‘ಗಂಡ ಹೆಂಡತಿ’ ಖ್ಯಾತಿಯ ತಿಲಕ್ ಫೇಸ್​ಬುಕ್ ಅಕೌಂಟ್​ನಲ್ಲಿ ಅಶ್ಲೀಲ ವಿಡಿಯೋಗಳು!; ಕಾರಣವೇನು?

ಸೆಪ್ಟೆಂಬರ್​ 5ರಂದು ಅವರ ಖಾತೆಯಲ್ಲಿ ಮಹಿಳೆಯೊಬ್ಬಳ ಫೋಟೋ ಅಪ್​ಲೋಡ್​ ಆಗಿತ್ತು. ಇದನ್ನು ನೋಡಿದ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದರು. ಇದಾದ ಬೆನ್ನಲ್ಲೇ ಅನೇಕ ಮಾಡೆಲ್​ಗಳ ಸಾಲು ಸಾಲು ಅಶ್ಲೀಲ ಫೋಟೋಗಳು ಅಪ್​ಲೋಡ್​ ಆಗಿವೆ

Rajesh Duggumane | news18-kannada
Updated:September 10, 2019, 5:39 PM IST
‘ಗಂಡ ಹೆಂಡತಿ’ ಖ್ಯಾತಿಯ ತಿಲಕ್ ಫೇಸ್​ಬುಕ್ ಅಕೌಂಟ್​ನಲ್ಲಿ ಅಶ್ಲೀಲ ವಿಡಿಯೋಗಳು!; ಕಾರಣವೇನು?
ತಿಲಕ್​ ಶೇಖರ್​
  • Share this:
ಸ್ಯಾಂಡಲ್​ವುಡ್​ ನಟ ತಿಲಕ್​ ಶೇಖರ್​ ಫೇಸ್​ಬುಕ್​ ಖಾತೆಯಲ್ಲಿ ಅಶ್ಲೀಲ ವಿಡಿಯೋಗಳು, ಫೋಟೋಗಳು ತುಂಬಿ ಹೋಗಿವೆ! ಕಳೆದ ಒಂದು ವಾರದಿಂದ ತಿಲಕ್​ ಈ ರೀತಿಯ ಫೋಟೋಗಳನ್ನು ಹಾಕುತ್ತಿರುವುದೇಕೆ ಎಂದು ಅವರ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದರು. ಆದರೆ, ಅಸಲಿ ವಿಚಾರ ಏನೆಂದರೆ ಅವರ ಫೇಸ್​ಬುಕ್​ ಖಾತೆ ಹ್ಯಾಕ್​ ಆಗಿದೆ. ಹೀಗಾಗಿ ಅಶ್ಲೀಲ ಫೋಟೋಗಳು, ವಿಡಿಯೋಗಳು ಅವರ ಖಾತೆಯಲ್ಲಿ ರಾರಾಜಿಸುತ್ತಿವೆ.

ಸೆಪ್ಟೆಂಬರ್​ 5ರಂದು ತಿಲಕ್​ ಖಾತೆಯಲ್ಲಿ ಮಹಿಳೆಯೊಬ್ಬಳ ಫೋಟೋ ಅಪ್​ಲೋಡ್​ ಆಗಿತ್ತು. ಇದನ್ನು ನೋಡಿದ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದರು. ಇದಾದ ಬೆನ್ನಲ್ಲೇ ಅನೇಕ ಮಾಡೆಲ್​ಗಳ ಸಾಲು ಸಾಲು ಅಶ್ಲೀಲ ಫೋಟೋಗಳು ಅಪ್​ಲೋಡ್​ ಆಗಿವೆ. ಅಷ್ಟೇ ಅಲ್ಲ, ಅಶ್ಲೀಲ ವಿಡಿಯೋಗಳ ಲಿಂಕ್​ ಕೂಡ ಹಾಕಲಾಗಿದೆ. ಈ ಬಗ್ಗೆ ತಿಲಿಕ್​ ದೂರು ನೀಡಿದ್ದಾರಂತೆ.

ಈ ಬಗ್ಗೆ ಸ್ಪಷ್ಟನೆ ನೀಡುವ ತಿಲಕ್​, “ವಾರದ ಹಿಂದೇಯೇ ಖಾತೆ ಹ್ಯಾಕ್​ ಆಗಿದೆ. ಈ ಬಗ್ಗೆ ನಾನು ಸೈಬರ್​ ಅಧಿಕಾರಿಗಳಿಗೆ ದೂರು ನೀಡಿದ್ದೇನೆ. ಖಾತೆ ಸರಿಯಾದ ನಂತರದಲ್ಲಿ ಆ ಬಗ್ಗೆ ಫೇಸ್​ಬುಕ್​ನಲ್ಲಿ ಸ್ಪಷ್ಟನೆ ನೀಡುತ್ತೇನೆ,” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸ್ಯಾಂಡಲ್​ವುಡ್ ನಿರ್ದೇಶಕರಿಂದ ದರ್ಶನ್​ಗೆ ಸಿಕ್ತು ಹೊಸ ಬಿರುದು; ಸಿಟ್ಟಾಗ್ತಾರಾ ಪ್ರಭಾಸ್ ಅಭಿಮಾನಿಗಳು?

ಸಾಮಾಜಿಕ ಜಾಲತಾಣದ ಖಾತೆಗಳು ಹ್ಯಾಕ್​ ಆಗುವುದು ಸಿನಿಮಾ ಇಂಡಸ್ಟ್ರಿ ಪಾಲಿಗೆ ಹೊಸದಲ್ಲ. ಅಮಿತಾಭ್​ ಬಚ್ಚನ್, ಶಾಹಿದ್ ಕಪೂರ್​​ ಸೇರಿ ಸಾಕಷ್ಟು ಖಾತೆಗಳು ಹ್ಯಾಕ್​ ಆಗಿದ್ದವು. ಈಗ ಈ ಕನ್ನಡದ ನಟ ಸಾಲಿಗೆ ತಿಲಕ್​ ಕೂಡ ಸೇರ್ಪಡೆಯಾಗಿದ್ದಾರೆ. ಸಿನಿಮಾ ವಿಚಾರಕ್ಕೆ ಬರುವುದಾದರೆ ‘ಇರುವುದೆಲ್ಲವ ಬಿಟ್ಟು’ ಚಿತ್ರದಲ್ಲಿ ತಿಲಕ್​ ಮೇಘನಾ ರಾಜ್​ಗೆ ಜೊತೆಯಾಗಿ ನಟಿಸಿದ್ದರು. ಈ ಸಿನಿಮಾ ಸಾಧಾರಣ ಹಿಟ್ ಕಂಡಿತ್ತು.

First published:September 10, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading