ಕನ್ನಡದ ಚಿನ್ನಾರಿ ಮುತ್ತ (Raaghu Movie Updates) ಈಗೊಂದು ಸಿನಿಮಾ ಮಾಡಿದ್ದಾರೆ. ಈ ಚಿತ್ರ ತುಂಬಾ ವಿಶೇಷವಾಗಿದೆ. ಸಿನಿಮಾಕ್ಕೆ ಇಟ್ಟ ಹೆಸರು ಕೂಡ ಸ್ಪೆಷಲ್ ಆಗಿದೆ. ಈ ಒಂದು ಚಿತ್ರದ ಪೋಸ್ಟರ್‌ಗಳು ರಿಲೀಸ್ ಆಗಿವೆ. ಇವು ಇಡೀ ಚಿತ್ರದ ಪ್ರಯೋಗದ ಸಣ್ಣ ಸೂಚನೆಯನ್ನ ಕೂಡ ಕೊಡುತ್ತವೆ. ಅದನ್ನ ನೋಡಿದರೆ ಎಲ್ಲೋ ಒಂದು (Raaghu Kannada Movie) ಕಡೆಗೆ ಇದೊಂದು ಥ್ರಿಲ್ಲರ್ ಸಿನಿಮಾ ಅನಿಸುತ್ತದೆ. ಇಲ್ಲಿಯವರೆಗಿನ ವಿಜಯ್ ರಾಘವೇಂದ್ರ ಸಿನಿಮಾ ಜರ್ನಿಯಲ್ಲಿ ಇಂತಹ ಸಿನಿಮಾ ಬಂದಿಲ್ಲ ಅಂತಲೇ ಹೇಳಬಹುದೇನೋ, ಆ ರೀತಿನೇ (Vijay Raghavendra Movie) ಈ ಚಿತ್ರ ಅನಿಸುತ್ತಿದೆ. ಇದರ ಒಂದಷ್ಟು (Raaghu New Movie) ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ ಓದಿ.
ವಿಜಯ್ ರಾಘವೇಂದ್ರ ಚಿತ್ರ ಜೀವನದ ಸ್ಪೆಷಲ್ ಸಿನಿಮಾ
ವಿಜಯ್ ರಾಘವೇಂದ್ರ ಸಿನಿಮಾ ಮಾಡ್ತಾನೇ ಇದ್ದಾರೆ. ತಮ್ಮದೇ ಒಂದು ಹಾದಿಯಲ್ಲಿ ಸಾಗುತ್ತಿದ್ದಾರೆ. ಕಿರುತೆರೆ ಮತ್ತು ಹಿರಿತೆರೆ ಅಂತ ಎರಡಲ್ಲೂ ಬ್ಯುಸಿ ಇರುತ್ತಾರೆ. ಆದರೆ ವಿಜಯ್ ರಾಘವೇಂದ್ರ ಇಲ್ಲಿವರೆಗೂ ಅಭಿನಯಿಸಿದ ಚಿತ್ರಗಳಲ್ಲಿ ಸಾಕಷ್ಟು ಕಲಾವಿದರು ಇರ್ತಾ ಇದ್ದರು.
ಆದರೆ ವಿಜಯ್ ರಾಘವೇಂದ್ರ ಅಭಿನಯದ ಈಗಿನ ಒಂದು ಚಿತ್ರ ತುಂಬಾ ಸ್ಪೆಷಲ್ ಆಗಿದೆ. ಹಾಗೆ ಆ ಸ್ಪೆಷಾಲಿಟಿ ಏನೂ ಅನ್ನೋ ಕುತೂಹಲಕ್ಕೆ ಇಲ್ಲೊಂದಿಷ್ಟು ಅಧಿಕೃತ ಮಾಹಿತಿ ಇದೆ. ಆ ಮಾಹಿತಿಯ ಜೊತೆಗೆ ಸಿನಿಮಾ ಟೈಟಲ್ ಅನ್ನ ಕೂಡ ಸಿನಿಮಾ ತಂಡ ಹೇಳಿಕೊಂಡಿದೆ.
ವಿಜಯ್ ರಾಘವೇಂದ್ರ ಹೊಸ ಸಿನಿಮಾ ಟೈಟಲ್ ಸ್ಪೆಷಾಲಿಟಿ ಏನು?
ವಿಜಯ್ ರಾಘವೇಂದ್ರ ನಟನೆಯ ಸಿನಿಮಾದ ಟೈಟಲ್ ಸ್ಪೆಷಲ್ ಆಗಿದೆ. ವಿಜಯ್ ರಾಘವೇಂದ್ರ ಅವರನ್ನ ಎಲ್ಲರೂ ರಾಘು ಅಂತಲೇ ಕರೆಯೋದು. ಅದೇ ನಿಕ್ ನೇಮ್ ಇಲ್ಲಿ ಸಿನಿಮಾ ಟೈಟಲ್ ಆಗಿದೆ. ಹೌದು, ರಾಘು ಅನ್ನೋದೇ ವಿಜಯ್ ರಾಘವೇಂದ್ರ ಅಭಿನಯದ ಸಿನಿಮಾದ ಹೆಸರಾಗಿದೆ.
ವಿಜಯ್ ರಾಘವೇಂದ್ರ ಈ ಚಿತ್ರದ ಹೀರೋ ಆಗಿದ್ದಾರೆ. ಇವರೇ ಇಲ್ಲಿ ಎಲ್ಲ ಅನ್ನೋದು ಅಷ್ಟೇ ಸತ್ಯ. ಒನ್ ಮ್ಯಾನ್ ಶೋ ಅಂತಿವಲ್ಲ. ಅದೇ ರೀತಿನೇ ಇಡೀ ಚಿತ್ರದಲ್ಲಿ ಈ ರಾಘುನೇ ಇರೋದು. ಬೇರೆ ಪಾತ್ರಗಳು ಇಲ್ಲಿ ಇಲ್ವೇ ಇಲ್ಲ ಅನ್ನೋದು ಈ ಚಿತ್ರದ ಪ್ರಯೋಗದ ಪ್ರಮುಖ ಅಂಶ ಆಗಿದೆ.
ರಾಘು ಸಿನಿಮಾ ಅಪ್ಪಟ ಹೊಸ ಜಾನರ್ ಸಿನಿಮಾ
ರಾಘು ಹೆಸರಿನ ಈ ಸಿನಿಮಾ ಹೊಚ್ಚ ಹೊಸ ಜಾನರ್‌ನ ಸಿನಿಮಾ ಆಗಿದೆ. ಇಲ್ಲಿವರೆಗೂ ಇಂತಹ ಒಂದು ಸಿನಿಮಾ ಬಂದಿರಲಿಲ್ಲ. ಆದರೆ ನವ ನಿರ್ದೇಶಕ ಎಂ. ಆನಂದ್ ರಾಜ್ ಈ ಒಂದು ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ.
ರಾಘು ಚಿತ್ರದ ಮೂಲಕ ನಿರ್ದೇಶಕರಾಗಿರೋ ಎಂ. ಆನಂದ್ ರಾಜ್ ಈ ಹಿಂದೆ, ಆನ ಮತ್ತು ಬ್ಯಾಂಗ್ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಅನುಭವ ಪಡೆದಿದ್ದಾರೆ. ಅದೇ ಅನುಭವದ ಆಧಾರದ ಮೇಲೆ ಏಕವ್ಯಕ್ತಿಯ ರಾಘು ಸಿನಿಮಾ ಮಾಡಿದ್ದಾರೆ.
ರಾಘು ಚಿತ್ರಕ್ಕೆ ಗಾಯಕ ವಾಸುಕಿ ವೈಭವ-ಆಲ್ ಓಕೆ ಅಲೋಕ್ ಗಾನ
ಉದಯ್ ಲೀಲಾ ಈ ಚಿತ್ರಕ್ಕೆ ಕ್ಯಾಮೆರಾವರ್ಕ್ ಮಾಡಿದ್ದಾರೆ. ಸೂರಜ್ ಜೋಯಿಸ್ ಸಂಗೀತ ನಿರ್ದೇಶನದ ಮಾಡಿದ್ದಾರೆ. ಚಿತ್ರದ ಹಿನ್ನೆಲೆಯ ಸಂಗೀತವನ್ನ ರಿತ್ವಿಕ್ ಮುರಳೀಧರ್ ಕೊಟ್ಟಿದ್ದಾರೆ. ಗಾಯಕ ವಾಸುಕಿ ವೈಭವ ಹಾಗೂ ಆಲ್ ಓಕೆ ಅಲೋಕ್ ಚಿತ್ರದ ಎರಡು ಹಾಡುಗಳನ್ನ ಹಾಡಿದ್ದಾರೆ.
ಇದನ್ನೂ ಓದಿ: Radika Pandit: ಅತ್ತಿಗೆ ಮುಂದೆ ಅಳಲು ತೋಡಿಕೊಂಡ ರಾಕಿ ಭಾಯ್ ಫ್ಯಾನ್ಸ್; ಯಾಕೆ? ಇಲ್ಲಿದೆ ಡಿಟೈಲ್ಸ್
ತಾಂತ್ರಿಕವಾಗಿಯೂ ತುಂಬಾನೆ ಶ್ರೀಮಂತವಾಗಿರೋ ಕನ್ನಡದ ಈ ರಾಘು ಸಿನಿಮಾದ ಎಲ್ಲ ಕೆಲಸ ಮುಗಿದಿದೆ. ಇದೇ ತಿಂಗಳ 28 ರಂದು ಸಿನಿಮಾ ರಿಲೀಸ್ ಆಗುತ್ತಿದೆ. ಸದ್ಯದಲ್ಲಿಯೇ ಸಿನಿಮಾದ ಹಾಡುಗಳೂ ರಿಲೀಸ್ ಆಗುತ್ತಿದೆ. ಉಳಿದಂತೆ ಸಿನಿಮಾ ಪೋಸ್ಟರ್‌ನಿಂದಲೇ ಈಗ ಹೆಚ್ಚು ಗಮನ ಸೆಳೆದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ