• Home
  • »
  • News
  • »
  • entertainment
  • »
  • Vasishta Simha: ಹರಿಪ್ರಿಯಾ "ನನ್ನ ತಾಯಿ"ಯ ಸ್ಥಾನ ತುಂಬುತ್ತಿದ್ದಾರೆ: ವಸಿಷ್ಠ ಸಿಂಹ

Vasishta Simha: ಹರಿಪ್ರಿಯಾ "ನನ್ನ ತಾಯಿ"ಯ ಸ್ಥಾನ ತುಂಬುತ್ತಿದ್ದಾರೆ: ವಸಿಷ್ಠ ಸಿಂಹ

ಹರಿಪ್ರಿಯಾಗೆ ತಂದೆ ಇಲ್ಲ-ನನಗೆ ತಾಯಿ ಇಲ್ಲ!

ಹರಿಪ್ರಿಯಾಗೆ ತಂದೆ ಇಲ್ಲ-ನನಗೆ ತಾಯಿ ಇಲ್ಲ!

ನನಗೆ ತಾಯಿ ಇಲ್ಲ. ಆದರೆ ಹರಿಪ್ರಿಯಾ ಆ ಸ್ಥಾನವನ್ನ ತುಂಬುತ್ತಿದ್ದಾರೆ. ಹರಿಪ್ರಿಯಾ ನನ್ನ ಜೀವನದ ವಿಶೇಷ ವ್ಯಕ್ತಿನೇ ಆಗಿದ್ದಾರೆ. ನಾನು ಡಿಪ್ರೆಷನ್ ನಲ್ಲಿದ್ದಾಗ ಹರಿಪ್ರಿಯಾ ನನ್ನ ಜೊತೆಗೆ ಇದ್ದರು. ಹರಿಪ್ರಿಯಾ ನನ್ನ ಬಾಳಿನಲ್ಲಿ ತುಂಬಾ ಸ್ಪೆಷಲ್ ಅನ್ನೋ ಅರ್ಥದಲ್ಲಿಯೇ ವಸಿಷ್ಠ ಸಿಂಹ ಹೇಳ್ತಾ ಹೋದ್ರು.

ಮುಂದೆ ಓದಿ ...
  • News18 Kannada
  • 5-MIN READ
  • Last Updated :
  • Bangalore [Bangalore], India
  • Share this:

ಅದು ವಿಶೇಷ ಪ್ರೆಸ್ ಮೀಟ್. ನಿನಗೆ ನಾನು (Kannada Actress Haripriya) ನನಗೆ ನೀನು. ನಮಗೆ ನಾವೇ ಎಲ್ಲ ಅನ್ನೋ ಹಂಗಿತ್ತು ಈ ಜೋಡಿಯ ಹಾವ-ಭಾವ. ನಿಜ, ಬೆಂಗಳೂರಿನಲ್ಲಿ (Vasishta Simha) ನಡೆದ ಪ್ರೆಸ್​ ಮೀಟ್​ನಲ್ಲಿ ಹರಿಪ್ರಿಯಾ ಮತ್ತು ವಸಿಷ್ಠ ಜೊತೆಯಾಗಿಯೇ ಬಂದ್ರು. ಕೈ, ಕೈ ಹಿಡಿದೇ ಕುಳಿತರು. ಹಾಗೆ ಮಾತು (Special Love Story) ಆರಂಭಗೊಂಡವು. ಪತ್ರಕರ್ತರ ಪ್ರಶ್ನೆಗೆ ಪ್ರೀತಿಯಿಂದಲೇ ಉತ್ತರ ಕೊಟ್ಟರು. ಹರಿಪ್ರಿಯಾ ತಮ್ಮ ಎಂದಿನ ಸುಂದರ (Kannada Actor Vasistha Simha) ನಗುವಿನೊಂದಿಗೆ ಎಲ್ಲವನ್ನೂ ಎಕ್ಸಪ್ರೆಸ್ ಮಾಡ್ತಾ ಇದ್ದರು. ವಸಿಷ್ಠ ಸಿಂಹ ಮಾತಾಡ್ತಾ ಹೋದ್ರು. ಸಿನಿಮಾರಂಗ ಆರಂಭದ ದಿನಗಳು ಈಗೀನ ಉತ್ತುಂಗದ ಸ್ಥಿತಿ ಎಲ್ಲವೂ ನೆನಪಿಸಿಕೊಂಡ್ರು.


ಕ್ರಿಸ್ಟಲ್ ನನ್ನ ಗಿಫ್ಟ್ ಮಾಡೋ ಮೊದಲೇ ಲವ್ ಇತ್ತು
ನಾನು ಮತ್ತು ಹರಿಪ್ರಿಯಾ ಮೊದಲು ಪರಿಯ ಆಗಿದ್ದವು. ನಮ್ಮ ನಡುವೆ ವಿಶ್ವಾಸ ಮತ್ತು ಪ್ರೀತಿ ಬೆಳೆದ್ಮೇಲೆನೆ ಹರಿಪ್ರಿಯಾಗೆ ಕ್ರಿಸ್ಟಲ್​ನ ಗಿಫ್ಟ್ ಮಾಡಿದೆ. ಇದನ್ನ ಹೇಳಿದ ವಸಿಷ್ಠ ಸಿಂಹ, ನಾಯಿಯನ್ನ ಕೊಟ್ಟು ಹರಿಪ್ರಿಯಾರನ್ನ ಪಟಾಯಿಸಿಲ್ರಪ್ಪೋ ಅಂತಲೇ ತಮಾಷೆಯಾಗಿಯೇ ಹೇಳಿಕೊಂಡ್ರು.


Kannada Actor Vasistha Simha and Actress Haripriya Reveal unknown facts about their love Story
ಕ್ರಿಸ್ಟಲ್ ನನ್ನ ಗಿಫ್ಟ್ ಮಾಡೋ ಮೊದಲೇ ಲವ್ ಇತ್ತು!


ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಲವ್ ಸ್ಟೋರಿ ಬ್ಯೂಟಿಫುಲ್ ಆಗಿದೆ. ಅದರ ಬಗ್ಗೆ ಇಲ್ಲಿವರೆಗೂ ಯಾರಿಗೂ ಗೊತ್ತಿರಲಿಲ್ಲ. ಆದರೆ ಅಧಿಕೃತವಾಗಿಯೇ ಹರಿಪ್ರಿಯಾ ಮತ್ತು ವಸಿಷ್ಠ ತಮ್ಮ ಲವ್ ಸ್ಟೋರಿಯ ಒಂದಷ್ಟು ವಿಷಯವನ್ನ ಇಲ್ಲಿ ಹಂಚಿಕೊಂಡ್ರು.




ಹರಿಪ್ರಿಯಾಗೆ ತಂದೆ ಇಲ್ಲ-ನನಗೆ ತಾಯಿ ಇಲ್ಲ
ಹರಿಪ್ರಿಯಾಗೆ ತಂದೆ ಇಲ್ಲ ಅನ್ನೋದು ಗೊತ್ತೇ ಇದೆ. ಆ ದಿನವೇ ನಾನು ಹರಿಪ್ರಿಯಾಗೆ ಪ್ರಪೋಸ್ ಮಾಡಿದೆ. ಇನ್ನೂ ಒಂದು ವಿಷಯ ಹೇಳ್ಬೇಕು. ಹರಿಪ್ರಿಯಾ ಒಬ್ಬ ಗೆಳತಿಯಾಗಿ ಬಂದಿದ್ದಲ್ಲ. ಒಬ್ಬ ತಾಯಿ ಸ್ಥಾನದಲ್ಲೂ ಇದ್ದಾರೆ.


ನನಗೆ ತಾಯಿ ಇಲ್ಲ. ಆದರೆ ಹರಿಪ್ರಿಯಾ ಆ ಸ್ಥಾನವನ್ನ ತುಂಬುತ್ತಿದ್ದಾರೆ. ಹರಿಪ್ರಿಯಾ ನನ್ನ ಜೀವನದ ವಿಶೇಷ ವ್ಯಕ್ತಿನೇ ಆಗಿದ್ದಾರೆ. ನಾನು ಡಿಪ್ರೆಷನ್ ನಲ್ಲಿದ್ದಾಗ ಹರಿಪ್ರಿಯಾ ನನ್ನ ಜೊತೆಗೆ ಇದ್ದರು. ಹರಿಪ್ರಿಯಾ ನನ್ನ ಬಾಳಿನಲ್ಲಿ ತುಂಬಾ ಸ್ಪೆಷಲ್ ಅನ್ನೋ ಅರ್ಥದಲ್ಲಿಯೇ ವಸಿಷ್ಠ ಸಿಂಹ ಹೇಳ್ತಾ ಹೋದ್ರು.


ಕೈ, ಕೈ ಹಿಡಿದು ಕುಳಿತಿದ್ದರು ಹರಿಪ್ರಿಯಾ-ವಸಿಷ್ಠ ಸಿಂಹ
ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಒಬ್ಬರನ್ನ ಒಬ್ಬರು ತುಂಬಾ ಹಚ್ಚಿಕೊಂಡಿದ್ದಾರೆ. ಪರಸ್ಪರ ನಂಬಿಕೆ ಜಾಸ್ತಿನೇ ಇದೆ. ಇವರ ಪ್ರೀತಿಗೆ ಸಾಕ್ಷಿ ಹತ್ತು ಹಲವು. ಅದಕ್ಕೆ ಸಾಕ್ಷಿ ಎಂಬಂತೆ, ಪ್ರೆಸ್ ಮೀಟ್​ನಲ್ಲಿ ಪರಸ್ಪರ ಕೈ, ಕೈ ಹಿಡಿದು ಕುಳಿತಿದ್ದರು ಸಿಂಹಪ್ರಿಯ. ಅದು ಇಲ್ಲಿ ವಿಶೇಷವೆಸಿತ್ತು.


ಹರಿಪ್ರಿಯಾಗಾಗಿಯೇ ವಸಿಷ್ಠ ಸಿಂಹ ಒಂದು ಹಾಡು ಕೂಡ ಹಾಡಿದರು. ಒಂದು ರೀತಿ ಈ ಜೋಡಿಗೆ ಇದು ಭಾವಕ ಕ್ಷಣವೇ ಆಗಿತ್ತು. ಆದೇ ಭಾವುಕತೆಯಲ್ಲಿ ವಸಿಷ್ಠ ಸಿಂಹ ಇಲ್ಲಿ ಒಂದು ಹಾಡಿಗೆ ಧ್ವನಿಯಾದರು.


Kannada Actor Vasistha Simha and Actress Haripriya Reveal unknown facts about their love Story
ಕೈ, ಕೈ ಹಿಡಿದು ಕುಳಿತಿದ್ದರು ಹರಿಪ್ರಿಯಾ-ವಸಿಷ್ಠ ಸಿಂಹ


ಸಿಂಹ ಪ್ರಿಯ ಜೋಡಿಗೆ ದೇವರು-ದೈವದ ಬಗ್ಗೆ ನಂಬಿಕೆ
ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಕೇವಲ ಲವ್ ಅಂತ ಇದ್ದೋರಲ್ಲ. ದೇವರ ಬಗ್ಗೆ, ಅಚರಣೆ ಬಗ್ಗೆ, ಧಾರ್ಮಿಕತೆ ಬಗ್ಗೆ ಒಂದು ನಂಬಿಕೆ ಇಟ್ಟುಕೊಂಡಿದ್ದಾರೆ. ಆ ನಂಬಿಕೆ ಮೇಲೆನೆ ತಮ್ಮ ಗುರು-ಹಿರಿಯರ ಸಮ್ಮುಖ ಈ ಜೋಡಿ ಮೈಸೂರಲ್ಲಿರೋ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿಯೇ ಜನವರಿ-26 ರಂದು ಮದುವೆ ಆಗುತ್ತಿದ್ದಾರೆ.


ಇದನ್ನೂ ಓದಿ: Dhruva Sarja: ಆ್ಯಕ್ಷನ್ ಪ್ರಿನ್ಸ್ ದೇಹದ ತೂಕ ಇಳಿಸಿದ್ಯಾಕೆ? ಇಲ್ಲಿದೆ ನೋಡಿ ಮ್ಯಾಟರ್!


ಸಿಂಹಪ್ರಿಯ ಯಾರನ್ನೂ ಮರೆತಿಲ್ಲ ಎಲ್ಲರಿಗೂ ಆಹ್ವಾನ ಕೊಟ್ಟಿದ್ದಾರೆ. ಪತ್ರಿಕಾರಂಗದ ಸ್ನೇಹಿತರನ್ನೂ ಜನವರಿ-28 ರಂದು ಬೆಂಗಳೂರಿನಲ್ಲಿ ನಡೆಯೋ ರಿಷಪ್ಷನ್​ಗೆ ಆಹ್ವಾನಿಸಿದ್ದಾರೆ. ಹಾಗೆ ತಮ್ಮ ಈ ಪ್ರೀತಿಯ ಮದುವೆಗೆ ಎಲ್ಲರ ಪ್ರೀತಿನೂ ಇರಲಿ ಅಂತಲೇ ಕೇಳಿಕೊಂಡಿದ್ದಾರೆ.

First published: