ಕನ್ನಡದ ಬಹು ಭಾಷಾ ನಟ ಪ್ರಭು ದೇವ (Multi Language Actor Prabhu Deva) ತಮ್ಮ ಟ್ವಿಟರ್ ನಲ್ಲಿ ಒಂದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ನಲ್ಲಿ ಒಂದು ವೀಡಿಯೋ ಇದೆ. ಇದು ಸ್ಪೆಷಲ್ ವೀಡಿಯೊನೇ (Special Video) ಆಗಿದೆ. ಈ ಮೂಲಕ "ಇದು ನನ್ನ ಮುಂದಿನ ಸಿನಿಮಾ" ನಾನು ಈ ಚಿತ್ರವದಲ್ಲಿ ಅಭಿನಯಿಸುತ್ತಿದ್ದೇನೆ ಅನ್ನೋದನ್ನ ಇಂಡಿಯನ್ ಮೈಕಲ್ ಜಾಕ್ಸನ್ (Prabhu Deva) ಎಂದೇ ಕರೆಸಿಕೊಳ್ಳುವ ಪ್ರಭು ದೇವ ಹೇಳಿಕೊಂಡಿದ್ದಾರೆ. ಆದರೆ ಇದೇ ಚಿತ್ರದಲ್ಲಿ ಇನ್ನೂ ಒಂದು ವಿಶೇಷವೂ ಇದೆ. ಆ ವಿಶೇಷ ನೇರವಾಗಿ ಕನ್ನಡದ ವಸಿಷ್ಠ ಸಿಂಹ (Vasishta Simha) ಅವರಿಗೂ ಕನೆಕ್ಟ್ ಆಗುತ್ತದೆ. ಬಹು ಭಾಷೆಯಲ್ಲಿ ತಯಾರಾಗುತ್ತಿರೋ ಈ ಚಿತ್ರದ ಮೂಲಕ ವಸಿಷ್ಠ ಸಿಂಹ ಕಾಲಿವುಡ್ಗೂ ಕಾಲಿಡುತ್ತಿದ್ದಾರೆ.
ಕಾಲಿವುಡ್ಗೂ ಕಾಲಿಡ್ತಿದ್ದಾರೆ ಕನ್ನಡದ ವಸಿಷ್ಠ ಸಿಂಹ!
ಕನ್ನಡದ ವಸಿಷ್ಠ ಸಿಂಹ ಬಹು ಭಾಷೆಯಲ್ಲಿ ಅಭಿನಯಿಸುತ್ತಿದ್ದಾರೆ. ತೆಲುಗು ಮತ್ತು ಕನ್ನಡ ಚಿತ್ರದಲ್ಲಿ ಮಾತ್ರ ವಸಿಷ್ಠ ಸಿಂಹ ಗುರುತಿಸಿಕೊಂಡಿದ್ದಾರೆ. ತಮ್ಮ ವಿಶೇಷ ಕಂಠಸಿರಿ ಮೂಲಕ ಕನ್ನಡಿಗರ ಹೃದಯ ಕದ್ದಿರೋ ವಸಿಷ್ಠ ಸಿಂಹ ಕೆಜಿಎಫ್ ಚಿತ್ರದಲ್ಲೂ ತಮ್ಮ ಸ್ಪೆಷಲ್ ಪಾತ್ರದಿಂದಲೇ ಎಲ್ಲೆಡೆ ಗುರುತಿಸಿಕೊಂಡಿದ್ದಾರೆ.
ಲವ್ ಅಲಿ ಚಿತ್ರದ ಮೂಲಕ ವಸಿಷ್ಠ ಸಿಂಹ ಪೂರ್ಣ ಪ್ರಮಾಣದ ನಾಯಕ ನಟರೂ ಆಗಿದ್ದಾರೆ. ಈ ಚಿತ್ರದ ಕೆಲಸದಲ್ಲೂ ವಸಿಷ್ಠ ಸಿಂಹ ಬ್ಯುಸಿ ಆಗಿದ್ದಾರೆ. ಅಷ್ಟರಲ್ಲಿ ಈ ಮೊದಲೇ ಪ್ಲಾನ್ ಮಾಡಿದಂತೆ, ಇದೇ 26 ರಂದು ನಟಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಮದುವೆ ಕೂಡ ನೆರವೇರಲಿದೆ.
ವಸಿಷ್ಠ ಸಿಂಹ ಅಭಿನಯದ ಚಿತ್ರದ ಟೈಟಲ್ ಟೀಸರ್ ರಿಲೀಸ್
"ವೂಲ್ಫ್" ಚಿತ್ರದ ಟೈಟಲ್ ಟೀಸರ್ ರಿಲೀಸ್ ಆಗಿದೆ. ವಿಶೇಷವೆಂದ್ರೆ, ಇಂಡಿಯನ್ ಮೈಕಲ್ ಜಾಕ್ಸನ್ ಈ ಚಿತ್ರದ ಟೈಟಲ್ ಟೀಸರ್ನ್ನು ತಮ್ಮ ಟ್ವಿಟರ್ ಅಕೌಂಟ್ನಲ್ಲಿ ಶೇರ್ ಮಾಡಿದ್ದಾರೆ. ಇದು ನನ್ನ ಮುಂದಿನ ಸಿನಿಮಾ ಎಂದು ಕೂಡ ಹೇಳಿದ್ದಾರೆ.
ಚಿತ್ರದ ಟೈಟಲ್ ಕೂಡ ವಿಶೇಷವಾಗಿದೆ. ಚಿತ್ರದಲ್ಲಿ ಪ್ರಭು ದೇವ ವೂಲ್ಫ್ ಪಾತ್ರವನ್ನ ಮಾಡಿದ್ದಾರೆ ಅನ್ನೋ ಮಾಹಿತಿ ಕೂಡ ಇದೆ. ಇದೇ ಪ್ರಭು ದೇವ ಜೊತೆಗೆ ಕನ್ನಡದ ನಟ ವಸಿಷ್ಠ ಸಿಂಹ ತೆರೆ ಹಂಚಿಕೊಂಡಿರೋ ವಿಷಯ ಈಗ ಹೊರಬಿದ್ದಿದೆ.
ಪ್ರಭು ದೇವ-ವಸಿಷ್ಠ ಸಿಂಹ ಭಾಗದ 65 ದಿನ ಚಿತ್ರೀಕರಣ ಪೂರ್ಣ
ಬಹು ಭಾಷೆಯ ವೂಲ್ಫ್ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಬೆಂಗಳೂರು, ಚೆನ್ನೈ, ಪಾಂಡಿಚೇರಿ, ಅಂಡಮಾನ್, ನಿಕೋಬಾರ್ ಸೇರಿದಂತೆ ಹಲವು ಭಾಗದಲ್ಲಿ ವೂಲ್ಫ್ ಸಿನಿಮಾ ಶೂಟಿಂಗ್ ಆಗಿದೆ.
ಒಟ್ಟು 65 ದಿನಗಳವರೆಗೂ ಇಡೀ ಚಿತ್ರವನ್ನ ಚಿತ್ರೀಕರಿಸಲಾಗಿದೆ. ವಿಶೇಷವೆಂದ್ರೆ ಈ ಚಿತ್ರ ಕನ್ನಡ, ತಮಿಳು, ತೆಲುಗು, ಮಲೆಯಾಳಂ ಹೀಗೆ ಒಟ್ಟು ಐದು ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಇನ್ನೂ ಒಂದು ವಿಚಾರವೇನೆಂದ್ರೆ ಕನ್ನಡದ ನಿರ್ಮಾಪಕರಾದ ಸಂದೇಶ್ ನಾಗರಾಜ್ ಅವರೇ ಈ ಚಿತ್ರವನ್ನ ನಿರ್ಮಿಸುತ್ತಿದ್ದಾರೆ.
ಪ್ಯಾನ್ ಇಂಡಿಯಾ ವೂಲ್ಫ್ ಚಿತ್ರಕ್ಕೆ ವಿನು ವೆಂಕಟೇಶ್ ನಿರ್ದೇಶನ
ಬಹು ಭಾಷೆಯ ವೂಲ್ಫ್ ಚಿತ್ರಕ್ಕೆ ವಿನು ವೆಂಕಟೇಶ್ ಕಥೆ ಮಾಡಿದ್ದಾರೆ. ಚಿತ್ರಕಥೆಯನ್ನೂ ಇವರೇ ಮಾಡಿಕೊಂಡಿದ್ದಾರೆ. ಎರಡೂ ಮಾಡೋದರ ಜೊತೆಗೆ ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.
ಕಳೆದ ಡಿಸೆಂಬರ್ ತಿಂಗಳ ಕೊನೆಯಲ್ಲಿ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಅಲ್ಲಿಂದ ಇಲ್ಲಿವರೆಗೂ ಚಿತ್ರದ ಅಪ್ಡೇಟ್ಸ್ ಏನೂ ಇರಲಿಲ್ಲ. ಆದರೆ ಪ್ರಭು ದೇವ ತಮ್ಮ ಟ್ವಿಟರ್ ಮೂಲಕ ಚಿತ್ರದ ಟೈಟಲ್ ಶೇರ್ ಮಾಡಿದ್ದಾರೆ.
ಇದನ್ನೂ ಓದಿ: Celebrity Couples: ಪ್ರೀತಿಗೆ ಕಣ್ಣಿಲ್ಲ ಅನ್ನೋ ಮಾತು ನಿಜನಾ? ಇವು ಸೌತ್ ಸಿನಿಮಾ ಇಂಡಸ್ಟ್ರಿಯ ಮಿಸ್ ಮ್ಯಾಚ್ ಜೋಡಿಗಳು!
ಹೊಸ ರೀತಿಯ ಕುತೂಹಲ ಹುಟ್ಟಿಸಿದ್ದಾರೆ. ಇದರ ಬೆನ್ನಲ್ಲಿ ವಸಿಷ್ಠ ಸಿಂಹ ತೆರೆ ಹಂಚಿಕೊಂಡಿರೋ ವಿಷಯ ಕೂಡ ಚಿತ್ರದ ಕುರಿತು ಮತ್ತಷ್ಟು ಕುತೂಹಲ ಮೂಡಿಸುವಂತೆ ಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ