Actor Vasishta Simha: ಕನ್ನಡದ ಸಿಂಹನ 'ಲವ್ ಲಿ' ಎಲ್ಲಿಗೆ ಬಂತು? ವಸಿಷ್ಠ ಸಿಂಹ ಈಗ ಟಾಕಿಂಗ್

ಗಟ್ಟಿ ಧ್ವನಿಯ ನಟ ವಸಿಷ್ಠ ಸಿಂಹ ಗ್ರೇ ಶೇಡ್ ಪಾತ್ರಗಳಿಂದ ಈಗ ಹೊರ ಬಂದಿದ್ದಾರೆ. ಫಸ್ಟ್ ಟೈಮ್ ನಾಯಕ ನಟರಾಗಿಯೇ ಈಗಲೇ ಲವ್ ಲಿ ಬಿದ್ದೇ ಬಿಟ್ಟಿದ್ದಾರೆ. ಆದರೆ ಈ ಚಿತ್ರ ಈಗ ಎಲ್ಲಿಗೆ ಬಂದಿದೆ ಅನ್ನೋ ಮಾಹಿತಿನೂ ವಸಿಷ್ಠ ಸಿಂಹ ಕೊಟ್ಟಿದ್ದಾರೆ.

ಕನ್ನಡದ ಸಿಂಹನ ಲವ್ ಲಿ ಎಲ್ಲಿಗೆ ಬಂತು-ಕಾಲಚಕ್ರದ ಡಿಟೈಲ್ಸ್ ಏನು ?

ಕನ್ನಡದ ಸಿಂಹನ ಲವ್ ಲಿ ಎಲ್ಲಿಗೆ ಬಂತು-ಕಾಲಚಕ್ರದ ಡಿಟೈಲ್ಸ್ ಏನು ?

  • Share this:
ಕನ್ನಡದ ಮತ್ತೊಬ್ಬ ಗಟ್ಟಿ ಧ್ವನಿಯ ನಾಯಕ (Kannada Hero) ನಟ ಯಾರು ? ಈ ಪ್ರಶ್ನೆಗೆ ತುಂಬಾ ಹೆಸರು ಏನೂ ಬರೋದಿಲ್ಲ. ಆದರೆ, ಇರೋ ನಾಯಕರಲ್ಲಿ ಗಟ್ಟಿ ಧ್ವನಿಗೆ ಮೊದಲು ಕಿಚ್ಚ ಸುದೀಪ್ (Deep Voice Kichcha Sudeep) ಕಣ್ಮುಂದೆ ಬರುತ್ತಾರೆ. ಅವರ ಹೊರತಾಗಿ ಮತ್ತೊಬ್ಬ ನಾಯಕ ಯಾರೂ ಅಂತ ನೀವು ನೆನಪಿಸಿಕೊಂಡ್ರೆ, ಅಲ್ಲಿ ಸಿಂಹ ಘರ್ಜನೆ ಕೇಳಿಸುತ್ತದೆ. ನಿಜ, ಕನ್ನಡದ ಯುವ ನಾಯಕ ನಟ ವಸಿಷ್ಠ ಸಿಂಹ (Vasishta Simha) ಅವ್ರು ನಿಮ್ಮ ಮುಂದೆ ಬರೋದು ಗ್ಯಾರಂಟಿ. ತಮ್ಮ ವಿಶೇಷ ಕಂಠಸಿರಿಯಿಂದಲೇ ಸೆಳೆದು ಬಿಡ್ತಾರೆ. ತಮ್ಮ ವಿಶೇಷ ಮ್ಯಾನರಿಸಂನ ಅಭಿನಯಿಂದಲೂ ಪ್ರೇಕ್ಷಕರನ್ನ ತಮ್ಮತ್ತ ಸೆಳೆಯುತ್ತಾರೆ. ಇಂತಹ ಈ ನಾಯಕ ತಮಿಳು,ತೆಲಗು, ಕನ್ನಡ ಹೀಗೆ ಹಲವು ಪ್ರೋಜೆಕ್ಟ್​ಗಳಲ್ಲೂ ಬಿಜಿಯಾಗಿದ್ದು, ಲವ್ ಲಿ ಬಿದ್ದು ಲವ್ಲಿಯಾಗಿ ಒಂದಷ್ಟು ಡಿಟೈಲ್ಸ್ ಕೂಡ ಕೊಟ್ಟಿದ್ದಾರೆ.

ಗಟ್ಟಿ ಧ್ವನಿಯ ನಟ ವಸಿಷ್ಠ ಸಿಂಹ ಗ್ರೇ ಶೇಡ್ ಪಾತ್ರಗಳಿಂದ ಈಗ ಹೊರ ಬಂದಿದ್ದಾರೆ. ಫಸ್ಟ್ ಟೈಮ್ ನಾಯಕ ನಟರಾಗಿಯೇ ಈಗಾಗಲೇ ಲವ್ ಲಿ ಬಿದ್ದೇ ಬಿಟ್ಟಿದ್ದಾರೆ. ಹೌದು. ವಸಿಷ್ಠ ಸಿಂಹ ಅವ್ರು ಮೊದಲ ಬಾರಿಗೆ ಹೀರೋ ಆಗಿಯೇ ಅಭಿನಯಿಸಿರೋ ಲವ್ ಲಿ ಚಿತ್ರ ನಾಲ್ಕು ಸೆಡ್ಯೂಲ್ ಚಿತ್ರೀಕರಣ ಆಗುತ್ತಿದೆ. ಈಗಾಗಲೇ ಒಂದಷ್ಟು ಚಿತ್ರೀಕರಣವನ್ನೂ ಡೈರೆಕ್ಟರ್ ಚೇತನ್ ಕೇಶವ್ ಮಾಡಿದ್ದಾರೆ. ಫಸ್ಟ್ ಶೆಡ್ಯೂಲ್​ ನಲ್ಲಿ ಆಕ್ಷನ್ ಭಾಗದ ಚಿತ್ರೀಕರಣ ಆಗಿದ್ದು, ಸೆಕೆಂಡ್ ಶೆಡ್ಯೂಲ್ ನಲ್ಲಿ ಬೆಂಗಳೂರು ಮತ್ತು ಮಂಗಳೂರಿನಲ್ಲಿ ಚಿತ್ರೀಕರಣ ಮಾಡೋ ಪ್ಲಾನ್ ಇದೆ.

ಅಮೆರಿಕಾದಲ್ಲಿ ಲವ್ ಲಿ ಚಿತ್ರದ ಚಿತ್ರೀಕರಣದ ಪ್ಲಾನ್
ನಿಜ ಸ್ವತಃ ವಸಿಷ್ಠ ಸಿಂಹ ಹೇಳಿದಂತೆ, ಲವ್ ಲಿ ಸಿನಿಮಾದ ಚಿತ್ರೀಕರಣದ ವಿದೇಶದಲ್ಲೂ ಪ್ಲಾನಿಂಗ್ ಇದೆ. ಅದಕ್ಕೆ ಎಲ್ಲ ತಯಾರಿ ಕೂಡ ಇದೆ. ಅದರಂತೆ ಅಮೆರಿಕಾದಲ್ಲಿಯೇ ಲವ್ ಲಿ ಸಿನಿಮಾ ಶೂಟಿಂಗ್ ಪ್ಲಾನ್ ಇದೆ. ಆದರೆ, ಕೊರೊನಾ ಬಂದ್ಮೆಲೆ ಬೇರೆ ದೇಶದಲ್ಲಿ ಚಿತ್ರೀಕರಣ ಮಾಡೋಕೆ ಅಷ್ಟು ಬೇಗ ವೀಸಾ ಸಿಗೋದಿಲ್ಲ. ಆ ಸಮಸ್ಯೆ ಸದ್ಯ ಇದೆ. ಅದಕ್ಕೆ ಡಿಲೇ ಆಗುತ್ತಿದೆ ಅಂತಲೇ ವಸಿಷ್ಠ ಸಿಂಹ ತಿಳಿಸಿದ್ದಾರೆ.

Kannada Actor Vasishta Simha New Projects Details
ಕನ್ನಡದ ಸಿಂಹನ ಲವ್ ಲಿ ಎಲ್ಲಿಗೆ ಬಂತು-ಕಾಲಚಕ್ರದ ಡಿಟೈಲ್ಸ್ ಏನು ?


ವಸಿಷ್ಠ ಸಿಂಹ ಅಭಿನಯದ ತಲವಾರಪೇಟೆ ಚಿತ್ರದ ಅಪ್​ಡೇಟ್ಸ್ ಏನು ?
ವಸಿಷ್ಠ ಸಿಂಹ ನಟನೆಯ ತಲವಾರಪೇಟೆ ಸಿನಿಮಾದ ಚಿತ್ರೀಕರಣ ಆಗಿದೆ. ಈಗಾಗಲೇ ಶೇಡಕ 80 ರಷ್ಟು ಶೂಟಿಂಗ್ ಕೆಲಸವನ್ನ ಕೂಡ ವಸಿಷ್ಠ ಸಿಂಹ ಮುಗಿಸಿಕೊಂಡಿದ್ದಾರೆ. ಇನ್ನೂ 15 ದಿನದ ಕೆಲಸ ಆದರೆ, ತಲವಾರಪೇಟೆ ಬಹುತೇಕ ಕಂಪ್ಲೀಟ್ ಆಗುತ್ತದೆ ಅಂತಾರೆ ವಸಿಷ್ಠ ಸಿಂಹ.

ಕಾಲಚಕ್ರ ಸಿನಿಮಾ ಎಲ್ಲಿಗೆ ಬಂತು ಏನೆಲ್ಲ ಆಗಿದೆ ?
ವಸಿಷ್ಠ ಸಿಂಹ ಒಪ್ಪಿಕೊಂಡ ಕಾಲಚಕ್ರ ಚಿತ್ರದಲ್ಲಿ ಅದ್ಭುತವಾಗಿಯೇ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಲುಕ್ ಕೂಡ ಸಾಕಷ್ಟು ವೈರಲ್ ಆಗಿದೆ. ಈ ಚಿತ್ರದ ಕೆಲಸವು ನಡೀತಾ ಇದೆ. ಆದರೆ, ಸದ್ಯ ವಸಿಷ್ಠ ಸಿಂಹ ಇತರ ಪ್ರೋಜೆಕ್ಟ್ ಮುಗಿಸಿಕೊಳ್ಳಬೇಕಿದೆ. ಆ ಕೆಲಸ ಆದ್ಮೇಲೆನೆ ವಸಿಷ್ಠ ಸಿಂಹ ಕಾಲಚಕ್ರ ಕೆಲಸದಲ್ಲಿ ಬ್ಯುಸಿಯಾಗಲಿದ್ದಾರೆ.

ವಸಿಷ್ಠ ಸಿಂಹ ಅಭಿನಯದ ತೆಲುಗು-ತಮಿಳು ಪ್ರೋಜೆಕ್ಟ್ ಯಾವವು ?
ಕನ್ನಡದ ವಸಿಷ್ಠ ಸಿಂಹ ಕೇವಲ ಕನ್ನಡದಲ್ಲಿ ಬ್ಯಸಿಯಾಗಿಲ್ಲ. ಇಲ್ಲಿಯೇ ಸೀಮಿತಗೊಂಡಿಲ್ಲ. ಕೆಜಿಎಫ್ ಚಿತ್ರದಲ್ಲಿ ಅಭಿನಯಿಸಿದ್ಮೇಲೆ ಟಾಲಿವುಡ್ ಗೂ ಪರಿಚಯ ಆಗಿದ್ದಾರೆ. ಕಾಲಿವುಡ್​ಗೂ ಗೊತ್ತಾಗಿದ್ದಾರೆ. ಆ ಹಿನ್ನೆಲೆಯಲ್ಲೋ ಏನೋ. ವಸಿಷ್ಠ ತೆಲುಗು ಭಾಷೆಯ ಡೆವಿಲ್ ಹೆಸರಿನ ಚಿತ್ರದಲ್ಲಿ ಅಭಿನಯಿಸಿ ಬಂದಿದ್ದಾರೆ. ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭು ದೇವ ಸಿನಿಮಾದಲ್ಲೂ ವಸಿಷ್ಠ ಸಿಂಹ ನಟಿಸಿದ್ದಾರೆ. ಇನ್ನುಳಿದಂತೆ ಸದ್ಯಕ್ಕೆ ಲವ್ ಲಿ ಸಿನಿಮಾದ ಕೆಲಸದಲ್ಲಿಯೇ ಬ್ಯುಸಿಯಾಗಿದ್ದಾರೆ.
First published: