ರಿಯಲ್ ಸ್ಟಾರ್ ಉಪೇಂದ್ರ (Real Star Upendra) ಅಭಿನಯದ ಕಬ್ಜ ಸಿನಿಮಾ ಕನ್ನಡದಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ಚಿತ್ರದ ಮೊದಲ ಟೀಸರ್ ಇನ್ನಿಲ್ಲದಂತೆ ಕ್ರೇಜ್ (Craze) ಹುಟ್ಟುಹಾಕಿದೆ. ಕನ್ನಡದ ಮಟ್ಟಿಗೆ ಕಬ್ಜ ಸಿನಿಮಾ ಕೂಡ ಬಿಗ್ ಬಜೆಟ್ ಸಿನಿಮಾನೇ ಆಗಿದೆ. ಇದು ಕೂಡ ಪ್ಯಾನ್ ಇಂಡಿಯಾ ಸಿನಿಮಾನೇ ಆಗಿದೆ. ಆ ಕಾಲದ ಕಥೆಯನ್ನ ಕಟ್ಟಿಕೊಂಡೇ ಬರ್ತಿರೋ ಕಬ್ಜ ಸಿನಿಮಾವನ್ನ ಡೈರೆಕ್ಟರ್ ಆರ್. ಚಂದ್ರು ಬರೆದು (Director R Chandru) ನಿರ್ದೇಶನ ಮಾಡಿದ್ದಾರೆ. ಚಿತ್ರ ಕನ್ನಡ, ಹಿಂದಿ, ತೆಲುಗು, ತಮಿಳು, ಮಲೆಯಾಳಂ ಹೀಗೆ ಎಲ್ಲ ಭಾಷೆಯಲ್ಲೂ ಬರಲಿದೆ. ಆ ಎಲ್ಲ ತಯಾರಿ ಕೂಡ ನಡೆದಿದೆ. ಆದರೆ ಈ ಸಿನಿಮಾದ ಕನ್ನಡದ ಟೀಸರ್ ಮಾತ್ರ ರಿಲೀಸ್ ಆಗಿತ್ತು. ಈಗ ಹಿಂದಿ ಕಬ್ಜ ಚಿತ್ರದ ಟೀಸರ್ (Hindi Teaser) ರಿಲೀಸ್ ಆಗಿದೆ.
ಈ ವಿಷಯವನ್ನ ಡೈರೆಕ್ಟರ್ ಆರ್. ಚಂದ್ರು ನ್ಯೂಸ್-18 ಕನ್ನಡ ಡಿಜಿಟಲ್ಗೂ ಹಂಚಿಕೊಂಡಿದ್ದಾರೆ.
ಬಾಲಿವುಡ್ ನಲ್ಲಿ ರಿಯಲ್ ಸ್ಟಾರ್ ಉಪ್ಪಿ ಹವಾ ಶುರು
ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಕಬ್ಜ ಸಿನಿಮಾ ಪ್ಯಾನ್ ಇಂಡಿಯಾ ಲೆವಲ್ಗೆ ರಿಲೀಸ್ಗೆ ರೆಡಿ ಆಗಿದೆ. ಈಗಾಗಲೇ ಸಿನಿಮಾದ ನಿರೀಕ್ಷೆ ಹೆಚ್ಚುತ್ತಲೇ ಇದೆ. ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕಿಚ್ಚನ ಸುದೀಪ್ ಸ್ಕ್ರೀನ್ ಶೇರ್ ಮಾಡಿದ್ದಾರೆ. ಅದು ಈ ಚಿತ್ರಕ್ಕೆ ಮತ್ತೊಂದು ಪ್ಲಸ್ ಅಂದ್ರೂ ತಪ್ಪೇ ಇಲ್ಲ.
ಕನ್ನಡದ ಇಬ್ಬರು ದಿಗ್ಗಜ ಹೀರೋಗಳೂ ಒಟ್ಟಿಗೆ ನಟಿಸೋದು ಅಂದ್ರೆ, ಅಭಿಮಾನಿಗಳಿಗೆ ಡಬಲ್ ಧಮಾಕಾ ಅಂತಲೇ ಹೇಳಬಹುದು. ಅಂತಹ ಈ ಚಿತ್ರದ ಮೊದಲ ಟೀಸರ್ ಭಾರೀ ಧಮಾಕಾ ಮಾಡಿದೆ. ಉಪ್ಪಿ ಫ್ಯಾನ್ಸ್ ಅಂತೂ ದೊಡ್ಡ ಹಬ್ಬಾನೇ ಮಾಡಿದ್ದಾರೆ.
ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಕಬ್ಜ ಬಹು ಕೋಟಿ ಸಿನಿಮಾನೇ ಆಗಿದೆ.
ಬೆಂಗಳೂರಿನ ಮಿನರ್ವ ಮಿಲ್ಸ್ ನಲ್ಲಿ ಅತಿ ದೊಡ್ಡ ವೆಚ್ಚದಲ್ಲಿಯೇ ಚಂದ್ರು ಈ ಚಿತ್ರಕ್ಕೆ ಸೆಟ್ ಹಾಕಿಸಿದ್ದರು. ಅಲ್ಲಿಯೇ ಚಿತ್ರದ ಪ್ರಮುಖ ದೃಶ್ಯಗಳನ್ನೂ ತೆಗೆದಿದ್ದಾರೆ.
ರಿಯಲ್ ಉಪ್ಪಿಯ ಬಹು ಕೋಟಿ ಕಬ್ಜ ಸಿನಿಮಾ ರೆಡಿ
ರಿಯಲ್ ಸ್ಟಾರ್ ಉಪ್ಪಿಯ ಬಹು ಕೋಟಿಯ ಈ ಸಿನಿಮಾ ಸಖತ್ ಆಗಿಯೇ ಬಂದಿದೆ. ಟೀಸರ್ ನಲ್ಲಿಯೇ ಆ ಎಲ್ಲ ಸತ್ಯದ ಝಲಕ್ ಸಿಕ್ಕಿದೆ. ಹೆಸರಾಂತ ನಟಿ ಶ್ರೇಯಾ ಶರಣ್ ಸೇರಿದಂತೆ ಅದ್ಭುತ ಕಲಾವಿದರೇ ಕಬ್ಜ ಸಿನಿಮಾದಲ್ಲಿ ನಟಿಸಿದ್ದಾರೆ.
ಕನ್ನಡದ ಕಬ್ಜ ಸಿನಿಮಾ ಸಡನ್ ಆಗಿಯೇ ನೋಡಿದ್ರೆ, ಮತ್ತೊಂದು ಕೆಜಿಎಫ್ ಸಿನಿಮಾ ರೀತಿನೇ ಕಾಣುತ್ತದೆ. ಆದರೆ ಕಬ್ಜ ಸಿನಿಮಾಕ್ಕೂ ಈ ಚಿತ್ರಕ್ಕೂ ವ್ಯತ್ಯಾಸ ಇದೆ. ಇನ್ನು ಮೇಕಿಂಗ್ ವಿಷಯದಲ್ಲೂ ಕಬ್ಜ ಕ್ವಾಲಿಟಿ ಚೆನ್ನಾಗಿಯೇ ಇದೆ. ಹೀಗಿರೋ ಸಿನಿಮಾದ ಹಿಂದಿ ಟೀಸರ್ ರಿಲೀಸ್ ಆಗಿದೆ.
ಬಾಲಿವುಡ್ ಕಬ್ಜ ಸಿನಿಮಾ ಹಿಂದಿ ಟೀಸರ್ ರಿಲೀಸ್
ಬಾಲಿವುಡ್ನಲ್ಲೂ ಕಬ್ಜ ಸಿನಿಮಾ ಹವಾ ಕ್ರಿಯೇಟ್ ಆಗಿದೆ. ಕನ್ನಡದ ಕಬ್ಜ ಟೀಸರ್ ಹೊರ ಬಂದ್ಮೇಲೆ ಅಲ್ಲಿ ಕ್ರೇಜ್ ಹುಟ್ಟಿಕೊಂಡಿದೆ. ಅದಕ್ಕೆ ಸೂಕ್ತ ಅನ್ನೋ ಹಾಗೆ ಈಗ ಕಬ್ಜ ಚಿತ್ರದ ಟೀಸರ್ ಕೂಡ ಹೊರ ಬಂದಿದೆ.
The first look says it all!#Kabzaa teaser out now - https://t.co/dQd0A1NTzt
Witness the next big thing in the Indian cinemas soon!@nimmaupendra @KicchaSudeep @shriya1109 @anandpandit63 @rchandru_movies @RaviBasrur @kp_sreekanth @KabzaaM
— Anand Pandit Motion Pictures (@apmpictures) December 1, 2022
"ನಮ್ಮ ಚಿತ್ರಕ್ಕೆ ಬಾಲಿವುಡ್ ನಲ್ಲಿ ಭಾರೀ ಬೇಡಿಕೆ ಇದೆ. ಈಗಾಗಲೇ ಆ ನಿಟ್ಟಿನಲ್ಲಿಯೇ ಮಾತುಕತೆ ಕೂಡ ನಡೆದಿತ್ತು.ಈ ಬಗೆಗಿನ ಮಾತುಕತೆ ಈಗ ಮುಗಿದಿದೆ. ಸಿನಿಮಾದ ಹಿಂದಿ ಟೀಸರ್ ಕೂಡ ಈಗ ರಿಲೀಸ್ ಆಗಿದೆ" ಅಂತಲೇ ಡೈರೆಕ್ಟರ್ ಆರ್.ಚಂದ್ರು ನ್ಯೂಸ್-18 ಕನ್ನಡ ಡಿಜಿಟಲ್ಗೆ ತಿಳಿಸಿದ್ದಾರೆ.
ಬಾಲಿವುಡ್ ಮಂದಿ ದಿಲ್ ಕದಿಯಲು ರೆಡಿ ಆದ ಕಬ್ಜ
ಈ ಮೂಲಕ ಕನ್ನಡದ ಕಬ್ಜ ಸಿನಿಮಾ ಹಿಂದಿಯಲ್ಲೂ ಹವಾ ಕ್ರಿಯೇಟ್ ಮಾಡೋಕೆ ಶುರು ಮಾಡಿದೆ. ಕೆಜಿಎಫ್ ಚಿತ್ರಕ್ಕೆ ಸಂಗೀತ ಕೊಟ್ಟ ರವಿ ಬಸ್ರೂರು ಈ ಚಿತ್ರಕ್ಕೂ ಸಂಗೀತದ ಮಾಡಿದ್ದಾರೆ. ಅದರ ಖದರ್ ಈಗಾಗಲೇ ಟೀಸರ್ ಮೂಲಕ ಎಲ್ಲರಿಗೂ ತಿಳಿದಿದೆ.
ಇದನ್ನೂ ಓದಿ: Amrutha Prem: ಮೊದಲ ಸಿನಿಮಾಗೆ ನೆನಪಿರಲಿ ಪ್ರೇಮ್ ಮಗಳ ಸಂಭಾವನೆ ಇಷ್ಟಂತೆ! ಡಾಲಿ ಮನಸ್ಸು ದೊಡ್ಡದು ಎಂದ ಫ್ಯಾನ್ಸ್!
ಹಿಂದಿ ಭಾಷೆಯ ಸಿನಿ ಪ್ರೇಮಿಗಳಿಗೂ ಹಿಂದಿ ಟೀಸರ್ ಮೂಲಕ ಈ ವಿಷಯ ಮುಟ್ಟಲಿದೆ. ಆನಂದ್ ಪಂಡಿತ್ ಮೋಷನ್ ಪಿಕ್ಚರ್ಸ್ ಹಾಗೂ ಆರ್. ಚಂದ್ರು ಈಗ ಕನ್ನಡದ ಕಬ್ಜ ಚಿತ್ರವನ್ನ ಹಿಂದಿಯಲ್ಲಿ ರಿಲೀಸ್ ಮಾಡುತ್ತಿದ್ದಾರೆ.
ಇನ್ನುಳಿದಂತೆ ಕಬ್ಜ ಬಹು ಭಾಷೆಯಲ್ಲಿಯೇ ರಿಲೀಸ್ ಆಗಲಿದ್ದು, ರಿಲೀಸ್ ಡೇಟ್ ಇನ್ನಷ್ಟೇ ಆಗಬೇಕಿದೆ. ಉಳಿದಂತೆ ಸದ್ಯಕ್ಕೆ ಕಬ್ಜ ಚಿತ್ರದ ಅಪ್ಡೇಟ್ಸ್ ಇಷ್ಟಿದೆ. ಬಾಕಿ ಮಾಹಿತಿ ಕೊಡ್ತಾಯಿರ್ತಿವಿ ವೇಟ್ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ