ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Sudeepa New Movie) ಅಭಿನಯದ ಹೊಸ ಚಿತ್ರದ ಅನೌನ್ಸ್ಮೆಂಟ್ ಬಗ್ಗೆ ಭಾರೀ ಕುತೂಹಲ ಇದೆ. ಕಿಚ್ಚನ ಮುಂದಿನ ಸಿನಿಮಾ (Sudeepa Movie) ಯಾವುದು ಅನ್ನೋದು ಸಾಮಾನ್ಯವಾಗಿ ಎಲ್ಲರಲ್ಲೂ ಇರೋ ಒಂದು ಕುತೂಹಲದ ಪ್ರಶ್ನೆ ಆಗಿದೆ. ಅದರ ಬೆನ್ನಲ್ಲಿಯೇ ಕಿಚ್ಚನ ಪ್ರತಿ (Sandalwood New Movie) ದಿನದ ಕ್ರಿಕೆಟ್ ಆಕ್ಟೀವಿಟಿ ಕುರಿತು ಅಷ್ಟೇ ಕ್ಯೂರಿಯೋಸಿಟಿಯನ್ನ ಜನ ಉಳಿಸಿಕೊಂಡಿದ್ದಾರೆ. ಫೆಬ್ರವರಿ-24 ರಂದು ಕೆಸಿಸಿ ಕಪ್ ಪಂದ್ಯವೂ ಇದೆ. ಇದೇ ಪಂದ್ಯದಲ್ಲಿಯೇ ಕಿಚ್ಚ ತಲೀನರಾಗಿದ್ದಾರೆ. ಆದರೆ ಇವರ (Sudeepa Movie News Viral) ಸಿನಿಮಾ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಎಲ್ಲೂ ಹೊರ ಬಿದ್ದಿಲ್ಲ. ಅಷ್ಟರಲ್ಲಿಯೇ ಕಾಲಿವುಡ್ನಿಂದ ಕಿಚ್ಚನ ಒಂದು ಸಿನಿಮಾ ಸುದ್ದಿ ಹೊರಬಿದ್ದಿದೆ. ಆ ಮಾಹಿತಿಯ ಒಂದು ಸುದ್ದಿ ಇಲ್ಲಿದೆ.
ಸುದೀಪ್ ಹೊಸ ಸಿನಿಮಾ ಯಾವಾಗ ಅನೌನ್ಸ್!
ಕಿಚ್ಚ ಸುದೀಪ್ ಅಭಿನಯದ ಮುಂದಿನ ಸಿನಿಮಾ ಯಾವುದು? ಈ ಒಂದು ಪ್ರಶ್ನೆಗೆ ಉತ್ತರ ಇನ್ನು ಸಿಕ್ಕಿಲ್ಲ. ಹೊಂಬಾಳೆ ಪ್ರೋಡಕ್ಷನ್ ಹೌಸ್ ಕಿಚ್ಚನ ಮುಂದಿನ ಸಿನಿಮಾ ನಿರ್ಮಿಸುತ್ತೆ ಅನ್ನುವ ಸುದ್ದಿ ದಟ್ಟವಾಗಿದೆ.
ಇದರ ಮಧ್ಯೆ ಕಿಚ್ಚ ಸುದೀಪ್ ವರ್ಷಕ್ಕೆ ಮೂರು ಸಿನಿಮಾ ಮಾಡುವ ಯೋಚನೆ ಕೂಡ ಮಾಡಿದ್ದಾರೆ. ಈ ಹಿನ್ನೆಲೆಯಲ್ಲೋ ಏನೋ, ಕಿಚ್ಚನಿಗಾಗಿ ಕನ್ನಡದ ಇಬ್ಬರು ಡೈರೆಕ್ಟರ್ಸ್ ಕಥೆ ಬರೆದುಕೊಂಡಿದ್ದಾರೆ.
ಸುದೀಪ್ ಮುಂದಿನ ಚಿತ್ರ ಯಾರ್ ಡೈರೆಕ್ಟ್ ಮಾಡ್ತಾರೆ?
ಅನೂಪ್ ಭಂಡಾರಿ ಈಗಾಗಲೇ ಕಿಚ್ಚನ ಸಿನಿಮಾದ ಕಥೆ ರೆಡಿ ಮಾಡಿಕೊಂಡಿದ್ದಾರೆ. ಕೊನೆ ಹಂತದ ಬದಲಾವಣೆಗಳೂ ನಡೆಯುತ್ತವೆ ಅನ್ನುವ ಮಾಹಿತಿ ಕೂಡ ಅವರಿಂದ ದೊರೆತಿದೆ.
ಕಿಚ್ಚನ ಚಿತ್ರ ಜೀವನದಲ್ಲಿ ಈ ಸಿನಿಮಾ ದೊಡ್ಡಮಟ್ಟದಲ್ಲಿ ಆಗುತ್ತಿದೆ. ಈ ಕಾರಣಕ್ಕೇ ಚಿತ್ರೀಕರಣಕ್ಕೆ ಹೋಗುವ ಮುನ್ನ ಬೇಕಾಗೋ ತಯಾರಿಯನ್ನ ಅನೂಪ್ ಈಗ ಮಾಡಿಕೊಳ್ಳುತ್ತಿದ್ದಾರೆ.
ರನ್ನದಂತಹ ಹಿಟ್ ಚಿತ್ರಕೊಟ್ಟ ನಂದ್ಕಿಶೋರ್ ಕೂಡ ಕಿಚ್ಚನಿಗಾಗಿ ಕಥೆ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೆ ಒನ್ ಲೈನ್ ಕೂಡ ಹೇಳಿ ಮೆಚ್ಚುಗೆ ಕೂಡ ಪಡೆದುಕೊಂಡಿದ್ದಾರೆ.
ಡೈರೆಕ್ಟರ್ ವೆಂಕಟ ಪ್ರಭು-ಸುದೀಪ್ ಚಿತ್ರ ಏನ್ ಆಯ್ತು?
ಇದರ ಮಧ್ಯೆ ತಮಿಳು ಚಿತ್ರರಂಗದಿಂದ ಈಗೊಂದು ಸುದ್ದಿ ಕೇಳಿ ಬರುತ್ತಿದೆ. ಇಲ್ಲಿಯ ಹೆಸರಾಂತ ನಿರ್ದೇಶಕ ವೆಂಕಟ ಪ್ರಭು ಅವರು ಕಿಚ್ಚನಿಗೆ ಸಿನಿಮಾ ಮಾಡ್ತಿದ್ದಾರೆ ಅನ್ನೋದೇ ಈ ಸುದ್ದಿಯ ಒಟ್ಟು ತಿರುಳಾಗಿದೆ.
ವೆಂಕಟ ಪ್ರಭು ನಿರ್ದೇಶನದಲ್ಲಿ ಸುದೀಪ್ ಒಂದು ಸಿನಿಮಾ ಮಾಡ್ತಾರೆ ಅನ್ನುವ ಸುದ್ದಿ ಬಹಳ ದಿನಗಳಿಂದಲೂ ಕೇಳಿ ಬರುತ್ತಿದೆ. ಆದರೆ ಇಲ್ಲಿವರೆಗೂ ಯಾರೂ ಅಧಿಕೃತವಾಗಿ ಎಲ್ಲೂ ಹೇಳಿಕೊಂಡಿಲ್ಲ.
ಕಿಚ್ಚನ ಚಿತ್ರದ ಬಗ್ಗೆ ಕಾಲಿವುಡ್ನಿಂದ ಬಂತು ನ್ಯೂಸ್
ಆದರೆ ಈಗ ಒಂದು ಸುದ್ದಿ ಕಾಲಿವುಡ್ ಕಡೆಯಿಂದ ಸ್ಯಾಂಡಲ್ವುಡ್ಗೂ ಕೇಳಿ ಬರುತ್ತಿದೆ. ಸದ್ಯ ವೈರಲ್ ಆಗಿರೋ ಈ ಸುದ್ದಿಯ ಪ್ರಕಾರ, ಸುದೀಪ್ ಅಭಿನಯದ ಈ ಚಿತ್ರ ಬಹು ಭಾಷೆಯಲ್ಲಿ ರಿಲೀಸ್ ಆಗುತ್ತದೆ.
ತಮಿಳು, ತೆಲುಗು, ಕನ್ನಡ, ಹಿಂದಿ ಹೀಗೆ ನಾಲ್ಕು ಭಾಷೆಯಲ್ಲಿ ಚಿತ್ರ ರಿಲೀಸ್ ಆಗುತ್ತದೆ. ಚಿತ್ರದ ನಿರ್ಮಾಪಕರು ಕೂಡ ಇಷ್ಟೂ ಭಾಷೆಯಲ್ಲಿಯೇ ಚಿತ್ರವನ್ನ ರಿಲೀಸ್ ಮಾಡೋಕೆ ಪ್ಲಾನ್ ಮಾಡಿದ್ದಾರೆ ಅನ್ನುವ ಸುದ್ದಿ ಕೂಡ ಹರಿದಾಡುತ್ತಿದೆ.
ಕಿಚ್ಚ ಸುದೀಪ್ ಹೊಸ ಚಿತ್ರದ ಹೊಸ ಮ್ಯಾಟರ್
ಸುದೀಪ್ ಅಭಿನಯದ ಈ ಚಿತ್ರದ ಸ್ಕ್ರಿಪ್ಟ್ ವರ್ಕ್ ಭರದಿಂದಲೇ ಸಾಗಿದೆ. ಇನ್ನೇನು ಎಲ್ಲ ಕೆಲಸ ಮುಗಿದ ಮೇಲೆ ಶೂಟಿಂಗ್ ಕೂಡ ಶುರು ಆಗುತ್ತದೆ ಅನ್ನೋದು ಸದ್ಯದ ಇಂಟ್ರಸ್ಟಿಂಗ್ ಮ್ಯಾಟರ್ ಆಗಿದೆ.
ಇದರ ಹೊರತಾಗಿ ಈ ಚಿತ್ರ ಕಮರ್ಷಿಯಲ್ ಚಿತ್ರ ಆಗಿದೆ. ಔಟ್ ಆ್ಯಂಡ್ ಔಟ್ ಕಮರ್ಷಿಯಲ್ ಎಂಟರಟೈನರ್ ಚಿತ್ರವೇ ಇದಾಗಲಿದೆ ಅನ್ನೋ ಮಾಹಿತಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೇ ಇದೆ.
ಇದನ್ನೂ ಓದಿ:Ashika Ranganath: ಮಾಲ್ಡೀವ್ಸ್ ಬೀಚ್ನಲ್ಲಿ ಚುಟು ಚುಟು ಬ್ಯೂಟಿ; ನಟಿ ಆಶಿಕಾ ಮಾದಕ ನೋಟಕ್ಕೆ ಪಡ್ಡೆ ಹುಡುಗರು ಫಿದಾ
ಆದರೆ ಈ ಬಗ್ಗೆ ಕಿಚ್ಚ ಸುದೀಪ್ ಎಲ್ಲೂ ಏನೂ ಹೇಳಿಕೊಂಡಿಲ್ಲ. ಹಾಗೇನಾದರೂ ಇದ್ರೆ, ಸ್ವತಃ ಸುದೀಪ್ ಈ ವಿಷಯವನ್ನ ಖಚಿತಪಡಿಸುತ್ತಾರೆ. ಇಲ್ಲವೇ ಟ್ವಿಟರ್ನಲ್ಲಿ ಈ ವಿಚಾರವನ್ನ ಪ್ರಸ್ತಾಪಿಸುತ್ತಾರೆ. ಹಾಗಾಗಿಯೇ ಈಗ ಎಲ್ಲರ ಕಣ್ಣು ಕಿಚ್ಚನ ಟ್ವಿಟರ್ ಅಕೌಂಟ್ ಮೇಲೆ ನೆಟ್ಟಿದೆ ಅಂತಲೇ ಹೇಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ