ಅಭಿನಯ ಚಕ್ರವರ್ತಿ ಕಿಚ್ಚ (Sudeepa) ಸುದೀಪ್ ಹೊಸಬರಿಗೆ ತಮ್ಮದೇ ರೀತಿಯಲ್ಲಿ ಸಾಥ್ ಕೊಡ್ತಾರೆ. ಚಿತ್ರದ ಟೀಸರ್ (Teaser) ರಿಲೀಸ್ ಮಾಡಿಯೋ, ಇಲ್ವೇ ಪೋಸ್ಟರ್ ರಿಲೀಸ್ ಮಾಡಿಯೇ ಗುಡ್ ಲಕ್ ಹೇಳಿ ಕಳಿಸುತ್ತಾರೆ. ತೆರೆ ಮರೆಯಲ್ಲಿ ತಮ್ಮದೇ ರೀತಿ ಸಪೋರ್ಟ್ (Support) ಕೂಡ ಮಾಡ್ತಾರೆ. ಆದರೆ ಈ ಸಲ ಕಿಚ್ಚ ಸಪೋರ್ಟ್ ಮಾಡಿರೋದ್ರಲ್ಲಿ ಡಬಲ್ ಸ್ಪೆಷಾಲಿಟಿ ಇದೆ. ಒಂದು ಚಿತ್ರದ ನಿರ್ಮಾಪಕರು. ಹೌದು, ಈ ಚಿತ್ರದ ನಿರ್ಮಾಪಕರು ಬೇರೆ ಯಾರೋ ಅಲ್ಲ. ಅದು ಯೋಗರಾಜ್
(Yogaraj Bhat) ಭಟ್ ಅವ್ರು. ಹೌದು, ಯೋಗರಾಜ್ ಭಟ್ ಅವರ ಹೊಸಬರ ಪದವಿ ಪೂರ್ವ ಚಿತ್ರದ ಹಾಡನ್ನ ಕಿಚ್ಚ ಸುದೀಪ್ ರಿಲೀಸ್ ಮಾಡಿಕೊಟ್ಟಿದ್ದಾರೆ. ಸಿನಿಮಾದ ಹಾಡನ್ನ ಕೇಳಿ ಭೇಷ್ ಅಂತಲೂ ಹೇಳಿದ್ದಾರೆ. ಇದರ ಸುತ್ತ ಒಂದು ಸ್ಟೋರಿ ಇಲ್ಲಿದೆ.
"ಯಾಕೆ ಸಿಕ್ಕೆ" ಹಾಡು ರಿಲೀಸ್ ಮಾಡಿದ ಕಿಚ್ಚ ಸುದೀಪ್
ಪದವಿ ಪೂರ್ವ ಕನ್ನಡದ ಮತ್ತೊಂದು ಒಳ್ಳೆ ಸಿನಿಮಾ. ಈ ಚಿತ್ರದ ಕಥೆ ಕೂಡ ವಿಶೇಷವಾಗಿಯೇ ಇದೆ. ಕಾಲೇಜು ದಿನಗಳಲ್ಲಿ ಲವ್ ಹುಟ್ಟಿ ಏನೆಲ್ಲ ಆಗುತ್ತದೆ ಅನ್ನೋದೇ ಈ ಸಿನಿಮಾದ ಎಳೆ. ಹೀಗಂತ ಈಗಾಗಲೇ ಸಿನಿಮಾ ಟೀಸರ್ ಮತ್ತು ಹಾಡು ಹೇಳ್ತಿವೆ.
ಕಿಚ್ಚ ಸುದೀಪ್ ಇದೇ ಚಿತ್ರದ "ಯಾಕೆ ಸಿಕ್ಕೆ" ಹಾಡು ರಿಲೀಸ್ ಮಾಡಿದ್ದಾರೆ. ಅದನ್ನ ನೋಡಿ ಇಡೀ ಟೀಮ್ಗೆ ಶುಭ ಹಾರೈಸಿದ್ದಾರೆ. ವಿಶೇಷವಾಗಿ ಯೋಗರಾಜ್ ಭಟ್ಟರ ಬಗ್ಗೆ ಅವರ ಸಾಹಿತ್ಯದ ಬಗ್ಗೆ ತಮ್ಮದೇ ಶೈಲಿಯಲ್ಲಿ ಗುಡ್ ಲಕ್ ಹೇಳಿದ್ದಾರೆ.
ಭಟ್ರು ಸುಮ್ನಿದ್ದರು ಅವರ ಬೆರಳು ಸುಮ್ನರೋದಿಲ್ಲ-ಕಿಚ್ಚ!
ಹೌದು, ಪದವಿ ಪೂರ್ವ ಸಿನಿಮಾದ ಯಾಕೆ ಸಿಕ್ಕೆ ಹಾಡು ಕೇಳಿ ಕಿಚ್ಚ ಸುದೀಪ್ ಮೆಚ್ಚಿಕೊಂಡಿದ್ದಾರೆ. ಯೋಗರಾಜ್ ಭಟ್ ಒಳ್ಳೆ ಹಾಡುಗಳನ್ನ ಕೊಟ್ಟಿದ್ದಾರೆ. ಭಟ್ರು ಸುಮ್ನೆ ಇದ್ರೂ ಅವರ ಬೆರಳುಗಳು ಸುಮ್ನೆ ಇರೋದಿಲ್ಲ. ಹಾಡು ಬರೀತಾನೇ ಇರ್ತಾರೆ.
ಇದೇ ಭಟ್ಟರು ಸಿನಿಮಾ ನಿರ್ಮಾಣಕ್ಕೂ ಕೈ ಹಾಕಿದ್ದಾರೆ. ಪದವಿ ಪೂರ್ವ ಚಿತ್ರಕ್ಕೆ ಹಾಡುಗಳನ್ನ ಬರೆಯೋದಲ್ಲದೇ ದುಡ್ಡು ಕೂಡ ಹಾಕಿದ್ದಾರೆ. ಇವರ ಚಿತ್ರಕ್ಕೆ ಒಳ್ಳೆಯದಾಗಲಿ ಅಂತಲೇ ಸುದೀಪ್ ಹರೆಸಿದ್ದಾರೆ.
ಪೃಥ್ವಿ ಮತ್ತು ಅಂಜಲಿಗೆ ಗುಡ್ ಲಕ್ ಹೇಳಿದ ಕಿಚ್ಚ
ಕಿಚ್ಚ ಸುದೀಪ್ ನವ ನಟರಿಗೆ ಗುಡ್ ಲಕ್ ಹೇಳಿದ್ದಾರೆ. ಪದವಿ ಪೂರ್ವ ಚಿತ್ರದ ಮೂಲಕ ಕನ್ನಡ ಇಂಡಸ್ಟ್ರೀಗೆ ಕಾಲಿಡ್ತಿರೊ ಪೃಥ್ವಿ ಶಾಮನೂರು ಮತ್ತು ಅಂಜಲಿ ಅನೀಶ್ ಅವರಿಗೂ ಕಿಚ್ಚ ಸುದೀಪ್ ಬೆಸ್ಟ್ ವಿಶಸ್ ಹೇಳಿದ್ದಾರೆ.
ಸಿನಿಮಾದ ಹಾಡನ್ನ ಡಿಜಿಟಲ್ ಮೀಡಿಯಾದಲ್ಲಿ ರಿಲೀಸ್ ಮಾಡಿರೋದು ಖುಷಿ ತಂದಿದೆ. ಎಲ್ಲರೂ ಈ ಗೀತೆಯನ್ನ ನೋಡಿ, ಹಾಗೂ ಚಿತ್ರದ ಈ ಗೀತೆಯನ್ನ ಎಲ್ಲರಿಗೂ ಶೇರ್ ಮಾಡಿ ಅಂತಲೂ ತಂಡದ ಪರವಾಗಿ ಕಿಚ್ಚ ಸುದೀಪ್ ಜನರಲ್ಲಿ ಕೇಳಿಕೊಂಡಿದ್ದಾರೆ.
ಕಿಚ್ಚನ ಮಾತಿಗೆ ಭಟ್ರು ಹೊಡೆದೆ ಬಿಟ್ಟರು ಸೆಲ್ಯೂಟ್!
ಸುದೀಪ್ ಅವರ ಮನೆಯಲ್ಲಿಯೇ ಪದವಿ ಪೂರ್ವ ಸಿನಿಮಾದ ಹಾಡು ರಿಲೀಸ್ ಆಗಿದೆ. ಇದೇ ಸಮಯದಲ್ಲಿ ಚಿತ್ರದ ನಿರ್ದೇಶಕ ಹರಿಪ್ರಸಾದ್ ಜಯಣ್ಣ, ನಾಯಕ ನಟ ಪೃಥ್ವಿ, ನಾಯಕಿ ಅಂಜಲಿ ಹಾಗೂ ಯೋಗರಾಜ್ ಭಟ್ ಕೂಡ ಇದ್ದರು.
ಯೋಗರಾಜ್ ಭಟ್ ಅವರ ನಿರ್ಮಾಣ ಮತ್ತು ಸಾಹಿತ್ಯ ರಚನೆಯ ಆಸಕ್ತಿಯನ್ನ ಕೊಂಡಾಡಿದ್ದಕ್ಕೆ ಭಟ್ರು ಆ ಕೂಡಲೇ ಕ್ಯಾಮೆರಾ ಮುಂದೆ ಸೆಲ್ಯೂಟ್ ಹೊಡೆದೆ ಬಿಟ್ಟರು. ಹಾಗೆ ಈ ಸಮಯದಲ್ಲಿ ಕಿಚ್ಚ ಸುದೀಪ್ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಕೆಲಸವನ್ನ ಕೂಡ ಮೆಚ್ಚಿಕೊಂಡರು.
ಇದನ್ನೂ ಓದಿ: Singara Siriye Secret: ಕಾಂತಾರ ಸಿನಿಮಾದ ಸಿಂಗಾರ ಸಿರಿಯೇ ಹಾಡು ಬರೆದ ಪ್ರಮೋದ್ ಆ ವೀಡಿಯೋ ಹಂಚಿಕೊಂಡಿದ್ಯಾಕೆ?
ಕೋರಿಯೋಗ್ರಾಫರ್ ಧನಂಜಯ್ ಕೆಲಸವನ್ನೂ ಕಿಚ್ಚ ಸುದೀಪ್ ಹೊಗಳಿದರು. ಸಂತೋಷ್ ರೈ ಪಾತಾಜೆ ಅವರ ಕೆಲಸವನ್ನೂ ಸುದೀಪ್ ಮೆಚ್ಚಿಕೊಂಡರು.
ಡಿಸೆಂಬರ್-30ಕ್ಕೆ ಪದವಿ ಪೂರ್ವ ಸಿನಿಮಾ ರಿಲೀಸ್
ಯಾಕೆ ಸಿಕ್ಕೆ ಹಾಡನ್ನ ನಿಹಾಲ್ ತಾವ್ರೋ ಹಾಡಿದ್ದಾರೆ. ಸಂಗೀತ ಕಾರ್ಯಕ್ರಮದೊಂದಿಗೆ ಕನ್ನಡಿಗರಿಗೆ ಪರಿಚಯವಾದ ನಿಹಾಲ್ ತಾವ್ರೋ ಅವರ ಧ್ವನಿಯನ್ನ ಮೆಚ್ಚಿಕೊಂಡ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಭಟ್ರ ಈ ಪದವಿ ಪೂರ್ವ ಚಿತ್ರಕ್ಕೆ ಹಾಡಿಸಿದ್ದಾರೆ.
ಡಿಸೆಂಬರ್-30 ರಂದು ರಾಜ್ಯದ ಎಲ್ಲೆಡೆ ಸಿನಿಮಾ ರಿಲೀಸ್ ಆಗುತ್ತಿದೆ. ಈ ಸಿನಿಮಾದ ಪ್ರಚಾರವೂ ಜೋರಾಗಿಯೇ ನಡೆಯುತ್ತಿದೆ. ಚಿತ್ರದಲ್ಲಿ ಕಾಲೇಜ್ ಕಂಟೆಂಟ್ ಇರೋದ್ರಿಂದ ಒಂದು ಹೊಸ ಉತ್ಸಾಹವೂ ಮೂಡಿದಂತೆ ಕಾಣುತ್ತಿದೆ. ಸಿನಿಮಾ ತಂಡ ಒಂದೊಂದಾಗಿಯೇ ಸಿನಿಮಾ ಕಂಟೆಂಟ್ ಅನ್ನ ವಿಶೇಷವಾಗಿಯೇ ಬಿಟ್ಟುಕೊಡ್ತಾ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ