್ರದ ತಾರಾ ಬಳಗ, ಟೆಕ್ನಿಷನ್ಗಳ ವಿವರ, ನಾಯಕಿ ಯಾರೂ ಅನ್ನೋ ವಿಷಯ, ಹೀಗೆ ಇನ್ನೂ ಹಲವು ವಿಷಯಗಳು ರಿವೀಲ್ ಆಗಬೇಕಿದೆ. ಅದನ್ನ ಅತಿ ಶೀಘ್ರದಲ್ಲಿಯೇ ಹೇಳೋದಾಗಿ ಟೀಮ್ ತಿಳಿಸಿದೆ.
ಜನವರಿ ತಿಂಗಳಲ್ಲಿ ವಿಕ್ರಮ್ ಹೊಸ ಶೂಟಿಂಗ್ ಶುರು
ವಿಕ್ರಮ್ ರವಿಚಂದ್ರನ್ ಅಭಿನಯದ ಈ ಚಿತ್ರಕ್ಕೆ ಯುವರಾಜ್ ಸಂಗೀತ ಕೊಡ್ತಿದ್ದಾರೆ. ಎಸ್.ತಮನ್ ಬಳಿಯೇ ಯುವರಾಜ್ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಇನ್ನು ಚಿತ್ರದ ಚಿತ್ರೀಕರಣ ಮುಂದಿನ ವರ್ಷ ಜನವರಿಯಿಂದಲೇ ಶುರು ಮಾಡುವ ಪ್ಲಾನ್ ಇದೆ.
ಸದ್ಯಕ್ಕೆ ಇಷ್ಟು ಮಾಹಿತಿಯನ್ನ ಸಿನಿಮಾ ತಂಡ ಬಿಟ್ಟುಕೊಟ್ಟಿದೆ. ಸಿನಿಮಾದ ಪೂಜೆಯನ್ನೂ ಮಾಡಿಕೊಂಡು ಪ್ರಿ ಪ್ರೋಡಕ್ಷನ್ ಕೆಲಸದಲ್ಲೂ ಇಡೀ ಟೀಮ್ ಈಗ ಬ್ಯುಸಿ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ