ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeepa) ಡೈರೆಕ್ಟರ್ ಕ್ಯಾಪ್ ತೊಟ್ಟು 17 ವರ್ಷಗಳೇ ಉರುಳಿವೆ. ಇವರ ನಿರ್ದೇಶನದ ಆ ಮೊದಲ ಚಿತ್ರಕ್ಕೆ ಈಗ 17 ರ ಹರೆಯ. ಆ ನೆನಪು ನಿಜಕ್ಕೂ ಕಿಚ್ಚನ ಮನಸಲ್ಲಿ ಈಗಲೂ ವಿಶೇಷ ಭಾವನೆ (My Autograph Movie) ಮೂಡಿಸಿದೆ. ಮೊದಲ ಪ್ರೀತಿ, ಮೊದಲ ಕಿಸ್, ಮೊದಲ ಸಿನಿಮಾ, ಹೀಗೆ ಹಲವು ಮೊದಲುಗಳ ಬಗ್ಗೆ ವಿಶೇಷ ಪ್ರೀತಿ ಇದ್ದೇ ಇರುತ್ತದೆ. ಅದರಂತೆ ಕಿಚ್ಚ ಸುದೀಪ್ ನಿರ್ದೇಶನದ ಮೊದಲ ಸಿನಿಮಾ ಮೈ ಆಟೋಗ್ರಾಫ್ (My Autograph Completed 17 Years) ಈ ಚಿತ್ರ ಬಂದು 17 ವರ್ಷಗಳು ಆಗಿದೆ. 2006 ರ ಫೆಬ್ರವರಿ-17 ರಂದು ಈ ಚಿತ್ರ ರಿಲೀಸ್ ಆಗಿತ್ತು. ಕನ್ನಡಿಗರ ಹೃದಯ ಗೆಲ್ಲುವುದರಲ್ಲೂ ಈ ಚಿತ್ರ (Hit Movie) ಯಶಸ್ವಿ ಆಗಿತ್ತು.
ಸುದೀಪ್ ಮೈ ಆಟೋಗ್ರಾಫ್ ಚಿತ್ರಕ್ಕೆ 17 ವರ್ಷ ಪೂರ್ಣ
ತಮ್ಮ ಮೊದಲ ಸಿನಿಮಾದ ಈ ಒಂದು ವಿಷಯವನ್ನ ಸ್ವತಃ ಕಿಚ್ಚ ಸುದೀಪ್ ಟ್ವಿಟರ್ನಲ್ಲೂ ಹಂಚಿಕೊಂಡಿದ್ದಾರೆ. ಈ ಚಿತ್ರವನ್ನ ನಿರ್ದೇಶಿಸೋ ಸಮಯದಲ್ಲಿ ಆದ ಅನುಭವವನ್ನು ಕೂಡ ಮತ್ತೆ ಮೆಲುಕು ಹಾಕಿದ್ದಾರೆ.
ನಾನು ನಿರ್ದೇಶನ ಮಾಡಿದ ಮೊದಲ ಚಿತ್ರ ಮೈ ಆಟೋಗ್ರಾಫರ್. ಈ ಒಂದು ಪ್ರಯತ್ನಕ್ಕೆ ಈಗ 17 ವರ್ಷ ಪೂರ್ಣ ಆಗಿದೆ. ನಿರ್ದೇಶನ ಅನ್ನೋದು ಒಂದು ಅದ್ಭುತ ಅನುಭವವೇ ಆಗಿದೆ. ಈ ಒಂದು ಅನುಭವ ಪಡೆಯುವ ಸಮಯದಲ್ಲಿ ನಟರು, ಟೆಕ್ನಿಷಿಯನ್ಸ್, ಪ್ರೋಡಕ್ಷನ್ ಟೀಮ್, ಹೀಗೆ ಎಲ್ಲರೂ ನನಗೆ ತುಂಬಾ ಸಹಾಯ ಮಾಡಿದ್ದಾರೆ. ಇವರೆಲ್ಲರಿಗೂ ನನ್ನ ಧನ್ಯವಾದಗಳು ಅಂತ ಸುದೀಪ್ ಹೇಳಿದ್ದಾರೆ.
ಮೈ ಆಟೋಗ್ರಾಫ್ ಸುದೀಪ್ ನಿರ್ದೇಶನದ ಮೊದಲ ಸಿನಿಮಾ
ಸುದೀಪ್ ಅವರು ತಮ್ಮ ಮೊದಲ ನಿರ್ದೇಶನಕ್ಕೆ ಬೇರೆಯವರಿಂದ ಬಂಡವಾಳ ಹಾಕಿಸಿರಲಿಲ್ಲ. ತಾವೇ ಈ ಚಿತ್ರದ ನಿರ್ಮಾಪಕರೂ ಆಗಿದ್ದರು. ಕಿಚ್ಚ ಕ್ರಿಯೇಷನ್ಸ್ ಮೂಲಕವೇ ಈ ಅದ್ಭುತ ತಯಾರಾಗಿತ್ತು. ಚಿತ್ರವನ್ನ ನಿರ್ದೇಶನ ಮಾಡುವಾಗ, ನಿರ್ಮಾಣ ಮಾಡುವಾಗ, ಚಿತ್ರದ ಪಾತ್ರವಾಗಿ ಅಭಿನಯಿಸುವಾಗ ಸುದೀಪ್ ಸಾಕಷ್ಟು ಅನುಭವ ಪಡೆದಿದ್ದರು.
ಮೈ ಆಟೋಗ್ರಾಫ್ ಚಿತ್ರದಲ್ಲಿ ಲವ್ಲಿ ಕಥೆ
ಅದೇ ಅನುಭವದ ಫಲವೇ ಬೆಳ್ಳಿ ತೆರೆ ಮೇಲೆ ಮೈ ಆಟೋಗ್ರಾಫ್ ಸಿನಿಮಾ ಅದ್ಭುತವಾಗಿಯೇ ಮೂಡಿ ಬಂದಿತ್ತು. ಪ್ರೇಕ್ಷಕರು ವಿಶೇಷ ಕಲ್ಪನೆಯ ಈ ಚಿತ್ರವನ್ನ ನೋಡಿ ತುಂಬಾ ಖುಷಿಪಟ್ಟರು. ಯುವಕರಂತೂ ಚಿತ್ರದ ಸುದೀಪ್ ಪಾತ್ರಕ್ಕೆ ತಮ್ಮನ್ನ ತಾವು ಕನೆಕ್ಟ್ ಮಾಡಿಕೊಂಡಿದ್ದರು. ತಮ್ಮ ಹಳೆ ಪ್ರೇಯಿಸಿಯರನ್ನ ನೆನೆದು ಭಾವುಕರಾಗಿದ್ದು ಇದೆ.
ಅಷ್ಟೊಂದು ಅದ್ಭುತವಾಗಿ ಬಂದಿದ್ದ ಈ ಚಿತ್ರದಲ್ಲಿ ಸುದೀಪ್ ಅವರು ಶಂಕರ್ ಅನ್ನುವ ಪಾತ್ರವನ್ನ ನಿರ್ಹಿಸಿದ್ದರು. ಬಾಲ್ಯದಿಂದ ಹಿಡಿದು ಯೌವ್ವನದವರೆಗಿನ ಬಂದು ಹೋದ ಹುಡುಗಿಯರ ಚಿತ್ರಣ ಇಲ್ಲಿ ಅದ್ಭುತವಾಗಿಯೇ ಬಂದಿತ್ತು.
ಮೈ ಆಟೋಗ್ರಾಫ್ ಚಿತ್ರದಲ್ಲಿ ಲವ್ಲಿ ಲವ್ ಫೀಲಿಂಗ್!
ಇದನ್ನ ನೋಡಿದ ಅನೇಕರು ತಮ್ಮ ಲೈಫ್ನಲ್ಲಿ ಬಂದು ಹೋದ ಆ ಹುಡುಗಿಯರನ್ನ ನೆನಪಿಸಿಕೊಂಡಿರಬಹುದು. ಅಷ್ಟು ಪರಿಣಾಮಕಾರಿ ಬಂದಿದ್ದ ಈ ಚಿತ್ರದಲ್ಲಿ ಮೀನಾ, ಶ್ರೀದೇವಿಕಾ, ದೀಪು, ರಶ್ಮಿ ಕುಲಕರ್ಣಿ ಅಭಿನಯಿಸಿದ್ದರು. ಸುದೀಪ್ ಶಂಕರ್ ಪಾತ್ರಧಾರಿಯಾಗಿ ಈ ನಟಿಮಣಿಯರ ಲೈಫ್ಲ್ಲಿ ವಿಶೇಷ ವ್ಯಕ್ತಿಯಾಗಿ ಕಾಣಿಸಿಕೊಂಡರು.
ಈ ಚಿತ್ರ ಬರುವ ಮೊದಲು ಕನ್ನಡದಲ್ಲಿ ಅನೇಕ ಪ್ರೀತಿ-ಪ್ರೇಮದ ಕಥೆಯುಳ್ಳ ಸಿನಿಮಾ ಬಂದಿದ್ದವು. ಆದರೆ ಮೈ ಆಟೋಗ್ರಾಫ್ ಸಿನಿಮಾ ಬಂದ್ಮೇಲೆ ಪ್ರೀತಿಯ ಕಥೆಯನ್ನ ಈ ರೀತಿಯಾಗಿಯೂ ಹೇಳಬಹುದು ಅನ್ನುವ ವಿಷಯ ಪರಿಚಯ ಆಯಿತು.
ಕನ್ನಡದ ಮೈ ಆಟೋಗ್ರಾಫ್ ಮೆಚ್ಚಿ ಕೊಂಡಾಡಿದ ಪ್ರೇಕ್ಷಕ
ಕನ್ನಡದ ಪ್ರೇಕ್ಷಕರು ಈ ಒಂದು ಚಿತ್ರವನ್ನ ಅಷ್ಟೇ ಚೆನ್ನಾಗಿಯೇ ರಿಸೀವ್ ಮಾಡಿಕೊಂಡರು. ಸುದೀಪ್ ಅಭಿನಯವನ್ನ ಕೊಂಡಾಡಿದರು. ಈ ಮೂಲಕ ಸುದೀಪ್ ಮೊದಲ ನಿರ್ದೇಶದಲ್ಲಿಯೇ ಸಿಕ್ಸರ್ ಹೊಡೆದರು.
ಸುದೀಪ್ ಅಭಿನಯದ ಈ ಚಿತ್ರದಲ್ಲಿ, ತಮಿಳು ಸಂಗೀತ ನಿರ್ದೇಶಕ ಭಾರದ್ವಾಜ್ ಮತ್ತು ರಾಜೇಶ್ ರಾಮನಾಥ್ ಸಂಗೀತ ಜನರಿಗೆ ಬಹುವಾಗಿಯೇ ಇಷ್ಟ ಆಗಿದ್ದವು.
ಮೈ ಆಟೋಗ್ರಾಫ್ ಚಿತ್ರ ತೆರೆ ಕಂಡು ಇಂದಿಗೆ 17 ವರ್ಷ ಪೂರ್ಣ ಆಗಿದೆ.
ಫೆಬ್ರವರಿ-17, 2006 ರಲ್ಲಿ ತೆರೆ ಕಂಡಿದ್ದ ಈ ಚಿತ್ರ ತಮಿಳಿನ ಆಟೋಗ್ರಾಫ್ ಚಿತ್ರದ ರಿಮೇಕ್ ಆಗಿತ್ತು. ಮೂಲ ಚಿತ್ರವನ್ನ ನಾಯಕ ನಟ ಚೇರನ್ ಡೈರೆಕ್ಟ್ ಮಾಡಿದ್ದರು. ಇವರೇ ಚಿತ್ರದ ನಾಯಕರೂ ಆಗಿದ್ದರು.
ಇದನ್ನೂ ಓದಿ: Love Birds Review: ಮದುವೆ ಬಗ್ಗೆ ದೊಡ್ಡ ಪಾಠ ಮಾಡ್ತಾರೆ ಲವ್ ಬರ್ಡ್ಸ್!
ಕನ್ನಡದ ಮೈ ಆಟೋಗ್ರಾಫ್ ಚಿತ್ರದಂತೆ ತಮಿಳಿನ ಆಟೋಗ್ರಾಫ್ ಚಿತ್ರವನ್ನ ಜನ ಗೆಲ್ಲಿಸಿದ್ದರು.ಅದೇ ಯಶಸ್ವಿ ಚಿತ್ರವನ್ನ ಕನ್ನಡಕ್ಕೆ ತಂದು ಕನ್ನಡಿಗರ ಹೃದಯವನ್ನ ಕಿಚ್ಚ ಸುದೀಪ್ ಕದ್ದೇ ಬಿಟ್ಟರು. ಅಂತಹ ಈ ಚಿತ್ರ ಬಂದು ಈಗ 17 ವರ್ಷ ಆಗಿದೆ. ಅದೇ ಖುಷಿಯನ್ನ ಸುದೀಪ್ ಎಲ್ಲರೊಟ್ಟಿಗೆ ಹಂಚಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ