ಕನ್ನಡದಲ್ಲಿ ಹೊಸ ರೀತಿಯ ಸಿನಿಮಾ (Vijay Raghavendra New Movie) ಬರ್ತಾನೆ ಇವೆ. ಕೇವಲ ಸಿಂಗಲ್ ಥಿಯೇಟರ್‌ಗೆ ಉಳಿಯದೇ ಓಟಿಟಿಗೂ ಬರ್ತಿವೆ. ಚಿನ್ನಾರಿ ಮುತ್ತ ಚಿತ್ರ ಖ್ಯಾತಿಯ ನಟ ವಿಜಯ್ ರಾಘವೇಂದ್ರ ಈಗೊಂದು (Kannada Movie Trailer Release) ಸಿನಿಮಾ ಮಾಡಿದ್ದಾರೆ. ರಾಘು ಅನ್ನೋದು ಈ ಚಿತ್ರದ ಹೆಸರು ಅನ್ನೋದು ಈಗಾಗಲೇ ಅನೌನ್ಸ್ ಆಗಿದೆ. ಚಿತ್ರದ ಮೊದಲ ಪೋಸ್ಟರ್ ರಿಲೀಸ್ ಆದಾಗ ಈ ಸಿನಿಮಾದ ಕುರಿತು ಒಂದು ಕುತೂಹಲ ಮೂಡಿದೆ. ಟ್ರೈಲರ್ ಹೊರ ಬೀಳುತ್ತಲೇ ಈ ಸಿನಿಮಾದ ಭರವಸೆ (Raaghu Movie Trailer Release) ಇನ್ನು ಹೆಚ್ಚಾಗಿದೆ. ವಿಜಯ್ ರಾಘವೇಂದ್ರ ಅವರ ಅಭಿನಯದ ಅಷ್ಟು ಪ್ರತಿಭೆ ಈ ಒಂದು ಸಿನಿಮಾದಲ್ಲಿಯೇ ಮೂಡಿ ಬಂದಿದೆ ಅನಿಸುತ್ತಿದೆ.
ಅಷ್ಟು ಸ್ಪೆಷಲ್ ಆಗಿಯೆ ಕಾಣುವ ಈ (Vijay Raghavendra Film Trailer) ಚಿತ್ರದಲ್ಲಿ, ರಾಘು ಸೈಕೋನಾ? ನಾರ್ಮಲ್ ಮನುಷ್ಯನೇ? ಈ ಎಲ್ಲ ಪ್ರಶ್ನೆಗಳೂ ಹುಟ್ಟಿಕೊಂಡಿವೆ. ಇದರ ಸುತ್ತ ಇಲ್ಲಿ ಒಂದು ಸ್ಟೋರಿ ಇದೆ ಓದಿ.
ಚಿನ್ನಾರಿ ಮುತ್ತ ಏನಿದು ನಿಮ್ಮ ಈ ಸೈಕೋ ರೂಪ!
ರಾಘು ಅನ್ನೋದು ವಿಜಯ್ ರಾಘವೇಂದ್ರ ಅವರ ನಿಕ್ ನೇಮ್. ಇದನ್ನೆ ಸಿನಿಮಾ ಟೈಟಲ್ ಮಾಡಿರೋದು ಇಲ್ಲಿ ವಿಶೇಷ. ಸಿನಿಮಾದಲ್ಲಿ ರಾಘು ಯಾವ ರೀತಿಯ ವ್ಯಕ್ತಿ ಅನ್ನೋದು ಪೋಸ್ಟರ್ ನೋಡಿದಾಗ, ಜನಕ್ಕೆ ತಿಳಿದಿರಲಿಲ್ಲ. ಆದರೆ, ಸಿನಿಮಾದ ಟ್ರೈಲರ್ ರಿಲೀಸ್ ಆಗಿ ಇಡೀ ಚಿತ್ರದ ರಾಘು ಪಾತ್ರ ಝಲಕ್ ಕೊಟ್ಟಿದೆ ನೋಡಿ.
ರಾಘು ಸಿನಿಮಾದಲ್ಲಿ ರಘು ಸೈಕೋನಾ?
ಸಿನಿಮಾದಲ್ಲಿ ರಾಘು ಒಬ್ಬ ಸೈಕೋನಾ? ಈ ಒಂದು ಪ್ರಶ್ನೆ ಕಾಡುವಂತೇನೆ ರಾಘು ಪಾತ್ರ ಇಲ್ಲಿ ವರ್ತಿಸುತ್ತದೆ. ಈ ಒಂದು ಪಾತ್ರದ ಇತಿಹಾಸ ಮತ್ತು ಚರಿತ್ರೆ ಹೇಳುವ ಕೆಲಸ ಕೂಡ ಆಗಿದೆ. ಆ ಒಂದು ಕೆಲಸವನ್ನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇಲ್ಲಿ ಮಾಡಿದ್ದಾರೆ.
ಶಿವರಾಜ್ ಕುಮಾರ್ ಕಂಠಸಿರಿಯಲ್ಲಿ ರಾಘು ಚಿತ್ರದ ಪಾತ್ರ ಪರಿಚಯ ಆಗುತ್ತದೆ. ಚಿತ್ರದ ನಿರ್ದೇಶಕ ಎಂ. ಆನಂದ್ ರಾಜ್ ಏನೋ ಹೊಸ ರೀತಿಯ ಕಥೆ ಮಾಡಿಕೊಂಡಂತೆ ಇದೆ. ರಾಘು ಹೆಸರಿನಲ್ಲಿ ಇಡೀ ಸಿನಿಮಾ ಇರೋದಕ್ಕೆ ಕಾರಣವೂ ಇದೆ.
ರಾಘು ಎಂಬ ಕನ್ನಡ SOLO ಹೀರೋ ಸಿನಿಮಾ
ಹೌದು, ಕನ್ನಡದಲ್ಲಿ ಇಲ್ಲಿವರೆಗೂ ಬಂದಿದೇಯೋ ಇಲ್ವೋ, ಆದರೆ ಇಡೀ ಚಿತ್ರದಲ್ಲಿ ಬೇರೆ ಯಾರೂ ಇಲ್ಲ. ವಿಜಯ್ ರಾಘವೇಂದ್ರ ಒಬ್ಬರೇ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಸೋಲೋ ಆ್ಯಕ್ಟರ್ ಸಿನಿಮಾ ಅನ್ನೋ ವಿಷಯವನ್ನ ಸಿನಿಮಾ ನಿರ್ದೇಶಕ ಎಂ. ಆನಂದ್ ರಾಜ್ ಈಗಾಗಲೇ ಹೇಳಿಕೊಂಡಿದ್ದಾರೆ.
ರಾಘು ಸಿನಿಮಾದಲ್ಲಿ ವಿಜಯ್ ರಾಘವೇಂದ್ರ ಅದ್ಭುತವಾಗಿಯೇ ಅಭಿನಯಿಸಿದ್ದಾರೆ. ನವಸರಗಳೆಲ್ಲವನ್ನೂ ಇಲ್ಲಿ ಈ ಒಂದು ಪಾತ್ರಕ್ಕೆ ಬಳಸಿದಿದ್ದಾರೆ ಅನ್ನೋದು ಕೂಡ ತಿಳಿಯುತ್ತದೆ. ಆದರೆ ಸಿನಿಮಾದಲ್ಲಿ ರಾಘು ಕಿಲ್ಲರ್ ಇರಬೇಕು ಅನ್ನೋ ಅನುಮಾನವು ಮೂಡುತ್ತದೆ.
ರಾಘು ಸಿನಿಮಾ ಮತ್ತು ವಿಜಯ್ ರಾಘವೇಂದ್ರ ವಿಭಿನ್ನ ಮುಖಗಳು!
ರಾಘು ಚಿತ್ರದಲ್ಲಿ ವಿಜಯ್ ರಾಘವೇಂದ್ರ ಒಬ್ಬರೇ ಇದ್ದಾರೆ. ಇಡೀ ಸಿನಿಮಾದಲ್ಲಿ ಒಬ್ಬ ನಟನನ್ನ ನೋಡಲು ಸಾಧ್ಯವೇ ಅನ್ನುವ ಪ್ರಶ್ನೆ ಇದೆ. ಆದರೆ ಟ್ರೈಲರ್‌ನಲ್ಲಿ ಅದಕ್ಕೆ ಸೂಕ್ತ ಮತ್ತು ವಿಭಿನ್ನ ಉತ್ತರ ಸಿಕ್ಕಿದೆ ಎಂದು ಭಾವಿಸಬಹುದು. ಅಷ್ಟು ವಿಭಿನ್ನತೆಗಳನ್ನ ವಿಜಯ್ ರಾಘವೇಂದ್ರ ಇಲ್ಲಿ ತೋರಿಸಿದ್ದಾರೆ ಅಂತ ಹೇಳಬಹುದು.
ಇದನ್ನೂ ಓದಿ: Rajkumar Movie: ಮೇಯರ್ ಮುತ್ತಣ್ಣ ಚಿತ್ರಕ್ಕೆ ಸ್ಪೂರ್ತಿ ಸಿಕ್ಕಿದ್ದೆಲ್ಲಿಂದ ಗೊತ್ತಾ? ಇಲ್ಲಿದೆ ಆ ಇಂಟ್ರೆಸ್ಟಿಂಗ್ ಫ್ಯಾಕ್ಟ್
ರಾಘು ಚಿತ್ರಕ್ಕೆ ಉದಯ್ ಲೀಲಾ ಕ್ಯಾಮೆರಾವರ್ಕ್ ಮಾಡಿದ್ದಾರೆ. ಸೂರಜ್ ಜೋಯಿಸ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಏಪ್ರಿಲ್-28 ರಂದು ಸಿನಿಮಾ ರಿಲೀಸ್ ಪ್ಲಾನ್ ಆಗಿದೆ. ರಾಜ್ಯದೆಲ್ಲೆಡೆ ಈ ಚಿತ್ರವನ್ನ ಸಿನಿಮಾ ನಿರ್ಮಾಪಕರು ರಿಲೀಸ್ ಮಾಡೋ ಪ್ಲಾನ್ ಮಾಡಿದ್ದಾರೆ. ಇನ್ನುಳಿದಂತೆ ಸಿನಿಮಾದ ಟ್ರೈಲರ್ ತುಂಬಾ ಪ್ರಾಮಿಸಿಂಗ್ ಆಗಿಯೇ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ